ಫ್ಲೈಟ್ ಮಿಸ್ ಮಾಡಿಕೊಂಡು ಗೆಳತಿ ಮದುವೆಗೆ ಬಂದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದಲ್ಲಿ ಬ್ಯುಸಿ ಇರುವ ನಟಿ. ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ನಟಿಸುತ್ತಿದ್ದರೂ, ಸ್ನೇಹಿತರನ್ನು ಮಾತ್ರ ಮರೆತಿಲ್ಲ. ಸದಾ ತನ್ನ ಸ್ನೇಹಿತೆಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಅದಕ್ಕೊಂದು ಸಾಕ್ಷಿ ಈ ಮದುವೆ.

ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್. ಸ್ಟಾರ್ ನಟರೊಂದಿಗೆ ನಟಿಸುತ್ತಿರುವ ಬಹುಬೇಡಿಕೆಯ ನಟಿ. ಅದರಲ್ಲೂ ಬಾಲಿವುಡ್‌ನಲ್ಲಿಯೇ ಹೆಚ್ಚು ಬ್ಯುಸಿಯಾಗಿರುವ ರಶ್ಮಿಕಾಗೆ ಬಿಡುವು ಸಿಗುವುದು ತೀರಾ ವಿರಳ. ಇಂತಹದ ಸಂದರ್ಭದಲ್ಲೂ ತನ್ನ ಆತ್ಮೀಯ ಗೆಳತಿಯ ಮದುವೆಗೆ ಬಂದಿದ್ದಾರೆ. ಅಲ್ಲದೆ ಫೋಟೊವನ್ನೂ ಶೇರ್ ಮಾಡಿಕೊಂಡಿದ್ದಾರೆ.

ಫ್ಲೈಟ್ ಮಿಸ್ ಮಾಡಿಕೊಂಡ್ರು ಮದುವೆಗೆ ಬಂದ ರಶ್ಮಿಕಾ

ರಶ್ಮಿಕಾ ಮಂದಣ್ಣ ತನ್ನ ಇನ್‌ಸ್ಟಾಗ್ರಾಂನಲ್ಲಿ ಗೆಳತಿಯರೊಂದಿಗಿನ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸುಮಾರು 17 ವರ್ಷಗಳ ಸ್ನೇಹಿತರನ್ನು ಮಿಸ್ ಮಾಡಿಕೊಳ್ಳಲು ಇಷ್ಟ ಪಡದ ರಶ್ಮಿಕಾ, ಗೆಳತಿಯ ಮದುವೆ ಬ್ಯುಸಿಯಿದ್ದರೂ ಓಡೋಡಿ ಬಂದಿದ್ದಾರೆ. ಅಂದ್ಹಾಗ ರಶ್ಮಿಕಾ ಗೆಳೆತಿ ರಾಗಿಣಿ ಮುದ್ದಯ್ಯ ವಿವಾಹಕ್ಕೆ ಆಗಮಿಸಿದ್ದಾರೆ. ಪಕ್ಕಾ ಕೊಡಗು ಶೈಲಿಯಲ್ಲಿ ನಡೆದ ಮದುವೆಯಲ್ಲಿ ಕೊಡಗಿನ ಶೈಲಿಯಲ್ಲಿ ಸೀರೆಯುಟ್ಟು ಮಿಂಚಿದ್ದಾರೆ.

Rashmika Mandanna attended her best friend wedding in coorg

ಗೆಳತಿ ಮದುವೆಗೆ ಬರಲು ರಶ್ಮಿಕಾ ಮಂದಣ್ಣ ತುಂಬಾನೇ ಕಷ್ಟ ಪಟ್ಟಿದ್ದಾರೆ. ಈ ವಿಷಯವನ್ನು ಸ್ವತ: ರಶ್ಮಿಕಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. "ಇಂದು ನನ್ನ ಗೆಳತಿ ರಾಗಿಣಿ ಮುದ್ದಯ್ಯ ಮದುವೆ ಆಗಿದ್ದಾರೆ. ಎಂತಹ ಸಂದರ್ಭದಲ್ಲೂ ನಾನು ಇದನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಬೆಳಗ್ಗೆ 4 ಗಂಟೆ ಫ್ಲೈಟ್ ಅನ್ನು ಮಿಸ್ ಮಾಡಿಕೊಂಡೆ. 4-5 ಬಾರಿ ಫ್ಲೈಟ್ ತಡವಾಯಿತು. ಹಾಗಿದ್ದರೂ ಮದುವೆಗೆ ಹಾಜರಾದೆ. ದೇವರಿಗೆ ಧನ್ಯವಾದಗಳನ್ನು ಹೇಳುತ್ತೇನೆ." ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

'17 ವರ್ಷ ಸ್ನೇಹಿತೆಯರೊಂದಿಗೆ ಬೆಳೆದಿದ್ದೇನೆ'

ಮದುವೆ ನೆಪದಲ್ಲಿಯೇ ಆತ್ಮೀಯ ಗೆಳತಿಯರನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ಕೆಲ ಹೊತ್ತು ಕಾಲವನ್ನೂ ಕಳೆದಿದ್ದಾರೆ. " ನಾನು ಈ ಹುಡುಗಿಯರೊಂದಿಗೆ ಬೆಳೆದಿದ್ದೇನೆ. 17 ವರ್ಷಗಳಿಂದ ನಾನು ಅವರನ್ನು ಬಲ್ಲೆ. ಏನೂ ಬದಲಾಗಿಲ್ಲ. ಅವರು ನನ್ನನ್ನು ಪ್ರಜ್ಞೆ, ನಮ್ರತೆ, ಸಂತೋಷವಾಗಿಟ್ಟಿದ್ದರು. ಇವರೇ ನನ್ನ ಗೆಳತಿಯರು. ಅವರನ್ನು ನಾನು ಇಂದು ಭೇಟಿಯಾಗಿದ್ದು ಖುಷಿ ಕೊಟ್ಟಿದೆ. ರಶ್ಮಿಕಾ ಮಂದಣ್ಣ ಈ ಹಿಂದೆ ರಶ್ಮಿಕಾ ಕೂಡ ಹಾಗೇ ಇದ್ದಳು. ಅವಳನ್ನು ನೀವು ನೋಡಿದ್ದರೆ, ಏನೂ ಬದಲಾವಣೆ ಎಂದೆನಿಸುತ್ತಿತ್ತು." ಎಂದು ಬರೆದುಕೊಂಡಿದ್ದಾರೆ.

Rashmika Mandanna attended her best friend wedding in coorg

ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ 'ಪುಷ್ಪ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳುನಲ್ಲಿ ವಿಜಯ್ ಸೇತುಪತಿ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಸೆಟ್ಟೇರಿದೆ. ಬಾಲಿವುಡ್‌ನಲ್ಲಿ ಅಮಿತಾಬ್ ಬಚ್ಚನ್ ಜೊತೆ 'ಗುಡ್ ಬೈ', ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 'ಮಿಷನ್ ಮಜ್ನು' ಈಗ ರಣ್‌ಬೀರ್ ಕಪೂರ್ ಜೊತೆ 'ಎನಿಮಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Rashmika Mandanna attended her best friend wedding in Coorg, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X