Kantara Chapter 1 Spanish Trailer:ಹೊರಬಿತ್ತು ಕಾಂತಾರ ಸ್ಪಾನಿಷ್ ಟ್ರೈಲರ್; ಕನ್ನಡ ಚಿತ್ರರಂಗದ ಹೊಸ ಅಧ್ಯಾಯ ಆರಂಭ

ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದೆ. 'ಕಾಂತಾರ ಚಾಪ್ಟರ್ 1' ಭಾರತದಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿದೆ. ಈ ಬೆನ್ನಲ್ಲೇ ಕನ್ನಡ ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಮುಂದಾಗಿದೆ. ಈಗಾಗಲೇ ಅನೌನ್ಸ್ ಮಾಡಿದಂತೆ 'ಕಾಂತಾರ ಚಾಪ್ಟರ್ 1' ಇಂಗ್ಲಿಷ್ ವರ್ಷನ್ ಅಕ್ಟೋಬರ್ 31ರಿಂದ ವಿಶ್ವದ ಮೂಲೆ ಮೂಲೆಯಲ್ಲಿ ರಿಲೀಸ್ ಆಗುತ್ತಿದೆ. ಇದರೊಂದಿಗೆ ಸ್ಪಾನಿಷ್ ಭಾಷೆಯಲ್ಲೂ ಸಿನಿಮಾ ಬಿಡುಗಡೆಯಾಗಲಿದೆ.

ವಿಶ್ವದ ಎರಡು ಪ್ರಮುಖ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇಂಗ್ಲಿಷ್ ಹಾಗೂ ಸ್ಪಾನಿಷ್ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ಅವರ ಈ ಸಾಹಸವನ್ನು ಫಿಲ್ಮ್ ಮೇಕರ್ಸ್ ಎದುರು ನೋಡುತ್ತಿದ್ದಾರೆ. ಒಂದು ವೇಳೆ ಈ ಸಾಹಸದಲ್ಲಿ ಹೊಂಬಾಳೆ ಗೆದ್ದರೆ, ಬೇರೆ ಭಾಷೆಗಳಿಗೂ ಮಾದರಿಯಾಗಲಿದೆ. ಅಲ್ಲದೆ ಗ್ಲೋಬಲ್ ಬಾಕ್ಸಾಫೀಸ್‌ನಲ್ಲಿ ಗೆಲುವು ಕಂಡ ಕನ್ನಡದ ಮೊದಲ ಸಿನಿಮಾ ಎನಿಸಿಕೊಳ್ಳಲಿದೆ.

Rishab Shetty and Hombale films Kantara Chapter 1 Spanish Trailer Out here is details

'ಕಾಂತಾರ ಚಾಪ್ಟರ್ 1' ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸುವ ಸಿನಿಮಾ ಆಗುವ ಎಲ್ಲಾ ಲಕ್ಷಣಗಳೂ ಇವೆ. ಇತ್ತ'ಕಾಂತಾರ ಚಾಪ್ಟರ್ 1' ಓಟಿಟಿಯಲ್ಲಿ ರಿಲೀಸ್ ಆಗುತ್ತಿದ್ದರೆ, ಅತ್ತ ಗ್ಲೋಬಲ್ ಬಾಕ್ಸಾಫೀಸ್‌ಗೆ ಲಗ್ಗೆ ಇಡುತ್ತಿದೆ. ಈ ಬೆನ್ನಲ್ಲೇ 'ಕಾಂತಾರ ಚಾಪ್ಟರ್ 1' ಸ್ಪಾನಿಷ್ ಟ್ರೈಲರ್ ರಿಲೀಸ್ ಆಗಿದ್ದು, ನೆಟ್ಟಿಗರು ಪ್ರತಿಕ್ರಿಯೆ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಕಾಂತಾರ 1' ಸ್ಪಾನಿಷ್ ಟ್ರೈಲರ್ ಔಟ್

ರಿಷಬ್ ಶೆಟ್ಟಿ ಸಿನಿಮಾ ಇಲ್ಲಿವರೆಗೂ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಸದ್ದು ಮಾಡಿತ್ತು. ಭಾರತದ ಐದು ಭಾಷೆಗಳಲ್ಲಿ ವಿದೇಶಗಳಲ್ಲಿ ರಿಲೀಸ್ ಆಗಿತ್ತಷ್ಟೇ. ಆದ್ರೀಗ ವಿಶ್ವದಲ್ಲಿ ಅತೀ ಹೆಚ್ಚು ಜನಪ್ರಿಯವಿರುವ ಎರಡು ಪ್ರಮುಖ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಅದರಲ್ಲೊಂದು ಸ್ಪಾನಿಷ್. ಸಿನಿಮಾ ನಿರ್ಮಾಣದಲ್ಲಿ ಸ್ಪೇನ್ ಫಿಲ್ಮ್ ಮೇಕರ್ಸ್ ಮುಂದಿದ್ದಾರೆ. ಅಲ್ಲಿನ ಜನರು ಸಿನಿಮಾವನ್ನು ಇಷ್ಟ ಪಡುತ್ತಾರೆ. ಈಗ ಕನ್ನಡದ ಸಿನಿಮಾವನ್ನು ಅವರ ಇಷ್ಟ ಪಡುತ್ತಾರಾ? ಈ ಕುತೂಹಲವಿದೆ. ಈಗ ಟ್ರೈಲರ್ ಹೊರ ಬಿದ್ದಿದ್ದು, ರಿಯಾಕ್ಷನ್ ಹೇಗಿರುತ್ತೆ? ಅನ್ನೋದನ್ನು ಹೊಂಬಾಳೆ ಫಿಲ್ಮ್ಸ್ ಎದುರು ನೋಡುತ್ತಿದೆ.

ಸ್ಪಾನಿಷ್ ಟ್ರೈಲರ್‌ಗೆ ಮಸ್ತ್ ರೆಸ್ಪಾನ್ಸ್

'ಕಾಂತಾರ ಚಾಪ್ಟರ್ 1' ಸ್ಪಾನಿಷ್ ಟ್ರೈಲರ್‌ಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಟ್ರೈಲರ್ ರಿಲೀಸ್ ಆದ ಕೇವಲ ನಾಲ್ಕು ಗಂಟೆಗಳಲ್ಲಿ ಸುಮಾರು 54 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಆದರೆ, ಇದು ಗ್ಲೋಬಲ್ ಆಡಿಯನ್ಸ್ ಅನ್ನು ತನ್ನತ್ತ ಸೆಳೆಯುತ್ತಾ? ಅನ್ನೋದು ಥಿಯೇಟರ್‌ಗೆ ಎಂಟ್ರಿ ಕೊಟ್ಟ ಬಳಿಕ ಗೊತ್ತಾಗಲಿದೆ. ಸ್ಪಾನಿಷ್ ಟ್ರೈಲರ್‌ಗೆ ಭಾರತದಲ್ಲಂತೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸ್ಪಾನಿಷ್ ಟ್ರೈಲರ್‌ನಲ್ಲಿ ಕನ್ನಡ ಡೈಲಾಗ್

ರಿಷಬ್ ಶೆಟ್ಟಿ ಸಿನಿಮಾ ಸ್ಪಾನಿಷ್ ಆಡಿಯನ್ಸ್ ಇಷ್ಟ ಆಗುತ್ತಾ? ಅನ್ನೋ ಕುತೂಹಲವಂತೂ ಇದ್ದೇ ಇದೆ. ಈ ಟ್ರೈಲರ್‌ನಲ್ಲಿ ಗಮನಿಸ ಬೇಕಾದ ಅಂಶವೊಂದಿದೆ. ರಿಷಬ್ ಶೆಟ್ಟಿ ಹೇಳುವ "ಬೆಳಕಿನಲ್ಲಿ ಎಲ್ಲವೂ ಕಾಣ್ತದೆ.." ಅನ್ನೋ ಡೈಲಾಗ್ ಅನ್ನು ಮಾತ್ರ ಕನ್ನಡದಲ್ಲಿಯೇ ಉಳಿಸಿಕೊಳ್ಳಲಾಗಿದೆ. ಅದಕ್ಕೆ ಸಬ್‌ ಟೈಟಲ್ ಅನ್ನು ಅಳವಡಿಸಿರುವುದು ಮತ್ತೊಂದು ವಿಶೇಷ.

ನೆಟ್ಟಿಗರ ಕಮೆಂಟ್ ಏನು?

"ಕನ್ನಡ ಸಿನಿಮಾ ಇಂಗ್ಲಿಷ್ ಹಾಗೂ ಸ್ಪಾನಿಷ್ ಭಾಷೆಯಲ್ಲಿ ಬಿಡುಗಡೆಯಾಗುತ್ತಿರೋದು ಅದ್ಭುತ. ಇನ್ನೂ ಹೆಚ್ಚಿನ ವಿದೇಶಿ ಭಾಷೆಯಲ್ಲಿ ಬಿಡುಗಡೆ ಮಾಡಿ. ಈ ಎಪಿಕ್ ಸಿನಿಮಾ ಎಲ್ಲರಿಗೂ ತಲುಪಲಿ" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಇನ್ನೊಬ್ಬರು "ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಕ್ಕೆ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಗೆ ಧನ್ಯವಾದಗಳೆಂದು ಹೇಳಿದ್ದಾರೆ. "ಲ್ಯಾಟಿನ್ ಅಮೆರಿಕಾದಲ್ಲಿ ಭಾರತೀಯ ಸಿನಿಮಾಗಳನ್ನು ಪ್ರೀತಿಸುವ ಬಹಳ ಮಂದಿ ಇದ್ದಾರೆ. ತುಂಬಾ ಧನ್ಯವಾದಗಳು." ಎಂದು ಅಲ್ಲಿನ ವ್ಯಕ್ತಿಯೊಬ್ಬರು ಹೇಳಿದ್ದಾರೆ.

More from Filmibeat

English summary
Rishab Shetty and Hombale films Kantara Chapter 1 Spanish Trailer Out here is details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X