Exclusive: ಅಭಿಷೇಕ್-ರಾಣಾ ದಗ್ಗುಬಾಟಿ ಭೇಟಿ ಗುಟ್ಟೇನು? AA04ಗೆ ಬಲ್ಲಾಳದೇವನ ಎಂಟ್ರಿ ಪಕ್ಕಾ?
ಸ್ಯಾಂಡಲ್‌ವುಡ್ ನಿರ್ದೇಶಕ ಮಹೇಶ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ರಾಣಾ ದಗ್ಗುಬಾಟಿ ಹಾಗೂ ಅಭಿಷೇಕ್ ಅಂಬರೀಶ್ ಫೋಟೊಗಳನ್ನು ಶೇರ್ ಮಾಡಿದ್ದರು. ಇಲ್ಲಿಂದ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.
ರಾಣಾ ದಗ್ಗುಬಾಟಿ, ಅಭಿಷೇಕ್ ಅಂಬರೀಶ್ ಹಾಗೂ ಮಹೇಶ್ ಕುಮಾರ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊ ವೈರಲ್ ಆಗುತ್ತಿದ್ದಂತೆ ರಾಣಾ ಕನ್ನಡ ಸಿನಿಮಾದಲ್ಲಿ ನಟಿಸೋದು ಬಹುತೇಕ ಕನ್ಫರ್ಮ್ ಅನ್ನೋ ಸುದ್ದಿ ಹರಿದಾಡುತ್ತಿದೆ.
ಅಭಿಷೇಕ್ ಅಂಬರೀಶ್ ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಿದ್ದು, ಸದ್ಯ ಸಿನಿಮಾ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಅಷ್ಟರಲ್ಲೇ ಈ ಬಿಗ್ ಬಜೆಟ್ ಸಿನಿಮಾ ಬಗ್ಗೆ ಸದ್ದು ಮಾಡುವುದಕ್ಕೆ ಶುರುಮಾಡಿದೆ. ಅಷ್ಟಕ್ಕೂ ರಾಣಾ ದಗ್ಗುಬಾಟಿ ಬಗ್ಗೆ ಹರಿದಾಡುತ್ತಿರುವ ಸುದ್ದಿಯೇನು? ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಾ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ರಾಣಾ-ಅಭಿಷೇಕ್ ಭೇಟಿ ರಹಸ್ಯವೇನು?
ಇತ್ತೀಚೆಗೆ ರಾಣಾ ದಗ್ಗುಬಾಟಿ ರೆಬೆಲ್ ಸ್ಟಾರ್ ಅಂಬರೀಶ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅಭಿಷೇಕ್ ಅಂಬರೀಶ್ ಹಾಗೂ ನಿರ್ದೇಶಕ ಮಹೇಶ್ ಕುಮಾರ್ ಜೊತೆ ಪೋಸ್ ಕೊಟ್ಟಿದ್ದರು. ಅಲ್ಲಿಂದ ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಅಭಿಯ 4ನೇ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

'ಬಾಹುಬಲಿ' ಬಳಿಕ ಮತ್ತೊಂದು ಐತಿಹಾಸಿ ಪಾತ್ರ!
'ಬಾಹುಬಲಿ' ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಬಲ್ಲಾಳ ದೇವನಾಗಿ ನಟಿಸಿದ್ದರು. ಈ ಪಾತ್ರ ರಾಣಾ ವೃತ್ತಿ ಬದುಕಿನ ಅತ್ಯದ್ಭುತ ಸಿನಿಮಾ ಆಗಿತ್ತು. ಆ ಬಳಿಕ ರಾಣಾ ಮತ್ತೆ ಐತಿಹಾಸಿಕ ಸಿನಿಮಾದಲ್ಲಿ ಬಲ್ಲಾಳ ದೇವನಂತಹ ಪವರ್‌ಫುಲ್ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಐತಿಹಾಸಿಕ ಸಿನಿಮಾದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಸಿನಿಮಾದ ಕಥೆ ಕೇಳಲೆಂದೇ ರಾಣಾ ದಗ್ಗುಬಾಟಿ ಬೆಂಗಳೂರಿಗೆ ಬಂದಿದ್ದರು ಎಂಬ ಮಾತು ಕೂಡ ಕೇಳಿಬರುತ್ತಿದೆ.

ರಾಣಾ ದಗ್ಗುಬಾಟಿ ಕನ್ನಡ ಎಂಟ್ರಿ?
ಈ ಹಿಂದೆನೇ ರಾಣಾ ದಗ್ಗುಬಾಟಿ ಕನ್ನಡ ಸಿನಿಮಾದಲ್ಲಿ ನಟಿಸಬೇಕಿತ್ತು. ಎಎಂಆರ್ ರಮೇಶ್ ಟಾಲಿವುಡ್ ಬಲ್ಲಾಳ ದೇವನನ್ನು ಕನ್ನಡ ಕರೆತರುವ ಪ್ರಯತ್ನ ಮಾಡಿದ್ದರು. ಆದರೆ, ಅದು ಸಾಧ್ಯವಾಗಿರಲ್ಲಿಲ್ಲ. ಒಂದು ವೇಳೆ ರಾಣಾ ದಗ್ಗುಬಾಟಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಸಿನಿಮಾದಲ್ಲಿ ನಟಿಸೋಕೆ ಪಕ್ಕಾ ಆದ್ರೆ, ಮತ್ತೊಂದು ಕನ್ನಡ ಸಿನಿಮಾ ವಿಶ್ವದ ಗಮನ ಸೆಳೆಯುವುದರಲ್ಲಿ ಡೌಟೇ ಇಲ್ಲ. ಆದರೆ, ರಾಣಾ ದಗ್ಗುಬಾಟಿ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹೊರಹಾಕಿಲ್ಲ.

ರಾಕ್‌ಲೈನ್ ವೆಂಕಟೇಶ್ ನಿರ್ಮಾಪಕ
ಅಭಿಷೇಕ್ ಅಂಬರೀಶ್ 4ನೇ ಸಿನಿಮಾವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಇದು ಐತಿಹಾಸಿಕ ಸಿನಿಮಾ ಆಗಿರುವುದರಿಂದ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ ದಕ್ಷಿಣ ಹಾಗೂ ಉತ್ತರ ಭಾರತದ ಎರಡೂ ಕಡೆ ಜನಪ್ರಿಯರಾಗಿರುವ ನಟನ ಹುಡುಕಾಟದಲ್ಲಿತ್ತು ಚಿತ್ರತಂಡ ಎನ್ನಲಾಗಿದೆ. ಅದಕ್ಕೆ ತಕ್ಕಂತೆ ಈಗ ರಾಣಾ ದಗ್ಗುಬಾಟಿ AA04 ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ ಅನ್ನೋ ಮಾತು ಬಲವಾಗಿಯೇ ಓಡಾಡುತ್ತಿದೆ.


Click it and Unblock the Notifications











