ದರ್ಶನ್ ಫ್ಯಾನ್ಸ್ ವಿರುದ್ಧ ದೂರು ನೀಡಿದ ಬಳಿಕ ಫೋಟೋಶೂಟ್ ಹಂಚಿಕೊಂಡ ರಮ್ಯಾ; ಅಶ್ಲೀಲ ಕಮೆಂಟ್ ಬಂತಾ?

ಕೆಲವೇ ದಿನಗಳ ಹಿಂದೆ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಬಳಸುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಇನ್‌ಸ್ಟಾಗ್ರಾಂ, ಎಕ್ಸ್‌ನಲ್ಲಿ ಪೋಸ್ಟ್ ಹಾಕುವುದಕ್ಕೂ ಹಿಂದೆ ಮುಂದೆ ನೋಡುತ್ತಿದ್ದರು. ಆದರೆ, ರಮ್ಯಾ ತೆಗೆದುಕೊಂಡ ಒಂದು ನಿರ್ಧಾರದಿಂದ ಅವರ ಸೋಶಿಯಲ್ ಮೀಡಿಯಾ ಖಾತೆಯ ಕಮೆಂಟ್‌ ಸೆಕ್ಷನ್ ಫುಲ್ ಕ್ಲೀನ್ ಆಗಿದೆ. ಒಂದೇ ಒಂದು ಅಶ್ಲೀಲ ಮೆಸೇಜ್ ಕೂಡ ಕಾಣಿಸುತ್ತಿಲ್ಲ.

ದರ್ಶನ್ ಜಾಮೀನು ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹೇಳಿಕೆಯನ್ನು ಉಲ್ಲೇಖಿಸಿ ರಮ್ಯಾ ಪೋಸ್ಟ್ ಮಾಡಿದ್ದರು. ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು. ರಮ್ಯಾ ಪೋಸ್ಟ್‌ಗೆ ಪ್ರತಿಯಾಗಿ ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದರು. ತೀರ ಕೆಟ್ಟ ಸಂದೇಶಗಳನ್ನು ಕಳಿಸಿದ್ದಕ್ಕೆ ಕೆರಳಿದ ರಮ್ಯಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

Ramya shares new photoshoot after filing complaint against Darshan fans no obscene messages found in comment box

ನಟಿ ರಮ್ಯಾ ಕೇಸ್ ಸೈಬರ್ ಕ್ಲೈಂಗೆ ವರ್ಗಾವಣೆಯಾಗಿತ್ತು. ಅಲ್ಲಿಂದ ಅಸಲಿ ಆಟ ಶುರುವಾಗಿತ್ತು. 40ಕ್ಕೂ ಅಧಿಕ ಮಂದಿಯ ವಿರುದ್ಧ ರಮ್ಯಾ ದೂರನ್ನು ದಾಖಲಿಸಿದ್ದರು. ಅವರಲ್ಲಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರು ಊರು ಬಿಟ್ಟಿದ್ದಾರೆ. ಇಷ್ಟೆಲ್ಲ ನಡೆಯುತ್ತಿರುವಾಗಲೇ ರಮ್ಯಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ಫೋಟೋಶೂಟ್ ಅನ್ನು ಹಂಚಿಕೊಂಡಿದ್ದಾರೆ. ಆ ನಂತರ ಮತ್ಯಾರಾದರೂ ಅಶ್ಲೀಲ ಕಮೆಂಟ್ ಮಾಡಿದ್ರಾ? ಹೇಗಿದೆ ರಮ್ಯಾ ಪೋಸ್ಟ್‌ಗೆ ಕಮೆಂಟ್‌ಗಳು ಅಂತ ನೋಡುವುದಾರೇ..

ರಮ್ಯಾ ಹೊಸ ಫೋಟೋಶೂಟ್

ದರ್ಶನ್ ಫ್ಯಾನ್ಸ್ ವಿರುದ್ಧ ತಿರುಗಿಬಿದ್ದಿದ ಬಳಿಕ ಮೋಹಕತಾರೆ ರಮ್ಯಾ ರಿಲ್ಯಾಕ್ಸ್ ಆಗಿ ಹೊಸ ಫೋಟೋಶೂಟ್ ಅನ್ನು ಹಂಚಿಕೊಂಡಿದ್ದಾರೆ. ಮಾಡರ್ನ್ ಲುಕ್‌ನಲ್ಲಿ ರಮ್ಯಾ ಕ್ಯಾಮರಾಗೆ ಪೋಸ್ ಕೊಟ್ಟಿದ್ದು, ಅವರ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ. ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಬರಬೇಕು ಅನ್ನೋದು ಅವರ ಅಭಿಮಾನಿಗಳ ಆಸೆ. ಮೋಹಕತಾರೆ ಎಂಟ್ರಿಗೆ ಪ್ರಯತ್ನಗಳು ನಡೆದಾಗಲೆಲ್ಲಾ ಏನಾದರೂ ಎಡವಟ್ಟುಗಳು ಆಗಿವೆ. ರಮ್ಯಾ ಸಿನಿಮಾದಿಂದ ಮತ್ತೆ ದೂರ ಸರಿದಿದ್ದಾರೆ. ಈಗ ಫೋಟೊಶೂಟ್ ಮಾಡಿಸಿದ್ದು, ಅವರ ಅಭಿಮಾನಿಗಳು ಚಿತ್ರರಂಗಕ್ಕೆ ಎಂಟ್ರಿ ಕೊಡಬಹುದೆಂದು ಎದುರು ನೋಡುತ್ತಿದ್ದಾರೆ.

ರಮ್ಯಾ ಮಾಡಿಸಿದ ಹೊಸ ಫೋಟೋಶೂಟ್ ನೋಡಿ ಥ್ರಿಲ್ ಆಗಿರೋ ಫ್ಯಾನ್ಸ್ ಕಮೆಂಟ್‌ಗಳನ್ನು ಹಾಕಿದ್ದಾರೆ. ಆದರೆ, ಒಂದೇ ಒಂದು ಅಶ್ಲೀಲ ಕಮೆಂಟ್ ಕೂಡ ಇದೂವರೆಗೂ ಕಂಡಿಲ್ಲ. ರಮ್ಯಾ ಇನ್‌ಸ್ಟಾಗ್ರಾಂ ಪೋಸ್ಟ್‌ ಅನ್ನು ಹೊಗಳಿ ಕೆಲವರು ಕಮೆಂಟ್ ಮತ್ತೆ ಕೆಲವರು ಎಮೋಜಿಗಳನ್ನು ಹಾಕಿದ್ದಾರೆ. ಇನ್ನು ಕೆಲವರು ಕಮೆಂಟ್ ಬ್ಯಾಕ್ಸ್ ಸ್ವಚ್ಚ ಭಾರತ್ ಎಂದು ಹೇಳಿದ್ದಾರೆ.

ರಮ್ಯಾ ಫೋಟೋಶೂಟ್‌ಗೆ ಕಮೆಂಟ್ ಹೇಗಿದೆ?

ರಮ್ಯಾ ಕೊಟ್ಟ ದೂರು ವರ್ಕ್‌ಔಟ್ ಆಗಿದೆ. ಸೆಲೆಬ್ರೆಟಿಗಳ ಫೋಟೋಶೂಟ್‌ಗೆ ಕೆಟ್ಟದಾಗಿ ಅಶ್ಲೀಲ ಪದಗಳನ್ನು ಬಳಿಸಿ ಕಮೆಂಟ್ ಮಾಡುತ್ತಿದ್ದ ಕಿಡಿಗೇಡಿಗಳಿಗೆ ಬುದ್ಧಿ ಬಂದಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ನಾಲ್ಕು ಮಂದಿಯನ್ನು ಅರೆಸ್ಟ್‌ ಮಾಡಿದ ಬಳಿಕ ಸೈಲೆಂಟ್ ಆಗಿದ್ದಾರೆ. ಕೆಟ್ಟ ಕಮೆಂಟ್ ಮಾಡೋರು ಫುಲ್ ಸೈಲೆಂಟ್ ಆಗಿದ್ದಾರೆ.

ಹಾಗಿದ್ರೆ, ಈ ಫೋಟೋಶೂಟ್‌ಗಳಿಗೆ ಬಂದಿರೋ ಕಮೆಂಟ್‌ಗಳು ಹೇಗಿವೆ ಅಂತ ನೋಡುವುದಾರೇ, ನೆಟ್ಟಿಗರೊಬ್ಬರು "ಕಮೆಂಟ್ ಸೆಕ್ಷನ್ ಸ್ವಚ್ಚ ಭಾರತ್" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ಜಾಸ್ತಿ ಮಾತಾಡಿದರೆ ಜೈಲೂಟ ಗ್ಯಾರಂಟಿ" ಎಂದು ಕಮೆಂಟ್ ಹಾಕಿದ್ದಾರೆ. ಹಾಗೇ ಇನ್ನು ಕೆಲವರು ಫೋಟೋಶೂಟ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. "ದಯವಿಟ್ಟು ನಮ್ಮ ನಿದ್ದೆಗೆ ಹೀಗೆ ತೊಂದರೆ ಕೊಡುತ್ತಿರಿ" ಎಂದು ಕಮೆಂಟ್ ಮಾಡಿದ್ದಾರೆ. "ಇನ್‌ಸ್ಟಾಗ್ರಾಂ ಬೆಂಕಿ ಹೊತ್ತಿಕೊಂಡಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನು ಕೆಲವರು ಸಹವಾಸವೇ ಬೇಡ ಅಂತ ಎಮೋಜಿಗಳನ್ನು ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More from Filmibeat

English summary
Ramya shares new photoshoot after filing complaint against Darshan fans, no obscene messages found in comment box.
Read more about: ramya photoshoot actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X