ರಶ್ಮಿಕಾ ಮಂದಣ್ಣ ಮೊದಲ ಹೀರೋ ರಕ್ಷಿತ್ ಶೆಟ್ಟಿ ಅಲ್ಲ;ಕಿರಿಕ್‌ಗೂ ಮುನ್ನ ಬಿಗ್‌ಬಾಸ್ ಸ್ಪರ್ಧಿ ಜೊತೆ ನಟಿಸ್ಬೇಕಿತ್ತು

ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲೂ ನಟಿಸುತ್ತಿದ್ದಾರೆ. ಹೀಗಾಗಿ ನಿರಂತರವಾಗಿ ಸಂದರ್ಶನವನ್ನೂ ನೀಡುತ್ತಲೇ ಇರುತ್ತಾರೆ. ಇಂತಹದ್ದೇ ಒಂದು ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ 'ಕಿರಿಕ್ ಪಾರ್ಟಿ' ನನ್ನ ಮೊದಲ ಸಿನಿಮಾ ಅಲ್ಲ ಅಂತ ಹೇಳಿದ್ದರು. ಅಲ್ಲಿವರೆಗೂ ಬಹುತೇಕ ಮಂದಿ ರಕ್ಷಿತ್ ಶೆಟ್ಟಿ ಜೊತೆ ನಟಿಸಿದ ಕಿರಿಕ್ ಪಾರ್ಟಿಯೇ ಇವರ ಚೊಚ್ಚಲ ಸಿನಿಮಾವೆಂದು ನಂಬಿದ್ದರು. ಆದರೆ, 'ಕಿರಿಕ್ ಪಾರ್ಟಿ' ಅಲ್ಲವೆಂದು ಹೇಳಿಕೊಂಡಿದ್ದರು.

ರಶ್ಮಿಕಾ ಮಂದಣ್ಣ ಈಗ ಸ್ಟಾರ್ ನಟಿ. ತೆಲುಗು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಎರಡೂ ಚಿತ್ರರಂಗದಲ್ಲಿಯೂ ಇವರಿಗೆ ಸೂಪರ್‌ ಸಕ್ಸಸ್ ಸಿಕ್ಕಿದೆ. ಇಷ್ಟೇ ಅಲ್ಲದೆ, ಇನ್ನು ಕೆಲವು ಪ್ರಾಜೆಕ್ಟ್‌ಗಳು ಇವರ ಕೈಯಲ್ಲಿವೆ. ಬಾಲಿವುಡ್ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟಿಯ ವೃತ್ತಿ ಬದುಕು ಶುರುವಾಗಿದ್ದು ಮಾತ್ರ ಕನ್ನಡ ಚಿತ್ರರಂಗದಿಂದಲೇ.

Rashmika Mandanna supposed to act with Bigg Boss contestant Rakshith Shetty not her first hero

ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವೈವಾಹಿಕ ಜೀವನದಕ್ಕೂ ಕಾಲಿಟ್ಟಿದ್ದಾರೆ. ಸದ್ಯ ಮದುವೆ ಮೂಡ್‌ನಲ್ಲಿ ಇದ್ದ ರಶ್ಮಿಕಾ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಈ ಮಧ್ಯೆ ಅವರ ಮೊದಲ ಸಿನಿಮಾದ ನಾಯಕ ಸಂದರ್ಶನ ನೀಡಿದ್ದರು, ಆ ಸಿನಿಮಾದ ಬಗ್ಗೆ ಮಾತಾಡಿದ್ದಾರೆ. ಅಷ್ಟಕ್ಕೂ ಆ ಸಿನಿಮಾ ಯಾವುದು? ರಶ್ಮಿಕಾ ಅವರ ಮೊದಲ ಹೀರೋ ಯಾರು? ತಿಳಿಯುವುದಕ್ಕೆ ಮುಂದೆ ಓದಿ.

ಕೆಲವು ತಿಂಗಳುಗಳ ಹಿಂದೆ ರಶ್ಮಿಕಾ ಮಂದಣ್ಣ ಆಡಿಷನ್ ಕೊಡುತ್ತಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಇದಕ್ಕಿದ್ದ ಹಾಗೇ ರಶ್ಮಿಕಾ ಆಡಿಷನ್ ವಿಡಿಯೋ ವೈರಲ್ ಆಗಿತ್ತು. ಈ ಮಧ್ಯೆನೇ ಸಂದರ್ಶನದಲ್ಲಿ ತನ್ನ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಅಂತ ಸಂದರ್ಶನದಲ್ಲಿ ಹೇಳಿದ್ದರು. ಹಾಗಂತ ಮೊದಲ ಸಿನಿಮಾದ ಆಡಿಷನ್ ವಿಡಿಯೋ ಏನಲ್ಲ. ಎರಡೂ ಬೇರೆ ಬೇರೆ ವಿಷಯಗಳೇ. ಅಂದ್ಹಾಗೆ, ರಶ್ಮಿಕಾ ಮಂದಣ್ಣ ಹೇಳಿದ ಮೊದಲ ಸಿನಿಮಾದ ಹೆಸರು 'ಗೆಳೆಯರೇ ಗೆಳತಿಯರೇ'.

ರಶ್ಮಿಕಾ ಮಂದಣ್ಣ ಹೇಳಿದ ಮೊದಲ ಸಿನಿಮಾ 'ಗೆಳೆಯರೇ ಗೆಳತಿಯರೇ'ಯ ಹೀರೋ ಮತ್ಯಾರೂ ಅಲ್ಲ ಬಿಗ್ ಬಾಸ್ ಕನ್ನಡದ ರನ್ನರ್‌ಅಪ್ ತ್ರಿವಿಕ್ರಮ್. ಇತ್ತೀಚೆಗೆ ತ್ರಿವಿಕ್ರಮ್ ಅವರು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ಪಾಡ್‌ಕಾಸ್ಟ್‌ನಲ್ಲಿ ರಶ್ಮಿಕಾ ಮಂದಣ್ಣ ಮೊದಲ ಸಿನಿಮಾದ ಬಗ್ಗೆ ಮಾತಾಡಿದ ವಿಷಯವನ್ನು ನಿರೂಪಕ ರಾಜೇಶ್ ಗೌಡ ನೆನಪಿಸಿದ್ದರು. ಆಗ ರಶ್ಮಿಕಾ ಮಂದಣ್ಣ ಅವರ ಕುರಿತ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Rashmika Mandanna supposed to act with Bigg Boss contestant Rakshith Shetty not her first hero

"ಸಾಯಿ ಕೃಷ್ಣ ಈ ಸಿನಿಮಾದ ನಿರ್ದೇಶಕರು. ಕಾ ಅಂತಹ ಒಂದು ಸಿನಿಮಾ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಇಬ್ಬರು ಜೋಡಿಗಳು. ರಶ್ಮಿಕಾ ಮಂದಣ್ಣ ಮತ್ತೊಬ್ಬ ಹೀರೋಗೆ ಪೇರ್ ಆಗಿದ್ದರು. ಒಟ್ಟು ಮೂರು ಜೋಡಿಗಳ ಮೇಲೆ ಕಥೆಯಿತ್ತು. ಅದೊಂದು ಕಾಲೇಜ್ ಸ್ಟೋರಿಯಾಗಿತ್ತು. ಕಿರಿಕ್ ಪಾರ್ಟಿ ಬಾರದ ಇದೇನಾದರೂ ಬಂದಿದ್ದರೆ, ಇದು ಇನ್ನೊಂದು ಕಾಲೇಜ್ ಸ್ಟೋರಿ ಆಗಿರುತ್ತಿತ್ತು. ಪಿಯುಸಿ, ಡಿಗ್ರಿ ಓದುತ್ತಿರುವವರಿಗೆ ಇದು ಒಳ್ಳೆಯ ಸಿನಿಮಾ" ಎಂದು ಹೇಳಿದ್ದಾರೆ.

ಇನ್ನೊಂದು ಕಡೆ ರಶ್ಮಿಕಾ ಅವರ ಗುಣವನ್ನು ಹಾಡಿ ಹೊಗಳಿದ್ದಾರೆ. "ಅವತ್ತು ಇದ್ದ ರಶ್ಮಿಕಾನೂ ಸೇಮ್. ಇವತ್ತಿನ ರಶ್ಮಿಕಾನೂ ಸೇಮ್. ಯಾಕಂದ್ರೆ, ಅವತ್ತು ಒಂದು ಸೀನ್ ಮಾಡಿದ್ವಿ. ನಾನು ಮತ್ತೆ ಸಾಯಿಶ್ ಅಂತ. ಅವನು ಮೂರನೇ ಜೋಡಿ. ನಿರ್ದೇಶಕರು ನಾವು ಮೂವರಿಗೆ ಈಗ ಸಿನಿಮಾದಲ್ಲಿ ಸುದೀಪ್ ಸರ್, ನಾನಿ ಸರ್ ಹಾಗೂ ಸಮಂತಾ ಮೇಡಂ ಅವರ ಸೀನ್‌ ಕೊಟ್ಟು ಮಾಡುವಂತೆ ಹೇಳಿದ್ದರು. ಆ ಸೀನ್ ಮಾಡುವಾಗ ನಾನು ಹೇಳಿದ್ದೆ. ನೀವು ಬಾಲಿವುಡ್‌ಗೆ ಹೋಗಿಯೇ ಹೋಗುತ್ತೀರ. ನಮಗೆ ಅನ್ನ, ಸಾರು, ಉಪ್ಪು ಎಲ್ಲಾ ಅರೇಂಜ್ ಮಾಡಿಕೊಂಡು ಬರಬೇಕು. ನಿನಗೆ ಈಗಾಗಲೇ ಫೀಡಿಂಗ್ ಇದೆ. ನಮ್ಮ ಸಿನಿಮಾಗೆ ನಾವೇ ಸ್ಯಾಟಲೈಟ್ ಹಾಕೊಂಡು ಬರಬೇಕು. ನೀವು ಹೋಗಿರಿ, ನಾನು ನಿಧಾನವಾಗಿ ಬರುತ್ತೇನೆ ಅಂತ ಅವತ್ತೇ ಹೇಳಿದ್ದೆ" ಎಂದು ತ್ರಿವಿಕ್ರಮ್ ಹೇಳಿದ್ದಾರೆ.

English summary
Rashmika Mandanna supposed to act with Bigg Boss contestant Rakshith Shetty not her first hero.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X