"ಚಳಿ ಚಳಿ ತಾಳೆನು ಈ ಚಳಿಯ.. ಜೈಲಿನಲ್ಲಿ ರಾತ್ರಿ ನಿದ್ದೇನೆ ಬರ್ತಿಲ್ಲ"; ಜಡ್ಜ್ ಮುಂದೆ ಹೊಸ ಬೇಡಿಕೆಯಿಟ್ಟ ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ 2ನೇ ಆರೋಪಿಯಾಗಿ ಜೈಲು ಸೇರಿದ್ದಾರೆ. ಸದ್ಯಕ್ಕೀಗ ಈ ಕೇಸ್‌ಗೆ ಸಂಬಂಧಿಸಿದಂತೆ ಚಾರ್ಜ್‌ ಫ್ರೇಮ್ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 17 ಮಂದಿನೂ ರೇಣುಕಾಸ್ವಾಮಿ ಹತ್ತೆಗೂ ತಮಗೂ ಸಂಬಂಧವೇ ಇಲ್ಲವೆಂದು ನ್ಯಾಯಾಧೀಶರ ಬಳಿಕ ಹೇಳಿಕೆಯನ್ನು ದಾಖಲಿಸಿದ್ದಾರೆ. ಹೀಗಾಗಿ ಇನ್ನೇನು ಟ್ರಯಲ್ ಶುರುವಾಗಬೇಕಿದೆ. ಅದಕ್ಕೂ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ನಡೆದಿದೆ.

ಇಂದು (ನವೆಂಬರ್ 19) ನಡೆದ ವಿಚಾರಣೆಯಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಹಾಗೂ ಅವರ ಮಾಜಿ ಮ್ಯಾನೇಜರ್ ನಾಗರಾಜ್ ನ್ಯಾಯಾಧೀಶರ ಮುಂದೆ ಮತ್ತೊಂದು ಹೊಸ ಬೇಡಿಕೆನ್ನು ಇಟ್ಟಿದ್ದಾರೆ. ಜೊತೆಗೆ ಜೈಲಾಧೀಕಾರಿಗಳ ವಿರುದ್ಧ ಕೆಲವು ಆರೋಪವನ್ನೂ ಮಾಡಿದ್ದಾರೆ.

Renukaswamy case Darshan and other said they feel cold inside jail officials didn t provide blanket

ಈ ಹಿಂದೆ ಕೂಡ ದರ್ಶನ್ ಜೈಲಿನಲ್ಲಿ ಕಟ್ಟಿ ಹಾಕಿದ್ದಾರೆ. ಹೊರಗಡೆ ಓಡಾಡುವುದಕ್ಕೂ ಬಿಡುತ್ತಿಲ್ಲ. ಬಿಸಿ ಸಿಗದೆ ಕೈ ಕಾಲಿಗಳಿಗೆ ಸಮಸ್ಯೆಯಾಗಿದೆ ಎಂದು ಹೇಳಿದ್ದರು. ಅದಕ್ಕೆ ನ್ಯಾಯಾಧೀಶರು ಸಮಿತಿಯನ್ನು ರಚಿಸಿ, ವರದಿ ನೀಡುವಂತೆ ಸೂಚಿಸಿದ್ದರು. ಆದರೆ, ಆ ವೇಳೆ ದರ್ಶನ್ ಹೇಳುತ್ತಿರುವುದು ಸುಳ್ಳು ಎಂದಾಗಿತ್ತು. ಈಗ ಮತ್ತೆ ದರ್ಶನ್ ಹೊಸ ಬೇಡಿಕೆ ಇಟ್ಟಿದ್ದಾರೆ. ಜೈಲಾಧಿಕಾರಿಗಳು ಬೆಡ್‌ಶೀಟ್ ಅನ್ನು ನೋಡುತ್ತಿಲ್ಲ. ಚಳಿಯನ್ನು ತಡೆಯಲು ಆಗುತ್ತಿಲ್ಲವೆಂದು ಆರೋಪ ಮಾಡಿದ್ದಾರೆ.

ದರ್ಶನ್‌ಗೆ ಜೈಲ್‌ನಲ್ಲಿ ಚಳಿಯೋ ಚಳಿ

ದರ್ಶನ್ ಜೈಲಿನಲ್ಲಿ ರಾತ್ರಿ ವೇಳೆ ನಿದ್ದೆ ಬರುತ್ತಿಲ್ಲವಂತೆ. ಜೈಲಿನಲ್ಲಿ ಭಾರಿ ಚಳಿಯಿದೆ. ಚಳಿಗೆ ನಿದ್ದೆ ಬಾರದೆ ಎದ್ದು ಕೂರುವ ಪರಿಸ್ಥಿತಿಯಿದೆ. ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಜೈಲಾಧಿಕಾರಿಗಳಿಗೆ ಮನವಿ ಮಾಡಿದರೂ ಅವರು ನೀಡುತ್ತಿಲ್ಲ. ಮನೆಯಿಂದ ತಂದುಕೊಟ್ಟಿರುವ ಬೆಡ್‌ಶೀಟ್ ಅನ್ನು ನೀಡುತ್ತಿಲ್ಲವೆಂದು ಆರೋಪಿಸಿದ್ದಾರೆ. ದರ್ಶನ್ ಜೊತೆಗೆ ಅವರ ಮಾಜಿ ಮ್ಯಾನೇಜರ್ ನಾಗರಾಜ್ ಕೂಡ ಇದೇ ಆರೋಪ ಮಾಡಿದ್ದಾರೆ.

ಅಗತ್ಯ ವಸ್ತುಗಳನ್ನು ಕೊಡುವುದಕ್ಕೇನು ಕಷ್ಟ?

ದರ್ಶನ್ ಹಾಗೂ ನಾಗರಾಜ್ ಅವರ ಕೋರಿಕೆಯನ್ನು ನ್ಯಾಯಾಧೀಶರು ಪರಿಗಣಿಸಿದ್ದಾರೆ. ಅಗತ್ಯ ವಸ್ತುಗಳನ್ನು ನೀಡುವುದಕ್ಕೆ ನಿಮಗೇನು ಕಷ್ಟ. ಜೈಲಿನ ನಿಯಮದ ಪ್ರಕಾರ ಏನೇನು ಕೊಡುವುದಕ್ಕೆ ಅವಕಾಶವಿದೆಯೋ ಅದನ್ನೆಲ್ಲ ಕೊಡಿ. ಅವರು ಮನುಷ್ಯರಲ್ಲವೇ? ಎಂದು ನ್ಯಾಯಾಧೀಕರು ಜೈಲಾಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಹಾಗೇ ವಿಚಾರಣೆಯನ್ನು ಡಿಸೆಂಬರ್ 3ನೇ ತಾರೀಕು ಮುಂದೂಡಿದ್ದಾರೆ.

ಟ್ರಯಲ್ ಯಾವಾಗ ಶುರು?

ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಯಲ್ ಶುರುವಾಗಬೇಕಿದೆ. ಪೊಲೀಸರು ತನಿಖೆ ವೇಳೆ ಸಂಗ್ರಹಿಸಿದ ಸಾಕ್ಷಿಗಳನ್ನು ಕೋರ್ಟ್‌ನಲ್ಲಿ ದಾಖಲು ಮಾಡಬೇಕಿದೆ. ಈ ಪ್ರಕರಣದಲ್ಲಿ ಸುಮಾರು 200ಕ್ಕೂ ಹೆಚ್ಚು ಸಾಕ್ಷಿಗಳಿವೆ. ಇವುಗಳಲ್ಲಿ ಸುಮಾರು 10 ಅನಗತ್ಯ ದಾಖಲೆಗಳು ಇವೆ ಎನ್ನಲಾಗಿದೆ. ಇವುಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಯಾವುದೇ ತಕರಾರು ಇಲ್ಲ ಅಂತ ಹೇಳಿದರೆ, ಈ ದಾಖಲೆಗಳಿಗೆ ಸಂಬಂಧಿಸಿದವರ ವಿಚಾರಣೆ ಮಾಡುವಂತಹ ಅಗತ್ಯವಿರುವುದಿಲ್ಲ. ಹೀಗಾಗಿ ಬೇಗನೇ ಟ್ರಯಲ್ ಮುಗಿಯುತ್ತೆ. ಈ ಕಾರಣಕ್ಕೆ ಇದು ಪ್ರಮುಖವಾದ ಹಂತವಾಗಿದೆ.

ದೋಷಾರೋಪ ನಿರಾಕರಣೆ

ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ ಫ್ರೇಮ್ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ದೋಷಾರೋಪವನ್ನು ಎಲ್ಲಾ ಆರೋಪಿಗಳು ನಿರಾಕರಿಸಿದ್ದಾರೆ. ಹೀಗಾಗಿ ಸಾಕ್ಷಿಗಳ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಬೇಕಾಗುತ್ತೆ. ಬಳಿಕ ಸಾಕ್ಷಿಗಳ ವಿಚಾರಣೆಗೆ ಒಂದು ದಿನಾಂಕವನ್ನು ನಿಗದಿ ಪಡಿಸಲಾಗುತ್ತೆ. ಆ ಬಳಿಕ ಸಾಕ್ಷಿಗಳಿಗೆ ವಿಚಾರಣೆಗೆ ಬರುವಂತೆ ಸಮನ್ಸ್ ಅನ್ನು ನೀಡಲಾಗುತ್ತೆ.

More from Filmibeat

English summary
Renukaswamy case Darshan and other said they feel cold inside jail officials didn't provide blanket;
Read more about: darshan kannada actor case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X