ರೇಣುಕಾಸ್ವಾಮಿ ಸಮಾಧಿ ಧ್ವಂಸ.. ಇದು ಕೃತ್ಯವೋ? ಉದ್ದೇಶಪೂರಿತವೋ? 'ಡೆವಿಲ್' ರಿಲೀಸ್ ವೇಳೆ ಗದ್ದಲ ಎಬ್ಬಿಸಿದ್ದೇಕೆ?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಹೀಗಿದ್ದರೂ, ಅವರ 'ಡೆವಿಲ್' ಸಿನಿಮಾವನ್ನು ಗೆಲ್ಲಿಸುವುದಕ್ಕೆ ಅಭಿಮಾನಿಗಳು ಪಣತೊಟ್ಟು ನಿಂತಿದ್ದಾರೆ. ಕರ್ನಾಟಕದಾದ್ಯಂತ ಅಭಿಮಾನಿಗಳು ಸೆಲೆಬ್ರೆಷನ್ ಮೂಡ್‌ನಲ್ಲಿ ಇದ್ದಾರೆ. ಥಿಯೇಟರ್‌ಗಳ ಮುಂದ ಕಟೌಟ್, ಹಾರಗಳೆಲ್ಲವೂ ಬಿದ್ದಿದೆ. ಫಸ್ಟ್ ಡೇ ಫಸ್ಟ್ ಶೋ ಪಟಾಕಿ ಸಿಡಿಸಿ ಜಾತ್ರೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ಇನ್ನೇನು 'ಡೆವಿಲ್' ಸಿನಿಮಾ ಬಿಡುಗಡೆಗೆ ಕೆಲವೇ ಕ್ಷಣಗಳು ಬಾಕಿ ಉಳಿದಿವೆ. ಈ ಮೂಡ್‌ನಲ್ಲಿ ಇರುವಾಗಲೇ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿಯ ಸಮಾಧಿಯನ್ನು ಧ್ವಂಸ ಮಾಡಿರುವ ಸುದ್ದಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ರೇಣುಕಾಸ್ವಾಮಿ ಸಮಾಧಿ ದ್ವಂಸಕ್ಕೂ ದರ್ಶನ್‌ಗೂ ಸಂಬಂಧವಿದೆಯೇ? ಎಂಬ ಅನುಮಾನಗಳನ್ನು ಕೆಲವರು ವ್ಯಕ್ತಪಡಿಸಿದ್ದರು.

'ಡೆವಿಲ್' ರಿಲೀಸ್ ಬೆನ್ನಲ್ಲೇ ದರ್ಶನ್ ಬಗ್ಗೆ ಕೆಲವು ನಕಾರಾತ್ಮಕ ಸುದ್ದಿಗಳು ಕೂಡ ಹಬ್ಬಿದ್ದವು. ಜೈಲಿನಲ್ಲಿ ತನ್ನ ಸಹಚರರೊಂದಿಗೆ ಕಿತ್ತಾಡಿಕೊಂಡಿರುವ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಅದು ತಣ್ಣಗಾಗುವ ವೇಳೆನೇ ರೇಣುಕಾಸ್ವಾಮಿ ಸಮಾಧಿ ತೆರವು ದೊಡ್ಡ ಗೊಂದಲವನ್ನೇ ಸೃಷ್ಟಿಸಿತ್ತು. ಚಿತ್ರದುರ್ಗದಲ್ಲಿರುವ ರೇಣುಕಾಸ್ವಾಮಿ ಸಮಾಧಿ ತೆರವುಗೊಂಡಿರುವುದು ಸತ್ಯ. ಆದರೆ, ಇದರ ಹಿಂದೆ ದರ್ಶನ್ ಇಲ್ಲವೇ, ಅವರ ಫ್ಯಾನ್ಸ್ ಇದ್ದಾರಾ? ಅಸಲಿ ಕಥೆಯೇನು ಅಂತ ನೋಡುವುದಾರೇ.
ರೇಣುಕಾಸ್ವಾಮಿ ಸಮಾಧಿ ತೆರೆವುಗೊಂಡಿರುವ ಸುದ್ದಿ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಆಯಾಮಗಳನ್ನು ಪಡೆದುಕೊಂಡಿತ್ತು. ಇದನ್ನು ದರ್ಶನ್ ಜೊತೆ ತಳುಕು ಹಾಕಿಕೊಂಡಿತ್ತು. ಅಸಲಿಗೆ ದರ್ಶನ್‌ಗೂ ರೇಣುಕಾಸ್ವಾಮಿ ಸಮಾಧಿ ಧ್ವಂಸಕ್ಕೂ ಯಾವುದೇ ರೀತಿಯ ಸಂಬಂಧಿವಿಲ್ಲ. ತಮ್ಮ ಮಗನ ಸಮಾಧಿ ತೆರವುಗೊಂಡಿದ್ದಕ್ಕೆ ಅವರ ತಂದೆ ಕಾಶೀನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ರೇಣುಕಾಸ್ವಾಮಿ ಸಮಾಧಿ ಧ್ವಂಸದ ಅಸಲಿ ಮ್ಯಾಟರ್ ಬೇರೆನೇ ಇದೆ. ವೀರಶೈವ ಸಮುದಾಯದ ರುದ್ರಭೂಮಿಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇವಲ ರೇಣುಕಾಸ್ವಾಮಿ ಸಮಾಧಿಯಷ್ಟೇ ಅಲ್ಲ. ಇನ್ನೂ ಕೆಲವು ಸಮಾಧಿನಗಳನ್ನು ತೆರವುಗೊಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರ ಸಮುದಾಯದ ರೇಣುಕಾಸ್ವಾಮಿ ಕುಟುಂಬದೊಂದಿಗೆ ಈ ಹಿಂದೆನೇ ಚರ್ಚೆ ಮಾಡಿದ್ದು, ಅದಕ್ಕೆ ರೇಣುಕಾಸ್ವಾಮಿ ತಂದೆ ಕೂಡ ಒಪ್ಪಿಕೊಂಡಿದ್ದಾರಂತೆ.

ಹಾಗಂತ ರೇಣುಕಾಸ್ವಾಮಿ ಸಮಾಧಿಯನ್ನು ತೆರವುಗೊಳಿಸುತ್ತಿರುವ ವೀರಶೈವ ಸಮಾಜದ ಮುಖಂಡರು ತಿಳಿಸಿದ್ದರು. ಈ ಬಗ್ಗೆ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಪ್ರತಿಕ್ರಿಯೆ ನೀಡಿದ್ದು, ತಮ್ಮ ಮಗನ ಸಮಾಧಿಯೊಂದೇ ಅಲ್ಲ. ಎಲ್ಲರ ಸಮಾಧಿಯನ್ನು ತೆರವು ಗೊಳಿಸಿದ್ದಾರೆ. ಎಲ್ಲರೂ ಸಮಾಧಿಗೆ ಕಲ್ಲು ಹಾಕುತ್ತಿದ್ದರಿಂದ ಜಾಗದ ಅಭಾವವಿದ್ದು, ಹೀಗಾಗಿ ತೆರವು ಮಾಡುತ್ತಿರುವುದಾಗಿ ತಿಳಿಸಿದ್ದರೆಂದು ಹೇಳಿಕೆ ಕೊಟ್ಟಿದ್ದಾರೆ.
ಈ ಮೂರು ತಿಂಗಳ ಹಿಂದೆನೇ ರೇಣುಕಾಸ್ವಾಮಿ ಸಮಾಧಿಯನ್ನು ತೆರವುಗೊಳಿಸಿದ್ದಾರೆಂದು ತಿಳಿದು ಬಂದಿದೆ. ಈ ಕಾರಣಕ್ಕೆ ರೇಣುಕಾಸ್ವಾಮಿ ಸಮಾಧಿ ತೆರವಿಗೂ ದರ್ಶನ್ ಹಾಗೂ ಅವರ ಅಭಿಮಾನಿಗಳಿಗೂ ಯಾವುದೇ ಸಂಬಂಧವಿಲ್ಲ. 'ಡೆವಿಲ್' ಸಿನಿಮಾ ಬಿಡುಗಡೆ ಸಮಯದಲ್ಲಿಯೇ ಈ ಸುದ್ದಿ ದೊಡ್ಡದಾಗಿದ್ದು ಕಾಕತಾಳೀಯ ಅಷ್ಟೇ.


Click it and Unblock the Notifications











