RCB Vs PBKS: ಫೈನಲ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಬಗ್ಗೆ ಕಿಚ್ಚನ ನುಡಿಮುತ್ತುಗಳೇನು?

ಆರ್‌ಸಿಬಿ ಹಾಗೂ ಪಂಜಾಬ್ ನಡುವೆ ಫೈನಲ್ ಪಂದ್ಯ ನಡೆಯುತ್ತಿದೆ. ಎರಡು ಹೈ ವೋಲ್ಟೇಜ್ ತಂಡಗಳು ಟ್ರೋಫಿಗಾಗಿ ಸೆಣೆಸಾಡುತ್ತಿವೆ. ಎರಡೂ ತಂಡಗಳು ಇದೂವರೆಗೂ ಒಂದೇ ಒಂದು ಬಾರಿಗೂ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಅದರಲ್ಲೂ ಅತೀ ಹೆಚ್ಚು ಫ್ಯಾನ್ಸ್ ಫಾಲೋವಿಂಗ್ ಹೊಂದಿರುವ ಆರ್‌ಸಿಬಿ ತಂಡ 18 ಸೀಸನ್‌ನಿಂದ ಟ್ರೋಫಿ ಗೆಲ್ಲುವುದಕ್ಕೆ ಹರಸಾಹಸ ಮಾಡಿತ್ತಿದೆ. ಆದರೆ, ಅದೃಷ್ಟ ಆರ್‌ಸಿಬಿ ಕೈ ಹಿಡಿದಿಲ್ಲ.

ಹಾಗೇ ಪಂಜಾಬ್ ತಂಡದ ಪರಿಸ್ಥಿತಿಯೇನು ಬೇರೆಯಾಗಿಲ್ಲ. ಇದೂವರೆಗೂ ಒಂದೇ ಒಂದು ಬಾರಿಯೂ ಪಂಜಾಬ್ ಐಪಿಎಲ್‌ ಟ್ರೋಫಿಯನ್ನು ಗೆದ್ದಿಲ್ಲ. ಈ ಕಾರಣಕ್ಕೆ ಎರಡೂ ತಂಡಗಳೂ ಕೂಡ ಐಪಿಎಲ್ 18ನೇ ಸೀಸನ್‌ ಅನ್ನು ಗೆಲ್ಲುವುದಕ್ಕೆ ಶತಪ್ರಯತ್ನ ಮಾಡುತ್ತಿದೆ. ಅದರಲ್ಲೂ ಆರ್‌ಸಿಬಿ ಈ ಬಾರಿಯಾದರೂ ಫೈನಲ್ ಗೆಲ್ಲಬಹುದಾ? ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

RCB Vs PBKS Kichcha Sudeep told he is also RCB Loyal fan

ಇನ್ನು ಸ್ಯಾಂಡಲ್‌ವುಡ್‌ನ ಬಾದ್‌ಷಾ ಕಿಚ್ಚ ಸುದೀಪ್ ಕೂಡ ಆರ್‌ಸಿಬಿಯ ಅಪ್ಪಟ ಅಭಿಮಾನಿ. ಮತ್ತೊಮ್ಮೆ ಐಪಿಎಲ್‌ ಫೈನಲ್‌ಗೆ ಎಂಟ್ರಿ ಕೊಟ್ಟಿರುವುದರಿಂದ ಕಿಚ್ಚ ಈ ಪಂದ್ಯಗಳನ್ನು ನೋಡುವುದಕ್ಕೆ ಥ್ರಿಲ್ ಆಗಿದ್ದಾರೆ. ಅದರಲ್ಲೂ ಸ್ಟಾರ್‌ ಸ್ಪೋರ್ಟ್ಸ್ ವಿಶೇಷ ಸಂದರ್ಶನದಲ್ಲಿ ಸುದೀಪ್ ಆರ್‌ಸಿಬಿ ತಂಡದ ಬಗ್ಗೆ, ಆ ತಂಡಕ್ಕಿರುವ ಅಭಿಮಾನದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಫೈನಲ್ ಪಂದ್ಯದ ಬೆನ್ನಲ್ಲೇ ಸ್ಟಾರ್ ಸ್ಪೋರ್ಟ್‌ ಕನ್ನಡ ಕಿಚ್ಚ ಸುದೀಪ್ ಅವರ ವಿಶೇಷ ಸಂದರ್ಶನ ಮಾಡಿದೆ. ಇದರಲ್ಲಿ ಕಿಚ್ಚ ಸುದೀಪ್ ಆರ್‌ಸಿಬಿ ತಂಡ ಹಾಗೂ ಅದಕ್ಕಿರುವ ಫ್ಯಾನ್ ಕ್ರೇಜ್ ಬಗ್ಗೆ ಮಾತಾಡಿದ್ದಾರೆ. ಬಿಗ್ ಬಾಸ್ ಕನ್ನಡ ವಿನ್ನರ್ ರೂಪೇಶ್ ಶೆಟ್ಟಿ ಸಂದರ್ಶನ ಮಾಡಿದ್ದು, ಇದರಲ್ಲಿ ಕಿಚ್ಚ ಸುದೀಪ್ ಆರ್‌ಸಿಬಿ ಹಾಗೂ ಫ್ಯಾನ್ಸ್ ಕ್ರೇಜ್ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಸುದೀಪ್ ಕೊಟ್ಟ ಉತ್ತರ ಆರ್‌ಸಿಬಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

"ಆರ್‌ಸಿಬಿ ಫ್ಯಾನ್ಸ್ ನಿಯತ್ತು ನೋಡಿದರೆ ಏನು ಹೇಳೋದು.. ನಾನು ಆರ್‌ಸಿಬಿ ಫ್ಯಾನ್.. ಆ ನಿಯತ್ತು ನೋಡಿದರೆ.. ಈಗ ನೀವು ಐಪಿಎಲ್‌ನಲ್ಲಿ ಯಾವುದೇ ಟೀಮ್ ತೆಗೆದುಕೊಳ್ಳಿ, ನಮಗೆ ಇರುವ ಫ್ಯಾನ್ ಬೇಸ್ ಬೇರೆ ಯಾವುದೇ ತಂಡಕ್ಕೂ ಇಲ್ಲ. ಗೊತ್ತಿಲ್ಲ, ಆರ್‌ಸಿಬಿ ಟೀಮ್‌ಗೆ ಅಂತಹದ್ದೊಂದು ಅಟ್ರ್ಯಾಕ್ಷನ್ ಇದೆ. ನೀವು ಸೋಶಿಯಲ್ ಮೀಡಿಯಾಗೆ ಹೋಗಿ, ಇನ್ನೊಂದಕ್ಕೆ ಹೋಗಿ ಅಲ್ಲಿ ಆರ್‌ಸಿಬಿ ಬಗ್ಗೆ ಏನಾದರೂ ಹೇಳಿಬಿಟ್ಟರೆ ಯುದ್ಧವೇ ನಡೆದು ಬಿಡುತ್ತೆ. ನೀವು ಹೇಳಿದ ಹಾಗೆ ಒಂದು ಸಲವೂ ಕಪ್ಪು ಗೆಲ್ಲದೆ ಇರಬಹುದು. ಆದರೆ, ಜನರು ಬಿಟ್ಟು ಕೊಟ್ಟಿಲ್ಲ. ನನಗೆ ಅನಿಸುತ್ತೆ, ಇದು ತುಂಬಾನೇ ಅಪರೂಪ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಕಿಚ್ಚ ಸುದೀಪ್‌ಗೆ ಕ್ರಿಕೆಟ್ ಅಂದರೆ, ಬಲು ಪ್ರೀತಿ ಅನ್ನೋದು ಗೊತ್ತೇ ಇದೆ. ಕ್ರಿಕೆಟ್ ಅಂತ ಬಂದರೆ, ಸಿನಿಮಾವನ್ನು ಮರೆತು ಬಿಡುವಷ್ಟು ಪ್ರೀತಿ. ಕಿಚ್ಚನಿಗೆ ಆರ್‌ಸಿಬಿ ಟೀಮ್‌ ಡೈ ಹಾರ್ಟ್‌ ಫ್ಯಾನ್ಸ್ ಬಗ್ಗೆ ವಿಶೇಷ ಅಭಿಮಾನ. ಆರ್‌ಸಿಬಿ ಎಷ್ಟೇ ಹೀನಾಯವಾಗಿ ಸೋತರೂ ಅಭಿಮಾನಿಗಳು ಮಾತ್ರ ಬದಲಾಗಿಲ್ಲ. ಪ್ರತಿಬಾರಿ ಸೋತಾದಾಗಲೂ ಪ್ಯಾನ್ಸ್ ಸಂಖ್ಯೆಗಳ ಸಂಖ್ಯೆ ಹೆಚ್ಚಾಗಿದ್ದಾರೆ ವಿನ: ಕಮ್ಮಿಯಂತೂ ಆಗಿಲ್ಲ.

ಆರ್‌ಸಿಬಿ ಇಲ್ಲಿವರೆಗೂ ನಾಲ್ಕು ಬಾರಿ ಫೈನಲ್ ಪ್ರವೇಶ ಮಾಡಿದೆ. ಆದರೆ, ಮೂರು ಬಾರಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲುತ್ತಾರಾ ಎಂದು ಎದುರು ಆರ್‌ಸಿಬಿ ಅಭಿಮಾನಿಗಳು ನೋಡುತ್ತಿದ್ದಾರೆ. ವಿಶ್ವದ ಮೂಲೆ ಮೂಲೆಯಿಂದ ಅಭಿಮಾನಿಗಳು ಆರ್‌ಸಿಬಿ ಗೆಲ್ಲಬೇಕೆಂದು ಆಶಿಸುತ್ತಿದ್ದಾರೆ. ಇವರೆಲ್ಲರ ಆಶಯ ಈಡೇರುತ್ತಾ? ಈ ಪ್ರಶ್ನೆಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.

More from Filmibeat

English summary
RCB Vs PBKS: Kichcha Sudeep told he is also big RCB Loyal fan.
Read more about: kichcha sudeep rcb ipl
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X