ರವೀನಾ ಹಾಗೂ ಸಂಜಯ್ ದತ್ ಇಬ್ಬರಿಗೂ ಒಂದು ದೃಶ್ಯ ನೀಡಿವಂತೆ ಮನವಿ: ಪ್ರಶಾಂತ್ ನೀಲ್ ಒಪ್ಪಲಿಲ್ಲ ಯಾಕೆ?

'ಅರಣ್ಯಕ್' ಮೂಲಕ ಬಾಲಿವುಡ್ ನಟಿ ರವೀ‍ನಾ ಟಂಡನ್ ಮೊದಲ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೆಬ್ ಸೀರಿಸ್ ವೀಕ್ಷಕರಿಗೆ ಬಹಳ ಹಿಡಿಸಿದೆ. ಮೊದಲ ಪ್ರಯತ್ನದಲ್ಲಿ ರವೀನಾ ಗೆದ್ದು ಬೀಗಿದ್ದಾರೆ. ಇದರೊಂದಿಗೆ ಇಡೀ ಭಾರತವೇ ಕಾದು ಕೂತಿರುವ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಕೂಡ ಕ್ಯೂನಲ್ಲಿ ನಿಂತಿದೆ. ಈ ಸಿನಿಮಾದಲ್ಲಿ ಯಶ್ ಹಾಗೂ ಸಂಜಯ್ ದತ್ ಮುಖಾಮುಖಿಯಾಗಲಿದ್ದಾರೆ. ಈ ಸಿನಿಮಾ ಬಗ್ಗೆ ರವೀನಾ ಟಂಡನ್ ಅಚ್ಚರಿಯ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ.

Recommended Video

KGF 2 ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಅಧೀರ ಸಂಜಯ್ ದತ್

ರವೀನಾ ಟಂಡನ್ ಹಾಗೂ ಸಂಜಯ್ ದತ್ ಇಬ್ಬರೂ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿವೆ. ಬಾಲಿವುಡ್‌ನಲ್ಲಿರುವ ಫೇಮಸ್ ಜೋಡಿಗಳಲ್ಲಿ ರವೀನಾ ಹಾಗೂ ಸಂಜಯ್ ದತ್ ಪೇರ್ ಕೂಡ ಒಂದಾಗಿತ್ತು. ಈಗ ಮತ್ತೆ 'ಕೆಜಿಎಫ್ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಕಾರಣಕ್ಕೆ ಒಂದು ಸೀನ್ ನೀಡುವಂತೆ ಇಬ್ಬರು ಕೇಳಿಕೊಂಡಿದ್ದರು. ಆದರೆ ಪ್ರಶಾಂತ್ ನೀಲ್ ಒಪ್ಪಲಿಲ್ಲ.

 ಒಂದು ಸೀನ್ ಕೊಡಿ ಅಂದರೂ ಕೊಡಲಿಲ್ಲ

ಒಂದು ಸೀನ್ ಕೊಡಿ ಅಂದರೂ ಕೊಡಲಿಲ್ಲ

ಬಹು ದಿನಗಳ ಬಳಿಕ ಸಂಜಯ್ ದತ್ ಹಾಗೂ ರವೀನಾ ಟಂಡನ್ ಇಬ್ಬರೂ ಒಂದೇ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಆದರೆ, ಒಂದೂ ದೃಶ್ಯದಲ್ಲೂ ಒಟ್ಟಿಗೆ ನಟಿಸುತ್ತಿಲ್ಲವೆಂಬ ಬೇಸರ ರವೀನಾ ಟಂಡನ್‌ಗಿದೆ. ಸಿನಿಮಾ ಶೂಟಿಂಗ್ ವೇಳೆ ರವೀನಾ ಟಂಡನ್ ಹಾಗೂ ಸಂಜಯ್ ದತ್ ಇಬ್ಬರೂ ಪ್ರಶಾಂತ್ ನೀಲ್ ಬಳಿಕ ಒಟ್ಟಿಗೆ ನಟಿಸಲು ಒಂದು ದೃಶ್ಯ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಪ್ರಶಾಂತ್ ನೀಲ್ ಒಪ್ಪಿಕೊಳ್ಳಲಿಲ್ಲವಂತೆ. ಈ ಮಾತನ್ನು ಸ್ವತಃ ರವೀನಾ ಟಂಡನ್ ಹೇಳಿದ್ದಾರೆ.

 ಈಡೇರಲಿಲ್ಲ ರವೀನಾ-ಸಂಜಯ್ ಕನಸು

ಈಡೇರಲಿಲ್ಲ ರವೀನಾ-ಸಂಜಯ್ ಕನಸು

"ಸಂಜಯ್ ಮತ್ತು ನಾನು ಕೆಜಿಎಫ್ 2 ಸೆಟ್ಟಿನಲ್ಲಿ ಒಟ್ಟಿಗೆ ನಟಿಸೋಣ ಅಂತ ಅಂದುಕೊಂಡಿದ್ದೆವು. ಹಳೆಯ ದಿನಗಳಂತೆ ಸೆಟ್ಟಿನಲ್ಲಿ ಬ್ಲಾಸ್ಟ್ ಮಾಡೋಣ ಅಂತಿದ್ದೆವು. ಆದರೆ ಇಬ್ಬರೂ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿಲ್ಲ ಅನ್ನುವುದೇ ಬೇಸರ. ನಾವು ಶೂಟಿಂಗ್ ಮಾಡುತ್ತಿದ್ದ ದಿನಗಳೂ ಕೂಡ ಒಟ್ಟಿಗೆ ಸಿಕ್ಕಿರಲಿಲ್ಲ. ಆಗ ನಾವು ಎಲ್ಲಾದರೂ ಸಾಧ್ಯವಿದ್ದರೆ ಸೀನ್ ನೀಡುವಂತೆ ಪ್ರಶಾಂತ್ ಬಳಿಕ ಕೇಳಿಕೊಂಡೆವು. ಆದರೆ ಸ್ಕ್ರಿಪ್ಟ್ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ." ಎಂದು ನ್ಯೂಸ್ 18 ಸಂದರ್ಶನದಲ್ಲಿ ತಿಳಿಸಿದ್ದಾರೆ.

 ರವೀನಾ- ಸಂಜಯ್ ದತ್ 'ಕೆಜಿಎಫ್ 2' ಹೈಲೈಟ್

ರವೀನಾ- ಸಂಜಯ್ ದತ್ 'ಕೆಜಿಎಫ್ 2' ಹೈಲೈಟ್

'ಕೆಜಿಎಫ್ 2' ಸಿನಿಮಾದ ಹೈಲೈಟ್ ಈ ಎರಡು ಪಾತ್ರಗಳು 'ಕೆಜಿಎಫ್ 2' ಸಿನಿಮಾ ಮೂಲಕ ರವೀನಾ ಟಂಡನ್ ಮತ್ತೆ ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೊಂದು ಕಡೆ ಇದೇ ಚಿತ್ರದ ಮೂಲಕ ಸಂಜಯ್ ದತ್ ಮೊದಲ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಕಾರಣಕ್ಕೆ 'ಕೆಜಿಎಫ್ 2' ರವೀನಾ ಟಂಡನ್ ಹಾಗೂ ಸಂಜಯ್ ದತ್ ಅವರಿಗಷ್ಟೇ ಅಲ್ಲ, ಕನ್ನಡಿಗರಿಗೂ ಒಂದು ವಿಶಿಷ್ಟ ಸಿನಿಮಾ.

 ಏಪ್ರಿಲ್ 14ಕ್ಕೆ 'ಕೆಜಿಎಫ್ 2' ರಿಲೀಸ್

ಏಪ್ರಿಲ್ 14ಕ್ಕೆ 'ಕೆಜಿಎಫ್ 2' ರಿಲೀಸ್

ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಭಾರತದ ಮೂಲೆ ಮೂಲೆಯಲ್ಲಿರುವ ಸಿನಿಮಾ ಪ್ರೇಮಿಗಳು 'ಕೆಜಿಎಫ್ 2' ನೋಡಲು ಕಾದು ಕೂತಿದ್ದಾರೆ. ಹೀಗಾಗಿ ಈಗಾಗಲೇ ಚಿತ್ರತಂಡ ಅನೌನ್ಸ್ ಮಾಡಿದ ಡೇಟ್‌ಗೆ ಸಿನಿಮಾ ಬಿಡುಗಡೆಯಾಗುತ್ತಿದೆ. ಏಪ್ರಿಲ್ 14ರಂದು ಚಿತ್ರಮಂದಿರಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಹೀಗಾಗಿ 'ಕೆಜೆಎಫ್ 2' ಬರೆಯುವ ದಾಖಲೆ ಬಗ್ಗೆ ಕೌತುಕ ಹೆಚ್ಚಾಗಿದೆ.

More from Filmibeat

English summary
Raveena Tandon and Sanjay Dutt requested Prashanth Neel for a scene together in KGF 2. Raveena, however, regrets not having scenes with Sanjay, in the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X