"ವಿರಾಟ್ ಕೊಹ್ಲಿಯ ಗೆಳತಿ ಎಂಬ ಐಡೆಂಟಿಟಿ ನನಗೆ ಬೇಕಾಗಿಲ್ಲ"- ಸಂಜನಾ ಗಲ್ರಾನಿ

ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಹಾಗಂತ ಆಕ್ಟಿವ್ ಆಗಿ ಇಲ್ಲ ಅಂತೇನೂ ಅಲ್ಲ. ಇತ್ತೀಚೆಗೆ ಬಿಗ್ ಬಾಸ್‌ ತೆಲುಗಿನ 9ನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಮತ್ತೆ ಸುದ್ದಿಯಲ್ಲಿದ್ದಾರೆ. ಸೀಸನ್‌ನ ಕೊನೆಯವರೆಗೂ ಸಂಜನಾ ಗಲ್ರಾನಿ ಪೈಪೋಟಿ ಕೊಡುತ್ತಲೇ ಇದ್ದರು. ಡ್ರಗ್ಸ್ ಪ್ರಕರಣದಲ್ಲಿ ಕ್ಲೀನ್ ಚೀಟ್‌ ಪಡೆದುಕೊಂಡ ಬಳಿಕ ಸಂಜನಾ ಮತ್ತೆ ಆಕ್ಟಿವ್ ಆಗಿದ್ದಾರೆ.

ಸಂಜನಾ ಗಲ್ರಾನಿ ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಕನ್ನಡ, ತೆಲುಗು ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಆದರೆ, ಮದುವೆ ಬಳಿಕ ಸಂಜನಾ ಚಿತ್ರರಂಗದಿಂದ ಹಿಂದೆ ಸರಿದರು. ಜೊತೆಗೆ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಕೊಂಡು ಅದರಿಂದ ಹೊರ ಬರುವುದಕ್ಕೆ ಒಂದಿಷ್ಟು ಸಮಯವನ್ನೂ ತೆಗೆದುಕೊಂಡರು. ಇತ್ತೀಚೆಗೆ ಸಿನಿಮಾಗಳಿಗಿಂತ ವಿವಾದದಲ್ಲಿಯೇ ಹೆಚ್ಚು ಗುರುತಿಸಿಕೊಂಡಿದ್ದ ಸಂಜನಾ ಮತ್ತೆ ಟ್ರ್ಯಾಕ್‌ಗೆ ಮರಳಿರೋದು ಅವರ ಅಭಿಮಾನಿಗಳಿಗೆ ಖುಷಿಕೊಟ್ಟಿದೆ.

Recently Sanjjanaa Galrani Opens up about her relationship with Indian star cricketer Virat Kohli

ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದ ವೇಳೆನೇ ಸಂಜನಾ ಗಲ್ರಾನಿ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದರು. ಆದರೆ, ಹಲವು ವರ್ಷಗಳು ಸಿನಿಮಾಗಳಲ್ಲಿ ನಟಿಸದೇ ಇದ್ದಿದ್ದರಿಂದ ಅವರನ್ನು ಮರೆತಿದ್ದರು. ಹೀಗಿದ್ದರೂ 'ಬಿಗ್ ಬಾಸ್ ತೆಲುಗು 9'ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದು ಅಚ್ಚರಿ ಮೂಡಿಸಿತ್ತು. ಹೀಗಾಗಿ ಈಗ ಮತ್ತೆ ಸಂಜನಾ ಹಾಗೂ ವಿರಾಟ್ ಕೊಹ್ಲಿಯ ಬಗ್ಗೆ ಚರ್ಚೆಯಾಗುತ್ತಿದ್ದು, ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರಿಬ್ಬರ ಸಂಬಂಧದ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಐಪಿಎಲ್ ಸಮಯದ ವೇಳೆ ಆರ್‌ಸಿಬಿ ತಂಡದ ಪರ ಅಂದಿನ ಕ್ಯಾಪ್ಟನ್ ಆಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆಗೆ ಗ್ರೌಂಡ್‌ನಲ್ಲಿ ನಿಂತಿದ್ದರು. ಆ ಫೋಟೋ ಆಗಾಗ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿತ್ತು. ಈ ಕಾರಣಕ್ಕೆ ಕೊಹ್ಲಿಯೊಂದಿಗೆ ಸಂಜನಾ ಪ್ರೇಮ ಸಂಬಂಧದಲ್ಲಿ ಇದ್ದಾರೆಂದು ವದಂತಿಗಳು ಹರಡಿ, ಬಾರಿ ಸುದ್ದಿ ಮಾಡಿದ್ದವು. ಸಂಜನಾ ಸುದ್ದಿಯಲ್ಲಿ ಇದ್ದಾಗ, ಈ ಫೋಟೊಗಳು ಮತ್ತೆ ವೈರಲ್ ಆಗುತ್ತವೆ. ಇತ್ತೀಚೆಗೆ ಬಿಗ್ ಬಾಸ್‌ ತೆಲುಗು 9ರಿಂದ ಹೊರಬಂದ ನಂತರವೂ ಈ ಸಂಬಂಧದ ಕುರಿತು ಸುದ್ದಿಗಳು ವೈರಲ್ ಆಗಿತ್ತು.

ಈ ಕುರಿತು ಸಂಜನಾ ಗಲ್ರಾನಿ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದಾರೆ. ಟಿವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂಜನಾ ಹೀಗೆ ಹೇಳಿದ್ದಾರೆ. "ಅವೆಲ್ಲವೂ ಗತಕಾಲದ ಮಾತುಗಳು. ಆ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ರೆಡಿಯಾಗಿತ್ತು. ನಾನು ಬೆಂಗಳೂರಿನವಳು ಹಾಗೇ ನಟಿಯಾಗಿದ್ದರಿಂದ ಆ ತಂಡವನ್ನು ಬೆಂಬಲಿಸುತ್ತಿದ್ದೆ." ಎಂದು ಸಂಜನಾ ಹೇಳಿಕೊಂಡಿದ್ದಾರೆ.

Recently Sanjjanaa Galrani Opens up about her relationship with Indian star cricketer Virat Kohli

ಹಾಗೇ "ಒಮ್ಮೆ ಆರ್‌ಸಿಬಿ ಐಪಿಎಲ್ ಪಂದ್ಯಕ್ಕೆ ಅತಿಥಿಯಾಗಿ ಹೋಗಿದ್ದೆ. ಆಗ ವಿರಾಟ್ ಕೊಹ್ಲಿಯೊಂದಿಗೆ ಸ್ನೇಹವಷ್ಟೇ ಇತ್ತು, ಬೇರೇನೂ ಇಲ್ಲ. ನಿಜ ಹೇಳಬೇಕೆಂದರೆ, ಈ ವದಂತಿಗಳೇ ನಮ್ಮಿಬ್ಬರ ನಡುವಿನ ನಿಜವಾದ ಸ್ನೇಹವನ್ನು ಹಾಳು ಮಾಡಿದವು. ಈ ವದಂತಿಗಳು ಇಲ್ಲದಿದ್ದರೆ, ಇಂದಿಗೂ ನಾವಿಬ್ಬರೂ ಉತ್ತಮ ಸ್ನೇಹಿತರಾಗಿರುತ್ತಿದ್ದೆವು." ಎಂದು ನಟಿ ಸಂಜನಾ ಹೇಳಿದ್ದಾರೆ.

"ಈ ಇಲ್ಲಸಲ್ಲದ ಪ್ರಚಾರ ಮತ್ತು ವದಂತಿಗಳು ನಮ್ಮ ಸ್ನೇಹವನ್ನು ಕೊನೆಗಾಣಿಸಿದವು. ನಾನು ಪ್ರಾಮಾಣಿಕವಾಗಿ ಇರುವ ಹುಡುಗಿ. ನನಗೆ ಅಂತಹ ಪ್ರಚಾರಗಳ ಅಗತ್ಯವಿಲ್ಲ. ವಿರಾಟ್ ಕೊಹ್ಲಿಯ ಗೆಳತಿ ಎಂಬ ಗುರುತು ನನಗೆ ಬೇಕಾಗಿಲ್ಲ." ಎಂದು ಆಗಾಗ ವೈರಲ್ ಆಗುವ ಫೋಟೊಗಳಿಗೆ ಕ್ಲಾರಿಟಿ ಕೊಟ್ಟಿದ್ದಾರೆ. "ನಾನು ನನ್ನ ಕುಟುಂಬದೊಂದಿಗೆ ಕೊಹ್ಲಿ ಮತ್ತು ಅವರ ಕುಟುಂಬವನ್ನು ಗೌರವಿಸುತ್ತೇನೆ. ಈ ಗಾಳಿ ಸುದ್ದಿಗಳು ನಮ್ಮ ಸ್ನೇಹವನ್ನು ಹಾಳು ಮಾಡಿದವು ಎಂಬ ನೋವು ಸದಾ ಇರುತ್ತದೆ" ಎಂದು ಸಂಜನಾ ಗಲ್ರಾನಿ ಬೇಸರ ಹೊರ ಹಾಕಿದ್ದಾರೆ.

More from Filmibeat

English summary
Recently Sanjjanaa Galrani Opens up about her relationship with Indian star cricketer Virat Kohli.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X