ಆರೋಪ ಒಪ್ಪಿಕೊಂಡಿದ್ರೂ ಜೈಲು.. ಒಪ್ಪದೇ ಇದ್ದಿದ್ದಕ್ಕೂ ಜೈಲು; ದಾಸನಿಗೆ ಇನ್ನೆಷ್ಟು ತಿಂಗಳು ಈ ಶಿಕ್ಷೆ?

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ನವೆಂಬರ್ 3) ದರ್ಶನ್ ಸೇರಿದಂತೆ 17 ಮಂದಿಯ ಮುಂದೆ ಚಾರ್ಜ್ ಫ್ರೇಮ್ ಮಾಡಲಾಗಿದೆ. ಈ ವೇಳೆ 17 ಮಂದಿನೂ ಖುದ್ದಾಗಿ ಕೋರ್ಟ್‌ಗೆ ಹಾಜರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಜೈಲಾಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದರು. ಇಂದು ವಿಚಾರಣೆ ಆರಂಭ ಆಗುವುದಕ್ಕೂ ಮುನ್ನವೇ ನ್ಯಾಯಾಧೀಶರು ಚಾರ್ಜ್ ಫ್ರೇಮ್ ಅನ್ನು ಸಿದ್ಧಪಡಿಸಿಕೊಂಡಿದ್ದರು.

ನ್ಯಾಯಾಧೀಶರು ವಿಚಾರಣೆ ರೆಡಿಯಿದ್ದರೂ, ಪೊಲೀಸರು ಸಿದ್ಧರಿರಲಿಲ್ಲ. ಅಲ್ಲದೇ ಆರೋಪಿಗಳಿಗೆ ಚಾರ್ಜ್ ಫ್ರೇಮ್‌ ಬಗ್ಗೆ ಮನವರಿಕೆ ಮಾಡುವುದಕ್ಕೆ ಕಾಲಾವಕಾಶ ಬೇಕೆಂದು ವಕೀಲರು ಕೇಳಿದ್ದರು. ವಕೀಲರು ಜೈಲಿಗೆ ಹೋಗಿ ಸಲಹೆಯನ್ನು ನೀಡುವ ಅವಕಾಶವಿತ್ತು. ಅದನ್ನು ಈಗಾಗಲೇ ವಕೀಲರು ಮಾಡಿದ್ದಾರೆ. ಈ ಕಾರಣಕ್ಕಾಗಿ ಚಾರ್ಜ್‌ ಫ್ರೇಮ್ ಮಾಡುವುದಕ್ಕೆ ಈ ದಿನವನ್ನು ನಿಗದಿ ಪಡಿಸಲಾಗಿತ್ತು.

Renukaswamy Case 17 Accused Refuse Charges infront of Judge Darshan May stay One Year Jail

ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಕ್ಕಿಕೊಂಡು ದರ್ಶನ್ ಬಳಲಿ ಬೆಂಡಾಗಿದ್ದಾರೆ. ಈ ಕೇಸ್‌ನಿಂದ ಮುಕ್ತಿ ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿ ಅವರದ್ದು. ಆದರೆ, ಅಷ್ಟು ಸುಲಭಕ್ಕೆ ಈ ಪ್ರಕರಣ ಅವರನ್ನು ಬಿಡುವಂತೆ ಕಾಣುತ್ತಿಲ್ಲ. ಇಂದು (ನವೆಂಬರ್ 3) ಬೆಂಗಳೂರಿನ 64ನೇ ಸಿಸಿಎಚ್‌ನ ನ್ಯಾಯಾಧೀಶರು ದರ್ಶನ್ ಸೇರಿದಂತೆ 17 ಮಂದಿಗೂ ನಿಮ್ಮ ಮೇಲೆ ಇರುವ ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ ಎಂದು ಕೇಳಿದ್ದರು. ಅವರ ಪ್ರಶ್ನೆಗೆ 17 ಮಂದಿಯೂ ಇಲ್ಲವೆಂದೇ ಹೇಳಿದ್ದಾರೆ. ಹಾಗಿದ್ದರೆ, ಮುಂದೇನು? ದರ್ಶನ್ ಇನ್ನೆಷ್ಟು ದಿನ ಜೈಲಿನಲ್ಲಿ ಇರಬೇಕಾಗುತ್ತೆ? ತಿಳಿಯುವುದಕ್ಕೆ ಮುಂದೆ ಓದಿ.

ಏನಿದು ಚಾರ್ಜ್‌ ಫ್ರೇಮ್?

ಕ್ರಿಮಿನಲ್ ಪ್ರಕರಣಗಳಲ್ಲಿ ನಡೆಯುವ ಒಂದು ಪ್ರಕ್ರಿಯೆ. ಪೊಲೀಸರು ತನಿಖೆ ನಡೆಸಿ ಚಾರ್ಜ್‌ಶೀಟ್ ಅನ್ನು ಕೋರ್ಟ್‌ಗೆ ಸಲ್ಲಿಸುತ್ತಾರೆ. ಅದರ ಆಧಾರದ ಮೇಲೆ ನ್ಯಾಯಾಧೀಶರು ದೋಷಾರೋಪಣೆ ಹೊರಿಸುತ್ತಾರೆ. ಅದನ್ನು ಚಾರ್ಜ್‌ ಫ್ರೇಮ್ ಎಂದು ಕರೆಯಲಾಗುತ್ತೆ. ದರ್ಶನ ಪರ ವಕೀಲರಾದ ಸುನೀಲ್ ಕುಮಾರ್ ಮಾಧ್ಯಮಗಳಿಗೆ ಇದೇ ಮಾಹಿತಿಯನ್ನು ನೀಡಿದ್ದಾರೆ. "ಕ್ರಿಮಿನಲ್ ಪ್ರಕರಣದಲ್ಲಿ ಇದೊಂದು ಪ್ರಕ್ರಿಯೆಯಾಗಿರುತ್ತೆ. ಜೈಲಿನಲ್ಲಿರುವ ಆರೋಪಿಗಳು ಹಾಗೂ ಜಾಮೀನು ಪಡೆದಿರುವ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯ ಇಂದು ದೋಷಾರೋಪ ಹೊರಿಸಿದೆ. ಪೊಲೀಸರು ತನಿಖೆ ಮಾಡಿ ಸಲ್ಲಿಸಿದ ಚಾರ್ಜ್‌ಶೀಟ್ ಎವಿಡೆನ್ಸ್ ಅಲ್ಲ. ಇವತ್ತು ಕೋರ್ಟ್‌ನಲ್ಲಿ ದೋಷಾರೋಪ ಮಾಡಲಾಗಿದೆ. ಅದರ ಮೇಲೆ ವಿಚಾರಣೆ ಶುರುವಾಗುತ್ತೆ" ಎಂದು ವಕೀಲರಾದ ಸುನೀಲ್ ಕುಮಾರ್ ಹೇಳಿದ್ದಾರೆ.

17 ಮಂದಿಯಿಂದ ದೋಷಾರೋಷಣೆ ನಿರಾಕರಣೆ

ರೇಣುಕಾಸ್ವಾಮಿ ಪ್ರಕರಣದ 17 ಮಂದಿ ಆರೋಪಿಗಳ ಮುಂದೆ ನ್ಯಾಯಾಧೀಶರು ದೋಷಾರೋಷಣೆಯನ್ನು ಓದಿ ಹೇಳಿದ್ದರು. ಅದನ್ನು 17 ಮಂದಿನೂ ತಮ್ಮ ಮೇಲಿರುವ ಆರೋಪವನ್ನು ನಿರಾಕರಣೆ ಮಾಡಿದ್ದಾರೆ. ಈ ಕೇಸ್‌ಗೂ ನಮಗೂ ಯಾವುದೇ ಸಂಬಂಧವಿಲ್ಲ. ವಿಚಾರಣೆಯನ್ನು ಎದುರಿಸುವುದಕ್ಕೆ ನಾವು ರೆಡಿಯಿದ್ದೇವೆ ಎಂದು ಹೇಳಿದ್ದಾರೆ. ಹೀಗಾಗಿ ಈ ಟ್ರಯಲ್ ಮುಗಿಯುವವರೆಗೂ ದರ್ಶನ್ ಜೊತೆ ಜಾಮೀನು ರದ್ದಾಗಿರುವ ಆರೋಪಿಗಳಿಗೆ ಜೈಲೇ ಗತಿ.

ದರ್ಶನ್‌ಗೆ ಇನ್ನೆಷ್ಟು ದಿನ ಜೈಲು

ಈಗಾಗಲೇ ಟ್ರಯಲ್‌ಗೆ ಇನ್ನೊಂದು ಡೇಟ್ ಅನ್ನು ಫಿಕ್ಸ್ ಮಾಡಿದ್ದಾರೆ. ಡೇಟ್ ಕೊಟ್ಟ ಕೂಡಲೇ ಸಾಕ್ಷಿ ಹೇಳಿದವರಿಗೆ ಸಮನ್ಸ್ ಜಾರಿಯಾಗುತ್ತೆ. ಸಾಕ್ಷಿ ವಿಚಾರಣೆ, ಪಾರ್ಟಿ ಸವಾಲು ನಡೆಯುತ್ತೆ. ಅದಾದ್ಮೇಲೆ ಆರೋಪಿಗಳ ಹೇಳಿಕೆಯನ್ನು ಮತ್ತೆ ದಾಖಲಿಸಿಕೊಳ್ಳಲಾುತ್ತೆ. ಇವೆಲ್ಲ ಆದ ಬಳಿಕ ಈ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ವಾದ-ವಿವಾದಗಳು ನಡೆಯುತ್ತೆ. ಆಮೇಲೆ ನ್ಯಾಯಾಧೀಶರು ಜಡ್ಜ್‌ಮೆಂಟ್ ನೀಡುತ್ತಾರೆ. ಈ ಎಲ್ಲಾ ಪ್ರಕ್ರಿಯೆ ಮುಗಿಯುವುದಕ್ಕೆ ಒಂದು ವರ್ಷ ಬೇಕಾಗಬಹುದೆಂಬ ನಿರೀಕ್ಷೆಯಿದೆ. ಹೀಗಾಗಿ ಅಲ್ಲಿವರೆಗೂ ದರ್ಶನ್ ಜೈಲಿನಲ್ಲಿಯೇ ಇರಬೇಕಾಗಿ ಬರಬಹುದೆಂದು ಅಂದಾಜಿಸಲಗಿದೆ.

ಮುಂದೇನು?

ಸಾಕ್ಷಿಗಳ ವಿಚಾರಣೆಗೆ ಒಂದು ದಿನ ನಿಗದಿಯಾಗುತ್ತೆ. ಇದಕ್ಕೂ ಮುನ್ನ ಪ್ರಾಸಿಕ್ಯೂಷನ್ ಅವರು ಸಾಕ್ಷಿಗಳ ಲಿಸ್ಟ್ ಅನ್ನು ನೀಡಬೇಕಾಗುತ್ತೆ. ಈ ಕೇಸ್‌ನಲ್ಲಿ ಯಾರು ಸಾಕ್ಷಿಗಳಿದ್ದಾರೆ. ಇವರಲ್ಲಿ ಮೊದಲು ಯಾವ ಸಾಕ್ಷಿಯನ್ನು ವಿಚಾರಣೆ ಮಾಡುತ್ತೇವೆ ಅನ್ನೋದನ್ನು ಕೋರ್ಟ್‌ಗೆ ಹಾಗೂ ಆರೋಪಿಗಳ ಪರ ವಕೀಲರಿಗೆ ಮಾಹಿತಿ ನೀಡಬೇಕಾಗುತ್ತೆ. ಅದಾದ ಬಳಿಕ ನ್ಯಾಯಾಧೀಶರು ಇಂತಹ ದಿನ ಈ ಸಾಕ್ಷಿಗಳ ವಿಚಾರಣೆ ಎಂದು ದಿನಾಂಕವನ್ನು ನಿಗದಿ ಮಾಡುತ್ತೆ. ಆನಂತರ ಅವರ ಕ್ರಾಸ್ ಎಗ್ಸಾಮಿನೇಷನ್ ನಡೆಯುತ್ತೆ. ಅಲ್ಲಿವರೆಗೂ ದರ್ಶನ್ ಸೇರಿದಂತೆ ಜಾಮೀನು ರದ್ದಾಗಿರುವ ಆರೋಪಿಗಳು ಜೈಲಿನಲ್ಲಿಯೇ ಇರಬೇಕಾಗುತ್ತೆ.

More from Filmibeat

English summary
Renukaswamy Case 17 Accused Refuse Charges infront of Judge Darshan May stay One Year Jail.
Read more about: darshan actor case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X