ನಟಿಗೆ ಮಾಕ್‌ಟೇಲ್‌ನಲ್ಲಿ ಮದ್ಯ ಬೆರೆಸಿ ಖಾಸಗಿ ವಿಡಿಯೋ.. ಲೈಂಗಿಕ ಕುರುಕುಳ; 'ರಿಚ್ಚಿ' ಹೀರೋ ಅರೆಸ್ಟ್

ಚಿತ್ರರಂಗದಲ್ಲಿ ಮೀಟೂ ಪ್ರಕರಣಗಳ ಹೆಚ್ಚಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗೆ ನಟಿಯರು ಲೈಂಗಿಕ ಕಿರುಕುಳದ ಆರೋಪ ಹೊರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗ ಕನ್ನಡ ಚಿತ್ರರಂಗದ ಸರಿದ. ಕನ್ನಡದ ನಟಿಯೊಬ್ಬರು ತಾವು ನಟಿಸಿದ ಸಿನಿಮಾದ ನಟ-ನಿರ್ದೇಶಕ-ನಿರ್ಮಾಪಕನ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೂರು ನೀಡಿದ್ದಾರೆ. ಈ ದೂರಿನ ಮೇಲೆಗೆ ನಟ-ನಿರ್ಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲವು ತಿಂಗಳ ಹಿಂದೆ 'ರಿಚ್ಚಿ' ಎನ್ನುವ ಸಿನಿಮಾ ವಿವಾದಗಳಿಂದ ಸದ್ದು ಮಾಡಿತ್ತು. ಈ ಸಿನಿಮಾಗೆ ನಟ-ನಿರ್ದೇಶನ ಹಾಗೂ ನಿರ್ಮಾಣವನ್ನೂ ಮಾಡಿದ್ದ ಹೇಮಂತ್ ಹಾಗೂ ನಟಿಯ ವಿರುದ್ಧ ದೊಡ್ಡ ಮಟ್ಟದಲ್ಲಿ ಕಿತ್ತಾಟ ಆಗಿತ್ತು. ಈಗ ಹೇಮಂತ್ ಮೇಲೆ ನಟಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ದೂರನ್ನು ದಾಖಲಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಹೇಮಂತ್ ಅವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

Richie Kannada Movie Actor-Producer Hemanth Arrested in Harassment Case Filed by an Actress

ಕನ್ನಡದ ನಟಿ ನೀಡಿರುವ ದೂರಿನಲ್ಲಿ ಸಿನಿಮಾದ ಪ್ರಚಾರಕ್ಕೆಂದು ಮುಂಬೈಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಮಾಕ್‌ಟೇಲ್‌ನಲ್ಲಿನಲ್ಲಿ ಮದ್ಯ ಬೆರೆಸಿ ನಟಿಗೆ ಕುಡಿಸಿ, ನಟಿಯ ಖಾಸಗಿ ವಿಡಿಯೋ ಹಾಗೂ ಫೋಟೊಗಳನ್ನು ತೆಗೆದುಕೊಂಡಿದ್ದಾಗಿ ಹೇಮಂತ್ ಮೇಲೆ ಆರೋಪ ಮಾಡಲಾಗಿದೆ. ಈ ಸಂಬಂಧ ನಟ-ನಿರ್ದೇಶಕ-ನಿರ್ಮಾಪಕ ಹೇಮಂತ್ ಅನ್ನು ಬಂಧಿಸಿ, ವಿಚಾರಣೆ ಒಳಪಡಿಸಲಾಗಿದೆ.

'ರಿಚ್ಚಿ' ನಟ ಹೇಮಂತ್ ಮೇಲೆ ಮಾಡಿರುವ ಆರೋಪವೇನು ಎಂದು ನೋಡುವುದಾರೇ, 2022ರಲ್ಲಿ ಸಂತ್ರಸ್ತ ನಟಿಗೆ ನಟ ಹೇಮಂತ್ ಪರಿಚಯವಾಗಿದ್ದರು. 'ರಿಚ್ಚಿ' ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ನೀಡಿದ್ದರು. ಸಿನಿಮಾ ಶೂಟಿಂಗ್ ವೇಳೆ ಹಾಗೂ ಸಿನಿಮಾದ ಪ್ರಚಾರದ ಸಮಯದಲ್ಲಿ ತನ್ನ ಮೇಲೆ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆಂದು ದೂರಿನಲ್ಲಿ ಆರೋಪ ಮಾಡಿದ್ದಾರೆ.

ಹೇಮಂತ್ 'ರಿಚ್ಚಿ' ಸಿನಿಮಾದಲ್ಲಿ ನಟಿಸುವುದಕ್ಕೆ ಎರಡು ಲಕ್ಷ ರೂಪಾಯಿ ಸಂಭಾವನೆ ಮಾತಾಡಿದ್ದರು. ಮುಂಗಡವಾಗಿ 60 ಸಾವಿರ ರೂಪಾಯಿಯನ್ನು ನೀಡಿದ್ದರು. ಆದರೆ, ಆ ಚೆಕ್‌ ಕೂಡ ಬೌನ್ಸ್ ಆಗಿತ್ತು. ಹೀಗಾಗಿ ಸಂಭಾವನೆಯನ್ನು ನೀಡಿಲ್ಲ ಎಂದಿದ್ದಾರೆ. ಆದರೆ, ಸಿನಿಮಾ ಶೂಟಿಂಗ್ ವೇಳೆ ಅರೆಬರೆ ಕಾಸ್ಟ್ಯೂಮ್‌ಗಳನ್ನು ಧರಿಸುವಂತೆ ಹೇಳುತ್ತಿದ್ದರು. ಅಶ್ಲೀಲ ದೃಶ್ಯಗಳಲ್ಲಿ ನಟಿಸುವಂತೆ ಒತ್ತಡ ಹಾಕುತ್ತಿದ್ದರೆಂದು ದೂರಿನಲ್ಲಿ ನೋವು ತೋಡಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಮುಗಿದ ಬಳಿಕ ಹೋಟೆಲ್‌ಗೆ ಒಬ್ಬಳೇ ಬರುವಂತೆ ಕಿರುಕುಳ ನೀಡುತ್ತಿದ್ದರೆಂದು ಈ ದೂರಿನಲ್ಲಿ ಆರೋಪ ಮಾಡಿದ್ದಾರೆ.

ಇಷ್ಟೇ ಅಲ್ಲದೆ ಸಿನಿಮಾ ಪ್ರಚಾರದ ವೇಳೆನೂ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ. 'ರಿಚ್ಚಿ' ಸಿನಿಮಾದ ಪ್ರಚಾರಕ್ಕೆಂದು ಮುಂಬೈಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಾಕ್‌ಟೆಲ್‌ನಲ್ಲಿ ಮದ್ಯ ಬೆರೆಸಿ ಕುಡಿಸಿದ ಬಳಿಕ ಖಾಸಗಿ ವಿಡಿಯೋಗಳನ್ನು ಶೂಟ್ ಮಾಡಿದ್ದು, ಆ ಬಳಿಕ ಅದನ್ನೇ ಬಳಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಹೇಮಂತ್ ವಿರುದ್ಧ ಆರೋಪ ಮಾಡಲಾಗಿದೆ.

ಪ್ರಚಾರದ ನೆಪವಿಟ್ಟುಕೊಂಡು ಹೋಟೆಲ್‌ಗೆ ಕರೆಯುತ್ತಿದ್ದರು. ವಿರೋಧಿಸಿದಾಗ ಸೆನ್ಸಾರ್ ಆಗದ ಸಿನಿಮಾದ ದೃಶ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಈ ಹಿಂದೆ ಕೂಡ ನಟಿ ಹಾಗೂ ಹೇಮಂತ್ ಮಧ್ಯೆ ಕಿತ್ತಾಟ ನಡೆದು ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ನಟಿ ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ಲ. ಜೊತೆಗೆ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ಹೇಮಂತ್ ಆರೋಪಿಸಿದ್ದರು. ಈ ವೇಳೆ ಫಿಲ್ಮ್ ಚೇಂಬರ್ ಮಧ್ಯಸ್ಥಿಕೆ ವಹಿಸಿ ಇಬ್ಬರಿಗೂ ಸಮಾಧಾನ ಮಾಡಿ ಸಮಸ್ಯೆಯನ್ನು ಬಗೆ ಹರಿಸಿ ಕಳುಹಿಸಿದ್ದರು.

More from Filmibeat

English summary
Richie Kannada Movie Actor-Producer Hemanth Arrested in Harassment Case Filed by an Actress.
Read more about: kannada actor case controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X