"ಮಂದಣ್ಣ ಹೋದ್ರು.. ಮಂದಾನ ಬಂದ್ರು" ರಶ್ಮಿಕಾ ಕಾಲೆಳೆದು ಸ್ಮೃತಿ ಸ್ವಾಗತಿಸಿದ ಕವಿರಾಜ್!

ಮೊಟ್ಟ ಮೊದಲ ಮಹಿಳಾ ಐಪಿಎಲ್‌ಗೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆಯಲ್ಲಿ ಐದು ತಂಡಕ್ಕೆ ಪೈಪೋಟಿಗೆ ಬಿದ್ದು ಆಟಗಾರರನ್ನು ಖರೀದಿ ಮಾಡುತ್ತಿವೆ. ಸ್ಟಾರ್ ಮಹಿಳಾ ಆಟಗಾರರ ಮೇಲೆ ಮೊದಲೇ ಕಣ್ಣಿಟ್ಟಿದ್ದ ಬಲಿಷ್ಟ ತಂಡಗಳು ಹರಾಜಿನಲ್ಲಿ ಜಿದ್ದಾಜಿದ್ದಿಗೆ ಬಿದ್ದಿದ್ದವು.

ಅದರಲ್ಲೂ ಭಾರತದ ಆಟಗಾರ್ತಿ ಸ್ಮೃತಿ ಮಂದಣ್ಣ ಖರೀದಿಗೆ RCB ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಪೈಪೋಟಿ ನಡೆದಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಸ್ಮೃತಿ ಮಂದಣ್ಣರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ.

ಸ್ಮೃತಿ ಮಂದಣ್ಣ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ. ಅದರಲ್ಲೂ ಸ್ಯಾಂಡಲ್‌ವುಡ್‌ನ ಕವಿಗಳು ಅಂದ್ರೆ, ಸಿನಿ ಸಾಹಿತಿ ಕವಿರಾಜ್ ಫೇಸ್‌ಬುಕ್‌ನಲ್ಲಿ ರಶ್ಮಿಕಾ ಮಂದಣ್ಣ ಕಾಲೆಳೆದು ಸೃತಿ ಮಂದಾನರನ್ನು ಸ್ವಾಗತಿಸಿದ್ದಾರೆ. ಕವಿರಾಜ್ ಬರೆದ ಸಾಲುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

RCB ಫ್ಯಾನ್ ಕವಿರಾಜ್

RCB ಫ್ಯಾನ್ ಕವಿರಾಜ್

ಸ್ಯಾಂಡಲ್‌ವುಡ್‌ನಲ್ಲಿರೋ ಡೈ ಹಾರ್ಡ್ RCB ಫ್ಯಾನ್‌ಗಳಲ್ಲಿ ಸಿನಿಸಾಹಿತಿ ಕವಿರಾಜ್‌ ಕೂಡ ಒಬ್ಬರು. RCB ಟೀಮ್ ಅಂದರೆ, ಎಲ್ಲಿಲ್ಲದ ಅಭಿಮಾನ. ಈಗ ಮಹಿಳಾ ತಂಡ ಕೂಡ ಅಖಾಡಕ್ಕೆ ಇಳಿಯಲಿದೆ. ಈ ಬೆನ್ನಲ್ಲೇ ದಿಲ್ ಖುಷ್ ಆಗಿರೋ ಕವಿರಾಜ್, ಸ್ಮತಿ ಮಂದಾನರನ್ನು ತಮ್ಮ ಅದ್ಭುತ ಸಾಲುಗಳಿಂದ ಸ್ವಾಗತ ಮಾಡಿದ್ದಾರೆ. ಈ ವೇಳೆ ಮಂದಣ್ಣ ಕಾಲೆಳೆದು ಮಂದಾನ ಸ್ವಾಗತ ಮಾಡಿದ್ದಕ್ಕೆ ನೆಟ್ಟಿಗರು ಕೂಡ ಕಮೆಂಟ್ ಮಾಡುತ್ತಿದ್ದಾರೆ.

ಮಂದಣ್ಣ ಕಾಲೆಳೆದ ಕವಿರಾಜ್

ಮಂದಣ್ಣ ಕಾಲೆಳೆದ ಕವಿರಾಜ್

ಸ್ಮೃತಿ ಮಂದಾನರನ್ನು ಆರ್‌ಸಿಬಿಗೆ ಸ್ವಾಗತ ಮಾಡುವ ಸಲುವಾಗಿ ಕವಿರಾಜ್‌ ತಮಾಷೆಯಾಗಿ ನಾಲ್ಕು ಸಾಲನ್ನು ಫೇಸ್‌ಬುಕ್‌ನಲ್ಲಿ ಗೀಚಿದ್ದಾರೆ. "ಮಂದಣ್ಣ ಹೋದ್ರು.. ಮಂದಾನ ಬಂದ್ರು.. ಇಷ್ಟೇ ಲೈಫ್...ಕಳ್ಕೊಂಡಾಗ ಕುಗ್ಗಬಾರದು..😍 Life has better offers for everyone 🤗
(ವಿ.ಸೂ - ಕೇವಲ ತಮಾಷೆಗಾಗಿ. ಏನೇ ಆದರೂ ಮಂದಣ್ಣ ಅವರ ಸಾಧನೆಯೂ ದೊಡ್ಡದು. ನೆಗೆಟಿವ್ ಕಾಮೆಂಟ್‌ಗಳಿಗೆ ಅವಕಾಶವಿಲ್ಲ🙏)" ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ನೆಟ್ಟಿಗರು ಏನಂದ್ರು?

ನೆಟ್ಟಿಗರು ಏನಂದ್ರು?

ಕವಿರಾಜ್‌ ಬರೆದ ಸಾಲುಗಳಿಗೆ ನೆಟ್ಟಿಗರು ಸಖತ್ತಾಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಬ್ಬರು " ಮಂದಣ್ಣ ಹೋಗುವಾಗ ಹೇಳಿದ್ಲಂತೆ ಬ್ರೋ.. ನನಗಿಂತ ಚೆನ್ನಾಗಿರೋರು ಬರ್ತಾರೆ ಬಿಡು ಅಂತ.." ಕಮೆಂಟ್ ಮಾಡಿದ್ರೆ, ಮತ್ತೊಬ್ಬರು "ಇನ್ಮುಂದೆ ನೀವು ನಮ್ಮೋರು.. ನಾವು ನಿಮ್ಮೋರೂ" ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಮಂದಹಾಸದ ಜೊತೆಗೆ ಭರಪೂರ ಮನೋರಂಜನೆ" ಎಂದಿದ್ದಾರೆ.

ಸ್ಮೃತಿ ಮಂದಾನ ಅತೀ ಹೆಚ್ಚು ಮೊತ್ತಕ್ಕೆ ಸೇಲ್

ಸ್ಮೃತಿ ಮಂದಾನ ಅತೀ ಹೆಚ್ಚು ಮೊತ್ತಕ್ಕೆ ಸೇಲ್

ಮಹಿಳಾ ತಂಡದ ಐಪಿಎಲ್ ಹರಾಜು ಪ್ರಕ್ರಿಯೆ ರೋಚಕವಾಗಿತ್ತು. ಆರ್‌ಸಿಬಿ ತಂಡ ಸೇರಿದ ಸ್ಮೃತಿ ಮಂದಾನ ಅತೀ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದಾರೆ. ಆರ್‌ಸಿಬಿ ಸುಮಾರು 3.4 ಕೋಟಿ ರೂ. ಕೊಟ್ಟು ಖರೀದಿ ಮಾಡಿದೆ. ಈ ಮೂಲಕ ಮೊದಲ ಸೀಸನ್‌ನಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಐಪಿಎಲ್ ತಂಡ ಸೇರಿದ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

More from Filmibeat

English summary
RCB Bought Smriti Mandhana Sandalwood Lyricist Kaviraj Reaction By Taking Mandanna, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X