ತೆಲುಗಿನ 'ಗನಿ'ಯಿಂದ ಮತ್ತೆ 'ಕಬ್ಜ' ಸೆಟ್ ಗೆ ಮರಳುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಸದ್ಯ ತೆಲುಗಿನ ಗನಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವರುಣ್ ತೇಜ್ ನಟನೆಯ ಸಿನಿಮಾ ಇದಾಗಿದ್ದು, ಇತ್ತೀಚಿಗಷ್ಟೆ ಗನಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಚಿತ್ರದಲ್ಲಿ ವರುಣ್ ತೇಜ್ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಉಪೇಂದ್ರ ಸದ್ಯ ಹೈದಬಾದ್ ನಲ್ಲಿ ಚಿತ್ರೀಕರಣದಲ್ಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿಸಿ ರಿಯಲ್ ಸ್ಟಾರ್ ಬಹುನಿರೀಕ್ಷೆಯ ಕಬ್ಜ ಸಿನಿಮಾ ಸೇರಿಕೊಳ್ಳಲಿದ್ದಾರೆ. ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಈಗಾಗಲೇ ಸಾಕಷ್ಟು ಚಿತ್ರೀಕರಣ ಮಾಡಿ ಮುಗಿಸಿದೆ ಸಿನಿಮಾತಂಡ.

ವರುಣ್ ತೇಜ ಜೊತೆ ತೆಲುಗು ಸಿನಿಮಾದ ಚಿತ್ರೀಕರಣ ಆರಂಭಿಸಿದ ಉಪೇಂದ್ರ.

ಸದ್ಯ ಮಾರ್ಚ್ 3ರಿಂದ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡುತ್ತಿದೆ ಸಿನಿಮಾತಂಡ. ಚಿತ್ರದ ಜೈಲು ದೃಶ್ಯವನ್ನು ಸೆರೆಹಿಡಿಯಲು ಸಿನಿಮಾತಂಡ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಸೆಟ್ ನಿರ್ಮಾಣ ಮಾಡಲಾಗಿದ್ದು, ಕಲಾ ನಿರ್ದೇಶಕ ಶಿವ ಕುಮಾರ್ ಸೆಟ್ ಡಿಸೈನ್ ಮಾಡಿದ್ದಾರೆ.

Real star Upendra resume shooting for Kabza from March 3rd

ಅಂದಹಾಗೆ ಕಬ್ಜ ಸಿನಿಮಾ ಈ ಭಾಗದ ಚಿತ್ರೀಕರಣ ಸುಮಾರು 2 ತಿಂಗಳು ನಡೆಯಲಿದೆಯಂತೆ. ಆಕ್ಷನ್ ದೃಶ್ಯ ಮತ್ತು ಟಾಕಿ ಭಾಗವನ್ನು ಸುಮಾರು 2 ತಿಂಗಳು ಚಿತ್ರೀಕರಣ ಮಾಡಲು ಸಿನಿಮಾತಂಡ ನಿರ್ಧರಿಸಿದೆ ಎನ್ನಲಾಗಿದೆ. ಚಿತ್ರದಲ್ಲಿ ಕಬೀರ್ ದುಹಾನ್ ಸಿಂಗ್, ಕೋಟಾ ಶ್ರೀನಿವಾಸ್ ಸೇರಿದಂತೆ ಸಾಕಷ್ಟು ಕಲಾವಿದರು ಸೇರಿಕೊಳ್ಳುತ್ತಿದ್ದಾರೆ.

ಕಬ್ಜ ಭೂಗತ ಲೋಕದ ಕತೆಯಾಗಿದ್ದು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಮತ್ತೊಂದು ಹೈಲೆಟ್ ಎಂದರೆ ಕಿಚ್ಚ ಸುದೀಪ್. ಚಿತ್ರದಲ್ಲಿ ಸುದೀಪ್ ಭಾರ್ಗವ ಭಕ್ಷಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸುದೀಪ್ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಅಭಿಮಾನಿಗಳ ಮನಗೆದ್ದಿದೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

Recommended Video

ವಿಶೇಷ ಚೇತನರ ಕ್ರಿಕೆಟ್ ತಂಡಕ್ಕೆ ರಾಗಿಣಿ ರಾಯಭಾರಿ | Filmibeat Kannada

ಬಹುನಿರೀಕ್ಷೆಯ ಕನ್ನಡ ಸಿನಿಮಾ ಕಬ್ಜ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಇನ್ನೂ ಸಾಕಷ್ಟು ಭಾಷೆಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.

More from Filmibeat

English summary
Real star Upendra resume shooting for Kabza from March 3rd.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X