ಆರ್‌ಸಿಬಿ ಈಗ ಕನ್ನಡದಲ್ಲಿ; ಏನು ಶಾಕ್ ಆಯ್ತಾ? ಆಗಲೇಬೇಕು.. ಇನ್ಮುಂದೆ ಎಲ್ಲಾ ಕನ್ನಡದಲ್ಲೇ
ಐಪಿಎಲ್ ಟೂರ್ನಿಯಲ್ಲಿರುವ ಭಾಗವಹಿಸುವ ಎಲ್ಲಾ ತಂಡಗಳಿಗಿಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್‌ಗೆ ಕ್ರೇಜಿ ಫ್ಯಾನ್ಸ್ ಇದ್ದಾರೆ. ಆರ್‌ಸಿಬಿ ಮ್ಯಾಚ್ ಇದೆ ಅಂದರೆ, ಇಡೀ ಸ್ಟೇಡಿಯಂ ತುಂಬಿ ತುಳುಕುತ್ತೆ. ಸ್ಟೇಡಿಯಂ ರೂಫ್ ಕಿತ್ತು ಹೋಗುವಂತೆ ಕೂಗು ಹಾಕುತ್ತಾರೆ. ಆಟಗಾರರನ್ನು ಪ್ರೋತ್ಸಾಹಿಸುತ್ತಾರೆ. ಅದೇ ಆರ್‌ಸಿಬಿ ತಂಟೆಗೆ ಯಾರೇ ಬಂದರೂ ಅವರನ್ನು ಟ್ರೋಲ್ ಮಾಡಿ ಬಿಸಾಕುತ್ತಾರೆ.
ಆರ್‌ಸಿಬಿ ಅಪ್ಪಟ ಕರ್ನಾಟಕದ ತಂಡ ಆಗಿದ್ದರೂ, ಕನ್ನಡಿಗರಿಗೊಂದು ಬೇಸರವಿತ್ತು. ಆರ್‌ಸಿಬಿಯಲ್ಲಿ ಕನ್ನಡವೇ ಇಲ್ಲ ಅಂತ ಅಭಿಮಾನಿಗಳು ಬೇಸರ ಹೊರ ಹಾಕಿದ್ದರು. ಈಗ ಅದನ್ನು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಗಂಭೀರವಾಗಿ ಪರಿಗಣಿಸಿದೆ. ಇನ್ಮುಂದೆ ಕನ್ನಡದಲ್ಲಿ ಹೆಚ್ಚಾಗಿ ವ್ಯಾವಹಾರ ನಡೆಯುತ್ತೆ ಅನ್ನೋದಕ್ಕೆ ಒಂದು ಸುಳಿವು ಸಿಕ್ಕಿದೆ. ಅದಕ್ಕೆ ಕನ್ನಡ ರಾಜ್ಯೋತ್ಸವದಂದೇ ಮಿಸ್ಟರ್. ನ್ಯಾಗ್ಸ್ ಪ್ರತ್ಯಕ್ಷ ಆಗಿದ್ದಾರೆ.

ಹೌದು, ಕನ್ನಡ ರಾಜ್ಯೋತ್ಸವಕ್ಕೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಕನ್ನಡಿಗರಿಗೆ ಖುಷಿ ಸುದ್ದಿಯನ್ನು ಹಂಚಿಕೊಂಡಿದೆ. ಹೊಸ ಕನ್ನಡಿಗರಿಗಂತಲೇ ಇನ್‌ಸ್ಟಾಗ್ರಾಂ ಪೇಜ್ ಅನ್ನು ಆರಂಭಿಸಿದೆ. ಇನ್ಮುಂದೆ ಆರ್‌ಸಿಬಿ ತಂಡದ ಎಲ್ಲಾ ಅಪ್‌ಡೇಟ್‌ಗಳನ್ನು ಈ ಫೇಜ್‌ನಲ್ಲಿಯೇ ನೋಡಬಹುದಾಗಿದೆ. ಅಷ್ಟಕ್ಕೂ ಈ ಕನ್ನಡ ಪೇಜ್ ಶುರು ಮಾಡಿದ್ದೇಗೆ? ಇಲ್ಲಿ ಏನೆಲ್ಲ ಇರುತ್ತೆ ಅನ್ನೋದನ್ನು ಮಿಸ್ಟರ್ ನ್ಯಾಗ್ಸ್ ಹೇಳಿಕೊಂಡಿದ್ದಾರೆ ಕೇಳಿ.
"ಏನು ಹೇಳಬೇಕಿದ್ದರೂ ಕನ್ನಡದಲ್ಲಿ ಹೇಳಿ"
"ನೋಡಿ ಎಲಾನ್ ಮಸ್ಕ್ ರಾಕೆಟ್ ಲಾಂಚ್ ಮಾಡಿದ್ದಾರೆ. ನಮ್ಮ ಕೈಯಲ್ಲಿ ಅದೆಲ್ಲ ಆಗಲ್ಲ. ಒಂದು ಇನ್‌ಸ್ಟಾಗ್ರಾಂ ಪೇಜ್ ಆಗುತ್ತೆ. ಇಂಗ್ಲಿಷ್‌ನಲ್ಲಿ ಬೈಯ್ಯಬೇಕಾ ಅಲ್ಲಿ ಹೋಗಿ ಬೈರಿ. ಕನ್ನಡದಲ್ಲಿ ಬೈಯ್ಯಬೇಕಾ ಇಲ್ಲಿಗೆ ಬಂದು ಏನು ಹೇಳಬೇಕೋ ಹೇಳಿ ಪರ್ವಾಗಿಲ್ಲ. ಅಮ್ಮನ್ನ ಅಕ್ಕನ್ನ ಎಲ್ಲರನ್ನೂ ಈ ಪೇಜ್ ಫಾಲೋ ಮಾಡುವುದಕ್ಕೆ ಹೇಳಿ." ಎಂದು ಮಿಸ್ಟರ್ ನ್ಯಾಗ್ಸ್ ಹೇಳಿದ್ದಾರೆ.
ಈ ಪೇಜ್‌ನಲ್ಲಿ ಏನೇನಿರುತ್ತೆ?
"ಈ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಎಲ್ಲಾ ಇರುತ್ತೆ. ಗುಡ್ ಮಾರ್ನಿಂಗ್ ಮೆಸೇಜ್, ಸಾಂಗ್ಸ್, ಟ್ರೋಲ್ಸ್, ಡ್ಯಾನ್ಸ್, ರೊಮ್ಯಾನ್ಸ್, ಇಂಟರ್‌ವ್ಯೂವ್ಸ್, ಕಂಟೆಂಟ್ಸ್, ಆಡ್ಸ್, ಮೋಟಿವೇಷನಲ್ ಕೋಟ್ಸ್, ಚಿಂದಿ ಚಿತ್ರಾನ್ನ. ಬೋಂದಿ ಮೊಸರನ್ನ ಎಲ್ಲಾ ಇರುತ್ತೆ ಕನ್ನಡದಲ್ಲಿ. ಯಾರು ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಈ ಪೇಜ್ ಹಂಡ್ರೆಡ್ ಪರ್ಸೆಂಟ್ ಇರುತ್ತೆ." ಎಂದು ಮಿಸ್ಟರ್ ನ್ಯಾಗ್ಸ್ ಭರವಸೆ ಕೊಟ್ಟಿದ್ದಾರೆ.

"ಬೆಂಕಿ, ಹಾರ್ಟ್ ಚಿಹ್ನೆ ಹಾಕಿ"
"ಇದೊಂದು ಒಳ್ಳೆ ವಿಷಯ. ಈಸ್ ನಾಟ್ ಅ ಓನ್ಲಿ ಫ್ಯಾನ್ಸ್. ದಿಸ್ ಇನ್‌ಸ್ಟಾಗ್ರಾಂ ಪೇಜ್ ಈಸ್ ಒನ್ಲೀ ಫ್ಯಾನ್ಸ್. ನಾನೊಂದು ಪೇಜ್ ಕೊಟ್ಟಿದ್ದೀನಿ. ನೀವು ಅಲ್ಲಿ ಹೋಗ್ಬಿಟ್ಟು ಬೆಂಕಿ ಚಿಹ್ನೆ, ಹಾರ್ಟ್ ಚಿಹ್ನೆ, ಲಾಫಿಂಗ್ ಎಮೋಜಿ ಎಲ್ಲಾ ಯೂಸ್ ಮಾಡಿ. ಇದು ನನ್ನ ಐಡಿಯಾ. ಇದೊಂದು ಒಳ್ಳೆ ಐಡಿಯಾ, ಹರಾಜಿನಲ್ಲಿ ಏನಾಗುತ್ತೆ ನನಗೆ ಗೊತ್ತಿಲ್ಲ. ಯಾಕಂದ್ರೆ, ನಾನು ಆ ಗ್ರೂಪ್‌ನಲ್ಲಿ ಇಲ್ಲ." ಎಂದು ಮಿಸ್ಟರ್ ನ್ಯಾಗ್ಸ್ ಹೇಳಿದ್ದಾರೆ.
ನೆಟ್ಟಿಗರ ಕಾಮೆಂಟ್ ಏನು?
ಆರ್‌ಸಿಬಿ ಕನ್ನಡ ಪೇಜ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಮಿಸ್ಟರ್ ನ್ಯಾಗ್ಸ್ ವಿಡಿಯೋ ನೋಡಿ ನೆಟ್ಟಿಗರು ಸಾಲು ಸಾಲು ಕಾಮೆಂಟ್‌ಗಳನ್ನು ಮಾಡಿತ್ತಿದ್ದಾರೆ. ಕೆಲವರು ಆರ್‌ಸಿಬಿ ತಂಡಕ್ಕೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿದಿದ್ದಾರೆ. "ಕನ್ನಡವೆ ನಮ್ಮ ಅವ್ವ.. ಕನ್ನಡವೇ ಜೀವ", "ಸೂರ್ಯ ಪೂರ್ವದಲ್ಲಿ ಹುಟ್ಟುವವರೆಗೂ ಮಿಸ್ಟರ್ ನ್ಯಾಗ್ಸ್ ಆರ್‌ಸಿಬಿಯಲ್ಲೇ ಇರಲಿ", "ಹಂಗೆ ನಮ್ಮ ಕರ್ನಾಟಕ ಆಟಗಾರರನ್ನೂ ತಗೊಳ್ರಪ್ಪ", "ಕೆಎಲ್ ರಾಹುಲ್ ಬರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











