ಮೊದಲ ಬಾರಿ ಪತ್ನಿ ರೇವತಿ ಜೊತೆ ಡವಾ ಡವಾ ಎನ್ನುತಲೇ ಹೆಜ್ಜೆ ಹಾಕಿದ ನಿಖಿಲ್

ಸ್ಯಾಂಡಲ್‌ವುಡ್‌ನ ಯುವರಾಜ ನಿಖಿಲ್ ಕುಮಾರ್ ಹೊಸ ಸಿನಿಮಾ 'ರೈಡರ್' ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್ 24ರಂದು ಗ್ರ್ಯಾಂಡ್ ಆಗಿ ಈ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಹೀಗಾಗಿ ಈಗಾಗಲೇ ನಿಖಿಲ್ ಕುಮಾರ್ ಸಿನಿಮಾದ ಪ್ರಚಾರ ಆರಂಭ ಮಾಡಿದ್ದಾರೆ. 'ರೈಡರ್' ಸಿನಿಮಾದ ಹಾಡುಗಳು ಒಂದರ ಹಿಂದೊಂದು ಬಿಡುಗಡೆಯಾಗಿದ್ದು, ಅರ್ಜುನ್ ಜನ್ಯ ಟ್ಯೂನ್‌ಗಳು ಸಂಗೀತ ಪ್ರಿಯರಿಗೆ ಕಿಕ್ ಕೊಡುತ್ತಿದೆ.

'ರೈಡರ್' ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಅಭಿನಯದ ನಾಲ್ಕನೇ ಸಿನಿಮಾ. 'ಸೀತಾರಾಮ ಕಲ್ಯಾಣ' ಸಿನಿಮಾದ ಮೂಲಕ ಬಿಡುಗಡೆಯಾಗುತ್ತಿರುವ ಚಿತ್ರ ಇದಾಗಿದ್ದು, ನಿಖಿಲ್ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ. ಹೀಗಾಗಿ ನಿಖಿಲ್ ಕೂಡ ಸಿನಿಮಾ ರಿಲೀಸ್‌ಗೆ ಒಂದು ವಾರವಿರುವಾಗ ಪ್ರಚಾರಕ್ಕೆ ಇಳಿದಿದ್ದಾರೆ. ಆದರೆ ಅಭಿಮಾನಿಗಳು ನಿಖಿಲ್ ಪತ್ನಿ ರೇವತಿ ಜೊತೆ ಹೆಜ್ಜೆ ಹಾಕಿದ ಒಂದು ವಿಡಿಯೋ ನೋಡಿ ಫುಲ್ ಖುಷಿಯಾಗಿದ್ದಾರೆ.

Video: ಪತ್ನಿ ರೇವತಿ ಜೊತೆ ನಿಖಿಲ್ ಸ್ಟೆಪ್ಸ್

Video: ಪತ್ನಿ ರೇವತಿ ಜೊತೆ ನಿಖಿಲ್ ಸ್ಟೆಪ್ಸ್

ನಿಖಿಲ್ ಕುಮಾರ್ ಹಾಗೂ ರೇವತಿ ವಿವಾಹದ ಬಳಿಕ ಇಬ್ಬರೂ ಜೊತೆಗೆ ನಿಂತಿದ್ದ ಕೆಲವು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹಬ್ಬದ ಸಂಭ್ರಮದಲ್ಲಿ, ತೋಟಕ್ಕೆ ಭೇಟಿ ಕೊಟ್ಟ ವೇಳೆ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಅದು ಬಿಟ್ಟರೆ, ಸಂದರ್ಶನದಲ್ಲಾಗಲಿ, ಸಿನಿಮಾ ಪ್ರಚಾರದಲ್ಲಾಗಲಿ ರೇವತಿ ನಿಖಿಲ್ ಕುಮಾರ್ ಕಾಣಿಸಿಕೊಂಡಿರಲಿಲ್ಲ. ಪತಿಯ ಸಿನಿಮಾದ ಬಗ್ಗೆನೂ ಅಭಿಪ್ರಾಯವನ್ನೂ ಹಂಚಿಕೊಂಡಿಲ್ಲ. ಆದರೆ, ಇದೇ ಮೊದಲ ಬಾರಿಗೆ ನಿಖಿಲ್ ಪತ್ನಿ ರೇವತಿಯವರೊಂದಿಗೆ 'ರೈಡರ್' ಸಿನಿಮಾದ ಡವಾ ಡವಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕ್ಯಾಮರಾ ಮುಂದೆ ಬಂದ ರೇವತಿ

ರೇವತಿ ಗರ್ಭಿಣಿಯಾಗಿದ್ದ ದಿನದಿಂದ ಕ್ಯಾಮರಾದಿಂದ ದೂರವೇ ಉಳಿದಿದ್ದರು. ಸೀಮಂತದ ಸಂಭ್ರಮದಲ್ಲಿ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದು ಬಿಟ್ಟರೆ ಮತ್ತೆಂದೂ ಕಂಡಿದ್ದೇ ಇಲ್ಲ. ಈಗ ಪತಿ ನಿಖಿಲ್ ಹೆಜ್ಜೆ ಹಾಕಿರುವ ಡವಾ ಡವಾ ಹಾಡಿನ 11 ಸೆಕೆಂಡುಗಳ ತುಣುಕಿನ ಕೊನೆಯಲ್ಲಿ ಅತಿಥಿಯಾಗಿ ಎಂಟ್ರಿಕೊಟ್ಟಿದ್ದಾರೆ. ಈ ವಿಡಿಯೋ ನೋಡಿ ನಿಖಿಲ್ ಅಭಿಮಾನಿಗಳು ಸಿಕ್ಕಾ-ಪಟ್ಟೆ ಖುಷಿಯಾಗಿದ್ದಾರೆ. ಈ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.

2 ವರ್ಷಗಳ ಬಳಿಕ ನಿಖಿಲ್ ಸಿನಿಮಾ ರಿಲೀಸ್

2 ವರ್ಷಗಳ ಬಳಿಕ ನಿಖಿಲ್ ಸಿನಿಮಾ ರಿಲೀಸ್

ನಿಖಿಲ್ ಕುಮಾರ್ ಕೊನೆ ಸಿನಿಮಾ 'ಸೀತಾ ರಾಮ ಕಲ್ಯಾಣ'. ಎರಡು ವರ್ಷಗಳ ಹಿಂದೆ ಈ ಸಿನಿಮಾ ಬಿಡುಗಡೆಯಾಗಿತ್ತು. ಆ ಬಳಿಕ 'ರೈಡರ್' ಸೆಟ್ಟೇರಿದ್ದರೂ, ಕೊರೊನಾ, ಲಾಕ್‌ಡೌನ್ ಅಂತ ಚಿತ್ರೀಕರಣ ತಡವಾಗಿತ್ತು. ಈಗ 'ರೈಡರ್' ಸಿನಿಮಾ ಕ್ರಿಸ್‌ಮಸ್ ಹಬ್ಬಕ್ಕೆ ರಿಲೀಸ್ ಆಗಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಿಖಿಲ್ ಹಾಗೂ ರಚಿತಾರಾಮ್ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಬಾರಿ ಕಾಶ್ಮೀರಾ ಪರದೇಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

 ನಿಖಿಲ್ ಬಾಸ್ಕೆಟ್ ಬಾಲ್ ಆಟಗಾರ

ನಿಖಿಲ್ ಬಾಸ್ಕೆಟ್ ಬಾಲ್ ಆಟಗಾರ

'ರೈಡರ್' ಸಿನಿಮಾದಲ್ಲಿ ನಿಖಿಲ್‌ಗೆ ವಿಶೇಷ ಸಿನಿಮಾ. ನಾಲ್ಕನೇ ಸಿನಿಮಾ ಆಗಿದ್ದರೂ, ಈ ಸಿನಿಮಾದಲ್ಲಿ ನಿಖಿಲ್ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ರೀಡೆಯ ಜೊತೆಗೆ ಲವ್ ಸ್ಟೋರಿ. ಲವ್ ಸ್ಟೋರಿ ಜೊತೆಗೇ ಆಕ್ಷನ್ ಮಿಕ್ಸ್ ಮಾಡಿ ಕಥೆ ಹೆಣೆಯಲಾಗಿದೆ. ತೆಲುಗಿನ ವಿಜಯ್ ಕುಮಾರ್ ಕೊಂಡ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಸುನೀಲ್ ಗೌಡ ಸಿನಿಮಾ ನಿರ್ಮಿಸಿದ್ದಾರೆ.

More from Filmibeat

English summary
Rider actor Nikhil Kumar dance with his wife Revathi for the first time. Rider Kannada Movie will be releasing on december 24th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X