ಆನಂದ ರಾವ್ ವೃತ್ತದಿಂದ ಅನುಪಮ ಚಿತ್ರಮಂದಿರದವರೆಗೆ ನಿಖಿಲ್ ಕುಮಾರ್ ಮೆರವಣಿಗೆ

ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರ್ ಸಿನಿಮಾ 'ರೈಡರ್' ಡಿಸೆಂಬರ್ 24ರಂದು ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಕಳೆದೊಂದು ತಿಂಗಳಿಂದ ರೈಡರ್ ಸಿನಿಮಾದಲ್ಲಿ ಪ್ರಚಾರದಲ್ಲಿ ನಿಖಿಲ್ ಕುಮಾರ್ ಬ್ಯುಸಿಯಾಗಿದ್ದರು. ಈಗ ಸಿನಿಮಾ ಬಿಡುಗಡೆ ದಿನವೂ ನಿಖಿಲ್ ಭರ್ಜರಿ ಪ್ರಚಾರ ಮಾಡಲು ಮುಂದಾಗಿದ್ದಾರೆ. ಈಗಾಗಲೇ 'ರೈಡರ್' ಹಾಡುಗಳು ಹಾಗೂ ಟ್ರೈಲರ್‌ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, 'ರೈಡರ್' ಭವಿಷ್ಯ ನಾಳೆ(ಡಿಸೆಂಬರ್ 23) ಅನಾವರಣ ಆಗಲಿದೆ.

Recommended Video

ಥಿಯೇಟರ್ ಗೆ ಎಂಟ್ರಿ ಕೊಟ್ಟ ಯುವರಾಜ ನಿಖಿಲ್

2021ರಲ್ಲಿ ಕೊನೆಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳಲ್ಲಿ 'ರೈಡರ್' ಕೂಡ ಒಂದಾಗಿದೆ. ಕನ್ನಡದ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಧನಂಜಯ್ ನಟಿಸಿದ ಬಡವ ರಾಸ್ಕಲ್ ಸಿನಿಮಾದಷ್ಟೇ ನಿಖಿಲ್ ಕುಮಾರ್ ಸಿನಿಮಾ 'ರೈಡರ್' ಕೂಡ ಬೇಜಾನ್ ಸದ್ದು ಮಾಡಿದೆ. ಕ್ರಿಸ್‌ಮಸ್ ರಜೆಯ ಈ ಸಂದರ್ಭದಲ್ಲಿ ಸುಮಾರು 250 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ 'ರೈಡರ್' ಸಿನಿಮಾ ರೈಡ್ ಮಾಡಲು ಮುಂದಾಗಿದೆ.

ಥಿಯೇಟರ್‌ಗೆ ಮೆರವಣಿಗೆ ಹೊರಟ ನಿಖಿಲ್ ಕುಮಾರ್

ನಿಖಿಲ್ ಕುಮಾರ್ ಬೆಳಗ್ಗೆ 9 ಗಂಟೆಗೆ ಆನಂದ್ ರಾವ್ ವೃತ್ತದಿಂದ ಅನುಪಮ ಚಿತ್ರಮಂದಿರದವರೆಗೆ ಮೆರವಣಿಗೆ ಬರಲಿದ್ದಾರೆ. ಅಭಿಮಾನಿಗಳು ಸ್ಯಾಂಡಲ್‌ವುಡ್ ಯುವರಾಜನಿಗೆ ಸಾಥ್ ನೀಡಲಿದ್ದು, ಚಿತ್ರಮಂದಿರದ ಮುಂದೆ ಭರ್ಜರಿ ಸಂಭ್ರಮ ಹಮ್ಮಿಕೊಂಡಿದೆ. ಮೊದಲ ದಿನ ಬೆಳಗ್ಗೆ 10 ಗಂಟೆಯಿಂದಲೇ ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ನಿಖಿಲ್ ಕುಮಾರ್ ಭೇಟಿ ನೀಡಲಿದ್ದಾರೆ. ನಿಖಿಲ್ ಕುಮಾರ್ ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಲಿದ್ದಾರೆ.

Rider release Nikhil Kumar will go to procession from Anand Rao Circle to Anupama Theater

ನಿಖಿಲ್ ಕುಮಾರ್‌ಗೆ 'ರೈಡರ್' ವಿಶೇಷವಾದ ಸಿನಿಮಾ. 'ರೈಡರ್' ಸಿನಿಮಾದಲ್ಲಿ ಕೇವಲ ಮಾಸ್ ಸ್ಟೋರಿ ಅಷ್ಟೇ ಅಲ್ಲ. ಈ ಸಿನಿಮಾದಲ್ಲಿ ಲವ್‌ಸ್ಟೋರಿ, ಆಕ್ಷನ್ ಜೊತೆಗೆ ಸೆಂಟಿಮೆಂಟ್ ಕೂಡ ಇರಲಿದೆ. ಜೊತೆಗೆ ನಿಖಿಲ್ ಕುಮಾರ್ ಇದೇ ಮೊದಲ ಬಾರಿಗೆ ಬಾಸ್ಕೆಟ್ ಬಾಲ್ ಆಟಗಾರನಾಗಿ ನಿಖಿಲ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಯುವರಾಜನನ್ನು ಈ ಅವತಾರದಲ್ಲಿ ನೋಡಲು ಅಭಿಮಾನಿಗಳು ಇನ್ನಿಲ್ಲದಂತೆ ಕಾತುರದಿಂದ ಕಾಯುತ್ತಿದ್ದಾರೆ.

Rider release Nikhil Kumar will go to procession from Anand Rao Circle to Anupama Theater

ಪತ್ನಿ ರೇವತಿಯಿಂದಲೇ 'ರೈಡರ್' ಸಿನಿಮಾಗೆ ಗ್ರೀನ್ ಸಿಗ್ನಲ್

ನಿಖಿಲ್ ಕುಮಾರ್ 'ರೈಡರ್' ಸಿನಿಮಾವನ್ನು ಈಗಾಗಲೇ ಪತ್ನಿ ರೇವತಿ ವೀಕ್ಷಣೆ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಗೆ ಕೆಲವು ದಿನಗಳ ಹಿಂದೆನೇ ಎಡಿಟ್ ಮಾಡದೆ ಇರುವ ಸಿನಿಮಾವನ್ನು ತೋರಿಸಿದ್ದರು. ಸುಮಾರು ನಾಲ್ಕು ಗಂಟೆಗಳ ಕಾಲ ಇರುವ ಸಿನಿಮಾ ನೋಡಿ ಪತ್ನಿ ರೇವತಿ ಮೆಚ್ಚುಗೆ ಸೂಚಿಸಿದ್ದರು. ಹೀಗಾಗಿ ನಿಖಿಲ್‌ಗೆ ಸಿನಿಮಾ ಬಗ್ಗೆ ಕಾನ್ಫಿಡೆನ್ಸ್ ಬಂದಿದೆ. ಸಿನಿಮಾ ಗೆದ್ದೇ ಗೆಲ್ಲುತ್ತದೆ ಎನ್ನುವ ಅಚಲವಾದ ನಂಬಿಕೆಯಿದೆ.

Rider release Nikhil Kumar will go to procession from Anand Rao Circle to Anupama Theater

ನಿರ್ದೇಶಕ ವಿಜಯ್ ಕುಮಾರ್ ಕೊಂಡ 'ರೈಡರ್' ಸಿನಿಮಾದ ನಿರ್ದೇಶನ ಮಾಡಿದ್ದು, ಮಾಸ್ ಪ್ರಿಯರಿಗೆ ಮಾಸ್ ಎಲಿಮೆಂಟ್ಸ್ ಹಾಗೂ ಕ್ಲಾಸ್ ಪ್ರಿಯರಿಗೆ ಕ್ಲಾಸ್ ಎಲಿಮೆಂಟ್ಸ್ ಅನ್ನು ನೀಡಿದ್ದಾರೆ. ಇನ್ನು ಅರ್ಜುನ್ ಜನ್ಯ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಯುವರಾಜ ನಿಖಿಲ್ ಕುಮಾರ್ ಗೆ ಜೋಡಿಯಾಗಿ ಇಬ್ಬರು ನಾಯಕಿಯರು ಅಭಿನಯಿಸಿದ್ದಾರೆ. ನಾಯಕಿಯಾರಾಗಿ ಯುವ ನಟಿ ಕಾಶ್ಮೀರಿ ಪರ್ದೇಸಿ ನಟಿಸಿದ್ದರೆ, ಅನುಷಾ ರೈ ಮತ್ತೊಬ್ಬ ನಾಯಕಿ. ಹೀಗಾಗಿ ಲವ್ ಸ್ಟೋರಿ ಜೊತೆ ಮಾಸ್ ಸ್ಟೋರಿ ನಾಳೆ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣಲಿದೆ.

More from Filmibeat

English summary
Rider release Nikhil Kumar will go to procession from Anand Rao Circle to Anupama Theater. Rider movie will be releasing on december 24 on Christmas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X