»   » ಉಪೇಂದ್ರ ಆಲ್ ಟೈಮ್ ಬೆಸ್ಟ್:ನಿಮ್ಮ ಆಯ್ಕೆ ಯಾವುದು?

ಉಪೇಂದ್ರ ಆಲ್ ಟೈಮ್ ಬೆಸ್ಟ್:ನಿಮ್ಮ ಆಯ್ಕೆ ಯಾವುದು?

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರಗೆ ನಾಳೆ (ಸೆ 18) ಡಬಲ್ ಧಮಾಕ. ಒಂದು ನಾಳೆ ಅವರ 45ನೇ ಹುಟ್ಟುಹಬ್ಬ ಇನ್ನೊಂದು ಅವರ ಸ್ವಂತ ಬ್ಯಾನರಿನ, ಅವರೇ ನಿರ್ದೇಶಿಸುತ್ತಿರುವ ಉಪ್ಪಿ 2 ಚಿತ್ರದ ಮಹೂರ್ತಕ್ಕೆ ಚಾಲನೆ.

ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಕೋಟೇಶ್ವರದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಉಪೇಂದ್ರ, ಕಾಶೀನಾಥ್ ಗರಡಿಯಲ್ಲಿ ಪಳಗಿ ಪೂರ್ಣ ಪ್ರಮಾಣದ ನಿರ್ದೇಶಕರಾದರು. ಅವರ ಚೊಚ್ಚಲ ನಿರ್ದೇಶನದ ಚಿತ್ರವೇ ಅವರಿಗೆ ಜನಪ್ರಿಯತಯನ್ನು ತಂದು ಕೊಟ್ಟಿತು.

ಅನಂತನ ಆವಾಂತರ, ಅಜಗಜಾಂತರ, ಶ್! ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಉಪ್ಪಿ 'A' ಚಿತ್ರದ ಮೂಲಕ ಫುಲ್ ಟೈಮ್ ನಾಯಕರಾದರು.

ಅವರ ನಿರ್ದೇಶನದ ಆಪರೇಷನ್ ಅಂತ ಮತ್ತು ಸ್ವಸ್ತಿಕ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಸದ್ದನ್ನು ಮಾಡಿಲ್ಲ. ಉಳಿದಂತೆ ತರ್ಲೆ ನನ್ ಮಗ, ಶ್!, ಓಂ, A', ಉಪೇಂದ್ರ ಮತ್ತು ಸೂಪರ್ ಚಿತ್ರಗಳು ಸೂಪರ್ ಹಿಟ್ ಆಗಿದ್ದವು.

ಅವರ ಮುಂದಿನ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಸುಖಕರವಾಗಿರಲಿ ಎಂದು ಸಮಸ್ತ ಒನ್ ಇಂಡಿಯಾ ಕನ್ನಡದ ಪರವಾಗಿ ಆಶಿಸುತ್ತಾ, ಅವರಿಗೆ advanced birthday wishes.

ಉಪ್ಪಿ ಅಭಿನಯದ ನಾವು ಪಟ್ಟಿ ಮಾಡಿರುವ ಹತ್ತು ಹಿಟ್ ಚಿತ್ರಗಳು. ನಿಮ್ಮ ಆಯ್ಕೆ ಬೇರೆ ಇದ್ದರೆ ತಿಳಿಸಿ..

'A'

1998ರಲ್ಲಿ ಬಿಡುಗಡೆಯಾದ ಈ ಚಿತ್ರ ಗಲ್ಲಾಪೆಟ್ಟಿಗೆ ಲೂಟಿ ಹೊಡೆದಿತ್ತು. ಉಪೇಂದ್ರ, ಚಾಂದಿನಿ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ಉಪೇಂದ್ರ ಅವರೇ ನಿರ್ದೇಶಿಸಿದ್ದರು. ಗುರುಕಿರಣ್ ಸಂಗೀತದ ಹಾಡು ಸೂಪರ್ ಹಿಟ್ ಆಗಿದ್ದವು.

ಉಪೇಂದ್ರ

ಉಪ್ಪಿ, ರವೀನಾ ಟಂಡನ್, ಪ್ರೇಮಾ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 1999ರಲ್ಲಿ ಬಿಡುಗಡೆಯಾಯಿತು. ಉಪೇಂದ್ರ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದರು. ಕರ್ನಾಟಕ ಮತ್ತು ಆಂಧ್ರಪ್ರದೇಶ ಎರಡೂ ರಾಜ್ಯಗಳಲ್ಲಿ ಚಿತ್ರ ಜಯಭೇರಿ ಬಾರಿಸಿತ್ತು.

ರಕ್ತ ಕಣ್ಣೀರು

2003ರಲ್ಲಿ ಬಿಡುಗಡೆಯಾದ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ. ಸಾಧು ಕೋಕಿಲಾ ನಿರ್ದೇಶನದ ಈ ಚಿತ್ರದ ಡೈಲಾಗುಗಳು ಇಂದಿಗೂ ಜನಪ್ರಿಯ. ಉಪೇಂದ್ರ, ರಮ್ಯಕೃಷ್ಣ, ಅಭಿರಾಮಿ, ಕುಮಾರ್ ಬಂಗಾರಪ್ಪ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರಕ್ಕೆ ಸಾಧು ಕೋಕಿಲಾ ಸಂಗೀತ ನೀಡಿದ್ದರು.

ಗೌರಮ್ಮ

ಉಪೇಂದ್ರ, ರಮ್ಯಾ, ಶ್ರೀನಿವಾಸಮೂರ್ತಿ, ಕೋಮಲ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು. ಎಸ್ ಎ ರಾಜಕುಮಾರ್ ಸಂಗೀತ ನೀಡಿದ್ದ ಈ ಚಿತ್ರ 2005ರಲ್ಲಿ ಬಿಡುಗಡೆಯಾಗಿತ್ತು.

ಆಟೋಶಂಕರ್

ಡಿ ರಾಜೇಂದ್ರ ಬಾಬು ನಿರ್ದೇಶನದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಉಪೇಂದ್ರ, ಶಿಲ್ಪಾ ಶೆಟ್ಟಿ, ರಾಧಿಕಾ, ರಮೇಶ್ ಭಟ್ ಇದ್ದಾರೆ. ಚಿತ್ರದ ಒಂದು ಪೋಸ್ಟರ್ ವಿರುದ್ದ ಮಧುರೈ ಮೂಲದ ವಕೀಲರು ಶಿಲ್ಪಾ ಶೆಟ್ಟಿ ವಿರುದ್ದ ನ್ಯಾಯಾಲಯದ ಮೊರೆ ಹೋಗಿದ್ದರು.

ಐಶ್ವರ್ಯಾ

ಬಾಲಿವುಡ್ ನಲ್ಲಿ ಮಿಂಚಿತ್ತಿರುವ ದೀಪಿಕಾ ಪಡುಕೋಣೆಯ ಚೊಚ್ಚಲ ಚಿತ್ರ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಈ ಚಿತ್ರ 2006ರಲ್ಲಿ ಬಿಡುಗಡೆಯಾಗಿತ್ತು. ಉಪೇಂದ್ರ, ದೀಪಿಕಾ, ಡೈಸಿ ಬೋಪಣ್ಣ ಪ್ರಮುಖ ತಾರಾಗಣದಲ್ಲಿದ್ದ ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದರು.

ಬುದ್ದಿವಂತ

ಉಪೇಂದ್ರ ವೃತ್ತಿ ಜೀವನದ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ. ಪೂಜಾ ಗಾಂಧಿ, ಸುಮನ್ ರಂಗನಾಥ್, ಸಲೋನಿ ಆಸ್ವಾನಿ ಇನ್ನಿತರರು ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ರಾಮನಾಥ್ ನಿರ್ದೇಶಿಸಿದ್ದರು. 2008ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ವಿಜಯ್ ಆಂಥೋಣಿ ಸಂಗೀತ ನೀಡಿದ್ದರು.

ಸೂಪರ್

ಬಹಳ ಸಮಯದ ನಂತರ ಉಪೇಂದ್ರ ನಿರ್ದೇಶಕನಾಗಿ ತೆರೆಗೆ ಬಂದ ಚಿತ್ರ. ಉಪೇಂದ್ರ, ನಯನತಾರಾ, ಸಾಧು ಕೋಕಿಲಾ, ತುಲಿಪ್ ಜೋಷಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದರು. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾದ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು.

ಕಠಾರಿವೀರ

2012ರಲ್ಲಿ ಬಿಡುಗಡೆಯಾದ ಕಠಾರಿವೀರ ಸುರಸುಂದರಾಂಗಿ 3D ತಂತ್ರಜ್ಞಾನದ ಈ ಚಿತ್ರವನ್ನು ಮುನಿರತ್ನ ನಾಯ್ಡು ನಿರ್ಮಿಸಿದ್ದರು. ಉಪೇಂದ್ರ, ರಮ್ಯಾ, ಅಂಬರೀಶ್, ದೊಡ್ಡಣ್ಣ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರವನ್ನು ಸುರೇಶ್ ಕೃಷ್ಣ ನಿರ್ದೇಶಿಸಿದ್ದರು.

ಕಲ್ಪನಾ

ನಟನೆಗೆ ಸವಾಲೆನೆಸುವ ಚಿತ್ರದ ಪಾತ್ರವನ್ನು ಉಪೇಂದ್ರ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಸಾಯಿಕುಮಾರ್, ಉಮಾಶ್ರೀ, ಶೃತಿ, ಲಕ್ಷ್ಮಿ ರೈ, ಅಚ್ಯುತ್ ಕುಮಾರ್ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರ 2012ರಲ್ಲಿ ಬಿಡುಗಡೆಯಾಗಿತ್ತು.

English summary
Real Star Upendra all time hit movies list. Tomorrow (Sep 18) 45th birthday of Upendra. Advanced Birthday wishes to Upendra.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada