'ರಂಗಸಮುದ್ರ'ದಲ್ಲಿ ರಂಗಾದ ರಂಘಾಯಣ ರಘು: ನಟಿಸಬೇಕಿತ್ತು ಅಪ್ಪು!

ಸ್ಯಾಂಡಲ್‌ವುಡ್‌ ಕಂಡ ಅದ್ಭುತ ಕಲಾವಿದರಲ್ಲಿ ರಂಗಾಯಣ ರಘು ಕೂಡ ಒಬ್ಬರು. ಪಾತ್ರ ಯಾವುದೇ ಇರಲಿ ರಂಗಾಯಣ ರಘು ಇದ್ದರೆ, ಆ ಪಾತ್ರಕ್ಕೆ ಜೀವ ಬಂದುಬಿಡುತ್ತೆ. ಹಾಸ್ಯ ಪಾತ್ರದಿಂದ ಹಿಡಿದು ಗಂಭೀರ ಪಾತ್ರದವರೆಗೂ ರಘು ಅವರ ಅಭಿನಯಕ್ಕೆ ಮಾರು ಹೋಗದವರೇ ಇಲ್ಲ.

ರಂಗಾಯಣ ರಘು ಇಷ್ಟು ದಿನ ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈಗಲೂ ಆ ರಂಜಿಸುವ ಕೆಲಸ ಮುಂದುವರೆದಿದೆ. ಸದ್ಯಕ್ಕೆ ರಂಗಾಯಣ ರಘು ಅಭಿನಯದ ಹೊಸ ಸಿನಿಮಾವೊಂದರ ಚಿತ್ರೀಕರಣ ಮುಗಿದಿದೆ.

'ರಂಗಸಮುದ್ರ'ದಲ್ಲಿ ರಂಗಾಯಣ ರಘು

ರಂಗಾಯಣ ರಘು ವಿಶಿಷ್ಟ ಪಾತ್ರದಲ್ಲಿ ಅಭಿನಯಸಿರುವ ಸಿನಿಮಾ 'ರಂಗ ಸಮುದ್ರ' ಈ ಸಿನಿಮಾದ ಚಿತ್ರೀಕರಣ ಮುಗಿದಿದೆ. ಮೇಲ್ನೋಟಕ್ಕೆ ರಂಗಾಯಣ ರಘು ಹಳ್ಳಿಯ ಮುಖಂಡ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಎನಿಸುತ್ತಿದೆ.

Rangayana Raghu Movie Rangasamudra Shooting Finished

'ರಂಗಸಮುದ್ರ' ಸಿನಿಮಾ ಅಂತಿಮ ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಶೇ.85ರಷ್ಟು ಚಿತ್ರೀಕರಣ ರಾಜ್ಯದ ವಿವಿದ ಭಾಗಗಳಲ್ಲಿ ನಡೆದಿದೆ. ಸದ್ಯ ಬೆಂಗಳೂರು ಹೊರವಲಯದ ವಿದ್ಯಾನಗರದಲ್ಲಿ ಸಿನಿಮಾದ ಅಂತಿಮ ಹಂತದ ಚಿತ್ರೀಕರಣವನ್ನು ಮುಗಿಸಲಾಗಿದೆ. ಅಂದ್ಹಾಗೆ ಈ ಸಿನಿಮಾವನ್ನು ನಿರ್ದೇಶಕ ರಾಜಕುಮಾರ್ ಅಸ್ಕಿ ನಿರ್ದೇಶನ ಮಾಡಿದ್ದಾರೆ.

ದೃಶ್ಯದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಬೇಕಿತ್ತು

ರಂಗಸಮುದ್ರದ ಪ್ರಮುಖ ಪಾತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಬೇಕಿತ್ತು. ಈ ಕಾರಣಕ್ಕಾಗಿಯೇ ಅವರನ್ನು ಸಂಪರ್ಕ ಕೂಡ ಮಾಡಿತ್ತು. ಅಕ್ಟೋಬರ್‌ನಲ್ಲಿ ಆ ದೃಶ್ಯದ ಚಿತ್ರೀಕರಣ ನಡೆಯಬೇಕಿತ್ತು. ಅಷ್ಟರಲ್ಲೇ ವಿಧಿ ಅವರನ್ನು ಹಠಾತ್ ಕರೆದುಕೊಂಡು ಹೋಯ್ತು. ಆ ಶಾಕ್‌ಗೆ ಒಳಗಾಗಿದ್ದ ಚಿತ್ರತಂಡ ಸದ್ಯಕ್ಕೆ ಹೊರಬಂದಿದ್ದು, ಮತ್ತೊಬ್ಬ ಸ್ಟಾರ್ ನಟ ಆ ದೃಶ್ಯದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.

Rangayana Raghu Movie Rangasamudra Shooting Finished

ಅಂದ್ಹಾಗೆ ಈ ಸಿನಿಮಾದಲ್ಲಿ ರಂಗಾಯಣ ರಘು, ಸಂಪತ್ ರಾಜ್, ಕರಾವಳಿಯ ಕೆವಿಆರ್ ಮತ್ತು ದಿವ್ಯಾ ಗೌಡ, ಗುರುರಾಜ್ ಹೊಸಕೋಟೆ, ಮೋಹನ್ ಜುನೇಜ, ಮೂಗು ಸುರೇಶ್, ಉಗ್ರಂ ಮಂಜು, ಸ್ಕಂದ ತೇಜಸ್, ಡ್ರಾಮಾ ಜ್ಯೂನಿಯರ್ ಮಹೇಂದ್ರ ಮತ್ತಿತರರು ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.

ಸಂಗೀತ ಸಿನಿಮಾದ ಹೈಲೈಟ್

'ರಂಗಸಮುದ್ರ' ಸಿನಿಮಾದ ಬಗ್ಗೆ ಹೆಚ್ಚಿನ ವಿವರವನ್ನು ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಈ ವಿಷಯಗಳನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ. ಅಂದ್ಹಾಗೆ ಈ ಸಿನಿಮಾ ಸಂಗೀತ ಕೂಡ ಕತೆಯಷ್ಟೇ ಹೈಲೈಟ್. ದೇಸಿ ಮೋಹನ್ ಸಂಗೀತ ನೀಡಿದ್ದು, ಚಿತ್ರದ ಹಾಡುಗಳಿಗೆ ಖ್ಯಾತ ಗಾಯಕರಾದ ಕೈಲಾಶ್ ಖೇರ್, ಕೀರವಾಣಿ, ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ ಹಾಡಿದ್ದಾರೆ.

'ರಂಗ ಸಮುದ್ರ'ದ ಟೀಸರ್ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಆಗ ರಂಗಾಯಣ ರಘು ಸೇರಿದಂತೆ ಕನ್ನಡದ ಅದ್ಭುತ ಕಲಾವಿದರನ್ನು ಒಟ್ಟಿಗೆ ವಿಶಿಷ್ಟ ಸಿನಿಮಾದಲ್ಲಿ ನೋಡಬಹುದು. ಸದ್ಯಕ್ಕೆ ರಂಗಾಯಣ ರಘು ಅವರ ಲುಕ್‌ ಅನ್ನಷ್ಟೇ ರಿಲೀಸ್ ಮಾಡಿದೆ.

More from Filmibeat

English summary
Rangayana Raghu Movie Rangasamudra Shooting Finished, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X