ಗೋಲ್ಡನ್ ಸ್ಟಾರ್‌ನಲ್ಲಿ ಪವರ್‌ಸ್ಟಾರ್ ಕಂಡ ರಂಗಾಯಣ ರಘು!

ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಕನಸಿನ ಅನಾವರಣ ಕೆಲವು ದಿನಗಳ ಹಿಂದಷ್ಟೇ ಆಗಿದೆ. ಅಪ್ಪು ಕನಸಿನ 'ಗಂಧದ ಗುಡಿ'ಯನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಮತ್ತೆ ತೆರೆಮೇಲೆ ಅಪ್ಪು ನೋಡಿ ಭಾವುಕರಾಗಿದ್ದಾರೆ.

ಪುನೀತ್ ರಾಜ್‌ಕುಮಾರ್ ಮರೆಯುವ ವ್ಯಕ್ತಿತ್ವ ಅಲ್ಲವೇ ಅಲ್ಲ. ಕೇವಲ ನಟನೆ ಅಷ್ಟೇ ಅಲ್ಲ. ಸದಾ ತಮ್ಮ ನಗುವಿನಿಂದಲೇ ಅಭಿಮಾನಿಗಳನ್ನು, ಸಿನಿಮಾ ಮಂದಿಯನ್ನು ಹತ್ತಿರವಾಗಿದ್ದ ಸೂಪರ್‌ಸ್ಟಾರ್. ಅದಕ್ಕೆ ಅಪ್ಪು ಅಗಲಿ ಒಂದು ವರ್ಷ ಆಗಿದ್ದರೂ, ಇನ್ನೂ ಸಿನಿಮಾ ಮಂದಿಯ ಮನದಾಳದಲ್ಲಿಯೇ ಹಾಗೇ ಉಳಿದುಕೊಂಡಿದ್ದಾರೆ.

ಸಿನಿಮಾದ ಯಾವುದೇ ಕಾರ್ಯಕ್ರಮ ಇದ್ದರೂ, ಆರಂಭಕ್ಕೂ ಮುನ್ನ ಪವರ್‌ಸ್ಟಾರ್ ನೆನಪಾಗುತ್ತಾರೆ. ಇದೇ ರೀತಿ ಕನ್ನಡದ ಹಿರಿಯರ ನಟ ರಂಗಾಯಣ ರಘು ವೇದಿಕೆ ಮೇಲೆ ಪವರ್‌ಸ್ಟಾರ್ ಅನ್ನು ನೆನಪಿಸಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣಿಯಲ್ಲಿ ಅಪ್ಪುವನ್ನು ಕಾಣುತ್ತಿದ್ದಾರೆ.

ಅಪ್ಪು ನೆನೆದ ರಂಗಾಯಣ ರಘು

ಅಪ್ಪು ನೆನೆದ ರಂಗಾಯಣ ರಘು

ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಸಿನಿಮಾದಲ್ಲಿ ನಟಿಸಿದ ಗಣೇಶ್, ಅದಿತಿ ಪ್ರಭುದೇವ, ರಚನಾ ಇಂದರ್, ಮೇಘಾ ಶೆಟ್ಟಿ, ಸಾಧುಕೋಕಿಲಾ ಸೇರಿದಂತೆ ಎಲ್ಲರೂ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಈ ವೇಳೆ ರಂಗಾಯಣ ರಘು ವೇದಿಕೆ ಮೇಲೆ ಗಣೇಶ್ ಹಾಗೂ ತಮ್ಮ ನಡುವಿನ ಸಂಬಂಧದ ಬಗ್ಗೆ ಮಾತಾಡುತ್ತಿದ್ದರು. ಈ ವೇಳೆ ಗಣೇಶ್ ಅವರಲ್ಲಿ ಅಪ್ಪುವನ್ನು ಕಾಣುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಹೇಳಿಕೆ ಈಗ ವೈರಲ್ ಆಗುತ್ತಿದೆ.

ಅಪ್ಪು ಬಗ್ಗೆ ರಂಗಾಯಣ ರಘು ಹೇಳಿದ್ದೇನು?

ಅಪ್ಪು ಬಗ್ಗೆ ರಂಗಾಯಣ ರಘು ಹೇಳಿದ್ದೇನು?

ಗಣೇಶ್ ಹಾಗೂ ರಂಗಾಯಣ ರಘು ಜೊತೆ ಹಲವು ಸಿನಿಮಾಗಳನ್ನು ಮಾಡಾಡಿದ್ದಾರೆ. ಹಾಗೇ ಪವರ್‌ಸ್ಟಾರ್ ಜೊತೆನೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಅಪ್ಪು ಅಗಲಿದ ಬೇಸರದಲ್ಲಿ ರಂಗಾಯಣ ರಘು ಇದ್ದಾರೆ. "ನಮ್ಮ ನಾಯಕರು ಜೊತೆಗಿದ್ದರೆ ಎಲ್ಲವೂ ಸಿಕ್ಕಂತೆ. ಒಂಥರಾ ಹೈ ಸ್ಕೂಲ್ ಹುಡುಗರಾಗುತ್ತೇವೆ. ಹಾಗೇ ಕಾಲೇಜು ಹುಡುಗರಾಗುತ್ತೇವೆ. ಆಮೇಲೆ ನಮಗೆ ತುಂಬಾ ವಯಸ್ಸಾಗಿದೆ ಅಂತ ಮುದ್ದಾಗಿ ನೋಡಿಕೊಳ್ಳುತ್ತಾರೆ. ಆಗಲೇ ಗೊತ್ತಾಗುತ್ತೆ, ನಮಗೂ ವಯಸ್ಸಾಗಿದೆ ಅಂತ. ಹೀಗೆ ಗಣೇಶ್ ಜೊತೆ ನಮಗೆ ನಿಜವಾಗಲೂ ಒಂದು ಸುಖ, ನೆಮ್ಮದಿ, ಪ್ರೀತಿ, ಒಂದು ಆತ್ಮ ವಿಶ್ವಾಸ. ಒಂಥರಾ ಅಪ್ಪು ಸರ್ ಜೊತೆ ಇದ್ದ ಹಾಗೆ ಆಗಿಬಿಡುತ್ತೆ. " ಎಂದು ಪವರ್‌ಸ್ಟಾರ್ ಅನ್ನು ನೆನಪಿಸಿಕೊಂಡಿದ್ದಾರೆ.

ಗೋಲ್ಡನ್ ಸ್ಟಾರ್ ಜೊತೆನೇ ಹೆಚ್ಚು ಸಿನಿಮಾ!

ಗೋಲ್ಡನ್ ಸ್ಟಾರ್ ಜೊತೆನೇ ಹೆಚ್ಚು ಸಿನಿಮಾ!

"ಅಪ್ಪು ಸರ್ ಜೊತೆನೂ ಹೀಗಿ ಆತ್ಮೀಯವಾದ ಸಂಬಂಧ. ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇವೆ. ಸುಮಾರು 27 ವರ್ಷದಲ್ಲಿ150 ಸಿನಿಮಾ ಮಾಡಿದ್ದೇನೆ. ಇದರಲ್ಲಿ ನಾನು ಗಣಪನ ಜೊತೆನೇ 35 ಸಿನಿಮಾ ಮಾಡಿಬಿಟ್ಟಿದ್ದೇನೆ. ದೊಡ್ಡಪ್ಪ, ಚಿಕ್ಕಪ್ಪ, ಅಪ್ಪ, ಕಳ್ಳ, ಸುಳ್ಳ, ಮಳ್ಳ ಮಾಡಿದ್ದೇನೆ. ಇದರಲ್ಲಿ ಮಾವನ ಕ್ಯಾರೆಕ್ಟರ್ ಮಾಡಿದ್ದೇನೆ." ಎಂದು ರಂಗಾಯಣ ರಘು ತಮ್ಮ ಹಾಗೂ ಗಣೇಶ್ ನಡುವಿನ ಬಾಂಧವ್ಯವನ್ನು ಬಿಡಿಸಿಟ್ಟಿದ್ದಾರೆ.

ತ್ರಿಕೋನ ಪ್ರೇಮಕಥೆ 'ತ್ರಿಬಲ್ ರೈಡಿಂಗ್'

ತ್ರಿಕೋನ ಪ್ರೇಮಕಥೆ 'ತ್ರಿಬಲ್ ರೈಡಿಂಗ್'

ಗಣೇಶ್ ಹೀರೊ ಅಂದ್ರೆ, ಮುಗೀತು. ಅಲ್ಲಿ ರೊಮ್ಯಾಂಟಿಕ್ ಸೀನ್‌ಗಳಿರುತ್ತೆ. ನವಿರಾದ ಪ್ರೇಮಕಥೆ ಇರುತ್ತೆ. ಕಾಮಿಡಿ ಇರುತ್ತೆ. ಮಸ್ತ್ ಆಗಿರೋ ಹಾಡುಗಳು ಇರುತ್ತೆ. 'ತ್ರಿಬಲ್ ರೈಡಿಂಗ್' ಕೂಡ ಹಾಗೇ ಪ್ರೇಕ್ಷಕರಿಗೆ ಮಸ್ತ್ಸ ಮನರಂಜನೆ ನೀಡುತ್ತೆ ಅನ್ನೋ ಭರವಸೆ ನೀಡುತ್ತಿದೆ ಟೀಂ. ತ್ರಿಕೋನ ಪ್ರೇಮಕತೆ ಜೊತೆ ರಂಗಾಯಣ ರಘು, ಸಾಧುಕೋಕಿಲಾ ಕಾಮಿಡಿ ಕೂಡ ಈ ಸಿನಿಮಾದಲ್ಲಿರೋದ್ರಿಂದ ಪ್ರೇಕ್ಷಕರಿಗೆ ಎಂಟರ್ಟೈನ್ಮೆಂಟ್ ಸಿಗೋದು ಪಕ್ಕಾ.

More from Filmibeat

English summary
Rangayana Raghu Says Actor Ganesh Is Like Puneeth Rajkumar In Triple Riding, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X