ತಮ್ಮನ್ನು ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ನಟಿಸಿದ ಬಳಿಕ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ್ದವರು. ಅಲ್ಲಿ ಒಂದರ ಮೇಲೊಂದು ಯಶಸ್ಸು ಕಂಡ ಅವರಿಗೆ ಅಭಿಮಾನಿಗಳು ಸಾಕಷ್ಟಿದ್ದಾರೆ. ಹಾಗೆಯೇ ರಶ್ಮಿಕಾ ಅವರನ್ನು ಟೀಕಿಸುವವರು, ಅವರನ್ನು ಟ್ರೋಲ್ ಮಾಡುವವರಿಗೂ ಕಡಿಮೆ ಇಲ್ಲ.
Recommended Video
ತಮ್ಮ ವೈಯಕ್ತಿಕ ಬದುಕಿನಲ್ಲಿ ತೆಗೆದುಕೊಂಡ ನಿರ್ಧಾರದ ಕಾರಣಕ್ಕೆ ರಶ್ಮಿಕಾ ಅನೇಕ ಟೀಕೆಗಳನ್ನು ಎದುರಿಸಬೇಕಾಯಿತು. ಹೆಚ್ಚಿನ ಟೀಕೆ ಮತ್ತು ಟ್ರೋಲ್‌ಗಳು ಅವರು ಕನ್ನಡವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಕಾರಣಕ್ಕೆ ಸೃಷ್ಟಿಯಾಗುತ್ತಿವೆ. ಕನ್ನಡ ಸರಿಯಾಗಿ ಬರೊಲ್ಲ ಎಂಬ ಹೇಳಿಕೆ ನೀಡಿದ್ದಕ್ಕೆ, ಕನ್ನಡದ ಬದಲು ತೆಲುಗಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಅವರ ವಿರುದ್ಧ ವಾಗ್ದಾಳಿಗಳು ನಡೆಯುತ್ತಿವೆ. ಮುಂದೆ ಓದಿ...

ಟ್ರೋಲಿಗರಿಗೆ ತಿರುಗೇಟು
ತಮ್ಮ ವಿರುದ್ಧ ನಡೆಯುತ್ತಿರುವ ಟೀಕೆಗಳು ಮತ್ತು ಟ್ರೋಲ್‌ಗಳು ರಶ್ಮಿಕಾ ಅವರ ಗಮನಕ್ಕೂ ಬಂದಿವೆ. ತಮ್ಮನ್ನು ಟೀಕಿಸುವವರಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. ಬಂದದ್ದೆಲ್ಲವನ್ನೂ ವಿಶಾಲ ಮನೋಭಾವದಿಂದ ಸ್ವೀಕರಿಸಿ ಮುಂದೆ ಸಾಗುತ್ತಾ ಬೆಳೆಯಬೇಕು ಎಂದು ಅವರು ಟ್ರೋಲ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ.

ಎದುರಿಸುವುದನ್ನು ಕಲಿಯಿರಿ
'ನೀವು ಎದುರಿಸುವುದೆಲ್ಲವನ್ನು ವಿಶಾಲ ಮನೋಭಾವದಿಂದ, ತೀಕ್ಷ್ಣ ದೃಷ್ಟಿ ಮತ್ತು ಗಟ್ಟಿಯಾದ ಹೃದಯದಿಂದ ಸ್ವೀಕರಿಸುತ್ತಾ ಬೆಳೆಯಬೇಕು' ಎಂದು ರಶ್ಮಿಕಾ ಹೇಳಿದ್ದಾರೆ. ಇದು ಟ್ರೋಲಿಗರನ್ನು ಉದ್ದೇಶಿಸಿಯೇ ಅವರು ಹೇಳಿರುವುದು ಎನ್ನಲಾಗಿದೆ.

ಇಲ್ಲಿರಲು ಆ ಕಾರ್ಯಕ್ರಮ ಕಾರಣ
ಇತ್ತೀಚೆಗೆ 'ಅನ್ ಟೋಲ್ಡ್ ರಶ್ಮಿಕಾ' ಹ್ಯಾಷ್ ಟ್ಯಾಗ್‌ನಲ್ಲಿ ಅವರು ಅಭಿಮಾನಿಗಳ ಪ್ರಶ್ನೆಗಳಿಗೆ ಟ್ವಿಟ್ಟರ್‌ನಲ್ಲಿ ಉತ್ತರಿಸಿದ್ದರು. ಅಕ್ಷಯ್ ಕುಮಾರ್ ಜತೆಗಿದ್ದ ಫೋಟೊದ ಸಂದರ್ಭ ಯಾವುದು ಎಂದು ಕೇಳಿದಾಗ 2014ರಲ್ಲಿ ಫ್ರೆಶ್ ಫೇಸ್ ಇಂಡಿಯಾದ ಫೈನಲ್ ಅದು. ನಾನು ಈಗ ಇಲ್ಲಿರುವುದಕ್ಕೆ ಆ ಕಾರ್ಯಕ್ರಮವೇ ಕಾರಣ ಎಂದು ರಶ್ಮಿಕಾ ಹೇಳಿದ್ದರು.

ನಿಮ್ಮ ಕನಸು, ನಿಮ್ಮ ಜೀವನ
ಸಿಂಗಲ್ ಆಗಿರುವ ಹುಡುಗರಿಗೆ ನಿಮ್ಮ ಸಲಹೆ ಏನು ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದರು. ಅದಕ್ಕೆ ರಶ್ಮಿಕಾ, 'ಕನಸು ಕಾಣಿ ಮತ್ತು ನಿಮ್ಮ ಕನಸಿನ ಮೇಲೆ ಕೆಲಸ ಮಾಡಿ. ಹಾಗೆಯೇ ನಿಮ್ಮ ಕನಸನ್ನು ಬೇರೆಯವರದ್ದಾಗಿಸಬೇಡಿ. ನಿಮ್ಮ ಕನಸು ಬೇರೆಯದೇ ಆಗಿರುವಂತೆ ನೋಡಿಕೊಳ್ಳಿ. ಏಕೆಂದರೆ ಬೇರೆಯೊಬ್ಬರು ನಿಮ್ಮ ಜೀವನವನ್ನು ನಿಯಂತ್ರಿಸಲು ಆಗುವುದಿಲ್ಲ. ನಿಮ್ಮ ಜೀವನವನ್ನು ನೀವೇ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.


Click it and Unblock the Notifications











