ದರ್ಶನ್‌ಗೆ ಜಾಮೀನು ಮುಂದುವರೆಯುತ್ತಾ? ರದ್ದಾಗುತ್ತಾ? ಸುಪ್ರೀಂ ಅಂಗಳದಲ್ಲಿ ಡಿ ಬಾಸ್ ಭವಿಷ್ಯ!

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ದರ್ಶನ್ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಕೇಸ್‌ನಲ್ಲಿ ಕರ್ನಾಟಕದ ಹೈ ಕೋರ್ಟ್ ರೆಗ್ಯೂಲರ್ ಜಾಮೀನನ್ನು ನೀಡಿತ್ತು. ಈ ಜಾಮೀನನ್ನು ಪ್ರಶ್ನಿಸಿ ಕರ್ನಾಟಕದ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಜುಲೈ 17ರಂದು ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರದ ಪರ ವಕೀಲರ ವಾದವನ್ನು ಆಲಿಸಲಾಗಿದೆ. ಈ ವೇಳೆ ಸುಪ್ರೀಂ ಕೋರ್ಟ್ ದರ್ಶನ್‌ಗೆ ಜಾಮೀನು ನೀಡಿದ್ದನ್ನು ಪ್ರಶ್ನೆ ಮಾಡಿದೆ. ಹೀಗಾಗಿ ಜುಲೈ 22ರಂದು ಸುಪ್ರೀಂ ಕೋರ್ಟ್ ನಟನ ಜಮೀನನ್ನು ಮುಂದುವರೆಸುತ್ತಾ? ಇಲ್ಲಾ ರದ್ದು ಮಾಡುತ್ತಾ? ಎನ್ನುವ ಪ್ರಶ್ನೆ ಎದ್ದಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕದ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿಯನ್ನು ಸಲ್ಲಿಸಿತ್ತು. ಕಳೆದ ಡಿಸೆಂಬರ್‌ನಲ್ಲಿ ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಕಳೆದ ಬಾರಿ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ದರ್ಶನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಈ ಕಾರಣಕ್ಕೆ ದರ್ಶನ್‌ಗೆ ಮತ್ತೆ ಸಂಕಷ್ಟ ಎದುರಾಗಬಹುದಾ? ಎಂದು ಅಂದಾಜಿಸಲಾಗುತ್ತಿದೆ. ರಾಜ್ಯದ ಸರ್ಕಾರದ ಪರ ವಕೀಲರಾದ ಸಿದ್ಧಾರ್ಥ್ ಲೂಥ್ರಾ ವಾದವನ್ನು ಮಂಡಿಸಿದ್ದಾಗಿದೆ. ಇನ್ನು ದರ್ಶನ್ ಪರ ವಕೀಲರಾದ ಕಪಿಲ್ ಸಿಬಲ್ ಜುಲೈ 22ರಂದು ಕೊನೆಯ ಬಾರಿಗೆ ತಮ್ಮ ವಾದವನ್ನು ಮಂಡಿಸಲಿದ್ದಾರೆ. ಈ ಪ್ರಕ್ರಿಯೆ ಬಳಿಕ ಸುಪ್ರೀಂ ಕೋರ್ಟ್ ತನ್ನ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ.

Renukaswamy Case Darshan Bail Hearing Decision in Supreme Court on July 22

ದರ್ಶನ್ ಸದ್ಯ 'ಡೆವಿಲ್' ಸಿನಿಮಾದ ಕೊನೆಯ ಹಂತದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಥೈಲ್ಯಾಂಡ್‌ನಲ್ಲಿ ಶೂಟಿಂಗ್ ನಡೆಯುತ್ತಿರುವುದರಿಂದ ದರ್ಶನ್ ಭಾರತದಲ್ಲಿ ಇಲ್ಲ. ಇತ್ತ ಕಪಿಲ್ ಸಿಬಲ್ ಅಂತಿಮ ವಾದ ಮಂಡನೆಯ ಬಳಿಕ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ನ್ಯಾ. ಪರ್ದಿವಾಲಾ, ನ್ಯಾ. ಮಹದೇವನ್ ನೇತೃತ್ವದ ಪೀಠ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬಹುದೆಂಬ ಕುತೂಹಲ ಮೂಡಿದೆ.

ಜುಲೈ 17 ರಂದು ದರ್ಶನ್ ಪರ ವಕೀಲರ ಮುಂದೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದ್ದರು. ದರ್ಶನ್ ಜಾಮೀನು ಯಾಕೆ ರದ್ದು ಮಾಡಬಾರದು?, ಹೈಕೋರ್ಟ್‌ನಲ್ಲಿ ದರ್ಶನ್ ಪರ ಜಾಮೀನು ಕೊಟ್ಟಿದ್ದರಲ್ಲಿ ಚಡಪಡಿಕೆ ಎದ್ದು ಕಾಣುತ್ತಿದೆ. ದರ್ಶನ್‌ಗೆ ಹೇಗಾದರೂ ಜಾಮೀನು ಕೊಡಬೇಕು. ಒಂದು ಅಂಶ ಸಿಕ್ಕಿದರೂ ಸಾಕು ಜಾಮೀನು ಕೊಟ್ಟು ಬಿಡೋಣ ಎನ್ನುವ ಚಡಪಡಿಕೆ ಕಾಣಿಸುತ್ತಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಬಹುದೆಂದು ಲೆಕ್ಕಾಚಾರ ಹಾಕಲಾಗುತ್ತಿದೆ.

Renukaswamy Case Darshan Bail Hearing Decision in Supreme Court on July 22

ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ಗೆ ಹಿನ್ನೆಡೆಯಾದರೆ ಮುಂದೇನು? ಮತ್ತೆ ದರ್ಶನ್ ಸಂಕಷ್ಟಕ್ಕೆ ಸಿಕ್ಕಿಕೊಳ್ಳುತ್ತಾರೆ. ಸುಪ್ರೀಂ ಕೋರ್ಟ್ ಜಾಮೀನನ್ನು ನಿರಾಕರಣೆ ಮಾಡಿದರೆ, ದರ್ಶನ್‌ ಬಳಿಯಿರುವ ದಾರಿ ಯಾವುದು? ಎಂಬ ಬಗ್ಗೆನೂ ಚರ್ಚೆ ನಡೆಯುತ್ತಿದೆ. ಮತ್ತೆ ದರ್ಶನ್ ಜಾಮೀನಿಗಾಗಿ ಅಪೀಲ್ ಹೋಗಬಹುದಾ? ಇಲ್ಲದೇ ಹೋದಲ್ಲಿ ತಕ್ಷಣವೇ ಮತ್ತೆ ಜೈಲು ಸೇರಬೇಕಾಗುತ್ತಾ? ಎನ್ನುವ ಪ್ರಶ್ನೆ ಎಲ್ಲರೂ ಎದ್ದಿದೆ.

ಒಂದ್ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದರೆ, ದರ್ಶನ್ ಅಷ್ಟೇ ಅಲ್ಲ. ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳು ಮತ್ತೆ ಜೈಲು ಸೇರುತ್ತಾರಾ? ಇಲ್ಲ ಅವರ ಬಳಿಕ ಜೈಲನ್ನು ತಪ್ಪಿಸಿಕೊಳ್ಳುವುದಕ್ಕೆ ಬೇರೆ ಆಯ್ಕೆಗಳು ಇವೆಯೇ? ಇವುಗಳ ಬಗ್ಗೆ ಜುಲೈ 22ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಕೊಡುವ ತೀರ್ಮಾನದ ಮೇಲೆ ನಿಂತಿದೆ.

More from Filmibeat

English summary
Renukaswamy Case: Darshan Bail Hearing Decision in Supreme Court on July 22.
Read more about: supreme court bail darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X