RCB Vs CSK: "ಉರ್ಕೊಳ್ಳೊರ್ ಉರ್ಕೊಳ್ಳಿ..ಬಡ್ಕೊಳ್ಳೊರ್ ಬಡ್ಕೊಳ್ಳಿ.."; ಡಾಲಿ ತಂಡದಿಂದ ರೋಸ್ಟ್ ಸಾಂಗ್

ಐಪಿಎಲ್‌ ಫೀವರ್ ನಿಧಾನವಾಗಿ ಹೆಚ್ಚಾಗುತ್ತಿದೆ. ಆರ್‌ಸಿಬಿ ಅಭಿಮಾನಿಗಳಿಗೆ ಇಂದು (ಮಾರ್ಚ್ 5) ಬಿಗ್ ಡೇ. ಯಾಕಂದ್ರೆ ಆರ್‌ಸಿಬಿಯ (RCB) ಸಾಂಪ್ರದಾಯಿಕ ಎದುರಾಳಿ ಸಿಎಸ್‌ಕೆ (CSK) ಜೊತೆ ಪಂದ್ಯ ನಡೆಯುತ್ತಿದೆ. ಈ ಜಿದ್ದಾ ಜಿದ್ದಿನ ಪಂದ್ಯವನ್ನು ನೋಡುವುದಕ್ಕೆ ಕ್ರೀಡಾ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಎಸ್‌ಕೆ ತಂಡವನ್ನು ಆರ್‌ಸಿಬಿ ಅಭಿಮಾನಿಗಳು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

ಮೊದಲ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಚೆನ್ನೈ ತಂಡದೊಂದಿಗೆ ಮೊದಲ ಪಂದ್ಯ ನಡೆಯುತ್ತಿದೆ. ಹೀಗಾಗಿ ಎರಡು ತಂಡದ ಅಭಿಮಾನಿಗಳು ಈ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಡಾಲಿ ಧನಂಜಯ್ ತಂಡದಿಂದ ರೋಸ್ಟ್ ಸಾಂಗ್ ಬೇರೆ ರಿಲೀಸ್ ಮಾಡಿದ್ದಾರೆ. ಆರ್‌ಸಿಬಿ ವಿರೋಧಿಸುವವರಿಗೆ ಉರಿಸೋದಕ್ಕೆ ಅಂತಲೇ ಒಂದು ರೋಸ್ಟ್ ಸಾಂಗ್ ರಿಲೀಸ್ ಆಗಿದೆ.

RCB Vs CSK Dhananjay Mother Promise movie team released RCB Song Calling all creators hype the boys

ಡಾಲಿ ಧನಂಜಯ್ ಹಾಗೂ ಅವರ ತಂಡ ಸೇರಿಕೊಂಡು ಇತ್ತೀಚೆಗೆ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಅದುವೇ 'ಮದರ್ ಪ್ರಾಮಿಸ್'. ಟೈಟಲ್‌ನಿಂದಲೇ ಗಮನ ಸೆಳೆದಿರೋ ಈ ಸಿನಿಮಾವನ್ನು ಪೂರ್ಣಚಂದ್ರ ಮೈಸೂರು ನಿರ್ದೇಶನ ಮಾಡುತ್ತಿದ್ದಾರೆ. ಟೈಟಲ್‌ ಗೆಸ್‌ ಮಾಡಿ ಅಂತ ತಲೆಗೆ ಹುಳ ಬಿಟ್ಟಿದ್ದ ಟೀಂ ಈಗ ರೋಸ್ಟ್‌ ಸಾಂಗ್ ಬಿಟ್ಟು ಕ್ರಿಕೆಟ್ ಪ್ರೇಮಿಗಳಿಗೆ ಕಿಕ್ ಕೊಟ್ಟಿದೆ. ಹಾಗಿದ್ರೆ, ಈ ರೋಸ್ಟ್ ಸಾಂಗ್ ಹೇಗಿದೆ? ಲಿರಿಕ್ಸ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

'ಮದರ್ ಪ್ರಾಮಿಸ್' ಸಿನಿಮಾವನ್ನು ಡಾಲಿ ಧನಂಜಯ ಹಾಗೂ ಅವರ ಗೆಳೆಯರು ಸೇರಿಕೊಂಡು ಮಾಡ್ತಿದ್ದಾರೆ. ಈ ಹಿಂದೆ ಕೂಡ ತಮ್ಮದೇ ಗೆಳೆಯರ ಬಳಗ ಕಟ್ಟಿಕೊಂಡು ಸಿನಿಮಾ ಮಾಡಿದ್ದು ಗೆದ್ದಿದ್ದರು. ಈಗ ಮತ್ತೊಂದು ಸಿನಿಮಾವನ್ನು ಆರಂಭ ಮಾಡಿದ್ದಾರೆ. ಡಾಲಿ ಪಿಕ್ಚರ್ಸ್ ಸಹಯೋಗದೊಂದಿಗೆ ಡಾಲಿ ಗೆಳೆಯ ಹರ್ಷ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಡಾಲಿ ಗೆಳೆಯ ಪೂರ್ಣ ಮೈಸೂರು ಆಕ್ಷನ್ ಕಟ್ ಹೇಳುತ್ತಿದ್ದಾರೆ.

Also Read
ಕಾವ್ಯಾ ಮಾರನ್‌ಗೆ ದಿಗಿಲು.. ಆರ್‌ಸಿಬಿ ಲಕ್ಕು ಬದಲಿಸಲು ಬಂದ ಹೊಸ ಮಾಲೀಕನ ಮಗಳು; ಯಾರೀಕೆ ಅನನ್ಯಾ ಬಿರ್ಲಾ?
ಕಾವ್ಯಾ ಮಾರನ್‌ಗೆ ದಿಗಿಲು.. ಆರ್‌ಸಿಬಿ ಲಕ್ಕು ಬದಲಿಸಲು ಬಂದ ಹೊಸ ಮಾಲೀಕನ ಮಗಳು; ಯಾರೀಕೆ ಅನನ್ಯಾ ಬಿರ್ಲಾ?

ಇದೇ ತಂಡವೀಗ ಆರ್‌ಸಿಬಿ ಹಾಗೂ ಸಿಎಸ್‌ಕೆ ಪಂದ್ಯಕ್ಕೂ ಮುನ್ನ ರೋಸ್ಟ್ ಸಾಂಗ್ ಅನ್ನು ರಿಲೀಸ್ ಮಾಡಿದೆ. ಇದರ ಸಾಂಗ್ ಆರ್‌ಸಿಬಿ ಅಭಿಮಾನಿಗಳಿಗಂತೂ ಹಬ್ಬ ಅಂತಲೇ ಹೇಳಬಹುದು. ಪಂದ್ಯಗಳನ್ನು ಸೋತ್ರೂ.. ಗೆದ್ದರೂ ಆರ್‌ಸಿಬಿ ಅಭಿಮಾನಿಗಳು ಖುಷಿಯಲ್ಲಿ ಈ ಹಾಡನ್ನು ಇಟ್ಕೊಂಡು ರೋಸ್ಟ್‌ ಮಾಡೋದು ಗ್ಯಾರಂಟಿ. ಇನ್ನು ಈ ಹಾಡಿನ ಲಿರಿಕ್ಸ್ ಕೇಳಿದರೆ, ಥ್ರಿಲ್ ಆಗೋದಂತೈ ಗ್ಯಾರಂಟಿ.

"ಇಷ್ಟು ವರ್ಷ ಇಟ್ಟುಕೊಂಡ ಎದೆಯಾಳದ ಬೆಂಕಿ ಎಣ್ಣೆ ಸುರಿದು ತಂಪು ಮಾಡು. ಉರ್ಕೊಳ್ಳೊರ್ ಉರ್ಕೊಳ್ಳಿ.. ಬಡ್ಕೊಳ್ಳೊರ್ ಬಡ್ಕೊಳ್ಳಿ.. ಕಿತ್ಕಳಕ್ಕೆ ಆಗೋದಿಲ್ಲ ಏನೂ.. ಸೋತಾಗ್ಲೇ ಬುಡ್ಲಿಲ್ಲ.. ಗೆದ್ದಾಗ ಬುಡ್ತಿವಾ? ಇನ್ನು ಮುಂದೆ ನಮ್ದೇ ಫುಲ್ ಸೀನು." ಅನ್ನೋ ಸಾಹಿತ್ಯ ಇರುವ ಈ ರೋಸ್ಟ್ ಸಾಂಗ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದೆ. ಹಾಗೇ ಈ ಹಾಡನ್ನು ಇಟ್ಕೊಂಡು ಬೆಸ್ಟ್ ರೀಲ್ಸ್ ಮಾಡಿದವರು 'ಮದರ್ ಪ್ರಾಮಿಸ್' ಸಿನಿಮಾ ತಂಡದೊಂದಿಗೆ ಸೇರಿಕೊಳ್ಳಬಹುದಾಗಿದೆ.

'ಮದರ್‌ ಪ್ರಾಮಿಸ್‌' ಟೈಟಲ್‌ ಇಟ್ಕೊಂಡು ಎಮೋಷನಲ್‌, ಕಾಮಿಡಿ ಹಾಗೂ ಥ್ರಿಲ್ ಸ್ಟೋರಿಯನ್ನು ತೆರೆಮೇಲೆ ನಿರ್ದೇಶಕ ಪೂರ್ಣ ತರುತ್ತಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಡಾಲಿ ಧನಂಜಯ ಸೇರಿದಂತೆ ನಟ ನಾಗಭೂಷಣ್‌ , ಹಿರಿಯ ನಟಿ ವಿನಯಪ್ರಸಾದ್‌, ಗೀತಾ, ಗುರುದತ್‌ ಇನ್ನು ಅನೇಕರು ನಟಿಸಿದ್ದಾರೆ. ಇನ್ನು ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ನಲ್ಲಿಯೇ ಬರೋಬ್ಬರಿ 36 ಮುಖ್ಯ ಕಲಾವಿದರನ್ನು ಚಿತ್ರತಂಡ ಪರಿಚಯಿಸಿದೆ. ಒಂದೂಳ್ಳೆ ಕಂಟೆಂಟ್‌ ಜೊತೆಗೆ ಸಿನಿಮಾ ಪ್ರಿಯರನ್ನು ರಂಜಿಸಲು ಮದರ್ ಪ್ರಾಮಿಸ್ ಬರುತ್ತಿದೆ.

More from Filmibeat

English summary
RCB Vs CSK Dhananjay Mother Promise movie team released RCB Song Calling all creators hype the boys.
Read more about: dhananjay rcb song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X