ಉಪ್ಪಿ ಆಯ್ತು.. ಈಗ 'I am God' ಅಂತಿರೋ ಶಿಷ್ಯ; ಟ್ರೈಲರ್ ನೋಡಲು ಮೈಸೂರಿಗೆ ಬಂದ ರಿಯಲ್ ಸ್ಟಾರ್

"I am God.. God is Great" ಇದು ಉಪ್ಪಿಯನ್ನು ಸೂಪರ್‌ಸ್ಟಾರ್ ಮಾಡುವುದಕ್ಕೆ ಅಡಿಪಾಯ ಹಾಕಿದ ಡೈಲಾಗ್. ಇಂದಿನ ಪೀಳಿಗೆಗೂ ಈ ಡೈಲಾಗ್ ಅಂದರೆ ಇಷ್ಟ. ಅಂದು ಉಪ್ಪಿ 'I am God' ಅಂದು ಕ್ರೇಜ್ ಹುಟ್ಟಾಕಿದ್ದರು. ಇಂದು ಅವರ ಶಿಷ್ಯ 'I am God' ಎನ್ನುತ್ತಾ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಗುರುನಾ? ಶಿಷ್ಯನಾ? ಎಂದು ನೋಡುವ ಸಮಯ ಬಂದಿದೆ.

'I am God' ಎನ್ನುತ್ತಾ ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಉಪ್ಪಿಯ ಶಿಷ್ಯ ರವಿ ಗೌಡ ಇಳಿದಿದ್ದಾರೆ. ಈ ಸಿನಿಮಾಗೆ ಹೀರೋನೂ ಅವರೇ. ನಿರ್ದೇಶನ, ಹೀರೋ ಅಷ್ಟೇ ಅಲ್ಲ. ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದೂ ಕೂಡ ಇವರೇ. ಹೀಗಾಗಿ 'I am God' ಬಗ್ಗೆ ಪ್ರೇಕ್ಷಕರಿಗಷ್ಟೇ ಅಲ್ಲ. ಸ್ವತ: ರಿಯಲ್ ಸ್ಟಾರ್ ಉಪೇಂದ್ರ ಅವರಿಗೂ ಕುತೂಹಲವಿದೆ. ಹೀಗಾಗಿ ನೆಚ್ಚಿನ ಶಿಷ್ಯನಿಗಾಗಿ ಮೈಸೂರಿನವರೆಗೂ ಬಂದಿದ್ದಾರೆ.

Real Star Upendra Supported his assistant Ravi Gowda debut movie I am God trailer launch in Mysore

ಈಗಾಗಲೇ ಈ ಸಿನಿಮಾದ ಎರಡು ಹಾಡುಗಳು ರಿಲೀಸ್ ಆಗಿವೆ. ಈ ಹಾಡುಗಳ ಮೂಲಕ ಸಿನಿ ಪ್ರಿಯರ ಗಮನ ಸೆಳೆದಿದ್ದಾರೆ. ಇನ್ನೇನು ಸಿನಿಮಾ ಕೂಡ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಹೀಗಾಗಿ ರವಿ ಗೌಡ ಸಿನಿಮಾದ ಪ್ರಚಾರವನ್ನು ಭರ್ಜರಿಯಾಗಿಯೇ ಶುರು ಮಾಡಿದ್ದಾರೆ. ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ಖುದ್ದಾಗಿ ಮೈಸೂರಿಗೆ ತೆರಳಿ ಈ ಸಿನಿಮಾದ ಟ್ರೈಲರ್ ಲಾಂಚ್ ಮಾಡಿಕೊಟ್ಟಿದ್ದಾರೆ. ಆ ಟ್ರೈಲರ್ ಪ್ರೇಕ್ಷಕರಿಗೆ ಸೆಳೆಯುತ್ತಿದೆ.

'I am God' ಅಂದ ತಕ್ಷಣ ರಿಯಲ್ ಸ್ಟಾರ್ ಉಪೇಂದ್ರ ಅವರೇ ನೆನಪಾಗೋದು. ಇನ್ನು ನಟ ರವಿ ಗೌಡ ಕೂಡ ಉಪೇಂದ್ರ ಅವರ ಗರಡಿಯಲ್ಲಿ ಪಳಗಿರುವ ಪ್ರತಿಭೆ. ಹೀಗಿರುವಾಗ ಅವರ ಆಲೋಚನೆ ಹೇಗಿರುತ್ತೆ ಅನ್ನೋದನ್ನು ನೋಡುವ ಕುತೂಹಲ ಸಿನಿಮಾ ಮಂದಿಯಲ್ಲಿದೆ. ಉಪ್ರೇಂದ್ರ ನಿರ್ದೇಶಿಸಿದ 'ಉಪ್ಪಿ 2' ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಈ ಸಿನಿಮಾ ಮಾಡಿದ ಬಳಿಕವೇ ಅವರಿಗೂ ನಿರ್ದೇಶನ ಮಾಡಬೇಕು ಅಂತ ಅನಿಸಿದ್ದು. ಹೀಗಾಗಿ 'I am God' ಸಿನಿಮಾ ನಿರ್ದೇಶನದ ಜೊತೆಗೆ ನಟನೆಗೆ ಇಳಿದಿದ್ದಾರೆ. ಡೈರೆಕ್ಟರ್ ಆಗಿ, ಹೀರೋ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಈ ಸಿನಿಮಾದ ಹೀರೋ ಕಮ್ ನಾಯಕ ರವಿ ಗೌಡ ತಮ್ಮ ಗುರುಗಳಾದ ನಟ ಉಪೇಂದ್ರ ಕೈಯಲ್ಲೇ ಟ್ರೈಲರ್ ರಿಲೀಸ್ ಮಾಡಿಸಿದ್ದಾರೆ. ಶಿಷ್ಯನ ಟ್ರೈಲರ್‌ಗೆ ರಿಯಲ್ ಸ್ಟಾರ್ ಉಪೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ಟ್ರೈಲರ್ ರಿಲೀಸ್ ಲಾಂಚ್ ಇವೆಂಟ್‌ನಲ್ಲಿ ತಮ್ಮ ಶಿಷ್ಯನನ್ನು ಹೊಗಳಿದ್ದಾರೆ. 'ಉಪ್ಪಿ-2' ಸಿನಿಮಾ ಶೂಟಿಂಗ್ ಸಮಯದಲ್ಲಿ ಇಂಟ್ರೆಸ್ಟ್‌ ಕೊಟ್ಟು ಕಲಿತಿಕೊಳ್ತಿದ್ರು ಅನ್ನೋದನ್ನ ಅನ್ನೋದನ್ನು ಹೇಳಿದ್ದಾರೆ.

ಇದೇ ವೇಳೆ "ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದಾಗ ಯಾವುದೇ ಸಿನಿಮಾ ಯೂನಿವರ್ಸಿಟಿ ಬೇಡ ಉಪ್ಪಿ ಸರ್‌ ಹತ್ತಿರ ಹೋಗೋದು ಬೆಸ್ಟ್‌ ಅಂತ ಹೋಗಿ ರಿಕ್ವೆಸ್ಟ್‌ ಮಾಡಿ ಸೇರಿಕೊಂಡೆ" ಎಂದಿದ್ದಾರೆ. ಹಾಗೇ "I'm God' ಸಿನಿಮಾ ಕಷ್ಟ ಪಟ್ಟು ಮಾಡಿದ್ದೇವೆ ಬಂದು ನೋಡಿ ಅಂತ ನಾವು ಹೇಳಲ್ಲ. ಆದರೆ ನಿಮ್ಮ ಗುಂಪಲ್ಲಿ ಪ್ರತಿ ಶುಕ್ರವಾರ ಕನ್ನಡ ಸಿನಿಮಾ ನೋಡುವ ಒಬ್ಬ ವ್ಯಕ್ತಿ ಅಂತು ಇದ್ದೇ ಇರ್ತಾರೆ. ಅವರಿಗೆ ಕಾಲ್‌ ಮಾಡಿ ಕೇಳಿ 'I am God' ಸಿನಿಮಾ ಹೇಗಿದೆ ಅಂತ. ಅಷ್ಟೇ ಸಾಕು ನಮಗೆ" ಎಂದು ರವಿ ಗೌಡ ಹೇಳಿದ್ದಾರೆ.

ಇನ್ನು 'I am God' ಟ್ರೈಲರ್‌ ನೋಡಿದ್ಮೇಲೆ ಇದೊಂದು ‌ಸಸ್ಪೆನ್ಸ್-ಥ್ರಿಲ್ಲರ್ ಲವ್‌ ಸ್ಟೋರಿ ಎನ್ನುವ ಸುಳಿವು ಸಿಕ್ಕಿದೆ. ಉಪೇಂದ್ರ ಅವರ ಶಿಷ್ಯ ಆಗಿರೋದ್ರಿಂದ ಉಪ್ಪಿ ಸ್ಟೈಲ್‌ ಆಫ್‌ ಮೇಕಿಂಗ್‌ 'I am God' ಸಿನಿಮಾದಲ್ಲೂ ಕಾಣಬಹುದು. ಟ್ರೈಲರ್ ಆ ಫೀಲ್ ಕೊಡುತ್ತಿದೆ. ಇನ್ನು ರವಿ ಗೌಡ ಜೊತೆ ನಾಯಕಿಯಾಗಿ ವಿಜೇತಾ ನಟಿಸಿದ್ದಾರೆ. ಹಾಗೇ ರವಿಶಂಕರ್‌, ಅವಿನಾಶ್‌ , ಅರುಣ ಬಾಲರಾಜ್‌ ಹಾಗೂ ನಿರಂಜನ್‌ ಕುಮಾರ್‌ ಅಭಿನಯ ಮಾಡಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ, ಜಿತಿನ್‌ ದಾಸ್‌ ಕ್ಯಾಮೆರಾವರ್ಕ್‌ ಮಾಡಿದ್ದಾರೆ. ಇದೇ ನವೆಂಬರ್‌ 7 ರಂದು ರಾಜ್ಯಾದ್ಯಂತ 'I am God' ಸಿನಿಮಾ ತೆರೆಗೆ ಬರ್ತಿದೆ.

More from Filmibeat

English summary
Real Star Upendra Supported his assistant Ravi Gowda debut movie I am God trailer launch in Mysore.
Read more about: upendra kannada movie mysore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X