RGVಗೆ ಸಹಾಯಕ ಸಸ್ಪೆನ್ಸ್ ಥ್ರಿಲ್ಲರ್ 'ಸ್ಟಾಕರ್' ಬಿಡುಗಡೆಗೆ ರೆಡಿ: ಗನ್ ಹಿಡಿದ ಸುಮನ್
ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ಪಳಗಿದ ನಿರ್ದೇಶಕ ಅಂದಮೇಲೆ ಆ ಸಿನಿಮಾ ಕುತೂಹಲ ಹುಟ್ಟಿಸುವುದರಲ್ಲಿ ಅನುಮಾನವಿಲ್ಲ. ಕಳೆದ ಐದಾರು ವರ್ಷಗಳಿಂದ ಆರ್‌ಜಿವಿಗೆ ಸಹಾಯಕರಾಗಿ ಕೆಲಸ ಮಾಡಿದ್ದ ನಿರ್ದೇಶಕ ಹೊಸ ಕನ್ನಡ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅದರ ಹೆಸರೇ 'ಸ್ಟಾಕರ್' ಈ ಸಿನಿಮಾ ಈಗ ಚಿತ್ರೀಕರಣ ಮುಗಿದು ಬಿಡುಗಡೆ ಸಜ್ಜಾಗಿದೆ.
ರಾಮ್ ಗೋಪಾಲ್ ವರ್ಮ ಗರಡಿಯಲ್ಲಿ ಪಳಗಿರುವ ಆ ನಿರ್ದೇಶಕನ ಹೆಸರು ಕಿಶೋರ್ ಭಾರ್ಗವ್. ಆರ್‌ಜಿವಿ ಗರಡಿ ಅಂದ ಕೂಡಲೇ ಅವರನ್ನು ತೆಲುಗಿನವರು ಎಂದುಕೊಳ್ಳುವಂತಿಲ್ಲ. ಕಿಶೋರ್ ಭಾರ್ಗವ್ ಅಪ್ಪಟ ಕನ್ನಡಿಗರು. ಸ್ಯಾಂಡಲ್‌ವುಡ್‌ನಲ್ಲಿ ಹೊಸ ಕನಸುಗಳನ್ನು ಹೊತ್ತು ಬರುತ್ತಿದ್ದಾರೆ. ಕಿಶೋರ್ ಭಾರ್ಗವ್ ಕೂಡ ನೂರೆಂಟು ಕನಸುಗಳನ್ನು ಹೊತ್ತು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನ ಭರವಸೆಯ ನಿರ್ದೇಶಕನಾಗುವ ಕನಸು ಹೊತ್ತುಕೊಂಡಿದ್ದಾರೆ.
ಸ್ಟಾಕರ್ ಸಿನಿಮಾ ಹಿರಿಯ ನಟ ಸುಮನ್ ನಗರ್‌ಕರ್
ಸುಮನ್ ನಗರ್‌ಕರ್ ಇತ್ತೀಚೆಗೆ ಮತ್ತೆ ಕನ್ನಡ ಸಿನಿಮಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಾಕರ್ ಸಿನಿಮಾದಲ್ಲೂ ಸುಮನ್ ನಗರ್‌ಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೈ ಯಲ್ಲಿ ಗನ್ ಹಿಡಿದ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದೆ. ಈ ಪೋಸ್ಟರ್ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಸುಮನ್ ನಗರ್‌ಕರ್ ಜೊತೆ ರಾಮ್, ಐಶ್ವರ್ಯ ನಂಬಿಯರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿಶಂಕರ್ ದೇಸಾಯಿ ಮುಂತಾದವರು ಸ್ಟಾಕರ್ ಸಿನಿಮಾದಲ್ಲಿ ನಟಿಸಿದ್ದು, ಕನ್ನಡದ ಜೊತೆಗೆ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತಯಾರಾಗಿದೆ.

'ಸ್ಟಾಕರ್' ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ
ಆರ್‌ಜಿವಿ ಶಿಷ್ಯ ಕಿಶೋರ್ ಭಾರ್ಗವ್ ನಿರ್ದೇಶಿಸಿರುವ ಈ ಸಿನಿಮಾ ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಎಳೆಯನ್ನು ಹೊಂದಿರುವ ಸಿನಿಮಾ. ಸೋಮಶೇಖರ್, ಭರತ್ ಪ್ರಮೋದ್ ಹಾಗೂ ಕಿಶೋರ್ ಭಾರ್ಗವ್ ಚಿತ್ರಕಥೆ ಹೆಣೆದಿದ್ದಾರೆ. ವಿನೋದ್ ರಾಜ್ ಕ್ಯಾಮೆರಾ, ಸ್ಕಂದ ಕಶ್ಯಪ್ ಮ್ಯೂಸಿಕ್, ಸುಧೀರ್ ಪಿಆರ್ ಕಲಾ ನಿರ್ದೇಶನವಿದೆ. ಸದ್ಯ 'ಸ್ಟಾಕರ್' ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ರಿಲೀಸ್ ಮಾಡಲು ಕಾದು ಕೂತಿದೆ.

ಆರ್‌ಜಿವಿ ಕ್ಯಾಂಪ್‌ನಲ್ಲಿ 5 ವರ್ಷ ಸಹಾಯಕ ನಿರ್ದೇಶಕ
'ಸ್ಟಾಕರ್' ಸಿನಿಮಾದ ನಿರ್ದೇಶಕ ಕಿಶೋರ್ ಭಾರ್ಗವ್ ಆರ್ ಜಿವಿ ಕ್ಯಾಂಪ್ ನಲ್ಲಿ ಐದಾರು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ . ಕಿಶೋರ್ ಭಾರ್ಗವ್ 'ಸೈಕೋ' ಎಂಬ ತೆಲುಗು ಸಿನಿಮಾ ಮಾಡಿದ್ದು, ಈಗ 'ಸ್ಟಾಕರ್' ಸಿನಿಮಾ ಬಿಡುಗಡೆಗೆ ಮಾಡಲು ಮುಂದಾಗಿದ್ದಾರೆ.


Click it and Unblock the Notifications











