Ranya Rao: 3 ತಿಂಗಳ ಹಿಂದಷ್ಟೇ ಮದುವೆ, ಗೋಲ್ಡ್ ಸ್ಮಗ್ಲಿಂಗ್‌ಗೆ ಇಳಿದಿದ್ದು ಯಾವಾಗ? ರನ್ಯಾ ರಾವ್ ಪತಿ ಯಾರು?
ಕಳೆದೆರಡು ದಿನಗಳಿಂದ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ದೇಶಾದದ್ಯಂತ ಸಂಚಲನ ಸೃಷ್ಟಿಸಿದೆ. ಕಿಚ್ಚ ಸುದೀಪ್ ನಟಿಸಿದ್ದ 'ಮಾಣಿಕ್ಯ' ಸಿನಿಮಾದಲ್ಲಿ ಎರಡನೇ ನಾಯಕಿಯಾಗುವ ಮೂಲಕ ರನ್ಯಾ ರಾವ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ನಟಿ ಅಭಿನಯಿಸಿದ್ದು ಕೇವಲ ಮೂರು ಸಿನಿಮಾ ಅಷ್ಟೇ. ಆದರೆ, ಕನ್ನಡದ ಎರಡು ಸಿನಿಮಾಗಳು ರನ್ಯಾಗಳನ್ನು ಜನರು ಗುರುತಿಸುವಂತೆ ಮಾಡಿತ್ತು.
2017ರಿಂದ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳದ ನಟಿ ಈಗ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಸಿಕ್ಕಿ ಬಿದ್ದು ಸುದ್ದಿಯಾಗಿದ್ದಾರೆ. ರನ್ಯಾ ರಾವ್ ಇತ್ತೀಚೆಗಷ್ಟೇ ಮದುವೆ ಆಗಿದ್ದರು. ಮದುವೆ ಬಳಿಕ ಕುಟುಂಬದಿಂದ ದೂರು ಉಳಿದಿದ್ದರು. ವಿವಾಹದ ಬಳಿಕ ದುಬೈಗೆ ಅತೀ ಹೆಚ್ಚು ಬಾರಿ ಪ್ರಯಾಣ ಬೆಳೆಸಿರೋದು ತನಿಖೆಯ ವೇಳೆ ಬೆಳೆಕಿಗೆ ಬಂದಿದೆ. ಹಾಗಿದ್ದರೆ, ಮದುವೆ ಬಳಿಕ ಗೋಲ್ಡ್ ಸ್ಮಗ್ಲಿಂಗ್‌ಗೆ ಇಳಿದಿದ್ದರೇ? ಇಂತಹದ್ದೊಂದು ಪ್ರಶ್ನೆಯಂತೂ ಮೂಡುತ್ತೆ.

ಇಷ್ಟೇ ಅಲ್ಲದೆ ರನ್ಯಾ ರಾವ್ ಐಷಾರಾಮಿ ಜೀವನ ಹೇಗಿತ್ತು? ವಾಸವಿದ್ದ ಮನೆಯ ಬಾಡಿಗೆ ಎಷ್ಟು? ರನ್ಯಾ ರಾವ್‌ಗೆ ಹಣ ಎಲ್ಲಿಂದ ಬರುತ್ತಿತ್ತು? ರನ್ಯಾ ರಾವ್ ಪತಿ ಯಾರು? ಈ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಪತಿಯ ಪಾತ್ರವೇನು? ಮದುವೆ ಬಳಿಕೆ ತಮ್ಮ ಕುಟುಂಬದೊಂದಿಗೆ ಸಂಬಂಧ ಕಳೆದುಕೊಂಡಿದ್ದರೇ? ಇದೆಲ್ಲವೂ ಒಂದೊಂದಾಗೇ ಹೊರಬರುತ್ತಿದೆ.
ಗೋಲ್ಡ್ ಸ್ಮಗಲಿಂಗ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟಿ ರನ್ಯಾ ರಾವ್ ಕುರಿತ ತನಿಖೆ ಚುರುಕಾಗಿದೆ. 14.8 ಕೆಜಿ ತೂಕದ ಚಿನ್ನ ಈಕೆಗೆ ಸಿಕ್ಕಿದ್ದೇಗೆ? ಇಷ್ಟೊಂದು ದೊಡ್ಡ ಮೊತ್ತದ ಚಿನ್ನವನ್ನು ಖರೀದಿ ಮಾಡುವುದಕ್ಕೆ ಹಣ ಸಿಕ್ಕಿದ್ದೆಲ್ಲಿ? ಅನ್ನೋದನ್ನು ಡಿಆರ್‌ಐ ತನಿಖೆ ಮಾಡುತ್ತಿದ್ದಾರೆ. ಸದ್ಯಕ್ಕೆ ವರದಿಯಾಗಿರುವ ಪ್ರಕಾರ, ರನ್ಯಾ ರಾವ್ ಬಳಿಕ ಜಪ್ತಿ ಮಾಡಿದ ಚಿನ್ನದ ಬೆಲೆ 15 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಹಾಗೇ ಪತಿಯೊಂದಿಗೆ ವಾಸಿಸುತ್ತಿರುವ ಮನೆಯಲ್ಲೂ ಸುಮಾರು 2.65 ಕೋಟಿ ರೂಪಾಯಿ ನಗದು ಸಿಕ್ಕಿದೆ. ಹೀಗಾಗಿ ಇಡಿಯಿಂದಲೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಮಾಧ್ಯಮಗಳು ಈಗಾಗಲೇ ವರದಿ ಮಾಡಿರುವ ಪ್ರಕಾರ, ರನ್ಯಾ ರಾವ್ ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು. ಉತ್ತರ ಕರ್ನಾಟಕದ ಪ್ರಮುಖ ರಾಜಕೀಯ ಕುಟುಂಬದ ಹುಡುಗನೊಂದು ವಿವಾಹವಾಗಿದ್ದರು ಎನ್ನಲಾಗಿದೆ. ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ಇವರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಈಕೆಯ ಪತಿ ಜತಿನ್ ಜನಪ್ರಿಯ ಆರ್ಕಿಟೆಕ್ಟ್ ಅನ್ನೋದು ತಿಳಿದು ಬಂದಿದೆ. ಆದರೆ, ಈ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಪತಿಯ ಕೈವಾಡ ಏನಾದರೂ ಇದೆಯೇ ಎಂಬುವುದು ಕೂಡ ತನಿಖೆ ನಡೆಯುತ್ತಿದೆ. ಸದ್ಯಕ್ಕಿನ್ನು ಈ ಮಾಹಿತಿಯನ್ನು ಡಿಆರ್‌ಐ ಬಿಡಯಗಡೆ ಮಾಡಿಲ್ಲ.
ರನ್ಯಾ ರಾವ್ ವಿವಾಹದ ಬಳಿಕ ಬೆಂಗಳೂರಿನ ದುಬಾರಿ ಏರಿಯಾಗಳಲ್ಲಿ ಒಂದಾದ ಲ್ಯಾವೆಲ್ಲೆ ರಸ್ತೆಯಲ್ಲಿರುವ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಪತಿಯೊಂದಿಗೆ ವಾಸವಿದ್ದರು ಎನ್ನಲಾಗಿದೆ. ಇದೇ ಫ್ಲ್ಯಾಟ್‌ನಲ್ಲಿ ಬೇರೆ ರಾಜ್ಯದ ರಾಜಕೀಯ ಮುಖಂಡರು, ಸಿಎಂ ಮಕ್ಕಳು ವಾಸವಿದ್ದರು. ಅವರು ತಮ್ಮ ರಾಜ್ಯಕ್ಕೆ ತೆರಳುತ್ತಿದ್ದಂತೆ ಆ ಫ್ಲ್ಯಾಟ್‌ಗೆ ರನ್ಯಾ ಹಾಗೂ ಪತಿ ಶಿಫ್ಟ್ ಆಗಿದ್ದರು ಎಂದು ಹೇಳಲಾಗಿದೆ. ಈ ಕೇಸ್ ಅನ್ನು ಬೇಧಿಸುತ್ತಾ ಹೋದಂತೆ ರನ್ಯಾ ರಾವ್ ಅವರ ಒಂದೊಂದು ವಿಷಯಗಳು ಹೊರ ಬೀಳುತ್ತಾ ಹೋಗುತ್ತವೆ.
ಇನ್ನು ರನ್ಯಾ ರಾವ್ ಪರ್ಸಂಟೇಜ್ ಲೆಕ್ಕದಲ್ಲಿ ಚಿನ್ನವನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ತಾನು ಪಡೆದ ಚಿನ್ನವನ್ನು ರನ್ಯಾ ರಾವ್ ಸಂಬಂಧ ಪಟ್ಟವರಿಗೆ ತಲುಪಿಸಿದರೆ, 4 ಪರ್ಸೆಂಟ್‌ನಷ್ಟು ಹಣ ಸಿಗುತ್ತಿತ್ತು. ಒಂದು ವೇಳೆ 14.8 ಕೆಜಿ ತೂಕದ ಚಿನ್ನವನ್ನು ಕೊಡಬೇಕಾದ ಕಡೆಗೆ ತಲುಪಿಸಿದರೆ, ಈಕೆಗೆ ಸುಮಾರು 50 ಲಕ್ಷ ರೂಪಾಯಿ ಹಣ ಕಮಿಷನ್ ರೂಪದಲ್ಲಿ ಸಿಗುತ್ತಿತ್ತು ಎಂದು ವರದಿಯಾಗಿದೆ. ಈ ಹಿಂದೆ ಕೂಡ ಸಾಕಷ್ಟು ಬಾತಿ ದುಬೈಗೆ ಪ್ರಯಣ ಬೆಳೆಸಿದ್ದ ರನ್ತಾ ರಾವ್ ಹಲವು ಬಾರಿ ಗೋಲ್ಡ್ ಅನ್ನು ಸಾಗಿಸಿದ್ದರು ಅಂತಾನೂ ವರದಿಯಾಗಿದೆ.


Click it and Unblock the Notifications











