Flashback, 'ಕಸ್ತೂರಿ ನಿವಾಸ' ಕ್ಲೈಮ್ಯಾಕ್ಸ್: ಇಕ್ಕಟ್ಟಿನಲ್ಲಿ ಸಿಲುಕಿದ್ದ ರಾಜಕುಮಾರ್

Recommended Video

Dr Rajkumar was fully tensed on that movie | FILMIBEAT KANNADA

ಕೆಲವೊಂದು ಸಿನಿಮಾಗಳು ಹಾಗೇ.. ಅದನ್ನು ರಿರಿಮೇಕ್ ಮಾಡೋಕೆ ಹೋಗಬಾರದು. ಅದನ್ನು ನೋಡಿ ಆನಂದಿಸಬೇಕು. ಆ ಸಾಲಿನಲ್ಲಿ ನಿಲ್ಲುವ ಸಿನಿಮಾ, ಡಾ.ರಾಜಕುಮಾರ್ ವೃತ್ತಿ ಬದುಕಿನ ಬ್ಲಾಕ್ ಬಸ್ಟರ್ 'ಕಸ್ತೂರಿ ನಿವಾಸ'.

ಕೆ.ಸಿ.ಎನ್ ಗೌಡ ನಿರ್ಮಾಣದ, ದೊರೆ-ಭಗವಾನ್ ನಿರ್ದೇಶನದ ಈ ಚಿತ್ರ 1971ರಲ್ಲಿ ಬಿಡುಗಡೆಯಾಗಿತ್ತು. ನವೆಂಬರ್ 2014ರಲ್ಲಿ ಈ ಚಿತ್ರ ಕಲರೀಕರಣಗೊಂಡು ಮತ್ತೆ ಮರು ಬಿಡುಗಡೆಯಾಯಿತು.

ಕಲರೀಕರಣಗೊಂಡು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಆ ವೇಳೆ, ಬಿಡುಗಡೆಯಾದ ಹೊಸ ಸಿನಿಮಾಗಳು ಕಸ್ತೂರಿನಿವಾಸದ ಮುಂದೆ ಸೋತು ಹೋಯಿತು.

ಕಲರೀಕರಣಗೊಂಡ ಕಸ್ತೂರಿ ನಿವಾಸ ಸಿನಿಮಾವನ್ನು ಜನ ಕುಟುಂಬ ಸಮೇತ ನೋಡಲು ಆಗಮಿಸುತ್ತಿದ್ದದ್ದು, ರಾಜ್ ಚಿತ್ರಕ್ಕಿದ್ದ ಅಗಾಧ ಶಕ್ತಿಯನ್ನು ತೋರಿಸುವಂತಿತ್ತು. ಈ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಉಂಟಾದ ಭಿನ್ನಾಭಿಪ್ರಾಯದ ಬಗ್ಗೆ ಹರಿದಾಡುತ್ತಿದ್ದ ಸುದ್ದಿ..

ಶಿವಾಜಿ ಗಣೇಶನ್ ಅವರಿಗೆ ಕಥೆಯನ್ನು ಮೊದಲು ಹೇಳಲಾಗಿತ್ತು

ಶಿವಾಜಿ ಗಣೇಶನ್ ಅವರಿಗೆ ಕಥೆಯನ್ನು ಮೊದಲು ಹೇಳಲಾಗಿತ್ತು

ತಮಿಳಿನ ಜಿ. ಬಾಲಸುಬ್ರಮಣ್ಯಂ ಅವರದ್ದು ಕಸ್ತೂರಿ ನಿವಾಸ ಸಿನಿಮಾದ ಕತೆ. ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಅವರಿಗೆ ಕಥೆಯನ್ನು ಮೊದಲು ಹೇಳಲಾಗಿತ್ತು. ಆದರೆ, ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನಾಯಕ ಸಾಯುವ ಈ ಕತೆಯನ್ನು ಹೊಂದಿರುವುದರಿಂದ, ಶಿವಾಜಿ ಗಣೇಶನ್ ಈ ಸಿನಿಮಾ ಮಾಡಲು ಒಪ್ಪಿರಲಿಲ್ಲ. ಆಮೇಲೆ, ದೊರೆ-ಭಗವಾನ್ ಗೆ ಸಿನಿಮಾ ಕಥೆಯನ್ನು ಹೇಳಿ, ಕಸ್ತೂರಿ ನಿವಾಸ ಸೆಟ್ಟೇರಿತು. (ಚಿತ್ರದಲ್ಲಿ: ಶಿವಾಜಿ ಗಣೇಶನ್)

ಡಾ.ರಾಜ್ ಅವರದ್ದು ರವಿವರ್ಮಾ ಪಾತ್ರಧಾರಿ

ಡಾ.ರಾಜ್ ಅವರದ್ದು ರವಿವರ್ಮಾ ಪಾತ್ರಧಾರಿ

ಸಿನಿಮಾದಲ್ಲಿ ಡಾ.ರಾಜ್ ಅವರದ್ದು ರವಿವರ್ಮಾ ಪಾತ್ರಧಾರಿ ಮತ್ತು ಬೆಂಕಿಪೆಟ್ಟಿಗೆ ಕಾರ್ಖಾನೆಯ ಮಾಲೀಕ, ಆಗರ್ಭ ಶ್ರೀಮಂತ ಮತ್ತು ಕೊಡುಗೈ ದಾನಿ. ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಂಬಿಗಸ್ಥ ನೌಕರ, ಇನ್ನೊಂದು ಕಂಪೆನಿಯನ್ನು ಓಪನ್ ಮಾಡುವುದರ ಮೂಲಕ, ರಾಜ್ ಕಂಪೆನಿ ನಷ್ಟದಲ್ಲಿ ಸಾಗಿ, ಎಲ್ಲವನ್ನೂ ಕಳೆದುಕೊಂಡು, ಸಾವನ್ನಪ್ಪುತ್ತಾನೆ.

ಕಸ್ತೂರಿ ನಿವಾಸ ಕ್ಲೈಮ್ಯಾಕ್ಸ್

ಕಸ್ತೂರಿ ನಿವಾಸ ಕ್ಲೈಮ್ಯಾಕ್ಸ್

ಕಸ್ತೂರಿ ನಿವಾಸ ಸಿನಿಮಾದ ಅಂತ್ಯ ಕುರಿತಂತೆ ಚಿತ್ರತಂಡ ಮತ್ತು ವಿತರಕರಲ್ಲಿ ಭಾರೀ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಚಿತ್ರದಲ್ಲಿ ಅಣ್ಣಾವ್ರು ನಿರ್ವಹಿಸಿದ ಪಾತ್ರವು ನಿಧನವಾಗುವುದರ ಮೂಲಕ ಅಂತ್ಯವಾಗುತ್ತದೆ. ರಾಜಕುಮಾರ್ ಅವರನ್ನು ಹೀಗೆ ನೋಡಲು ಜನರು ಇಚ್ಛಿಸುವುದಿಲ್ಲ. ಈ ಸಿನಿಮಾ ಸೋಲುತ್ತದೆ ಎಂದು ಪ್ರೀಮಿಯರ್ ಶೋ ನೋಡಿದವರು ಪ್ರತಿಪಾದಿಸಿದ್ದರು.

ವರದಪ್ಪ ಅವರಿಗೆ, ನಡೆದ ಎಲ್ಲಾ ಘಟನೆಯನ್ನು ವಿವರಣೆ

ವರದಪ್ಪ ಅವರಿಗೆ, ನಡೆದ ಎಲ್ಲಾ ಘಟನೆಯನ್ನು ವಿವರಣೆ

ಆದರೂ, ಕ್ಲೈಮ್ಯಾಕ್ಸ್ ಬಗ್ಗೆ ರಾಜ್ ಅವರಲ್ಲಿ ತುಂಬಾ ನಂಬಿಕೆಯಿತ್ತು. ಆದರೂ, ಚಿತ್ರ ನೋಡಿದ ಪ್ರೇಕ್ಷಕರಲ್ಲಿ ಯಾವರೀತಿಯ ಮನಃಸ್ಥಿತಿ ಇರುತ್ತದೆ ಎನ್ನುವುದನ್ನು ಅರಿಯಲು ಸಾಧ್ಯವಿಲ್ಲ ಎಂದು ವರದಪ್ಪ ಅವರಿಗೆ, ನಡೆದ ಎಲ್ಲಾ ಘಟನೆಯನ್ನು ರಾಜ್ ವಿವರಿಸಿದರು.

ಸಿನಿಮಾ ನಾನೊಮ್ಮೆ ನೋಡಿ, ಆಮೇಲೆ ಹೇಳುತ್ತೇನೆ

ಸಿನಿಮಾ ನಾನೊಮ್ಮೆ ನೋಡಿ, ಆಮೇಲೆ ಹೇಳುತ್ತೇನೆ

ಪ್ರೀಮಿಯರ್ ಶೋ ನೋಡದಿದ್ದ ವರದರಾಜ್, ಸಿನಿಮಾ ನಾನೊಮ್ಮೆ ನೋಡಿ, ಆಮೇಲೆ ಹೇಳುತ್ತೇನೆ ಎಂದು ವಿಶೇಷ ಪ್ರದರ್ಶನ ಹಾಕಿಸಿಕೊಂಡು ಸಿನಿಮಾ ನೋಡಿದರು. ಕ್ಲೈಮ್ಯಾಕ್ಸ್ ನೋಡಿದ ವರದಪ್ಪ, ಯಾವುದೇ ಬದಲಾವಣೆ ಬೇಡ, ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದರಂತೆ, ಅದಾದ ನಂತರ ಸಿನಿಮಾ, ರಿಲೀಸ್ ಆಗಿರುವುದು ಎನ್ನುವ ಮಾತು ಚಾಲ್ತಿಯಲ್ಲಿತ್ತು.

More from Filmibeat

English summary
Recalling Incident Climax Scene Of Dr Rajkumar's Blockbuster Kasturi Nivasa As Film Distributor Demanded To Change The Climax.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X