"ನನಗೆ ಆ ಕ್ರಿಕೆಟಿಗ ಅಂದ್ರೆ ಇಷ್ಟ.. ಇದೇ ನನ್ನಿಷ್ಟದ ಐಪಿಎಲ್ ತಂಡ": ರಶ್ಮಿಕಾ ಮಂದಣ್ಣ
ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಗ್ಗೆ ವಿಶೇಷವಾಗಿ ಪರಿಚಯ ಮಾಡಿಕೊಡಬೇಕಿಲ್ಲ. ಅತೀ ಹೆಚ್ಚು ಇಷ್ಟಪಟ್ಟ ನಟಿನೂ ಇವರೇ. ಹೆಚ್ಚು ಬಾರಿ ಟ್ರೋಲ್ ಆಗೋದೂ ಇವರೇ.. ಹೀಗಾಗಿ ಇಷ್ಟ ಪಡೋರಿಗೆ. ದ್ವೇಷ ಮಾಡೋರಿಗೆ ಎಲ್ಲರಿಗೂ ರಶ್ಮಿಕಾ ಮಂದಣ್ಣ ಪರಿಚಯ ಇದ್ದೇ ಇರುತ್ತೆ.
ಕನ್ನಡದ ಮೊದಲ ಸಿನಿಮಾ 'ಕಿರಿಕ್ ಪಾರ್ಟಿ' ಹಾಗೂ ತೆಲುಗಿನ ಚೊಚ್ಚಲ ಸಿನಿಮಾ 'ಚಲೋ' ಎರಡು ಹಿಟ್ ಆಗಿದ್ದವು. ಅದರಲ್ಲೂ ಟಾಲಿವುಡ್‌ನಲ್ಲಿ ಮೊದಲ ಸಿನಿಮಾದಲ್ಲೇ ಸದ್ದು ಮಾಡಿದ್ದರಿಂದ ಅಲ್ಲೇ ಹೆಚ್ಚು ಅವಕಾಶ ಸಿಕ್ಕಿದ್ದವು. ಜನಪ್ರಿಯತೆ ಬೆನ್ನತ್ತಿ ಹೋದ ನಟಿ ಕನ್ನಡದ ಕಡೆ ಮುಖ ಮಾಡಿಲ್ಲ. ಈ ಕಾರಣಕ್ಕೆ ಕನ್ನಡಿಗರಿಗೆ ಸ್ವಲ್ಪ ಬೇಜಾರಿದೆ.

ರಶ್ಮಿಕಾ ಮಂದಣ್ಣ ಕರ್ನಾಟಕವನ್ನು ಮರೆತೇ ಬಿಟ್ಟರು ಅಂತ ಹಲವರು ಆಕ್ರೋಶಗೊಂಡಿದ್ದೂ ಇದೆ. ಕಿರಿಕ್ ಬೆಡಗಿಯನ್ನು ಟ್ರೋಲ್ ಮಾಡಿದ್ದೂ ಇದೆ. ಆದರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ಅನ್ನೋದೂ ಅಷ್ಟೇ ಸತ್ಯ. ಈಗ್ಯಾಕೆ ಇಷ್ಟೆಲ್ಲ ಮಾತು ಅಂದ್ರೆ, ರಶ್ಮಿಕಾ ಮಂದಣ್ಣ ತಮ್ಮ ಫೇವರಿಟ್ ಕ್ರಿಕೆಟರ್ ಹಾಗೂ ನೆಚ್ಚಿನ ಐಪಿಎಲ್ ತಂಡ ಯಾವುದು ಅಂತ ಹೇಳಿದ್ದಾರೆ.
ರಶ್ಮಿಕಾ ಫೇವರಿಟ್ ಕ್ರಿಕೆಟರ್ ಯಾರು?
ರಶ್ಮಿಕಾ ಮಂದಣ್ಣ ತನ್ನ ಫೇವರಿಟ್ ಕ್ರಿಕೆಟರ್ ಹಾಗೂ ಐಪಿಎಲ್ ತಂಡದ ಬಗ್ಗೆ ಮಾತಾಡಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ರಶ್ಮಿಕಾ ಮಂದಣ್ಣ ತನ್ನ ಫೇವರಿಟ್ ಕ್ರಿಕೆಟರ್ ಯಾರು ಮತ್ತು ಯಾಕೆ ಎಂದು ಹೇಳಿಕೊಂಡಿದ್ದಾರೆ.
"ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂದರೆ ನನಗೆ ತುಂಬಾನೇ ಇಷ್ಟ. ಕೊಹ್ಲಿಯ ಆಕ್ರಮಣಕಾರಿ ಬ್ಯಾಟಿಂಗ್ ಸ್ಟೈಲ್ ನನಗೆ ಖುಷಿ ಕೊಡುತ್ತೆ" ಅಂತ ರಶ್ಮಿಕಾ ಮಂದಣ್ಣ ವಿಡಿಯೋದಲ್ಲಿ ರಿವೀಲ್ ಮಾಡಿದ್ದಾರೆ.
ರಶ್ಮಿಕಾ ಫೇವರಿಟ್ ಐಪಿಎಲ್ ತಂಡ?
ರಶ್ಮಿಕಾ ಫೇವರಿಟ್ ಕ್ರಿಕೆಟರ್ ಯಾರು ಅಂತಷ್ಟೇ ಹೇಳಿಲ್ಲ. ಬದಲಾಗಿ ಫೇವರಿಟ್ ಐಪಿಎಲ್ ತಂಡ ಯಾವುದು? ಅಂತಾನೂ ಹೇಳಿದ್ದಾರೆ. " ನಾನು ಬೆಂಗಳೂರು ಹುಡುಗಿ. ಹಾಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿ." ಎಂದು ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಇತ್ತ 2023ರ ಐಪಿಎಲ್ ತಂಡ ಪಯಣದಲ್ಲಿ ಕೆಟ್ಟ ಪ್ರದರ್ಶನ ನೀಡುತ್ತಿದೆ. ಇಂದು (ಮೇ 1) ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 9ನೇ ಪಂದ್ಯವನ್ನು ಆಡುತ್ತಿದೆ. ಕಳೆದ ಎಂಟು ಪಂದ್ಯಗಳಲ್ಲಿ ಆರ್‌ಸಿಬಿ 8 ಪಂದ್ಯಗಳಲ್ಲಿ ಕೇವಲ 4 ಪಂದ್ಯವನ್ನಷ್ಟೇ ಗೆದ್ದಿದೆ.
ಸಿನಿಮಾಗಳಲ್ಲಿ ರಶ್ಮಿಕಾ ಫುಲ್ ಬ್ಯುಸಿ
ರಶ್ಮಿಕಾ ಮಂದಣ್ಣಗೆ ಸಾಲು ಸಾಲು ಹಿಟ್ ಸಿನಿಮಾಗಳು ಸಿಕ್ಕಿದ್ದವು. 'ಚಲೋ', 'ಗೀತಾಗೋವಿಂದಂ', 'ದೇವ್‌ದಾಸ್', 'ಸರಿಲೇರು ನೀಕೆವ್ವರು', 'ಪುಷ್ಪ', 'ಸೀತಾರಾಮ್'ನಂತಹ ಸಿನಿಮಾಗಳು ಗಟ್ಟಿಯಾಗಿ ಟಾಲಿವುಡ್‌ನಲ್ಲಿ ನೆಲೆಯೂರುವಂತೆ ಮಾಡಿವೆ. ಇತ್ತೀಚೆಗೆ ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದು ರಶ್ಮಿಕಾ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ.
ರಶ್ಮಿಕಾ ಟಾಲಿವುಡ್ ಅಷ್ಟೇ ಅಲ್ಲದೆ, ಬಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ. ರಣ್ಬೀರ್ ಕಪೂರ್ ಜೊತೆ ರಶ್ಮಿಕಾ 'ಎನಿಮಲ್' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಸಿನಿಮಾದಲ್ಲಿ ಐಟಂ ಸಾಂಗಿಗೆ ಹೆಜ್ಜೆ ಹಾಕಲಿದ್ದಾರಂತೆ.


Click it and Unblock the Notifications











