ಅಕ್ಟೋಬರ್‌ನಲ್ಲಿ 'ಮಾರ್ಟಿನ್' ಜೊತೆ ಉಪ್ಪಿಯ 'ಯುಐ'? ಏನಿದು ಗೊಂದಲ

2024 ಮೊದಲ ಎಂಟು ತಿಂಗಳು ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳು ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. 'ಭೀಮ' ಸಿನಿಮಾದಿಂದ ಮೊದಲ ಗೆಲುವು ಸಿಕ್ಕಿದೆ. ಇಲ್ಲಿಂದ ಕನ್ನಡ ಸಿನಿಮಾಗಳು ಒಂದೊಂದಾಗೇ ಬಿಡುಗಡೆಯಾಗುತ್ತಿವೆ. 'ಭೀಮ' ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ 'ಕೃಷ್ಣಂ ಪ್ರಯಣ ಸಖಿ' ಕೂಡ ರಿಲೀಸ್ ಆಗಿದೆ.

ಇಷ್ಟೇ ಅಲ್ಲ ಒಂದೊಂದೇ ಪ್ಯಾನ್ ಇಂಡಿಯಾ ಸಿನಿಮಾಗಳು ಕೂಡ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡುತ್ತಿವೆ. ಸಿನಿಪ್ರಿಯರು ಬಹಳ ನಿರೀಕ್ಷೆಯಿಂದಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದರು. ಈಗ ಆ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಅಂತಷ್ಟೇ ಅನೌನ್ಸ್ ಮಾಡಲಾಗಿದ್ದು, ಯಾವ ಡೇಟ್‌ಗೆ ಅನ್ನೋದು ಇನ್ನೂ ರಿವೀಲ್ ಆಗಿಲ್ಲ.

Real Star Upendra directed movie UI releasing in October date yet to finalise

ಇದೇ ತಿಂಗಳು ಇನ್ನೊಂದು ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ರಿಲೀಸ್ ಆಗಿದೆ. ಈಗಾಗಲೇ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದ್ದು, ಪ್ರಚಾರ ಕೂಡ ಆರಂಭ ಆಗಿದೆ. ಈ ಗ್ಯಾಪ್‌ನಲ್ಲೇ ರಿಯಲ್ ಸ್ಟಾರ್ ಉಪೇಂದ್ರ ಕೂಡ ಅಕ್ಟೋಬರ್ ತಿಂಗಳಲ್ಲೇ ಯುಐ ರಿಲೀಸ್ ಅಂತ ಅನೌನ್ಸ್ ಮಾಡಿದ್ದಾರೆ. ಈ ಕಾರಣಕ್ಕೆ ಧ್ರುವ ಸರ್ಜಾ ಹಾಗೂ ಉಪೇಂದ್ರ ಅಭಿಮಾನಿಗಳಿಗೆ ಗೊಂದಲ ಶುರುವಾಗಿದೆ.

ಉಪೇಂದ್ರ ನಿರ್ದೇಶನದ ಸಿನಿಮಾ ಅಂದರೆ ಅಭಿಮಾನಿಗಳಿಗೆ ಹಬ್ಬ. ವಿಭಿನ್ನ ಸಿನಿಮಾಗಳಿಗೆ ಕೈ ಹಾಕುವ ಉಪ್ಪಿ ಈ ಬಾರಿ ಎಂತಹ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋ ಕುತೂಹಲವಿದೆ. ಅಲ್ಲದೆ ತಾಂತ್ರಿಕವಾಗಿಯೂ ಉಪ್ಪಿ ಅಪ್‌ಗ್ರೇಡ್‌ ಆಗಿರುವುದು ಇಷ್ಟೆಲ್ಲ ಕುತೂಹಲಕ್ಕೆ ಕಾರಣ ಎನ್ನಬಹುದು. ಸದ್ಯ ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದು ಉಪ್ಪಿ ಅಭಿಮಾನಿಗಳಿಗೆ ಸಮಾಧಾನ ತಂದಿದೆ.

Real Star Upendra directed movie UI releasing in October date yet to finalise

ಇನ್ನು ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಅಕ್ಟೋಬರ್ 11ಕ್ಕೆ ಬಿಡುಗಡೆಯಾಗುತ್ತಿದೆ. ದಸರಾ ಹಬ್ಬವನ್ನು ಟಾರ್ಗೆಟ್ ಮಾಡಿರುವ ಚಿತ್ರತಂಡ ಐದಕ್ಕಿಂತ ಹೆಚ್ಚು ಭಾಷೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ. ಈ ಸಂಬಂಧ ಈಗಾಗಲೇ ಪ್ರಚಾರವನ್ನು ಮಾಡುತ್ತಿದೆ. ಮುಂಬೈನಲ್ಲಿ ಒಂದು ಸುತ್ತಿನ ಪ್ರಚಾರವನ್ನು ಮಾಡಿ ಬಂದಿದೆ.

ಇದೇ ತಿಂಗಳಲ್ಲೇ ಉಪ್ಪಿ ಕೂಡ ಯುಐ ಬಿಡುಗಡೆಗೆ ಮುಂದಾಗಿದ್ದು ಕೊಂಚ ಗೊಂದಲಕ್ಕೆ ಕಾರಣವಾಗಿದೆ. 'ಯುಐ' ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ದೊಡ್ಡ ಮಟ್ಟದ ಪ್ರಚಾರದ ಅಗತ್ಯವಿದೆ. ಉಪ್ಪಿ ಸಿನಿಮಾ ಬಗ್ಗೆ ದಕ್ಷಿಣ ಭಾರತದಲ್ಲಿ ಪರಿಚಯವಿದೆ. ಆದರೆ, ಹಿಂದಿ ಭಾಷೆಯಲ್ಲಿ ದೊಡ್ಡ ಮಟ್ಟದ ಪ್ರಚಾರ ಮಾಡಬೇಕಿದೆ. ಹೀಗಾಗಿ ಅಕ್ಟೋಬರ್‌ ತಿಂಗಳಲ್ಲಿ ರಿಲೀಸ್ ಅಂತಷ್ಟೇ ಹೇಳಿದ್ದು, ಇನ್ನಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. 'ಮಾರ್ಟಿನ್' ಸಿನಿಮಾದ ಜೊತೆಗೆ 'ಯುಐ' ರಿಲೀಸ್ ಆಗುತ್ತಾ? ಇಲ್ಲ ಬೇರೆ ಡೇಟ್‌ನಲ್ಲಿ ರಿಲೀಸ್ ಮಾಡುತ್ತಾರಾ? ಡೇಟ್ ಯಾಕೆ ಅನೌನ್ಸ್ ಮಾಡಿಲ್ಲ ಅನ್ನೋ ಪ್ರಶ್ನೆ ಉಪ್ಪಿ ಫ್ಯಾನ್ಸ್‌ನಲ್ಲಿ ಹುಟ್ಟಿಕೊಂಡಿದೆ.

ಆದರೆ, ಉಪೇಂದ್ರ ತಮ್ಮ 'ಯುಐ' ಸಿನಿಮಾವನ್ನು ಅಕ್ಟೋಬರ್ 30ಕ್ಕೆ ರಿಲೀಸ್ ಮಾಡಬಹುದು ಎಂದು ಅಂದಾಜು ಮಾಡಲಾಗುತ್ತಿದೆ. ಯಾಕಂದ್ರೆ ಅಕ್ಟೋಬರ್ 31ರಿಂದ ದೀಪಾವಳಿ ಹಬ್ಬ ಶುರುವಾಗುತ್ತಿದೆ. ಹಾಗೇ 'ಮಾರ್ಟಿನ್' ಸಿನಿಮಾ ರಿಲೀಸ್ ಆಗಿ ಎರಡು ವಾರಗಳು ಆಗುತ್ತವೆ. ಉಪ್ಪಿ ಇಂತಹದ್ದೊಂದು ಲೆಕ್ಕಾಚಾರ ಹಾಕಿರಬಹುದೆಂದು ಸಿನಿಮಾ ಮಂದಿ ಗೆಸ್ ಮಾಡುತ್ತಿದ್ದಾರೆ.

More from Filmibeat

English summary
Upendra directed UI movie releasing in October:
Read more about: upendra sandalwood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X