ರಣಬೀರ್ ಕಪೂರ್ ನಟಿಸುತ್ತಿದ್ದ ಸಿನಿಮಾ ಸೆಟ್‌ಗೆ ಬೆಂಕಿ!
ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ನಟಿಸುತ್ತಿದ್ದ ಹೊಸ ಸಿನಿಮಾದ ಸೆಟ್‌ಗೆ ಇಂದು (ಜುಲೈ 29) ಅಚಾನಕ್ಕಾಗಿ ಬೆಂಕಿ ತಗುಲಿದೆ.
ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಲಿಂಕ್ ರೋಡ್ ಸಮೀಪದ ಚಿತ್ರಕೂಟ ಸ್ಟುಡಿಯೋಸ್‌ನಲ್ಲಿ ರಣಬೀರ್ ಕಪೂರ್-ಶ್ರದ್ಧಾ ಕಪೂರ್ ನಟಿಸುತ್ತಿರುವ ಹೊಸ ಸಿನಿಮಾಕ್ಕೆ ಸೆಟ್ ಹಾಕಲಾಗಿತ್ತು. ಸಿನಿಮಾದ ಹಾಡೊಂದರ ಚಿತ್ರೀಕರಣಕ್ಕಾಗಿಸ ಸೆಟ್ ನಿರ್ಮಾಣ ಮಾಡಲಾಗಿತ್ತು. ಆದರೆ ಸೆಟ್‌ಗೆ ಅಚಾನಕ್ಕಾಗಿ ಬೆಂಕಿ ತಗುಲಿದೆ.
ಈ ಸೆಟ್‌ನಲ್ಲಿ ಮುಂದಿನ ವಾರದಿಂದ ರಣಬೀರ್ ಹಾಗೂ ಶ್ರದ್ಧಾ ಕಪೂರ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವವರಿದ್ದರು. ಸೆಟ್ ನಿರ್ಮಾಣವು ಬಹುತೇಕ ಪೂರ್ಣವಾಗಿದ್ದರಿಂದ ಬೆಂಕಿ ಅವಘಡ ಸಂಭವಿಸಿದಾಗ ಸೆಟ್‌ನಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ.

ಇಂದು ಸಂಜೆ ಸುಮಾರು 4:30 ಗಂಟೆಗೆ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 100೦ ಚದರ ಅಡಿ ಸ್ಥಳವನ್ನು ಬೆಂಕಿಯೂ ಶೀಘ್ರವಾಗಿ ವ್ಯಾಪಿಸಿಕೊಂಡಿದ್ದು, 10 ಅಗ್ನಿಶಾಮಕ ವಾಹನಗಳು ಹಾಗೂ ಹಲವು ಸಿಬ್ಬಂದಿಗಳು ಅಗ್ನಿ ನಂದಿಸುವ ಕಾರ್ಯವನ್ನು ಮಾಡಿದರು. ಅಗ್ನಿಶಾಮಕ ದಳದ ಸಿಬ್ಬಂದಿಯು ಸತತ ಎರಡು ಗಂಟೆ ಶ್ರಮಪಟ್ಟು ಬೆಂಕಿಯನ್ನು ಪೂರ್ಣವಾಗಿ ನಂದಿಸಿದ್ದಾರೆ.
ಸೆಟ್‌ಗೆ ಬೆಂಕಿ ಬಿದ್ದ ಚಿತ್ರಗಳು ಇದೀಗ ವೈರಲ್ ಆಗಿದ್ದು, ಆತಂಕ ಮೂಡಿಸುವ ರೀತಿಯಲ್ಲಿ ಬೆಂಕಿ ಹಾಗೂ ಹೊಗೆ ಹರಡಿದೆ.
ರಣ್ಬೀರ್ ಕಪೂರ್ ಪ್ರಸ್ತುತ ರಶ್ಮಿಕಾ ಮಂದಣ್ಣ ಜೊತೆಗೆ 'ಅನಿಮಲ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಮುಂದಿನ ವಾರದಿಂದ ಶ್ರದ್ಧಾ ಕಪೂರ್ ಜೊತೆಗೆ ಸಿನಿಮಾದಲ್ಲಿ ಅವರು ನಟಿಸಬೇಕಿತ್ತು. ಆ ವೇಳೆಗೆ ಈ ದುರ್ಘಟನೆ ನಡೆದಿದೆ. ರಣ್ಬೀರ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ನಟಿಸುತ್ತಿರುವ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ, ಸಿನಿಮಾವನ್ನು ಲವ್ ರಂಜನ್ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ರಣ್ಬೀರ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಒಟ್ಟಿಗೆ ನಟಿಸುತ್ತಿದ್ದಾರೆ.
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾದ ಸೆಟ್ ಅನ್ನು ಸಹ ಮುಂಬೈನಲ್ಲಿಯೇ ಹಾಕಲಾಗಿತ್ತು. ಆ ಸೆಟ್ ಸಹ ಬೆಂಕಿಗೆ ಆಹುತಿಯಾಗಿತ್ತು.


Click it and Unblock the Notifications