ಕಾವ್ಯಾ ಮಾರನ್‌ಗೆ ದಿಗಿಲು.. ಆರ್‌ಸಿಬಿ ಲಕ್ಕು ಬದಲಿಸಲು ಬಂದ ಹೊಸ ಮಾಲೀಕನ ಮಗಳು; ಯಾರೀಕೆ ಅನನ್ಯಾ ಬಿರ್ಲಾ?

2026ರ ಐಪಿಎಲ್ ಪಂದ್ಯ ಶುರುವಾಗುವುದಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಅಷ್ಟರಲ್ಲೇ ಸಂಚಲನ ಸೃಷ್ಟಿಸುವಂತಹ ಘಟನೆಗಳು ನಡೆದಿವೆ. ಎರಡು ಫ್ರಾಂಚೈಸಿಗಳ ಮಾಲೀಕರು ಬದಲಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡವನ್ನು ಅಮೆರಿಕದ ಕಲ್ ಸೋಮಾನಿ ಒಕ್ಕೂಟಕ್ಕೆ ಸುಮಾರು 15,290 ಕೋಟಿ ರೂಪಾಯಿಗೆ ಮಾರಾಟ ಆಗಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಕೂಡ ಬೃಹತ್ ಮೊತ್ತಕ್ಕೆ ಸೇಲ್ ಆಗಿದೆ.

ಐಪಿಎಲ್ 19ನೇ ಆವೃತ್ತಿ ಆರಂಭ ಆಗುವುದಕ್ಕೆ ಮಾರ್ಚ್ 28 ರಿಂದ ಆರಂಭ ಆಗಲಿದೆ. ಅದಕ್ಕೂ ಮುನ್ನ ಜನಪ್ರಿಯ ತಂಡ ರಾಯಲ್ ಚಾಲೆಂಜರ್ಸ್ ತಂಡ (RCB) ಕೂಡ ಸೇಲ್ ಆಗಿದೆ. ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು 16,700 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಐಪಿಎಲ್ ಇತಿಹಾಸದಲ್ಲಿಯೇ ಬೃಹತ್ ಮೊತ್ತಕ್ಕೆ ಮಾರಾಟವಾದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

RCB new owner Kumar Mangalam Birla daughter Ananya Birla new sensation in Social Media

ಒಂದ್ಕಡೆ ಆರ್‌ಸಿಬಿ ತಂಡ ಖರೀದಿ ಬಗ್ಗೆ ಸುದ್ದಿಯಾಗುತ್ತಿದ್ದರೆ, ಇನ್ನೊಂದು ಕಡೆ ಹೊಸ ಮಾಲೀಕನ ಮಗಳು ಅನನ್ಯಾ ಬಿರ್ಲಾ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಸನ್‌ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್‌ಗೆ ರಾಯಲ್ ಚಾಲೆಂಜರ್ಸ್ ತಂಡದ ಮಾಲೀಕನ ಮಗಳಿಗೆ ಪೈಪೋಟಿ ಕೊಡುತ್ತಿದ್ದಾರೆಂದು ಟ್ರೋಲ್ ಮಾಡುವುದಕ್ಕೆ ಶುರು ಮಾಡುತ್ತಿದ್ದಾರೆ. ಅಸಲಿಗೆ ಅನನ್ಯಾ ಬಿರ್ಲಾ ಹಿನ್ನೆಲೆಯೇನು? ಅವರ ಸಾಧನೆ ಏನು? ಅನ್ನೋದನ್ನು ನೋಡುವುದರೇ,

ಭಾರತದ ಶ್ರೀಮಂತದ ಉದ್ಯಮಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಆದಿತ್ಯ ಬಿರ್ಲಾ ಗ್ರೂಪ್‌ನ ಚೇರ್‌ಮನ್ ಕುಮಾರ ಮಂಗಳಂ ಬಿರ್ಲಾ. ಇವರ ನೇತೃತ್ವದಲ್ಲಿ ಬಿರ್ಲಾ ಜೊತೆಗೆ ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬ್ಲಾಕ್‌ಸ್ಟೋನ್, ಡೇವಿಡ್ ಬ್ಲಿಟ್ಜರ್ ಸಂಸ್ಥೆಗಳು ಆರ್‌ಸಿಬಿ ತಂಡವನ್ನು ಒಟ್ಟಾಗಿ ಖರೀದಿ ಮಾಡಿವೆ. ಹಾಗೇ ಈ ತಂಡದ ಸಿಇಓ ಪಟ್ಟವನ್ನು ಕುಮಾರ ಮಂಗಳಂ ಬಿರ್ಲಾ ಅವರ ಪುತ್ರ ಅರ್ಯಾಮಾನ್ ಬಿರ್ಲಾ ವಹಿಸಿಕೊಂಡಿದ್ದಾರೆ. ಹಾಗೇ ಸೋಶಿಯಲ್‌ ಮೀಡಿಯಾ ಸೆನ್ಸೇಷನ್ ಆಗಿರುವ ಅನನ್ಯಾ ಬಿರ್ಲಾ ಆರ್‌ಸಿಬಿಯ ಅಧ್ಯಕ್ಷರಾಗಿದ್ದಾರೆ. ಇವರು ಆರ್ಯಾಮಾನ್ ಬಿರ್ಲಾ ಅವರ ಸಹೋದರಿ ಕೂಡ ಹೌದು.

ಇಷ್ಟು ದಿನ ಐಪಿಎಲ್ ಶುರುವಾಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿರುವ ಕಾವ್ಯಾ ಮಾರನ್ ಪಂದ್ಯದ ವೇಳೆ ಗಮನ ಸೆಳೆಯುತ್ತಿದ್ದರು. ಕ್ರಿಕೆಟ್ ಅಭಿಮಾನಿಗಳು ಇವರ ಪ್ರತಿಯೊಂದು ಹಾವ-ಭಾವವನ್ನೂ ಗಮನಿಸುತ್ತಾರೆ. ಅದಕ್ಕೆ ಕಾಮೆಂಟ್ ಮಾಡುತ್ತಾರೆ. ಕಾವ್ಯಾ ಮಾರನ್‌ಗೆ ಕ್ರಿಕೆಟ್ ಆಟಗಾರರಷ್ಟೇ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಆದ್ರೀಗ ಕಾವ್ಯಾ ಮಾರನ್ ಕ್ರೇಜ್‌ಗೆ ಪೈಪೋಟಿ ಕೊಡುವುದಕ್ಕೆ ಅನನ್ಯಾ ಬಿರ್ಲಾ ಎಂಟ್ರಿ ಕೊಟ್ಟಿದ್ದಾಗಿದೆ.

RCB new owner Kumar Mangalam Birla daughter Ananya Birla new sensation in Social Media

ಅದರಲ್ಲೂ ಈ ಬಾರಿ ಐಪಿಎಲ್‌ನ ಮೊದಲ ಪಂದ್ಯ ಆರ್‌ಸಿಬಿ ಹಾಗೂ ಸನ್‌ ರೈಸರ್ಸ್ ಹೈದರಾಬಾದ್ ಮಧ್ಯೆ ನಡೆಯಲಿದೆ. ಅಂದರೆ, ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ Vs ಸನ್‌ ರೈಸರ್ಸ್ ಹೈದರಾಬಾದ್ ಪಂದ್ಯ ನಡೆಯುತ್ತಿದ್ದರೆ, ಇನ್ನೊಂದು ಕಡೆ ಅಭಿಮಾನಿಗಳ ಕಣ್ಣು ಕಾವ್ಯಾ ಮಾರನ್ ಹಾಗೂ ಅನನ್ಯಾ ಬಿರ್ಲಾ ಮೇಲಿರುತ್ತೆ. ಇಬ್ಬರಲ್ಲಿ ಯಾರು ಹೆಚ್ಚು ಗಮನ ಸೆಳೆಯುತ್ತಾರೆ ಅನ್ನೋದು ಈಗ ಕುತೂಹಲ.

ಅಷ್ಟಕ್ಕೂ ಅನನ್ಯಾ ಬಿರ್ಲಾ ಕೇವಲ ಸೌಂದರ್ಯದಲ್ಲಿ ಅಷ್ಟೇ ಅಲ್ಲ. ಅವರ ಹಿನ್ನೆಲೆ ಕೂಡ ಅಷ್ಟೇ ಅದ್ಭುತವಾಗಿದೆ. 1994ರಲ್ಲಿ ಜನಿಸಿದ ಈಕೆ, ಅಮೆರಿಕನ್ ಸ್ಕೂಲ್ ಆಫ್ ಬಾಂಬೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ತಮ್ಮ 17ನೇ ವಯಸ್ಸಿನಲ್ಲಿಯೇ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ ಸ್ವತಂತ್ರ ಮೈಕ್ರೋಫಿನ್ ಕಂಪನಿ ಶುರು ಮಾಡಿದ್ದಾರೆ. ಇದು ಯಶಸ್ವಿಯಾಗಿತ್ತು. ಹಾಗೇ ಇ-ಕಾಮರ್ಸ್ ಕಂಪನಿ 'ಇಕೈ ಅಸೈ' ಎನ್ನುವ ಕಂಪನಿಯನ್ನು ಆರಂಭಿಸಿ, ತಮ್ಮ ಉದ್ಯಮವನ್ನು ಯಶಸ್ವಿಗೊಳಿಸಿದ್ದಾರೆ. ಇಷ್ಟೇ ಅಲ್ಲದೆ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅನನ್ಯಾ ಬಿರ್ಲಾ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 11 ಲಕ್ಷ ಅನುಯಾಯಿಗಳು ಇದ್ದಾರೆ.

More from Filmibeat

English summary
RCB new owner Kumar Mangalam Birla daughter Ananya Birla new sensation in Social Media.
Read more about: rcb ipl cricket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X