Rashmika on KGF 2 Trailer : ಅಂದು ಶೋ ಆಫ್ ಎಂದಿದ್ದ ರಶ್ಮಿಕಾ 'KGF 2' ಟ್ರೈಲರ್ ನೋಡಿ ಮೆಚ್ಚಿದ್ದೇಕೆ?

'ಕೆಜಿಎಫ್ 2' ಟ್ರೈಲರ್ ಬೇಜಾನ್ ಸದ್ದು ಮಾಡುತ್ತಿದೆ. ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಟ್ರೈಲರ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಟೀಸರ್‌ನಂತೆಯೇ ಟ್ರೈಲರ್ ಕೂಡ ಹೊಸ ಹೊಸ ದಾಖಲೆಯನ್ನು ಸೃಷ್ಟಿಸುತ್ತಾ ಮುನ್ನುಗ್ಗುತ್ತಿದೆ. ಎಲ್ಲಿ ನೋಡಿದರೂ 'ಕೆಜಿಎಫ್ 2' ಟ್ರೈಲರ್‌ನದ್ದೇ ಹವಾ.

'ಕೆಜಿಎಫ್ 2' ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೆ ಟ್ರೈಲರ್ ಕೂಡ ಐದು ಭಾಷೆಯಲ್ಲಿ ರಿಲೀಸ್ ಆಗಿದೆ. ಇಡೀ ವಿಶ್ವವೇ ಇದೊಂದು ಟ್ರೈಲರ್‌ಗಾಗಿ ಕಾದುಕೂತಿತ್ತು. ಟ್ರೈಲರ್ ನೋಡಿದ ಬಳಿಕ ಐದೂ ಚಿತ್ರರಂಗದ ಸೆಲೆಬ್ರೆಟಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ 'ಕೆಜಿಎಫ್ 2' ಟ್ರೈಲರ್ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. ಅದು ಸ್ಯಾಂಡಲ್‌ವುಡ್‌ನಲ್ಲಿ ಅಚ್ಚರಿಗೆ ಕಾರಣವಾಗಿದೆ.

'KGF 2' ಟ್ರೈಲರ್‌ಗೆ ರಶ್ಮಿಕಾ ಹೇಳಿದ್ದೇನು?

'ಕೆಜಿಎಫ್ 2'ಗಾಗಿ ಇಡೀ ವಿಶ್ವವೇ ಕಾದು ಕೂತಿರುವುದು ಅಕ್ಷರಶ: ಸತ್ಯ. ಇಷ್ಟು ದಿನ ಕಾದಿದ್ದಕ್ಕೂ ಅದ್ಧೂರಿಯಾಗಿ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್ ನೋಡಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ರಶ್ಮಿಕಾ ಮಂದಣ್ಣಗೆ ಟ್ರೈಲರ್ ತುಂಬಾನೇ ಇಷ್ಟ ಆಗಿದೆ. ಅದಕ್ಕೆ ಟ್ವಿಟರ್ ಮೂಲಕ ಟ್ರೈಲರ್‌ಗೆ ಮೆಚ್ಚುಗೆ ಸೂಚಿದ್ದಾರೆ. ಈ ಸಿನಿಮಾದ ಟ್ರೈಲರ್‌ ಕರುನಾಡ ಕ್ರಶ್‌ಗೆ ತುಂಬಾನೇ ಇಷ್ಟ ಆಗಿದ್ದು, " ನೋಡಿದವರಿಗೆ ಈ ಟ್ರೈಲರ್ ಹುಚ್ಚು ಹಿಡಿಸುತ್ತೆ. ಟ್ರೈಲರ್ ಇಷ್ಟ ಆಗಿದೆ." ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

ಯಶ್ ಫ್ಯಾನ್ಸ್ ಹೇಳಿದ್ದೇನು?

ಯಶ್ ಫ್ಯಾನ್ಸ್ ಹೇಳಿದ್ದೇನು?

ರಶ್ಮಿಕಾ ಮಂದಣ್ಣ 'ಕೆಜಿಎಫ್ 2' ಟ್ರೈಲರ್ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಟ್ವಿಟರ್‌ನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ತೆಲುಗು ಅಭಿಮಾನಿ "ಕನ್ನಡ ಸಿನಿಮಾ ಅಲ್ವಾ.. ಅದಕ್ಕೆ ಪಾಪಾ ಹಾಕಿಕೊಳ್ಳಲಿ. ಇಲ್ಲಾ ಅಂದರೆ, ಕನ್ನಡದವರು ರೋಧನೆ ಕೊಡುತ್ತಾರೆ." ಎಂದಿದ್ದಾರೆ. ಇನ್ನೊಬ್ಬ ತಮಿಳು ಅಭಿಮಾನಿ ಕೆಜಿಎಫ್ 2 ಟ್ರೈಲರ್‌ನ ಡೈಲಾಗ್ ರಿಪೀಟ್ ಮಾಡಿದ್ದಾರೆ. " ರಶ್ಮಿಕಾ.. ರಶ್ಮಿಕಾ.. ರಶ್ಮಿಕಾ.. ಐ ಡೋಂಟ್ ಲೈಕ್.. ಈ ಅವಾಯ್ಡ್.. ಬಟ್.. ರಶ್ಮಿಕಾ ಲೈಕ್ಸ್ ಮಿ.. ಐ ಕಾಂಟ್ ಅವಾಯ್ಡ್.." ಎಂದು ಟ್ವೀಟ್ ಮಾಡಿದ್ದಾರೆ.

ಶೋ ಆಫ್ ಎಂದಿದ್ದ ರಶ್ಮಿಕಾ

ಕಿರಿಕ್ ಪಾರ್ಟಿ ಬಳಿಕ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆ ವೇಳೆ ನಿರೂಪಕ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಯಾರು ಶೋ ಆಫ್ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದರು. ಆಗ ರಶ್ಮಿಕಾ ಮಂದಣ್ಣ ಯಶ್ ಹೆಸರು ತೆಗೆದಿದ್ದರು. ಇದು ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಭಿಮಾನಿಗಳು ಕಿಡಿ ಕಾರುತ್ತಿದ್ದಂತೆ ತಮ್ಮ ಹೇಳಿಕೆಗೆ ರಶ್ಮಿಕಾ ಮಂದಣ್ಣ ಕ್ಷಮೆ ಕೇಳಿದ್ದರು. ಅಂದಿನಿಂದ ಯಶ್ ಬಗ್ಗೆ ಮಾತಾಡುವಾಗ ಜಾಗರೂಕರಾಗಿಯೇ ಮಾತಾಡುತ್ತಾರೆ.

ಯಶ್-ರಶ್ಮಿಕಾ ಒಟ್ಟಿಗೆ ನಟಿಸೋದಿಲ್ವಾ?

ಯಶ್-ರಶ್ಮಿಕಾ ಒಟ್ಟಿಗೆ ನಟಿಸೋದಿಲ್ವಾ?

ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಬಹುಭಾಷಾ ನಟಿ. ಯಶ್ ಮುಂದಿನ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆ ಆದರೆ, ಎಲ್ಲಾ ಭಾಷೆಯಲ್ಲೂ ಪರಿಚಯವಿರುವ ಫೇಸ್ ಸಿಗಲಿದೆ. ಆದರೆ, ಇಬ್ಬರೂ ಒಟ್ಟಿಗೆ ನಟಿಸಲು ಇಷ್ಟ ಪಡುತ್ತಾರಾ? ಎನ್ನುವುದು ಇನ್ನೂ ನಿಗೂಢ. ಆದರೆ, 'ಕೆಜಿಎಫ್ 2' ಟ್ರೈಲರ್‌ಗೆ ಪ್ರತಿಕ್ರಿಯೆ ನೀಡಿದ್ದು, ಆಶಾಭಾವ ಮೂಡಿಸಿದೆ.

More from Filmibeat

English summary
Rashmika Mandanna Reaction to KGF Chapter 2 Trailer. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X