ನಟಿ ಮಾನ್ವಿತಾ ಕೈ-ಕಾಲಿಗೆ ಪೆಟ್ಟಾಗಿರುವುದು ನಿಜಾನ?

Recommended Video

ಕೈ ಕಾಲಿಗೆ ಪೆಟ್ಟಾಗಿದ್ರೂ ಡ್ಯಾನ್ಸ್ ಮಾಡಿದ ಮಾನ್ವಿತಾ | FILMIBEAT KANNADA

ಕನ್ನಡ ನಟಿ ಮಾನ್ವಿತಾ ಕಾಮತ್ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಸಿನಿಮಾದ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಜನವರಿ 24 ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ವಸಿಷ್ಠ ಸಿಂಹ ನಾಯಕರಾಗಿದ್ದು, ಮಾನ್ವಿತಾ ನಾಯಕಿಯಾಗಿದ್ದಾರೆ.

ಈ ನಡುವೆ ಮಾನ್ವಿತಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಶೇರ್ ಮಾಡಿದ್ದಾರೆ. ಈ ವಿಡಿಯೋ ಗಮನಿಸಿದ್ರೆ ರಾಜಸ್ತಾನ ಅಂತಾ ಪಂಜಾಬಿ ವಾತಾವರಣ ಹೊಂದಿರುವ ಸ್ಥಳದಲ್ಲಿ ತಮಟೆ ಸದ್ದಿಗೆ ಸ್ಟೆಪ್ ಹಾಕಿದ್ದಾರೆ.

ಬಹಳ ಖುಷಿಖುಷಿಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ತಮ್ಮ ಸ್ನೇಹಿತರಿಬ್ಬರನ್ನು ಟ್ಯಾಗ್ ಮಾಡಿರುವ ಮಾನ್ವಿತಾ, ನಿಮ್ಮ ಹುಟ್ಟುಹಬ್ಬಕ್ಕೆ ಇದು ಅರ್ಪಣೆ ಎಂದು ಕ್ಯಾಪ್ಷನ್ ಹಾಕಿದ್ದಾರೆ.

Really Manvitha Harish injured?

ಆದರೆ, ಈ ಖುಷಿಯಲ್ಲೂ ಅಭಿಮಾನಿಗಳಿಗೆ ಒಂದು ಅನುಮಾನ ಮೂಡಿದೆ. ಮಾನ್ವಿತಾ ಅವರ ಕೈಗೆ ಮತ್ತು ಕಾಲಿಗೆ ಪೆಟ್ಟಾಗಿರುವಂತೆ ಕಂಡುಬಂದಿದ್ದು, ಅದಕ್ಕೆ ಬ್ಯಾಂಡೇಜ್ ಹಾಕಿದ್ದಾರೆ. ಕತ್ತಿಗೂ ಗಾಯವಾಗಿರುವಂತೆ ಕಾಣುತ್ತಿದೆ. ಇದು ನಿಜಕ್ಕೂ ಆಗಿದೆಯೇ ಅಥವಾ ಶೂಟಿಂಗ್ ಕಾರಣದಿಂದ ರೆಡಿಯಾಗಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಇನ್ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಕೂಡ ಮಾನ್ವಿತಾ ಅವರನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಮಾನ್ವಿತಾ ಏನಾಯ್ತು? ಅಪಘಾತ ಆಯ್ತಾ? ಗಾಯ ಆಗಿದ್ಯಾ? ಎಂದೆಲ್ಲಾ ಕೇಳುತ್ತಿದ್ದಾರೆ.

'ಇಂಡಿಯಾ ವರ್ಸಸ್ ಇಂಗ್ಲೆಂಡ್' ಸಿನಿಮಾ ಬಿಟ್ಟರೆ, ಶಿವ 143, ರಾಜಸ್ತಾನ ಡೈರೀಸ್, ರೈನ್ ಬೋ ಎಂಬ ಚಿತ್ರಗಳು ಮಾನ್ವಿತಾ ಕಾಮತ್ ಕೈಯಲ್ಲಿದೆ.

More from Filmibeat

English summary
Kannada actress Manvitha kamath shared dance video. but in this video manvitha looking like injured. really its true?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X