'ಕನ್ನಡಕ್ಕೆ ಮೋಸ ಮಾಡಿದ ಬಾಲೆ' ಎಂದು ರಶ್ಮಿಕಾ ವಿರುದ್ಧ ಟ್ರೋಲ್: ಕೂಲ್ ಆಗುತ್ತಿಲ್ಲ ಟ್ರೋಲಿಗರು
ರಶ್ಮಿಕಾ ಮಂದಣ್ಣಗೂ ಟ್ರೋಲಿಗರಿಗೂ ಅವಿನಾಭಾವ ಸಂಬಂಧ. ಕಿರಿಕ್ ಪಾರ್ಟಿ ಬಳಿಕ ರಶ್ಮಿಕಾ ಟ್ರೋಲ್ ಆದ ಹಾಗೆ ಕನ್ನಡದ ಮತ್ಯಾವ ನಟಿನೂ ಟ್ರೋಲ್ ಆಗಿಲ್ಲ ಅಂತ ಅನಿಸುತ್ತೆ. ಏನಾದರೂ ಒಂದು ವಿಷಯಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಇದು ರಶ್ಮಿಕಾಗೂ ಅಭ್ಯಾಸವಾಗಿ ಹೋಗಿದೆ. ಅವರೇ ಹೇಳಿದಂತೆ ಮೊದ ಮೊದಲು ಈ ಟ್ರೋಲ್ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದರು. ಆದರೆ, ಈಗ ಟ್ರೋಲ್ ಅನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇನ್ನೊಂದು ಕಡೆ ರಶ್ಮಿಕಾ ಟ್ರೋಲ್ ಅನ್ನು ಗಂಭೀರವಾಗಿ ಪರಿಗಣಿಸುವವರೆಗೂ ಟ್ರೋಲಿಗರು ಬಿಡುವುದಿಲ್ಲ ಅಂತ ಅನಿಸುತ್ತೆ.
Recommended Video
ಕೇವಲ ನಾಲ್ಕು ದಿನಗಳ ಹಿಂದೆ ವೀಡಿಯೋವೊಂದು ಸಿಕ್ಕಾ-ಪಟ್ಟೆ ಟ್ರೋಲ್ ಆಗುತ್ತಿದೆ. ಅದು ಲೆಜೆಂಡ್ ಬಾಲಕೃಷ್ಣ ಟಾಕ್ ಶೋ ವಿಡಿಯೋ. ಬಾಲಕೃಷ್ಣ ನಿರೂಪಣೆ ಮಾಡಿದ 'ಅನ್‌ಸ್ಟಾಪಬಲ್' ಶೋದಲ್ಲಿ ರಶ್ಮಿಕಾ ಭಾಗವಹಿಸಿದ್ದರು. ಅದೇ ಶೋದ ಒಂದು ವಿಡಿಯೋ ಇಟ್ಕೊಂಡು, ಟ್ರೋಲಿಗರು ರಶ್ಮಿಕಾಳನ್ನು ಡೈಲಾಗ್‌ನಲ್ಲೇ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ. ಅಷ್ಟಕ್ಕೂ ಈ ಹೊಸ ಟ್ರೋಲ್ ಏನು? ಆ ವಿಡಿಯೋದಲ್ಲಿ ಏನಿದೆ ಅಂತ ತಿಳಿಯಲು ಮುಂದೆ ಓದಿ.

ಮತ್ತೆ ರಶ್ಮಿಕಾ ಮಂದಣ್ಣ ಟ್ರೋಲ್
'ಲೆಜೆಂಡ್' ಕೇವಲ ಸಿನಿಮಾ ಹೆಸರಲ್ಲ. ಅದು ಬಾಲಕೃಷ್ಣ ಬಿರುದು. ಡೈಲಾಗ್ ಬಿಡುವುದರಲ್ಲಿ ಬಾಲಯ್ಯನನ್ನು ಮೀರಿಸಲು ಯಾರಿಗೆ ಸಾಧ್ಯ? ಅದಕ್ಕೆ ಒಟಿಟಿ ವೇದಿಕೆ ಆಹಾದಲ್ಲಿ ಪ್ರಸಾರವಾದ 'ಅನ್‌ಸ್ಟಾಪಬಲ್' ಉತ್ತಮ ಸಾಕ್ಷಿ. ಈ ಶೋಗೆ ಟಾಲಿವುಡ್‌ನ ಗಣ್ಯರು ಆಗಮಿಸಿದ್ದಾರೆ. ಅವರಿಗೆ ಬಾಲಕೃಷ್ಣ ತನ್ನದೇ ಸ್ಟೈಲ್‌ನಲ್ಲಿ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರವನ್ನೂ ಪಡೆದುಕೊಂಡಿದ್ದಾರೆ. ಇದೇ ಶೋ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಈ ಮೂವರೂ 'ಪುಷ್ಪ' ಪ್ರಚಾರಕ್ಕೆ ತೆರಳಿದ್ದರು. ಆ ವೇಳೆ ಬಾಲಕೃಷ್ಣ ರಶ್ಮಿಕಾಗೆ ಕನ್ನಡದಲ್ಲಿ ಕವನ ಹೇಳಿ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದರು. ಇತ್ತ ರಶ್ಮಿಕಾ ಅದೇ ವಿಡಿಯೋಗೆ ಟ್ರೋಲ್ ಆಗಿದ್ದಾರೆ.
ಡೈಲಾಗ್ ಡಬ್ ಮಾಡಿದ ಟ್ರೋಲಿಗರು
ನಂದಮೂರಿ ಬಾಲಕೃಷ್ಣ ತನ್ನ ಟಾಕ್ ಶೋನಲ್ಲಿ ಕನ್ನಡ ಮಾತನಾಡಿ ಕನ್ನಡ ಪ್ರೀತಿ ಗಳಿಸಿಕೊಂಡರೆ. ರಶ್ಮಿಕಾ ಮಾತ್ರ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಾಲಕೃಷ್ಣ ಹೇಳಿದ ಕವನವನ್ನೇ ಡಬ್ ಮಾಡಿ ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. "ಕನ್ನಡಕ್ಕೆ ಮೋಸ ಮಾಡಿದ ಬಾಲೆ.. ನಿನ್ನ ನೋಡಿದರೆ ಮೈ ತುಂಬಾ ಉರಿಯುತ್ತೆ. ಎಷ್ಟು ಡೌವ್ ಮಾಡ್ತಿಯೇ.. ಹೆಂಗ್ ಬಂದೆ ಹಂಗೆ ಹೋಗು ತಿರುಗಿ ನೋಡ್ದಂಗೆ. ಫೈನಲ್ ಆಗಿ ಒಂದ್ ಹೇಳ್ತೀನಿ ನಿಂಗೆ ಉಂಡ್ ಮನೆಗೆ ಖನ್ನ ಹಾಕ್ಬೇಡ್ವೆ ಪೆಂಗೆ." ಅಂತ ಬಾಲಕೃಷ್ಣ ವಾಯ್ಸ್‌ಗೆ ಡಬ್ ಮಾಡಿ ಟ್ರೋಲ್ ಮಾಡಿದ್ದಾರೆ.
ಬಾಲಕೃಷ್ಣ ಹೇಳಿದ ಕವನ ಹೇಗಿತ್ತು?
ಅಸಲಿಗೆ ಬಾಲಕೃಷ್ಣ ತಮ್ಮ ಟಾಕ್ ಶೋನಲ್ಲಿ ರಶ್ಮಿಕಾ ಕಂಡು ಕನ್ನಡದಲ್ಲಿ ಕವಿತೆ ಓದಿದ್ದರು." ಚೆಲುವಲ್ಲಿ ಬೇಲೂರ ಬಾಲೆ. ಮನಸ್ಸಲ್ಲಿ ಮೈಸೂರ ಮಲ್ಲೆ. ನುಡಿಯಲ್ಲಿ ಕಸ್ತೂರಿ. ನಡೆಯಲ್ಲಿ ಕಾವೇರಿ. ಸೊಬಗಲ್ಲಿ ಮಡಿಕೇರಿ, ನಾಟ್ಯದಲ್ಲಿ ಮಯೂರಿ, ಕೊಡಗಿನ ಬೆಡಗಿ. ಕರ್ನಾಟಕದ ಹುಡುಗಿ. " ಎಂದು ರಶ್ಮಿಕಾ ಮಂದಣ್ಣರನ್ನು 'ಲೆಜೆಂಡ್' ಬಾಲಕೃಷ್ಣ ವರ್ಣಿಸಿದ್ದರು. ಇದೇ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲೀಗ ಹಲ್‌ಚಲ್ ಎಬ್ಬಿಸುತ್ತಿದೆ.

ರಶ್ಮಿಕಾ ಕಾಲೆಳೆದಿದ್ದ ಬಾಲಯ್ಯ
ಲೆಜೆಂಡ್ ಬಾಲಕೃಷ್ಣ ನಡೆಸಿಕೊಡುವ ಟಾಕ್ ಶೋ 'ಅನ್‌ಸ್ಟಾಪಬಲ್' ನಲ್ಲಿ ಕೇವಲ ರಶ್ಮಿಕಾಗಾಗಿ ಕನ್ನಡದಲ್ಲಿ ಕವನ ಓದಿದ್ದಷ್ಟೇ ಅಲ್ಲ. ಈ ಎಪಿಸೋಡ್‌ನಲ್ಲಿ ಬಾಲಕೃಷ್ಣ ರಶ್ಮಿಕಾ ಕಾಲೆಳೆದಿದ್ದರು. ತಮಾಷೆಗಾಗಿ 'ರಶ್ಮಿಕಾಗೂ ಟ್ರೋಲಿಗರಿಗೂ ತುಂಬಾನೇ ಫ್ರೆಂಡ್‌ಶಿಪ್ ಇದೆಯಲ್ವಾ? ಎಂದು ಕೇಳಿದ್ದರು. ಈ ಪ್ರಶ್ನೆಗೆ ರಶ್ಮಿಕಾ ನಾಚಿ ಮುಖ ಕೆಂಪಾಗಿತ್ತು. ಈ ಶೋ ಪ್ರಿಮಿಯರ್ ಆದಲ್ಲಿಂದ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತಲೇ ಇದ್ದಾರೆ. 'ಪುಷ್ಪ' ಪ್ರಚಾರಕ್ಕೆ ಕರ್ನಾಟಕಕ್ಕೆ ಬಂದಿದ್ದಾಗ, ಕನ್ನಡ ಮಾತಾಡಲು ರಶ್ಮಿಕಾ ಪರದಾಡಿದ್ದರು. ಅಲ್ಲಿಂದ ರಶ್ಮಿಕಾ ಹೆವಿ ಟ್ರೋಲ್ ಆಗುತ್ತಿದ್ದಾರೆ.


Click it and Unblock the Notifications











