ಎಂಟು ವರ್ಷಗಳ ಬಳಿಕ ಮಾನಿಟರ್ ಮುಂದೆ ಕೂಡ ಉಪೇಂದ್ರ: 'UI' ಇನ್ನಷ್ಟು ಸನಿಹ!
ರಿಯಲ್‌ಸ್ಟಾರ್ ಉಪೇಂದ್ರ ನಟಿಸಿದ ಸಿನಿಮಾಗಳಿಗಿಂತ ನಿರ್ದೇಶನಕ್ಕೆ ಕ್ರೇಜ್. ಇದು ಈಗಲ್ಲ ಹಿಂದಿನಿಂದಲೂ ಸಿನಿಪ್ರಿಯರು ಪ್ರೂವ್ ಮಾಡುತ್ತಲೇ ಬಂದಿದ್ದಾರೆ. ಇದೂವರೆಗೂ ಉಪ್ಪಿ ಆಕ್ಷನ್ ಕಟ್ ಹೇಳಿದ ಸಿನಿಮಾ ಸೋತಿದ್ದೇ ವಿರಳ. ಆದರೆ, ಐದು ಹತ್ತು ವರ್ಷಕ್ಕೊಮ್ಮೆ ಸಿನಿಮಾ ನಿರ್ದೇಶನ ಮಾಡುತ್ತಾರೆ ಅನ್ನೋದೇ ಅಭಿಮಾನಿಗಳ ದೂರು.
'ಉಪ್ಪಿ 2' ಬಳಿಕ ಎಂಟು ವರ್ಷಗಳಾದ್ಮೇಲೆ ರಿಯಲ್ ಸ್ಟಾರ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಅಖಾಡಕ್ಕೆ ಇಳಿದಿದ್ದರು. ಈಗಾಗಲೇ ಈ ಸಿನಿಮಾ ನೋಡುವುದಕ್ಕೆ ಉಪ್ಪಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇಷ್ಟು ದಿನ ಸಣ್ಣ ಪುಟ್ಟ ಮಾಹಿತಿಯನ್ನು ಬಿಟ್ಟುಕೊಟ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ದರು.

ಈಗ ಉಪ್ಪಿ 'UI' ಶೂಟಿಂಗ್ ಮುಗಿಸಿ ಮಾನಿಟರ್ ಮುಂದೆ ಕೂತಿದ್ದಾರೆ. ಈ ಮೂಲಕ ಶೀಘ್ರದಲ್ಲೇ ರಿಲೀಸ್ ಮಾಡೋಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸದ್ಯ 'UI' ಅಡ್ಡದಲ್ಲಿ ಏನೇನು ನಡೀತಿದೆ? ಉಪ್ಪಿ ಸದ್ಯ ಏನು ಮಾಡುತ್ತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
8 ವರ್ಷಗಳ ಬಳಿಕ ಉಪ್ಪಿ ಆಕ್ಷನ್ ಕಟ್
2015ರಲ್ಲಿ ಉಪೇಂದ್ರ 'ಉಪ್ಪಿ 2' ಸಿನಿಮಾ ನಿರ್ದೇಶನ ಮಾಡಿದ್ದರು. ಅಲ್ಲಿಂದ ಮತ್ತೆ ಸಿನಿಮಾ ನಿರ್ದೇಶಕನದ ಕಡೆ ಮುಖ ಮಾಡಿರಲಿಲ್ಲ. ಕಳೆದ ವರ್ಷವಷ್ಟೇ 'UI' ಸಿನಿಮಾವನ್ನು ಅನೌನ್ಸ್ ಮಾಡುವುದಾಗಿ ಘೋಷಿಸಿದ್ದರು. ಇದೂವರೆಗೂ ಉಪ್ಪಿ ನಿರ್ದೇಶಿಸಿದ ಸಿನಿಮಾಗಳಲ್ಲೇ ದುಬಾರಿ ಇದೆ. ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ಅಲ್ಲದೆ, ತಾಂತ್ರಿಕವಾಗಿಯೂ ಈ ಸಿನಿಮಾ ಅಡ್ವಾನ್ಸ್ ಆಗಿರುತ್ತೆ ಅನ್ನೋದು ಗೊತ್ತಾಗಿದೆ. ಸದ್ಯಕ್ಕೀಗ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
'UI' ಅಡ್ಡಾದಲ್ಲಿ ಏನು ನಡೀತಿದೆ?
ರಿಯಲ್‌ಸ್ಟಾರ್ ಉಪೇಂದ್ರ ನಿರ್ದೇಶಿಸುತ್ತಿರುವ 'UI' ಸಿನಿಮಾ ಎಡಿಟಿಂಗ್ ಕೆಲಸ ಆರಂಭ ಆಗಿದೆ. ಸ್ವತ: ರಿಯಲ್‌ಸ್ಟಾರ್ ಉಪೇಂದ್ರ ಅವರೇ ಎಡಿಟಿಂಗ್ ಮಾಡಿಸುತ್ತಿದ್ದಾರೆ. ಇಂದಿನಿಂದ (ಜುಲೈ 31) ಸ್ಟುಡಿಯೋದಲ್ಲಿ ಎಡಿಟಿಂಗ್ ಕೆಲಸ ಆರಂಭ ಆಗಿದೆ. ಉಪ್ಪಿ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಆದಷ್ಟು ಬೇಗ ಮುಗಿಸುವುದಕ್ಕೆ ಸಜ್ಜಾಗಿದ್ದಾರೆ. ಸ್ಟುಡಿಯೊದಲ್ಲಿ ಉಪೇಂದ್ರ ಜೊತೆ ನಿರ್ಮಾಪಕ ಕೆಪಿ ಶ್ರೀಕಾಂತ್ ಕೂಡ ಕಾಣಿಸಿಕೊಂಡಿದ್ದು, ಸಿನಿಮಾ ಬಗ್ಗೆ ಕೌತುಕರಾಗಿದ್ದಾರೆ. ಈ ವಿಡಿಯೋದಲ್ಲಿ ಸಿನಿಮಾ ಸೀನ್‌ಗಳನ್ನು ನೋಡಿ ನಿರ್ಮಾಪಕರು ಪುಳಕಿರಾಗಿದ್ದು ಎದ್ದು ಕಾಣುತ್ತಿದೆ.

ಹಿಂದೆಂದೂ ಕನ್ನಡದಲ್ಲಿ ಈ ಟೆಕ್ನಾಲಜಿ ಬಳಸಿಲ್ಲ
ಉಪೇಂದ್ರ ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಅನ್ನು ಬಳಸಿದ್ದಾರೆ. ಸುಮಾರು 200 ಕ್ಯಾಮರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಪ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ಈ ತಂತ್ರಜ್ಞಾನವನ್ನು ಜೇಮ್ಸ್ ಕೆಮರಾನ್ 'ಅವತಾರ್ 2' ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಅನ್ನು ಬಳಸಲಾಗಿದೆ.
'UI' ಸಿನಿಮಾ ರಿಲೀಸ್ ಯಾವಾಗ?
ಉಪೇಂದ್ರ ನಿರ್ದೇಶಿಸುತ್ತಿರುವ 'UI' ಸಿನಿಮಾ ರಿಲೀಸ್ ಯಾವಾಗ ಅನ್ನೋ ಪ್ರಶ್ನೆ ಎದ್ದಿದೆ. ಮೂಲಗಳ ಪ್ರಕಾರ, ಈ ಸಿನಿಮಾ 2023 ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ. ಸದ್ಯ ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ದುಬಾರಿ ಸಿನಿಮಾಗಳಲ್ಲಿ 'UI' ಕೂಡ ಒಂದು. ತನ್ನ ಕನಸನ್ನು ಸಿನಿಪ್ರಿಯರು ಓಟಿಟಿಯಲ್ಲಿ ಅಲ್ಲದೆ ಥಿಯೇಟರ್‌ನಲ್ಲೇ ಸಿನಿಮಾ ನೋಡಬೇಕು ಅಂತ ಉಪ್ಪಿ ಆಸೆ ಪಟ್ಟು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಎಡಿಟಿಂಗ್ ಹಂತದಲ್ಲಿದ್ದು, ಮುಂದಿನ ತಿಂಗಳಿಂದ ಪ್ರಚಾರ ಶುರು ಮಾಡುವ ಸಾಧ್ಯತೆಯಿದೆ.


Click it and Unblock the Notifications











