ಕೇವಲ ಒಂದು ದಿನ ಮಾತ್ರ ಕ್ರೇಜಿಸ್ಟಾರ್ ರವಿಚಂದ್ರನ್ 'ದೃಶ್ಯ' ರಿಲೀಸ್

ಕ್ರೇಜಿಸ್ಟಾರ್‌ ರವಿಚಂದ್ರನ್‌ ಸಿನಿಮಾ 'ದೃಶ್ಯ 2' ಬಿಡುಗಡೆಗೆ ಸಿದ್ಧತೆಗಳು ಜೋರಾಗಿ ಆರಂಭ ಆಗಿದೆ. ನಿರ್ದೇಶಕ ಪಿ ವಾಸು ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಕಾಂಬಿನೇಷನ್ ಮತ್ತೊಮ್ಮೆ ಕನ್ನಡದಲ್ಲಿ ಮೋಡಿ ಮಾಡಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಇದೇ ಜೋಡಿಯ 'ದೃಶ್ಯ' ಮೊದಲನೇ ಚಾಪ್ಟರ್ 7 ವರ್ಷಗಳ ಹಿಂದೆ ಬಿಡುಗಡೆಯಾಗಿ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ರಾಜೇಂದ್ರ ಪೊನ್ನಪ್ಪನಾಗಿ ತೆರೆಮೇಲೆ ಮಿಂಚಿದ್ದರು. ಈಗ 'ದೃಶ್ಯ 2' ಬಿಡುಗಡೆಗೆ ವೇದಿಕೆ ಸಜ್ಜಾಗುತ್ತಿದೆ.

ಮೋಹನ್ ಲಾಲ್ ಸಿನಿಮಾ 'ದೃಶ್ಯಂ' ಮಲಯಾಳಂನಲ್ಲಿ ಸೂಪರ್‌ ಹಿಟ್ ಆಗುತ್ತಿದ್ದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳು ಸೇರಿದಂತೆ ಬಾಲಿವುಡ್‌ನಲ್ಲೂ ನಿರ್ಮಾಣಗೊಂಡಿತ್ತು. ಈಗ 'ದೃಶ್ಯಂ 2' ಕೂಡ ಕನ್ನಡದಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಡಿಸೆಂಬರ 10ರಂದು ಬಿಡುಗಡೆಗೆ ಸಜ್ಜಾಗಿರುವ ಕನ್ನಡ 'ದೃಶ್ಯ 2' ಜೋರಾಗೇ ಸದ್ದು ಮಾಡುತ್ತಿದ್ದೆ. ಆದರೆ, ಅದಕ್ಕಿಂತ ಮುನ್ನ ಇಂದು (05-12-2021) 'ದೃಶ್ಯ' ಸಿನಿಮಾವನ್ನು ಒಂದು ದಿನದ ಮಟ್ಟಿಗೆ ಬಿಡುಗಡೆ ಮಾಡಲು ಮುಂದಾಗಿದೆ.

ಒಂದು ದಿನದ ಮಟ್ಟಿಗೆ 'ದೃಶ್ಯ' ರಿಲೀಸ್

ಒಂದು ದಿನದ ಮಟ್ಟಿಗೆ 'ದೃಶ್ಯ' ರಿಲೀಸ್

ಕನ್ನಡದಲ್ಲಿ 'ದೃಶ್ಯ' 2014 ರಲ್ಲಿ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್, ನವ್ಯನಾಯರ್ ಹಾಗೂ ನಿರ್ದೇಶಕ ಪಿ.ವಾಸು ಕಾಂಬಿನೇಷನ್ ಕ್ಲಿಕ್ ಆಗಿತ್ತು. ಈಗ ಇದೇ ಚಿತ್ರದ ಮತ್ತೊಂದು ಚಾಪ್ಟರ್ 'ದೃಶ್ಯ 2' ರಿಲೀಸ್‌ಗೆ ರೆಡಿಯಾಗುತ್ತಿದೆ. ಅಷ್ಟರಲೇ ಮೊದಲ ಚಾಪ್ಟರ್ 'ದೃಶ್ಯ'ವನ್ನು ನಿರ್ಮಾಣ ಸಂಸ್ಥೆ ಮತ್ತೆ ಬಿಡುಗಡೆ ಮಾಡಿದೆ. ಕೇವಲ ಒಂದು ದಿನದ ಮಟ್ಟಿಗೆ 'ದೃಶ್ಯ' ರಿಲೀಸ್ ಮಾಡಿದ್ದು, ಸೀಕ್ವೆಲ್ ನೋಡುವ ಮುನ್ನ ಪ್ರೀಕ್ವೆಲ್ ನೋಡಲು ಅವಕಾಶ ಮಾಡಿಕೊಟ್ಟಿದೆ.

ಕ್ರೇಜಿಸ್ಟಾರ್ 'ದೃಶ್ಯ' ಎಲ್ಲೆಲ್ಲಿ ರಿಲೀಸ್?

ಕ್ರೇಜಿಸ್ಟಾರ್ 'ದೃಶ್ಯ' ಎಲ್ಲೆಲ್ಲಿ ರಿಲೀಸ್?

ಇಂದು (ಡಿಸೆಂಬರ್ 05) ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ 'ದೃಶ್ಯ' ಸಿನಿಮಾ ಬಿಡುಗಡೆಯಾಗಿದೆ. ಈಗಾಗಲೇ ಸಿನಿಮಾದ ಟಿಕೆಟ್‌ಗಳು ಆನ್‌ಲೈನ್ ವೇದಿಕೆಯಲ್ಲಿ ಲಭ್ಯವಿದೆ. ಈ ಸಿನಿಮಾ ಯಾವ ಯಾವ ಭಾಷೆಗಳಲ್ಲಿ ಬಿಡುಗಡೆಯಾಗಿದೆ ಅನ್ನುವುದರ ಪಟ್ಟಿ ಇಲ್ಲಿದೆ. ನಾಲ್ಕು ಸ್ಕೀನ್‌ಗಳಲ್ಲಿ 'ದೃಶ್ಯ'ವನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಪಿವಿಆರ್ ಎಂಎಸ್‌ಆರ್ ಎಲೆಮೆಂಟ್ಸ್ ರೆಗಾಲಿಯಾದಲ್ಲಿ ಬೆಳಗ್ಗೆ 11.55ಕ್ಕೆ, ಪಿವಿಆರ್ ಒರಾಯನ್ ಮಾಲ್ ಬೆಂಗಳೂರಿನಲ್ಲಿ 3.30ಕ್ಕೆ, ಸಿನಿಪೊಲೀಸ್ ಇಟಾ ಮಾಲ್‌ನಲ್ಲಿ ಸಂಜೆ 6.30ಕ್ಕೆ. ಐನಾಕ್ಸ್ ಮಲ್ಲೇಶ್ವರಂ ಬೆಂಗಳೂರಿನಲ್ಲಿ ರಾತ್ರಿ 9.45ಕ್ಕೆ 'ದೃಶ್ಯ' ಸಿನಿಮಾವನ್ನು ಪ್ರದರ್ಶನ ಮಾಡಲಾಗುತ್ತಿದೆ.

ಸೀಕ್ವೆಲ್‌ಗೂ ಮೊದಲು ಪ್ರೀಕ್ಷೆಲ್ ಪ್ರದರ್ಶನ

ಸೀಕ್ವೆಲ್‌ಗೂ ಮೊದಲು ಪ್ರೀಕ್ಷೆಲ್ ಪ್ರದರ್ಶನ

'ದೃಶ್ಯ 2' ಏಳು ವರ್ಷಗಳ ಬಳಿಕ ಬಿಡುಗಡೆಯಾಗುತ್ತಿದೆ. ಹೀಗಾಗಿ ಜನರಿಗೆ 'ದೃಶ್ಯ'ದಂತಹ ಅದ್ಭುತ ಸಿನಿಮಾವನ್ನು ಮತ್ತೆ ನೆನಪಿಸಬೇಕಿದೆ. ಹೀಗಾಗಿ ನಿರ್ಮಾಣ ಸಂಸ್ಥೆ 'ದೃಶ್ಯ 2' ಬಿಡುಗಡೆಗೂ ಮುನ್ನ 'ದೃಶ್ಯ' ಸಿನಿಮಾವನ್ನು ರಿಲೀಸ್ ಮಾಡಿದೆ. ಈ ಮೂಲಕ ಮತ್ತೆ ರಿಕಾಲ್ ಮಾಡಿ 'ದೃಶ್ಯ 2' ಸಿನಿಮಾವನ್ನು ಚಿತ್ರಮಂದಿರದೆಡೆಗೆ ಸೆಳೆಯುವ ಪ್ಲಾನ್ ಮಾಡುತ್ತಿದೆ. ಈ ವಿಶೇಷ ಪ್ರದರ್ಶನಕ್ಕೆ ಜನರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೋ ಅನ್ನುವುದು ಸದ್ಯದ ಮಟ್ಟಿಗೆ ಕುತೂಹಲ.

'ದೃಶ್ಯ 2'ನಲ್ಲಿ ಅನಂತ್‌ನಾಗ್ ವಿಶೇಷ ಪಾತ್ರ

'ದೃಶ್ಯ 2'ನಲ್ಲಿ ಅನಂತ್‌ನಾಗ್ ವಿಶೇಷ ಪಾತ್ರ

'ದೃಶ್ಯ' ಮೊದಲ ಚಾಪ್ಟರ್ ಹಾಗೂ ಎರಡನೇ ಚಾಪ್ಟರ್‌ ಅನ್ನು E4 Entertainment ಸಂಸ್ಥೆ ನಿರ್ಮಾಣ ಮಾಡಿದೆ. ಎರಡು ಭಾಗಗಳನ್ನೂ ಪಿ.ವಾಸು ಅವರೇ ನಿರ್ದೇಶಿಸಿದ್ದಾರೆ. ಮೊದಲ ಭಾಗದಲ್ಲಿ ಇರುವ ಪಾತ್ರಗಳನ್ನೇ ಎರಡನೇ ಭಾಗದಲ್ಲೂ ಮುಂದುವರೆಸಲಾಗಿದೆ. ರವಿಚಂದ್ರನ್ ವಿ ಹಾಗೂ ನವ್ಯ ನಾಯರ್ ಇಲ್ಲೂ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ 'ದೃಶ್ಯ 2' ಸಿನಿಮಾದಲ್ಲಿ ಹಿರಿಯ ನಟ ಅನಂತನಾಗ್ ಕೂಡ ನಟಿಸಿದ್ದಾರೆ. ಹೀಗಾಗಿ ಸಿನಿಮಾದ ಬಗ್ಗೆ ಕುತೂಹಲ ಮತ್ತಷ್ಟು ದುಪ್ಪಟ್ಟಾಗಿದೆ.

More from Filmibeat

English summary
Crazy Star Ravichandran movie Drishya (2014) released today. Shows are arranged in 4 screens. Drishya 2 will be releasing on December 10th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X