'ಪುಷ್ಪ' ಬಳಿಕ ಯೂಟ್ಯೂಬ್ ಆರಂಭಿಸಿದ ರಶ್ಮಿಕಾ 'ಮಾಜಿ ಬಾಯ್‌ಫ್ರೆಂಡ್' ಬಗ್ಗೆ ಹೇಳಿದ್ದೇನು?

ರಶ್ಮಿಕಾ ಮಂದಣ್ಣ ಈಗ ಕೇವಲ ದಕ್ಷಿಣ ಭಾರತದ ನಟಿಯಾಗಿ ಉಳಿದಿಲ್ಲ. ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್. 'ಪುಷ್ಪ' ಸಿನಿಮಾ ಬಿಡುಗಡೆಯಾದ ಬಳಿಕ ರಶ್ಮಿಕಾ ರೇಂಜ್ ಬದಲಾಗಿದೆ. 'ಪುಷ್ಪ' ಸಿನಿಮಾ ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲ. ಬಾಲಿವುಡ್ ಬಾಕ್ಸಾಫೀಸ್‌ನಲ್ಲೂ 100 ಕೋಟಿ ಲೂಟಿ ಮಾಡಿತ್ತು. ರಶ್ಮಿಕಾ ಡಿ ಗ್ಲಾಮರ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರೂ, ಶ್ರೀವಲ್ಲಿ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಯಶಸ್ಸಿನಲ್ಲಿಯೇ ರಶ್ಮಿಕಾ ಮಂದಣ್ಣ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಈ ಚಾನೆಲ್‌ನಲ್ಲಿ ಮೊದಲ ವಿಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ. ತನ್ನ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವ ರಶ್ಮಿಕಾ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುವುದಕ್ಕೆ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಆರಂಭದಲ್ಲಿ ಚಿಕ್ಕದೊಂದು ವಿಡಿಯೋ ಕೂಡ ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಶ್ಮಿಕಾ ತನ್ನ ಮಾಜಿ ಬಾಯ್‌ಫ್ರೆಂಡ್ ಬಗ್ಗೆ ಮಾತಾಡಿದ್ದಾರೆ.

 ರಶ್ಮಿಕಾ ಯೂಟ್ಯೂಬ್ ಚಾನೆಲ್

ರಶ್ಮಿಕಾ ಯೂಟ್ಯೂಬ್ ಚಾನೆಲ್

ರಶ್ಮಿಕಾ ಮಂದಣ್ಣ ಯೂಟ್ಯೂಬ್ ಆರಂಭಿಸಿದ್ದು ಆಕೆಯ ಡೈ ಹಾರ್ಡ್‌ ಫ್ಯಾನ್ಸ್‌ಗೆ ಖುಷಿಕೊಟ್ಟಿದೆ. ಸದ್ಯ ಒಂದೇ ಒಂದು ಚಿಕ್ಕ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಶ್ಮಿಕಾಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಸಣ್ಣ ವಿಡಿಯೋದಲ್ಲಿ ಕ್ವೀಕ್ ಆಗಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಆ ಪ್ರಶ್ನೆಗಳಿಗೆ ರಶ್ಮಿಕಾ ಮಂದಣ್ಣ ಅಷ್ಟೇ ಕ್ವಿಕ್ ಆಗಿ ಉತ್ತರಗಳನ್ನು ನೀಡಿದ್ದಾರೆ. ಇಷ್ಟು ದಿನ ಕೇವಲ ಇನ್‌ಸ್ಟಾಗ್ರಾಂನಲ್ಲಿಷ್ಟೇ ಇದ್ದ ರಶ್ಮಿಕಾ ಮಂದಣ್ಣ ಯೂಟ್ಯೂಬ್‌ಗೂ ಲಗ್ಗೆ ಇಟ್ಟಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

 ಮಾಜಿ ಬಾಯ್‌ಫ್ರೆಂಡ್ ಬಗ್ಗೆ ಪ್ರಸ್ತಾಪ

ಮಾಜಿ ಬಾಯ್‌ಫ್ರೆಂಡ್ ಬಗ್ಗೆ ಪ್ರಸ್ತಾಪ

ರಶ್ಮಿಕಾ ಮಂದಣ್ಣ ಮೊದಲ ಯೂಟ್ಯೂಬ್ ವಿಡಿಯೋದಲ್ಲಿ ಮಾಜಿ ಬಾಯ್‌ಫ್ರೆಂಡ್, ನಟನೆ, ಡ್ಯಾನ್ಸಿಂಗ್ ಹಾಗೂ ವರ್ಕ್‌ಔಟ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. " ಎಲ್ಲರಿಗೂ ನಿಮ್ಮ ಮಾಜಿಯ ಬಗ್ಗೆ ಆಸಕ್ತಿ. ನಮಗೆ ನೀವು ಏನು ಮಾಡುತ್ತೀರ ಎಂಬುದರ ಬಗ್ಗೆ ಆಸಕ್ತಿ." ಎಂಬುವ ಬ್ಯಾಕ್‌ಗ್ರೌಂಡ್ ವಾಯ್ಸ್, ಯೂಟ್ಯೂಬ್ ಚಾನೆಲ್‌ನ ಆಶೋತ್ತರಗಳನ್ನು ಜನರ ಮುಂದಿಟ್ಟಿದೆ. ಈ ಮೂಲಕ ಈ ಯೂಟ್ಯೂಬ್ ಚಾನೆಲ್‌ನಲ್ಲಿ ತನ್ನ ಮಾಜಿ ಬಾಯ್‌ಫ್ರೆಂಡ್ ಬಗ್ಗೆ ಯಾವುದೇ ರೀತಿಯ ಪ್ರಶ್ನೆಗಳಿಗೆ ಅವಕಾಶವಿರುವುದಿಲ್ಲವೆಂದು ಪರೋಕ್ಷವಾಗಿ ಹೇಳಿದ್ದಾರೆ.

ಯೂಟ್ಯೂಬ್ ಫಾಲೋವರ್ಸ್ ಎಷ್ಟು?

ರಶ್ಮಿಕಾ ಮಂದಣ್ಣ ಯೂಟ್ಯೂಬ್ ಚಾನೆಲ್ ಕಳೆದ ವರ್ಷ ನವೆಂಬರ್ 25ಕ್ಕೆ ಕ್ರಿಯೇಟ್ ಆಗಿದೆ. ಆದರೆ, ರಶ್ಮಿಕಾ ಮಾರ್ಚ್ 10ರಿಂದ ತನ್ನ ಯೂಟ್ಯೂಬ್ ಚಾನಲ್‌ ಅನ್ನು ಆಕ್ಟೀವ್ ಮಾಡಿದ್ದಾರೆ. ಇಲ್ಲಿವರೆಗೂ ಈ ಚಾನೆಲ್‌ನಲ್ಲಿ 39 ಸಾವಿರಕ್ಕೂ ಅಧಿಕ ಮಂದಿ ಸಬ್‌ಸ್ಕ್ರೈಬರ್ ಇದ್ದಾರೆ. ಇನ್ನೊಂದು ಕಡೆ ಹಾಕಿದ ಒಂದೇ ಒಂದು ವಿಡಿಯೋಗೆ ಒಂದು ದಿನದಲ್ಲಿ ಸುಮಾರು 1.55 ಲಕ್ಷ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಸದ್ಯ 57 ಸೆಕೆಂಡ್‌ಗಳ ವಿಡಿಯೋ ರಿಲೀಸ್ ಮಾಡಿದ್ದು, ಪೂರ್ತಿ ವಿಡಿಯೋ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.

 ರಶ್ಮಿಕಾಗೆ 30 ಮಿಲಿಯನ್ ಫಾಲೋವರ್ಸ್

ರಶ್ಮಿಕಾಗೆ 30 ಮಿಲಿಯನ್ ಫಾಲೋವರ್ಸ್

ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಇಲ್ಲಿವರೆಗೂ ಇನ್‌ಸ್ಟಾಗ್ರಾಂನಲ್ಲಿ ಫೋಟೊ, ವಿಡಿಯೋಗಳನ್ನುಪೋಸ್ಟ್ ಮಾಡುತ್ತಿದ್ದರು. ತನ್ನ ಫ್ಯಾನ್ಸ್ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಿದ್ದರು. ಇನ್‌ಸ್ಟಾಗ್ರಾಂನಲ್ಲಿ ರಶ್ಮಿಕಾ ಮಂದಣ್ಣಗೆ ಸುಮಾರು 30 ಮಿಲಿಯನ್ ಫಾಲೋವರ್‌ಗಳು ಇದ್ದಾರೆ. ಇವರೆಲ್ಲರೊಂದಿಗೆ ಆಗಾಗ ತನ್ನ ಬಗ್ಗೆ, ತನ್ನ ಸಿನಿಮಾಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಅಭಿಮಾನಿಗಳ ನೂರೆಂಟು ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಈಗ ಯೂಟ್ಯೂಬ್ ಮೂಲಕ ಈ ಸಂಬಂಧವನ್ನು ಮುಂದುವರೆಸಲು ನಿರ್ಧರಿಸಿದ್ದಾರೆ.

More from Filmibeat

English summary
Rashmika Mandanna started her youtube channel and comment about ex boyfriend. Her first video on her Youtube channel is about her ex, love for acting, dancing and travelling.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X