ಕೊನೆಗೂ ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ ಎಂದು ಒಪ್ಪಿಕೊಂಡ ರಶ್ಮಿಕಾ; ವಿಜಯ್ ದೇವರಕೊಂಡ ಹೆಸರು ಮಾತ್ರ ಹೇಳಲಿಲ್ಲ
ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವು ಸ್ಟಾರ್‌ಗಳು ಸಿನಿಮಾಗಳಿಗಿಂತ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಚರ್ಚೆಯಲ್ಲಿ ಇರುತ್ತಾರೆ. ಸಲ್ಮಾನ್ ಖಾನ್, ಪ್ರಭಾಸ್ ಜೊತೆಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮೊದಲಿಗರು. ಕೆಲವರು ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದರೆ, ಇನ್ನು ಕೆಲವರು ಡೇಟಿಂಗ್ ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಡೇಟಿಂಗ್ ವಿಚಾರಕ್ಕೆ ಸುದ್ದಿಯಲ್ಲಿ ಇದ್ದರು.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ. ಇವರಿಬ್ಬರೂ ಶೀಘ್ರವೇ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಆದರೆ, ಇದೂವರೆಗೂ ಇವರಿಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಬಹಿರಂಗ ಪಡಿಸಿಲ್ಲ. ಆದ್ರೀಗ ಇದೇ ಮೊದಲ ಬಾರಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಇತ್ತೀಚೆಗೆ ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದ ವೇಳೆ ಪುರುಷನ ಯಾವ ಗುಣ ಅವರನ್ನು ಆಕರ್ಷಿಸುತ್ತೆ ಅನ್ನುವ ಬಗ್ಗೆ ಮಾತಾಡುತ್ತಿದ್ದರು. ಈ ವೇಳೆ ತಾನು ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ ಎನ್ನುವ ವಿಷಯವನ್ನು ಕನ್ಫರ್ಮ್ ಮಾಡಿದ್ದಾರೆ. ಆದರೆ, ವಿಜಯ್ ದೇವರಕೊಂಡ ಹೆಸರನ್ನು ಮಾತ್ರ ತೆಗೆದುಕೊಂಡಿಲ್ಲ.
ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣಗೆ ಯಾವ ಸ್ಥಳದಲ್ಲಿ ಖುಷಿಯಾಗಿ ಇರುತ್ತೀರಿ ಎಂದು ಪ್ರಶ್ನೆ ಮಾಡಲಾಗಿತ್ತು. ಈ ಪ್ರಶ್ನೆಗೆ ರಶ್ಮಿಕಾ "ಮನೆಯೇ ನನ್ನ ಹ್ಯಾಪಿ ಪ್ಲೇಸ್" ಎಂದು ಮಾತು ಆರಂಭಿಸಿದ್ದರು. ಯಶಸ್ಸು ಬರುತ್ತೆ ಹೋಗುತ್ತೆ. ಆದರೆ, ನನ್ನ ಮನೆಯಾಗಲೂ ಇರುತ್ತೆ. ಆಗ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ತನ್ನ ರಿಲೇಷನ್‌ಶಿಪ್ ಬಗ್ಗೆನೂ ಸುಳಿವನ್ನು ನೀಡಿದ್ದಾರೆ.

"ನನಗೆ ಅದೆಷ್ಟೇ ಪ್ರೀತಿ, ಖ್ಯಾತಿ ಸಿಕ್ಕದರೂ ನಾನು ಕೇವಲ ಒಬ್ಬಳು ಮಗಳು, ಒಬ್ಬಳು ಸಹೋದರಿ, ಕೇವಲ ಒಬ್ಬ ಸಂಗಾತಿ. ಆ ಖಾಸಗಿ ಜೀವನಕ್ಕೆ ನಾನು ಗೌರವವನ್ನು ನೀಡುತ್ತೇನೆ. ಸದ್ಯ ನಾನು ಈ ಎರಡೂ ಪ್ರಪಂಚವನ್ನು ಎಂಜಾಯ್ ಮಾಡುತ್ತೇನೆ. ಆದರೆ ನಾನು ಹೇಗೆಂದರೆ, ನನ್ನ ಈ ಜೀವನದಿಂದ ವೈಯಕ್ತಿಕ ಜೀವನವನ್ನು ಕಾಪಾಡಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
ಇದೇ ಸಂದರ್ಶನಲ್ಲಿ ಪುರುಷನ ಯಾವ ಗುಣಗಳು ನಿಮ್ಮನ್ನು ಆಕರ್ಷಣೆ ಮಾಡುತ್ತವೆ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ರಶ್ಮಿಕಾ ಮಂದಣ್ಣ ಕೊಟ್ಟ ಉತ್ತರ ಹೀಗಿತ್ತು. " ಕಣ್ಣುಗಳು ಒಬ್ಬ ವ್ಯಕ್ತಿಯ ಆತ್ಮದ ಕಿಟಕಿಯಿದ್ದಂತೆ. ನಾನು ಅದನ್ನು ನಂಬುತ್ತೇನೆ. ನಾನು ಯಾವಾಗಲೂ ನಗುತ್ತಿರುತ್ತೇನೆ. ಈ ಕಾರಣಕ್ಕೆ ನಾನು ನಗು ಮುಖವಿರುವ ಜನರ ಕಡೆಗೆ ಹೆಚ್ಚು ಆಕರ್ಷಿತನಾಗುತ್ತೇನೆ." ಎಂದು ಹೇಳಿದ್ದಾರೆ. ಆದರೆ, ಎಲ್ಲಿಯೂ ವಿಜಯ್ ದೇವರಕೊಂಡ ಹೆಸರನ್ನು ತೆಗೆದುಕೊಂಡಿಲ್ಲ.
ಇತ್ತ ಕೆಲವು ದಿನಗಳ ಹಿಂದಷ್ಟೇ ವಿಜಯ್ ದೇವರಕೊಂಡ ಕೂಡ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಒಪ್ಪಿಕೊಂಡಿದ್ದರು. "ನನಗೀಗ 35 ವರ್ಷ. ನಾನಿನ್ನು ಸಿಂಗಲ್ ಆಗಿದ್ದೇನೆ ಅಂತ ನಿಮಗೆ ಅನಿಸುತ್ತಿದೆಯೇ?" ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದರು. ಇನ್ನು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡು ಇಬ್ಬರೂ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ.


Click it and Unblock the Notifications











