ಚಳಿ ಚಳಿಯ ಸ್ವೀಡನ್ ನಲ್ಲಿ 'ಯಜಮಾನ'ನ ಜೊತೆ ರಶ್ಮಿಕಾ.!

Recommended Video

ಚಳಿ ಚಳಿಯ ಸ್ವೀಡನ್ ನಲ್ಲಿ 'ಯಜಮಾನ'ನ ಜೊತೆ ರಶ್ಮಿಕಾ.! | FILMIBEAT KANNADA

ಸ್ಮೈಲ್ ಕ್ವೀನ್ ರಶ್ಮಿಕಾ ಮಂದಣ್ಣ ಲಂಡನ್ ನಿಂದ ನೇರವಾಗಿ ಸ್ವೀಡನ್ ಗೆ ಹಾರಿದ್ದಾರೆ. ಸತತ ಸಿನಿಮಾಗಳಲ್ಲಿ ನಟಿಸಿ ಬ್ಯುಸಿಯಿದ್ದ ರಶ್ಮಿಕಾ, ಲಂಡನ್ ನಲ್ಲಿ ರಿಲೀಫ್ ಮೂಡ್ ನಲ್ಲಿದ್ದರು. ಇದೀಗ, ಅಲ್ಲಿಂದ ನೇರವಾಗಿ ಯಜಮಾನ ಸೆಟ್ ಸೇರಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತದಿಂದ ಬ್ರೇಕ್ ತೆಗೆದುಕೊಂಡಿದ್ದ 'ಯಜಮಾನ' ಚಿತ್ರತಂಡ ಈಗ ಹಾಡಿನ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ಸ್ವೀಡನ್ ನಲ್ಲಿ 'ಯಜಮಾನ' ಸಾಂಗ್ ಶೂಟಿಂಗ್ ನಡೆಯುತ್ತಿದ್ದು, ಸೆಟ್ ಗೆ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದಾರೆ.

rashmika mandanna joins yajamana song shooting

ಸ್ವೀಡನ್ ದೇಶದಲ್ಲಿ ಬಹಳ ಚಳಿಯಿದೆ. ಈ ಚಳಿಯ ವಾತವರಣದಲ್ಲಿ 'ಯಜಮಾನ' ಚಿತ್ರದ ಡುಯೇಟ್ ಸಾಂಗ್ ಶೂಟಿಂಗ್ ನಡೆಯುತ್ತಿದೆ. ಇದೀಗ, ರಶ್ಮಿಕಾ ಮಂದಣ್ಣ ಯಜಮಾನ ಸೆಟ್ ನಲ್ಲಿ ಕಾಣಿಸಿಕೊಂಡಿರುವ ಫೋಟೋವನ್ನ ನಿರ್ಮಾಪಕಿ ಶೈಲಾಜ್ ನಾಗ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಅಂದ್ಹಾಗೆ, ರಶ್ಮಿಕಾಗೆ ದರ್ಶನ್ ಜೊತೆ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ. ಇನ್ನು ತೆಲುಗಿನಲ್ಲಿ ಹೆಚ್ಚು ಬ್ಯುಸಿಯಾಗಿರುವ ರಶ್ಮಿಕಾಗೆ ಕನ್ನಡದಲ್ಲಿ ಬಿಡುಗಡೆಯಾಗಲಿರುವ ಮುಂದಿನ ಸಿನಿಮಾ ಕೂಡ ಯಜಮಾನ. ಹಾಗಾಗಿ, ರಶ್ಮಿಕಾ ಪಾಲಿಗೆ ಇದು ವಿಶೇಷ.

ಪಿ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಜೊತೆಯಲ್ಲಿ ಹರಿಕೃಷ್ಣ ಕೂಡ ನಿರ್ದೇಶನ ಮಾಡುತ್ತಿದ್ದಾರೆ. ಬಿ.ಸುರೇಶ್ ಮತ್ತು ಪತ್ನಿ ಶೈಲಾಜ ನಾಗ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ರಶ್ಮಿಕಾ ಜೊತೆ ತಾನ್ಯ ಹೋಪ್ ಕೂಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

More from Filmibeat

English summary
Kannada actress rashmika mandanna joins yajamana team in sweden. yajamana movie song shooting going on sweden.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X