RCB-KGF 2: ಬಯೋ ಬಬಲ್‌ನಲ್ಲಿ 'KGF 2' ವೀಕ್ಷಿಸಿದ RCB ಆಟಗಾರರು

ಕೆಲವು ದಿನಗಳ ಹಿಂದಷ್ಟೇ ಎರಡು ಕರ್ನಾಟಕದ ಪ್ರಾಂಚೈಸಿಗಳು ಒಟ್ಟಿಗೆ ಸೇರಿಕೊಂಡಿದ್ದವು. ಅದುವೆ 'KGF 2' ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಾಗೂ RCB ಟೀಮ್. ಈ ಎರಡೂ ಸಂಸ್ಥೆಗಳೂ ಒಟ್ಟಿಗೆ ಸೇರಿ ಹಲವು ಕ್ಷೇತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಲಿದೆ ಎಂದು ಹೇಳಿತ್ತು. ಅದರ ಮೊದಲ ಭಾಗವಾಗಿ 'ಕೆಜಿಎಫ್ 2' ಸಿನಿಮಾವನ್ನು ಆರ್‌ಸಿಬಿ ಆಟಗಾರರು ಸಿನಿಮಾ ವೀಕ್ಷಣೆ ಮಾಡಲಿದ್ದಾರೆ ಎಂದು ವರದಿ ಮಾಡಿದ್ದೆವು.

ಏಪ್ರಿಲ್ 14ರಂದೇ RCB ಆಟಗಾರರು ಸಿನಿಮಾ ನೋಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅಂದು ಸಾಧ್ಯವಾಗಿಲ್ಲ. ಹೀಗಾಗಿ ಭಾನುವಾರ (ಏಪ್ರಿಲ್ 17) 'ಕೆಜಿಎಫ್ 2' ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ ಆರ್‌ಸಿಬಿ ಆಟಗಾರರು ಸಿನಿಮಾ ನೋಡಿದ್ದಾರೆ.

ಬಯೋ ಬಬಲ್‌ನಲ್ಲಿ RCB ಆಟಗಾರರಿಂದ ಸಿನಿಮಾ ವೀಕ್ಷಣೆ

ಐಪಿಎಲ್ ಪಂದ್ಯಾವಳಿ ನಡೆಯುತ್ತಿರುವುದರಿಂದ ಆಟಗಾರರೆಲ್ಲರೂ ಬಯೋ ಬಬಲ್‌ ನಿಯಮವನ್ನು ಪಾಲಿಸಿಬೇಕಿದೆ. ಹೀಗಾಗಿ 'ಕೆಜಿಎಫ್ 2' ಸಿನಿಮಾವನ್ನೂ ಕೂಡ ಬಯೋ ಬಬಲ್‌ ಒಳಗೆನೇ ಸಿನಿಮಾ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಅದರಂತೆಯೇ ಆರ್‌ಸಿನಿ ಆಟಗಾರರು ಏಪ್ರಿಲ್ 17ರಂದು ರಾತ್ರಿ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ.

RCB Players Watched Special Screening of Yash Starrer KGF Chapter 2 Within Bio Bubble

ಆರ್‌ಸಿಬಿ ಆಟಗಾರರು ತಂಗಿದ್ದ ಸ್ಥಳದಲ್ಲಿಯೇ 'ಕೆಜಿಎಫ್ 2' ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಿಕೊಡಲಾಗಿತ್ತು. ಅದಕ್ಕೆ ಬೇಕಾಗಿರುವ ಸಕಲ ಸಿದ್ಧತೆಗಳನ್ನು ಹೊಂಬಾಳೆ ಫಿಲ್ಮ್ಸ್ ಮಾಡಿತ್ತು. ಪೋಸ್ಟರ್‌, ಸ್ಯಾಂಡೀಸ್‌ ಇಟ್ಟು ಪ್ರಚಾರ ಮಾಡಿತ್ತು. ರಾತ್ರಿ ಆರ್‌ಸಿಬಿ ಆಟಗಾರರಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದ್ದರು. ಅದರಂತೆ, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ ಸೇರಿದಂತೆ ಹಲವು ಆಟಗಾರರು ಸಿನಿಮಾ ವೀಕ್ಷಿಸಿದ್ದಾರೆ.

ನಿಲ್ಲದ 'ಕೆಜಿಎಫ್ 2' ಓಟ

ಹೊಂಬಾಳೆ ಫಿಲ್ಮ್ಸ್ ಹಾಗೂ ಆರ್‌ಸಿಬಿ ತಂಡಗಳು ಹೊಸ ಸಾಹಸ ಕೈ ಹಾಕಿದ್ದವು. ಈ ಮೂಲಕ ಬೆಂಗಳೂರು ಮೂಲದ ಎರಡು ಸಂಸ್ಥೆಗಳು ಹೊಸ ಮುನ್ನುಡಿ ಬರೆಯಲು ಸಜ್ಜಾಗಿ ನಿಂತಿವೆ. ಏಪ್ರಿಲ್ 10ರಂದು ಹೊಂಬಾಳೆ ಫಿಲ್ಮ್ಸ್ ಹಾಗೂ ಆರ್‌ಸಿಬಿ ತಂಡ ಜನರಿಗೆ ಮನರಂಜನೆ ಜೊತೆ ಜೊತೆಗೆ ಕ್ರೀಡೆಯ ಮಜಾ ನೀಡಲು ತೀರ್ಮಾನಿಸಿತ್ತು. ಅದರಂತೆ ನಿನ್ನೆ (ಏಪ್ರಿಲ್ 17) 'ಕೆಜಿಎಫ್ 2' ಸಿನಿಮಾವನ್ನು ಆರ್ ಸಿಬಿ ಆಟಗಾರರು ವಿಚಾರಿಸಿದ್ದಾರೆ.

ಕೆಜಿಎಫ್ 2 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ವಿಶ್ವದಾದ್ಯಂತ ಹಲವು ದಾಖಲೆಗಳನ್ನು ಸೃಷ್ಟಿಸುತ್ತಿದೆ. ಕರ್ನಾಟಕ, ಆಂಧ್ರ-ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಹಿಂದಿ ಬೆಲ್ಟ್ ಇರುವ ಉತ್ತರ ಭಾರತದಲ್ಲಿ ಮಸ್ತ್ ಕಲೆಕ್ಷನ್ ಮಾಡುತ್ತಿದೆ. ಕೇವಲ 4 ದಿನಗಳಲ್ಲಿ 552 ಕೋಟಿ ಲೂಟಿ ಮಾಡಿದೆ.

More from Filmibeat

English summary
RCB Players Watched Special Screening of Yash Starrer KGF Chapter 2 Within Bio Bubble. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X