Sudeep About KGF 2: 'ಕೆಜಿಎಫ್ 2' ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸುದೀಪ್ ಕೊಟ್ಟ ಉತ್ತರ ಹೇಗಿತ್ತು?
ಕಳೆದ ವಾರ 'ಕೆಜಿಎಫ್ 2' ಅತಿ ಹೆಚ್ಚು ಗಳಿಸಿದ ವಿಶ್ವದ ಎರಡನೇ ಸಿನಿಮಾ ಎಂದು ಕಾಮ್ ಸ್ಕೋರ್ ವರದಿ ಹೇಳಿದೆ. ಇತ್ತ ಬಾಕ್ಸಾಪೀಸ್‌ನಲ್ಲಿ ಬೇರೆ ಸಿನಿಮಾದ ಓಟ ಕಡಿಮೆ ಆಗುವ ಹಾಗೆ ಕಾಣಿಸುತ್ತಲೇ ಇಲ್ಲ. ಈ ಮಧ್ಯೆ 'ಕೆಜಿಎಫ್ 2' ಯಶಸ್ಸಿನ ಬಗ್ಗೆ ಕಿಚ್ಚ ಸುದೀಪ್ ಬಗ್ಗೆ ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆ ಕಿಚ್ಚ ಸುದೀಪ್ ತನ್ನದೇ ಸ್ಟೈಲ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದೆ.
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಾಡುತ್ತಿರುವ ಸದ್ದು ನೋಡಿದರೆ, ಹಾಲಿವುಡ್ ಸಿನಿಮಾಗಳಿಗೆ ಸವಾಲು ಎಸೆಯೋ ಹಾಗೆ ಕಾಣಿಸುತ್ತಿದೆ. ರಾಕಿ ಭಾಯ್ ಗ್ರ್ಯಾಂಡ್ ಎಂಟ್ರಿ, ಮಾಸ್ ಲುಕ್‌ಗೆ 'ಕೆಜಿಎಫ್ 2' ಥಿಯೇಟರ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಈಗಾಗಲೇ 600 ಕೋಟಿ ಕ್ಲಬ್ ಸೇರಿರುವ ಸಿನಿಮಾ ಬಗ್ಗೆ ಹಲವು ಸೆಲೆಬ್ರೆಟಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.
ಆದರೆ, ಕನ್ನಡದ ಪ್ರಮುಖ ತಾರೆಯರು ಮಾತ್ರ 'ಕೆಜಿಎಫ್ 2' ಸಿನಿಮಾ ಬಗ್ಗೆ ಯಾಕೆ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಈ ಮಧ್ಯೆನೇ ಕಿಚ್ಚ ಸುದೀಪ್‌ಗೆ 'ಕೆಜಿಎಫ್ 2' ಪ್ರಶ್ನೆ ಮಾಡಿದಾಗ ಚಿಕ್ಕದೊಂದು ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

'ಕೆಜಿಎಫ್ 2' ಬಗ್ಗೆ ಕಿಚ್ಚ ಹೇಳಿದ್ದೇನು?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ವಿಶ್ವದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ಇದು ಕನ್ನಡಿಗರಿಗಷ್ಟೇ ಅಲ್ಲ. ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯ. ಆದರೆ, ಈ ಸಿನಿಮಾದ ಯಶಸ್ಸಿನ ಬಗ್ಗೆ ಕನ್ನಡ ಸೂಪರ್‌ಸ್ಟಾರ್‌ಗಳು ಮೌನವಾಗಿದ್ದು ಅಚ್ಚರಿಗೆ ಕಾರಣವಾಗಿತ್ತು. ಸದ್ಯ ಸುದೀಪ್ ಪ್ರತಿಕ್ರಿಯೆ ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರಿಸಿದ್ದಾರೆ.
'ನಾನು ಆ ಸಿನಿಮಾದ ಭಾಗವಲ್ಲ'
ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್‌ಗೆ ಪತ್ರಕರ್ತರು ಪ್ರಶ್ನೆ ಮಾಡಿದ್ದರು. 'ಕೆಜಿಎಫ್ 2' ಸಿನಿಮಾ ಬಗ್ಗೆ ಏನು ಹೇಳುತ್ತೀರಾ? ಎಂದು ಕೇಳಿದ್ದರು. ಆ ವೇಳೆ ಕಿಚ್ಚ ಸುದೀಪ್ "ನಾನು ಆ ಸಿನಿಮಾದ ಭಾಗವಲ್ಲ." ಎಂದು ಒಂದೇ ವಾಕ್ಯದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ, ಕಿಚ್ಚ ಈಗಾಗಲೇ ಟ್ವೀಟ್ ಮೂಲಕ ವಿಶ್ ಮಾಡಿದ್ದು, ಅದಕ್ಕೆ ಪ್ರತಿಕ್ರಿಯಿಸುವ ಗೋಜಿಗೆ 'ಕೆಜಿಎಫ್ 2' ತಂಡ ಮುಂದಾಗಿಲ್ಲ ಎಂದು ಕೆಲ ಸುದೀಪ್ ಅಭಿಮಾನಿಗಳು ಆರೋಪಿಸಿದ್ದಾರೆ.

'ವಿಕ್ರಾಂತ್ ರೋಣ' ಕೂಡ ಪ್ಯಾನ್ ಇಂಡಿಯಾ
'ಕೆಜಿಎಫ್ 2' ಬಳಿಕ ರಿಲೀಸ್ ಆಗುತ್ತಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ'. ಕಿಚ್ಚನ ಈ ಸಿನಿಮಾ ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 'ಕೆಜಿಎಫ್ 2' ಕೇವಲ 2ಡಿಯಲ್ಲಿ ಬಿಡುಗಡೆಯಾಗಿದ್ದರೆ, 'ವಿಕ್ರಾಂತ್ ರೋಣ' 3ಡಿಯಲ್ಲಿ ರಿಲೀಸ್ ಆಗಲಿದೆ. ಜುಲೈ 28ಕ್ಕೆ 'ವಿಕ್ರಾಂತ್ ರೋಣ' ಬಿಡುಗಡೆಯಾಗಲಿದ್ದು, 'ಕೆಜಿಎಫ್ 2' ಹವಾ ಮುಗಿಯುತ್ತಿದ್ದಂತೆ 'ವಿಕ್ರಾಂತ್ ರೋಣ' ತಂಡ ಪ್ರಚಾರ ಆರಂಭಿಸಲಿದೆ.

ದಾಖಲೆ ಬರೆಯುತ್ತಾ 'ವಿಕ್ರಾಂತ್ ರೋಣ' ?
'ವಿಕ್ರಾಂತ್ ರೋಣ' ಸಿನಿಮಾ ಕೂಡ ಪ್ಯಾನ್ ಇಂಡಿಯಾ. 'ಕೆಜಿಎಫ್ 2'ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದಂತೆ ಈ ಸಿನಿಮಾ ಕೂಡ ಮಾಡಬೇಕು. ಈಗಾಗಲೇ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಐದೂ ಭಾಷೆಗಳಲ್ಲಿ ಬೇಜಾನ್ ಸದ್ದು ಮಾಡಿದೆ. ಹೀಗಾಗಿ 'ವಿಕ್ರಾಂತ್ ರೋಣ'ಗೆ ಹೊಸ ಸವಾಲು ಎದುರಾದಂತಾಗಿದೆ.


Click it and Unblock the Notifications











