'ಈ ಸಿನಿಮಾದಲ್ಲಿ ಏನೂ ಮಾಡಿಲ್ವಾ ನೀನು' ಅಂತ ಕ್ರೇಜಿಸ್ಟಾರ್ ಪತ್ನಿ ರೇಗಿಸಿದ್ದೇಕೆ?

ತೆರೆಮೇಲೆ ಪ್ರೇಮಲೋಕ ತೋರಿಸಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಅರೇಂಜ್ ಮ್ಯಾರೇಜ್ ಆದರು. ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಕ್ರೇಜಿಸ್ಟಾರ್ ಬಗ್ಗೆ ಪತ್ನಿ ಅಭಿಪ್ರಾಯವೇನಿರಬಹುದು ಅನ್ನುವ ಕುತೂಹಲವಿತ್ತು. ಈಗಾಗಲೇ ಕ್ರೇಜಿಸ್ಟಾರ್ ರವಿಚಂದ್ರನ್ ತನ್ನ ಸಿನಿಮಾ ನೋಡಿ ಪತ್ನಿ ಏನಂತಾರೆ ಅನ್ನುವುದನ್ನು ಸಾಕಷ್ಟು ಬಾರಿ ಹೇಳಿದ್ದಾರೆ. ಈಗ ಮತ್ತೊಮ್ಮೆ ದೃಶ್ಯ 2 ಟ್ರೈಲರ್ ನೋಡಿ ಏನಂದಿದ್ದಾರೆ ಅನ್ನುವುದನ್ನು ರಿವೀಲ್ ಮಾಡಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ದೃಶ್ಯ 2' ಬಿಡುಗಡೆಗೆ ಸಜ್ಜಾಗಿದೆ. ಇದು ಮೋಹನ್ ಲಾಲ್ ನಟಿಸಿದ 'ದೃಶ್ಯಂ 2' ಸಿನಿಮಾದ ರಿಮೇಕ್. ಈ ಚಿತ್ರದ ಟ್ರೈಲರ್‌ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದಾರೆ. ಈ ಸಮಾರಂಭದಲ್ಲಿ ಕ್ರೇಜಿಸ್ಟಾರ್ 'ದೃಶ್ಯ 2' ಟ್ರೈಲರ್ ನೋಡಿ ಅವರ ಕಾಲೆಳೆದ ಸ್ವಾರಸ್ಯಕರ ಸಂಗತಿಯನ್ನು ವೇದಿಕೆ ಮೇಲೆ ಬಿಚ್ಚಿಟ್ಟಿದ್ದಾರೆ. ರಿಯಲ್ ಹಾಗೂ ರೀಲ್ ಸಂಸಾರದ ಬಗ್ಗೆ ಮನಮೆಚ್ಚುವಂತಹ ಮಾತಾಡಿದ್ದಾರೆ.

'ನನ್ನ ಹೆಂಡ್ತಿ ತುಂಬಾ ತುಂಟಿ' ಎಂದ ಕ್ರೇಜಿಸ್ಟಾರ್

'ನನ್ನ ಹೆಂಡ್ತಿ ತುಂಬಾ ತುಂಟಿ' ಎಂದ ಕ್ರೇಜಿಸ್ಟಾರ್

ಕ್ರೇಜಿಸ್ಟಾರ್ ಸಿನಿಮಾಗಳ ಬೆಸ್ಟ್ ಕ್ರಿಟಿಕ್ ಅಂದರೆ ಅವರ ಪತ್ನಿ. ಈ ಮಾತನ್ನು ಕ್ರೇಜಿಸ್ಟಾರ್ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. 'ದೃಶ್ಯ 2' ಟ್ರೈಲರ್ ಲಾಂಚ್ ವೇಳೆನೂ ಪತ್ನಿಯನ್ನು ಹೊಗಳಿ ಮಾತಾಡಿದ್ದಾರೆ. " ಸಿನಿಮಾ ಆನ್‌ ಸ್ಕ್ರೀನ್ ಕೆಮಿಸ್ಟ್ರಿ ಅಂತ ಬಂದ್ರೆ, ನನ್ನ ಹೆಂಡ್ತಿ ಇಲ್ಲೇ ಕೂತಿದ್ದಾಳೆ. ತುಂಬಾ ತುಂಟಿ ಅವಳು. ನನ್ನನು ರೇಗಿಸುವುದಕ್ಕೆ ಅವಳು ಬಿಟ್ಟರೆ ಯಾರೂ ಇಲ್ಲ. ಅಷ್ಟು ಚೆನ್ನಾಗಿ ನನ್ನನ್ನು ರೇಗಿಸುತ್ತಲೇ ಇರುತ್ತಾಳೆ." ಅಂತ ದೃಶ 2 ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದ ವೇದಿಕೆ ಮೇಲೆ ಕ್ರೇಜಿಸ್ಟಾರ್ ಪತ್ನಿ ಕಾಲೆಳೆದರು.

'ಈ ಸಿನಿಮಾದಲ್ಲಿ ಏನೂ ಮಾಡಿಲ್ವಾ ನೀನು ಅಂತಾಳೆ'

'ಈ ಸಿನಿಮಾದಲ್ಲಿ ಏನೂ ಮಾಡಿಲ್ವಾ ನೀನು ಅಂತಾಳೆ'

"ಈ ಸಿನಿಮಾದಲ್ಲಿ ಏನೂ ಮಾಡಿಲ್ವಾ ನೀನು ಅಂತಾಳೆ. ಇದೇ ಕೆಮಿಸ್ಟ್ರಿ ನನಗೂ ನವ್ಯ ನಾಯರ್‌ಗೂ ಇದೆ. ನನ್ನ ಹೆಂಡತಿನೇ ಸ್ಪೂರ್ತಿ ಈ ಪಾತ್ರಕ್ಕೆ. ಅಂದರೆ, ಮನೆಯಲ್ಲಿ ತಂದೆ-ತಾಯಿ ಯಾವಾಗಲೂ ತುಂಟತನದಿಂದ ಇರಬೇಕು. ಆ ತುಂಟತನದ ಮಧ್ಯೆ ಮಕ್ಕಳು ಇದ್ದಾಗ, ಅವರು ನಾಚಿಕೊಳ್ಳುತ್ತಿರುತ್ತಾರೆ. ಅಲ್ಲೊಂದು ಖುಷಿ ಪಡುತ್ತಿರುತ್ತಾರೆ. ತಂದೆ-ತಾಯಿ ಖುಷಿಯಾಗಿದ್ದರೆ, ಮಕ್ಕಳೂ ಕೂಡ ಖುಷಿಯಾಗಿ ಇರುತ್ತಾರೆ. ಅದು ಫಸ್ಟ್ ತುಂಬಾ ಇಂಪಾರ್ಟೆಂಟ್." ರಿಯಲ್ ಸಂಸಾರ ಹಾಗೂ ರೀಲ್ ಸಂಸಾರದ ಬಗ್ಗೆ ಕ್ರೇಜಿಸ್ಟಾರ್ ಮನಬಿಚ್ಚಿ ಮಾತಾಡಿದ್ದಾರೆ.

ರವಿಚಂದ್ರನ್ ಸರ್ ಜೊತೆ ನಟಿಸಿದ್ದು ಸಂತಸ ತಂದಿದೆ

ರವಿಚಂದ್ರನ್ ಸರ್ ಜೊತೆ ನಟಿಸಿದ್ದು ಸಂತಸ ತಂದಿದೆ

'ದೃಶ್ಯ 2' ನಲ್ಲಿ ಕ್ರೇಜಿಸ್ಟಾರ್ ಪತ್ನಿಯಾಗಿ ನವ್ಯ ನಾಯರ್ ನಟಿಸಿದ್ದಾರೆ. ರವಿಚಂದ್ರನ್ 'ದೃಶ್ಯ 2' ಸಿನಿಮಾ ಸಂಸಾರದ ಬಗ್ಗೆ ಮಾತಾಡುತ್ತಿದ್ದಂತೆ ನಟಿ ನವ್ಯ ನಾಯರ್ ಕೂಡ ಕ್ರೇಜಿಸ್ಟಾರ್‌ ಬಗೆ ಮಾತಾಡಿದ್ದಾರೆ. "ರವಿಚಂದ್ರನ್ ಸರ್ ಅಂತಹ ಉತ್ತಮ ನಟರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ." ಎಂದು ನವ್ಯ ಹರ್ಷ ವ್ಯಕ್ತಪಡಿಸಿದ್ದಾರೆ. "ಇದರೊಂದಿಗೆ ಮಲೆಯಾಳಂನಲ್ಲಿ ಬಹಳ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೀನಿ. ಆದರೆ ನನ್ನ ಒನ್ ಆಫ್ ದಿ ಬೆಸ್ಟ್ ಡೈರೆಕ್ಟರ್ ಪಿ.ವಾಸು." ಅಂತ ನಿರ್ದೇಶಕರ ಗುಣಗಾನ ಮಾಡಿದ್ದಾರೆ.

'ಕ್ರೇಜಿಸ್ಟಾರ್ ಒಬ್ಬ ಕಂಪ್ಲೀಟ್ ಸ್ಟಾರ್'

'ಕ್ರೇಜಿಸ್ಟಾರ್ ಒಬ್ಬ ಕಂಪ್ಲೀಟ್ ಸ್ಟಾರ್'

'ದೃಶ್ಯ 2' ಸಿನಿಮಾದ ನಿರ್ದೇಶಕ ಪಿ ವಾಸು ಕೂಡ ಸಿನಿಮಾ ಮೂಡಿ ಬಂದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅದ್ರಲ್ಲೂ ಕ್ರೇಜಿಸ್ಟಾರ್ ಹಾಗೂ ನವ್ಯ ನಾಯರ್ ಕೆಮಿಸ್ಟ್ರಿ ಈ ಸಿನಿಮಾದಲ್ಲಿ ನೈಜವಾಗಿ ಮೂಡಿ ಬಂದಿದೆ. ''ನನಗೆ ಈ ಸಿನಿಮಾದಲ್ಲಿ ಇಷ್ಟವಾಗಿದ್ದು‌, ರವಿಚಂದ್ರನ್ ಹಾಗೂ ನವ್ಯ ನಾಯರ್ ಅವರ ರಿಲೇಶನ್ ಶಿಪ್. ಅವರಿಬ್ಬರ ನೈಜ ಅಭಿನಯ ತುಂಬಾ ಚೆನ್ನಾಗಿದೆ. ಯಾವಾಗಲೂ ಒಬ್ಬ ನಿರ್ದೇಶಕ, ಯಾವ ನಾಯಕನ ಸಿನಿಮಾ‌ ಮಾಡುತ್ತಾನೋ, ಮೊದಲು ಅವನ ಫ್ಯಾನ್ ಆಗಬೇಕು. ಆಗ ಸಿನಿಮಾ ಉತ್ತಮವಾಗಿ ಮೂಡಿಬರುತ್ತದೆ. ರವಿಚಂದ್ರನ್ ಅವರಂತೂ ಕಂಪ್ಲೀಟ್ ಸ್ಟಾರ್" ಎಂದು ನಿರ್ದೇಶಕ ಪಿ.ವಾಸು ಬಣ್ಣಿಸಿದ್ದಾರೆ.

More from Filmibeat

English summary
Ravichandran wife always makes fun of him about romantic scenes in films. Crazy Star Ravichandran says infront of his wife in Drishya 2 trailer launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X