ಅಂಬಿಗಿಂತಲೂ ಮುನ್ನ 'ಅಂತ'ದಲ್ಲಿ ಅಣ್ಣಾವ್ರು ಇಲ್ಲ ವಿಷ್ಣುದಾದ ನಟಿಸ್ಬೇಕಿತ್ತು: ಅಂಬಿ ಕೈ ಸೇರಿದ್ದೇ ರೋಚಕ

ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳಲ್ಲೊಂದು 'ಅಂತ'. ಮಂಡ್ಯದ ಗಂಡಿಗೆ ರೆಬೆಲ್‌ಸ್ಟಾರ್ ಅನ್ನೋ ಪಟ್ಟ ಕೊಟ್ಟಿದ್ದು ಕೂಡ ಇದೇ ಸಿನಿಮಾ. ಅಷ್ಟೇ ಯಾಕೆ ಅಂಬರೀಶ್‌ಗೆ ಸ್ಟಾರ್ ಪಟ್ಟ ಕೊಟ್ಟಿದ್ದೂ ಕೂಡ ಇದೇ ಸಿನಿಮಾ.

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ 'ಅಂತ' ಇಡೀ ದೇಶದಲ್ಲೇ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಅಷ್ಟೇ ಅಲ್ಲದೆ ಬಾಕ್ಸಾಫೀಸ್‌ನಲ್ಲೂ ಧೂಳೆಬ್ಬಿಸಿತ್ತು. ಆದರೆ, ಈ ಸಿನಿಮಾ ಕಥೆ ಹುಟ್ಟಿದ್ದು, ಅದನ್ನು ಸಿನಿಮಾ ರೂಪಕ್ಕೆ ತಂದಿದ್ದು ಎಲ್ಲದರ ಹಿಂದೆನೂ ಒಂದು ರೋಚಕ ಕಥೆಯಿದೆ.

Reason why Ambareesh acted in Antha movie instead of Rajkumar or Vishnuvardhan

ಅಷ್ಟಕ್ಕೂ ರೆಬೆಲ್ ಸ್ಟಾರ್ ಅಂಬರೀಶ್‌ಗೂ ಮುನ್ನ 'ಅಂತ' ಸಿನಿಮಾ ಕಥೆಯನ್ನು ಇಬ್ಬರು ಸೂಪರ್‌ಸ್ಟಾರ್‌ಗೆ ಹೇಳಬೇಕಿತ್ತು. ಅವರೇ ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್. ಆದರೆ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರೇ ಇಬ್ಬರಿಗೂ ಈ ಸಿನಿಮಾ ಮಾಡಬೇಕು ಅಂತ ಹೇಳಿದ್ದರು. ಈ ಸೀಕ್ರೆಟ್ ಅನ್ನು ಮಾಣಿಕ್ಯ ಯೂಟ್ಯೂಬ್ ಚಾನೆಲ್‌ಗೆ ಜೊತೆ ಹಂಚಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

'ಅಂತ' ಸಿನಿಮಾದ ಕಥೆ ಹುಟ್ಟಿದ್ದೇಗೆ?

ರಾಜೇಂದ್ರ ಸಿಂಗ್ ಬಾಬು ಸಿಕ್ಕಾಪಟ್ಟೆ ಕಥೆ, ಕಾದಂಬರಿಯನ್ನು ಓದುತ್ತಿದ್ದರು. ಅದರಲ್ಲೂ ಸುಧಾ ಮ್ಯಾಗಜೀನ್‌ನಲ್ಲಿ ಬರುತ್ತಿದ್ದ ಕಥೆಗಳನ್ನು ಬಿಡದೆ ಓದುತ್ತಿದ್ದರು. ಹೀಗೆ ಸಿಕ್ಕಿದ ಕಥೆಯೇ 'ಅಂತ'. ಎಲ್ಲರೂ ಈ ಕಥೆಯನ್ನು ಸಿನಿಮಾ ಮಾಡೋದು ಬೇಡ ಅಂತ ಹೇಳಿದ್ದರಂತೆ. ಆದರೆ, ರಾಜೇಂದ್ರ ಸಿಂಗ್ ಬಾಬುನೇ ಟ್ರೈ ಮಾಡಿ ನೋಡುವ ಅಂತ ಮಾಡಿದ್ದೇ 'ಅಂತ'. ಈ ಪ್ರಯತ್ನದ ಬಗ್ಗೆ ಮಾಣಿಕ್ಯ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಹೀಗೆ ಮಾಹಿತಿ ನೀಡಿದ್ದಾರೆ.

Reason why Ambareesh acted in Antha movie instead of Rajkumar or Vishnuvardhan

"ಅಂತ ಎಲ್ಲರೂ ಓದಿದಾಗ, ಕಷ್ಟ ಸಿನಿಮಾ ಮಾಡೋದು ಅಂತ ಹೇಳಿದ್ರು. ಇಲ್ಲಾ ನೋಡೋಣ ಏನಕ್ಕೆ ಕಷ್ಟ ಆಗುತ್ತೆ. ಪ್ರಯತ್ನ ಪಡೋಣ ಅಂತ ಹೇಳಿ, ನಾನು ಎರಡು ಬಾರಿ ಓದಿದೆ. ಆಗ ಎಂ ಬಿ ಸಿಂಗ್ ಸುಧಾದಲ್ಲಿ ಇದ್ದರು. ನನಗೂ ಸುಧಾಗೂ ತುಂಬಾ ಹತ್ತಿರದ ಲಿಂಕ್. ಯಾಕಂದ್ರೆ, ಎಂ ಬಿ ಸಿಂಗ್ ನಮ್ಮ ಹತ್ತಿರದ ಸಂಬಂಧಿ. ಅಷ್ಟೊತ್ತಿಗೆ ಏನಾಗಿತ್ತು, ಯಾರು ಸುಧಾದಲ್ಲಿ ಬಂದ ಕಥೆಗಳನ್ನು ಸಿನಿಮಾ ಮಾಡುತ್ತಾರೋ, ಬಂಗಾರದ ಮನುಷ್ಯ ಆಗಿರಬಹುದು, ಎಡಕಲ್ಲು ಗುಡ್ಡ ಆಗಿರಬಹುದು, ಹೊಂಬಿಸಿಲು ಆಗಿರಬಹುದು ಇಂತಹ ಹಲವಾರು ಕಥೆಗಳು ಸುಧಾದಿಂದ ಬಂದಿತ್ತು." ಎನ್ನುತ್ತಾರೆ ರಾಜೇಂದ್ರ ಸಿಂಗ್ ಬಾಬು.

ರಾಜ್‌-ವಿಷ್ಣುಗೆ 'ಅಂತ' ಮಾಡ್ಬೇಡಿ ಎಂದಿದ್ದೇಕೆ?

'ಅಂತ' ಸಿನಿಮಾದ ಕಥೆಯನ್ನು ಅಣ್ಣಾವ್ರಿಗೆ ಮೊದಲು ಹೇಳಿದ್ದರು. ಆದರೆ, ವರ್ಕ್‌ಔಟ್ ಆಗಿಲ್ಲ. ಯಾಕೆ ಅನ್ನೋದನ್ನು ರಾಜೇಂದ್ರ ಸಿಂಗ್ ಬಾಬು ರಿವೀಲ್ ಮಾಡಿದ್ದಾರೆ. "ಅಂತ ನನಗೆ ಕೊಟ್ಮೇಲೆ, ದೊರೈ ಭಗವಾನ್ ಅವರು ರಾಜ್‌ಕುಮಾರ್ ಅವರಿಗೆ ಕೇಳಿದ್ರು. ನಾನು ರಾಜ್‌ಕುಮಾರ್ ಹತ್ತಿರ ಹೋಗಿದ್ದೆ. ಆಗ ನಾನು ರಾಜ್‌ಕುಮಾರ್ ಅವರಿಗೆ ಹೇಳಿದೆ ಸರ್ ನಿಮಗೆ ಇಷ್ಟೊಂದು ಮಾಸ್ ಫ್ಯಾನ್ಸ್ ಇದ್ದಾರೆ. ಈತರ ಕ್ಯಾರೆಕ್ಟರ್ ಮಾಡಿದ್ರೆ ಅದು ವರ್ಕ್‌ಔಟ್ ಆಗಲ್ಲ." ಎಂದು ಅಣ್ಣಾವ್ರಿಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ್ರಂತೆ.

ಇನ್ನೊಂದು ಕಡೆ ವಿಷ್ಣುವರ್ಧನ್ ಅವರಿಗೂ 'ಅಂತ' ಅಂತ ಸಲಹೆ ನೀಡಿದ್ದರು. "ವಿಷ್ಣುಗೂ ಹೇಳಿದೆ, ಬೇಡ ನೀನು ಈಗಾಗಲೇ ಸಾಹಸ ಸಿಂಹ ಆಗಿಬಿಟ್ಟಿದ್ದೀಯ. ಈತರ ಒಂದು ಚೇರ್‌ನಲ್ಲಿ ಕಟ್ಟಾಕ್ಬಿಟ್ಟು ಹೆಂಡ್ತಿನ ಹೊಡೆದಾಕುತ್ತಿದ್ದಾಗ ಸುಮ್ಮನೆ ಕೂತಿದ್ರೆ, ಮಾಸ್ ಆಡಿಯನ್ ಒಪ್ಪುವುದಿಲ್ಲಪ್ಪ. ಏನೂ ತಪ್ಪು ತಿಳಿದುಕೊಳ್ಳಬೇಡ ಇನ್ನೊಂದು ಕಥೆ ಮಾಡೋಣ ಅಂತ ಹೇಳಿದೆ." ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

"ಕಾರಣ ಇಷ್ಟೇನೆ ಇಲ್ಲಿ ಕ್ಯಾರೆಕ್ಟರ್ ಮುಖ್ಯ ಆಗ್ತಾರೆ ವಿನ: ನಟರು ಮುಖ್ಯ ಆಗಲ್ಲ. ನಟ ಕೆಲವು ಪಾತ್ರಗಳಿಗೆ ಮುಖ್ಯ ಆಗುತ್ತಾರೆ. ಕೆಲವಕ್ಕೆ ಅಲ್ಲ. ಈಗ 'ಅಂತ'ಗೆ ಅಂಬರೀಶ್ ಆಗಿದ್ದಕ್ಕೆ ಆಯ್ತು. ಯಾಕಂದ್ರೆ, ಆ ಕ್ಯಾರೆಕ್ಟರ್‌ಗೆ ಏನೂ ಬ್ಯಾಕ್‌ಗ್ರೌಂಡ್ ಇರಲಿಲ್ಲ. ಈಗ ಅದೇ ಜಾಗದಲ್ಲಿ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಅವರನ್ನು ಕೂರಿಸಿದ್ರೆ, ಜನ ಏನೇನೋ ಕಲ್ಪನೆ ಮಾಡಿಕೊಳ್ಳುತ್ತಾರೆ. ಎದ್ದು ಬಿಚ್ಚಾಕಿ ಹೊಡೆದಾಕಿ ಬಿಡುತ್ತಾರೆ ಅಂತ. ಆದ್ದರಿಂದ ಪಾತ್ರ ಹೇಗೆ ಕೊಡಬೇಕು ಅನ್ನೋದು ಡೈರೆಕ್ಟರ್ ಜಡ್ಜ್‌ಮೆಂಟ್ ಬರುತ್ತೆ." ಎಂದು ರಾಜೇಂದ್ರ ಸಿಂಗ್ ಬಾಬು ರಿವೀಲ್ ಮಾಡಿದ್ದಾರೆ.

More from Filmibeat

English summary
Reason why Ambareesh acted in Antha movie instead of Rajkumar or Vishnuvardhan. Antha movie director Rajendra Singh Babu revealed something about Antha before approaching Ambareesh, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X