For Quick Alerts
  ALLOW NOTIFICATIONS  
  For Daily Alerts

  ವರುಣ್ ತೇಜ ಜೊತೆ ತೆಲುಗು ಸಿನಿಮಾದ ಚಿತ್ರೀಕರಣ ಆರಂಭಿಸಿದ ಉಪೇಂದ್ರ

  |

  ಆರ್ ಚಂದ್ರು ನಿರ್ದೇಶನದ ಮೆಗಾ ಪ್ರಾಜೆಕ್ಟ್ 'ಕಬ್ಜ' ಚಿತ್ರದಲ್ಲಿ ನಟಿಸುತ್ತಿರುವ ಉಪೇಂದ್ರ ನಟಿಸುತ್ತಿದ್ದಾರೆ. ಬಹುದೊಡ್ಡ ಬಜೆಟ್‌ನಲ್ಲಿ ಸಿದ್ಧವಾಗುತ್ತಿರುವ ಕಬ್ಜ ಚಿತ್ರದಲ್ಲಿ ಅಂಡರ್‌ವರ್ಲ್ಡ್ ಡಾನ್ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದು, ಉಪ್ಪಿಯ ಲುಕ್ ಥ್ರಿಲ್ ಹೆಚ್ಚಿಸಿದೆ.

  ಉಪೇಂದ್ರ ಜೊತೆ ಪ್ಯಾನ್ ಇಂಡಿಯಾ ಸ್ಟಾರ್‌ಗಳು ಈ ಚಿತ್ರದಲ್ಲಿ ಇರಲಿದ್ದಾರೆ. ಕಿಚ್ಚ ಸುದೀಪ್ ಭಾರ್ಗವ್ ಬಕ್ಷಿ ಎಂಬ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಕಬ್ಜ ಚಿತ್ರದ ಮೂಲಕ ಭಾರತೀಯ ಸಿನಿಮಾರಂಗದ ಕುತೂಹಲ ಮೂಡಿಸಿರುವ ಉಪೇಂದ್ರ ಈಗ ತೆಲುಗು ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ.

  ತೆಲುಗು ನಟ ವರುಣ್ ತೇಜ್ 'ಗನಿ' ಲುಕ್ ರಿಲೀಸ್; ಕುತೂಹಲ ಮೂಡಿಸಿದ ರಿಯಲ್ ಸ್ಟಾರ್ ಪಾತ್ರ

  ವರುಣ್ ತೇಜ ನಟಿಸುತ್ತಿರುವ ಗನಿ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಇಂದಿನಿಂದ ಶೂಟಿಂಗ್ ಶುರು ಮಾಡಿದ್ದಾರೆ. ಗನಿ ಚಿತ್ರದ ಸೆಟ್‌ನಲ್ಲಿ ಉಪೇಂದ್ರ ಭಾಗವಹಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಚೊಚ್ಚಲ ನಿರ್ದೇಶಕ ಕಿರಣ್ ಕೊರಪತಿ ನಿರ್ದೇಶಿಸುತ್ತಿರುವ ಗನಿ ಚಿತ್ರದಲ್ಲಿ ವರುಣ್ ತೇಜ್ ಬಾಕ್ಸರ್ ಆಗಿ ನಟಿಸುತ್ತಿದ್ದಾರೆ. ಪಕ್ಕಾ ಆಕ್ಷನ್ ಪ್ಯಾಕೇಜ್ ಇದಾಗಿರಲಿದ್ದು, ಅದಕ್ಕಾಗಿ ವರುಣ್ ತೇಜ ಪೂರ್ಣ ಪ್ರಮಾಣದಲ್ಲಿ ತಯಾರಿ ನಡೆಸಿದ್ದಾರೆ.

  ಇನ್ನು ಉಪೇಂದ್ರ ಅವರ ಪಾತ್ರದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಬಾಕ್ಸರ್‌ಗೆ ತರಬೇತಿ ನೀಡುವ ಪಾತ್ರದಲ್ಲಿ ಉಪ್ಪಿ ನಟಿಸುತ್ತಿದ್ದಾರೆ ಎಂದು ಕೆಲವರು ಊಹಿಸುತ್ತಿದ್ದರೆ ಇನ್ನು ಕೆಲವರು ಉಪ್ಪಿ ವಿಲನ್ ಆಗಿರಬಹುದು ಎನ್ನುತ್ತಿದ್ದಾರೆ.

  ಸದ್ಯ, ಹೈದರಾಬಾದ್‌ನಲ್ಲಿ ಗನಿ ಚಿತ್ರದ ಚಿತ್ರೀಕರಣ ಸಾಗುತ್ತಿದೆ. ಮೊದಲ ಹಂತ ಮುಗಿಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣ ಮಾಡ್ತಿದೆ.

  ಜೂ.ಚಿರು ರಿಲೀಸ್ ಮಾಡಿದ ಟ್ರೈಲರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ | Filmibeat Kannada
  English summary
  Kannada actor upendra Joins the shoot of VarunTej's Ghani movie. Currently, 2nd Schedule is in Progress at Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X