Dhurandhar 2 vs Toxic: ಧುರಂಧರ್ 2-ಟಾಕ್ಸಿಕ್ ಎರಡು ಸಿನಿಮಾಗಳಲ್ಲಿ ಅಡ್ವಾನ್ಸ್ ಬುಕಿಂಗ್ ಹೇಗಿದೆ?
ಮಾರ್ಚ್ 19 ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಹಾಗೂ ಯಶ್ ನಟನೆಯ 'ಟಾಕ್ಸಿಕ್' ಮಹಾ ಸಮರಕ್ಕೆ ಸಜ್ಜಾಗಿವೆ. ಎರಡೂ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುವುದಕ್ಕೆ ತಮ್ಮದೇ ತಂತ್ರಗಳನ್ನು ಉಪಯೋಗಿಸುತ್ತಿವೆ. 'ಟಾಕ್ಸಿಕ್' ಒಂದು ಕಡೆ ಅಗ್ರೆಸಿವ್ ಆಗಿ ಪ್ರಚಾರ ಮಾಡುತ್ತಿದೆ. ಅದೇ ಇನ್ನೊಂದು ಕಡೆ 'ಧುರಂಧರ್ 2' ಸೈಲೆಂಟ್ ಆಗಿ ರೆಡಿಯಾಗುತ್ತಿದೆ.
ಸಿನಿಮಾ ಬಿಡುಗಡೆಗೆ ಇನ್ನೂ ಎರಡು ವಾರಗಳಿವೆ. ಅಷ್ಟರಲ್ಲೇ 'ಟಾಕ್ಸಿಕ್' ಹಾಗೂ 'ಧುರಂಧರ್ 2' ಎರಡೂ ಸಿನಿಮಾಗಳೂ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಿವೆ. ಎರಡೂ ಸಿನಿಮಾ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗಿದ್ದು, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿವೆ. ವಿಶೇಷವೆಂದರೆ, ಅಮೆರಿಕದಲ್ಲಿ ಈಗಾಗಲೇ ಈ ಸಿನಿಮಾಗಳ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿವೆ.

ಒಂದ್ಕಡೆ ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2'. ಇನ್ನೊಂದು ಕಡೆ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳಿರುವ 'ಟಾಕ್ಸಿಕ್'. ಎರಡೂ ಸಿನಿಮಾಗಳು ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳು. ಸಾವಿರ ಕೋಟಿ ಸರದಾರರ ಸಿನಿಮಾಗಳು ಪೈಪೋಟಿಗೆ ಬಿದ್ದು ರಿಲೀಸ್ ಆಗುತ್ತಿವೆ. ಹೀಗಾಗಿ ಬಾಕ್ಸಾಫೀಸ್ ರಣರಂಗ ಆಗುವ ಸಾಧ್ಯತೆಯಿದೆ. ಇನ್ನು ಅಮೆರಿಕದಲ್ಲಿ ಯಾವ್ಯಾವ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್‌ಗೆ ಪ್ರತಿಕ್ರಿಯೆ ಹೇಗಿದೆ ಅಂತ ತಿಳಿಯಲು ಮುಂದೆ ಓದಿ.
ಈ ಎರಡೂ ಸಿನಿಮಾಗಳು ರಿಲೀಸ್ ಆಗುವುದಕ್ಕೆ ಇನ್ನು ಎರಡು ವಾರಗಳಿವೆ. ಆದರೂ, ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿದೆ. ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈಗಾಗಲೇ ಈ ಸಿನಿಮಾ ಅಡ್ವಾನ್ಸ್ ಬುಕಿಂಗ್‌ನಿಂದ 33.7 ಸಾವಿರ ಡಾಲರ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಬುಕಿಂಗ್ ಓಪನ್ ಆದ 24 ಗಂಟೆಗಳಲ್ಲಿ 159% ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು 'ಧುರಂಧರ್ 2' ಸಿನಿಮಾಗೆ ಅಮೆರಿಕದಲ್ಲಿ ಇದೂವರೆಗೂ 209 ಪ್ರದರ್ಶನಗಳನ್ನು ನಿಗದಿಪಡಿಸಲಾಗಿದೆ. ಸುಮಾರು 151 ಸ್ಥಳಗಳಲ್ಲಿ ಟಿಕೆಟ್ ಖರೀದಿ ಮಾಡಲಾಗುತ್ತಿದ್ದು, ಈಗಾಗಲೇ 1,900ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಬಿಡುಗಡೆಗೆ ಇನ್ನೂ 17 ದಿನಗಳು ಬಾಕಿ ಇರುವುದರಿಂದ ಮುಂದಿನ ದಿನಗಳಲ್ಲಿ ಟಿಕೆಟ್ ಬುಕಿಂಗ್ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಮ್‌ಪಾಲ್ ಮತ್ತು ಆರ್. ಮಾಧವನ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು 2025ರಲ್ಲಿ ತೆರೆಕಂಡ ಸೂಪರ್‌ಹಿಟ್ ಚಿತ್ರ 'ಧುರಂಧರ್'ನ ಸೀಕ್ವೆಲ್ ಆಗಿದೆ.
ಮತ್ತೊಂದು ಕಡೆ ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಗ್ಯಾಂಗ್‌ಸ್ಟರ್ ಡ್ರಾಮಾ ಆಗಿದ್ದು, ಅಮೆರಿಕದಲ್ಲಿ ಸುಮಾರು 81 ಕಡೆ ಪ್ರದರ್ಶನ ಕಾಣಲಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಈ ಸಿನಿಂಆ 3.6 ಸಾವಿರ ಡಾಲರ್‌ನಷ್ಟು ಅಡ್ವಾನ್ಸ್ ಬುಕಿಂಗ್ ಆಗಿದೆ. ಈ ಸಿನಿಮಾಗೆ ಸುಮಾರು 122 ಪ್ರದರ್ಶನಗಳು ನಿಗದಿಪಡಿಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 9% ರಷ್ಟು ಬುಕಿಂಗ್ ಹೆಚ್ಚಾಗಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇನ್ನು 'ಟಾಕ್ಸಿಕ್' ಸಿನಿಮಾದಲ್ಲಿ ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ನಯನತಾರಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಶ್ ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದ್ಭುತ ಆಕ್ಷನ್ಸ್ ಅನ್ನು ನಿರೀಕ್ಷೆ ಮಾಡಬಹುದು. ಮಾರ್ಚ್ 19 ರಂದು ಭಾರತೀಯ ಚಿತ್ರರಂಗದ ಈ ಮಹಾ ಸಂಘರ್ಷದಲ್ಲಿ ಗೆಲ್ಲೋದ್ಯಾರು ಅನ್ನೋದನ್ನು ಪ್ರೇಕ್ಷಕರು ಕಾತುರದಿಂದ ಎದುರು ನೋಡುತ್ತಿದ್ದಾರೆ.


Click it and Unblock the Notifications











