ಪ್ರಚಾರಕ್ಕಾಗಿ ವಿಡಿಯೋ ಹಂಚಿಕೊಂಡಿಲ್ಲ: ಬಾಂಬ್ ಅಪಘಾತದ ಬಗ್ಗೆ ರಿಷಬ್ ಶೆಟ್ಟಿ

'ಹೀರೊ' ಸಿನಿಮಾ ಚಿತ್ರೀಕರಣದಲ್ಲಿ ಪೆಟ್ರೋಲ್ ಬಾಂಬ್ ಸಿಡಿಸುವ ವೇಳೆ ಆದ ಅಪಘಾತದಲ್ಲಿ ರಿಷಬ್ ಶೆಟ್ಟಿ ಗೆ ಗಾಯವಾಗಿದೆ ಎಂಬ ಸುದ್ದಿ ಮೂರು ದಿನದ ಹಿಂದಷ್ಟೆ ಹರಿದಾಡಿತ್ತು. ವಿಡಿಯೋ ಒಂದು ವೈರಲ್ ಸಹ ಆಗಿತ್ತು.

ಆದರೆ ಈ ಅಪಘಾತ ಸಂಭವಿಸಿರುವುದು ಈಗಲ್ಲ, ಬದಲಿಗೆ ಕಳೆದ ವರ್ಷದ ಜುಲೈ ತಿಂಗಳ ಅಂತ್ಯದಲ್ಲಿ. ಹೀಗೆಂದು ಸ್ವತಃ ರಿಷಬ್ ಶೆಟ್ಟಿ ಅವರೇ ಹೇಳಿದ್ದಾರೆ.

ವಿಡಿಯೋ ಹಾಗೂ ಸುದ್ದಿಗಳು ವೈರಲ್ ಆಗುತ್ತಿದ್ದಂತೆ ಟ್ವಿಟ್ಟರ್‌ನಲ್ಲಿ ವಿಡಿಯೋ ಪ್ರಕಟಿಸಿದ ರಿಷಬ್ ಶೆಟ್ಟಿ, 'ಅಪಘಾತವಾಗಿರುವ ಬಗ್ಗೆ ಟಿವಿಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ಹರಿದಾಡುತ್ತಿವೆ. ಅಪಘಾತವಾಗಿದ್ದು ನಿಜ, ನನಗೆ ತಲೆ ಹಾಗೂ ಬೆನ್ನಿಗೆ ಗಾಯಗಳಾಗಿದ್ದವು. ಆದರೆ ಈ ಅಪಘಾತ ನಡೆದಿದ್ದು ಇಂದು ನಿನ್ನೆ ಅಲ್ಲ ಬದಲಿಗೆ ಕಳೆದ ವರ್ಷದ ಜುಲೈ ತಿಂಗಳಲ್ಲಿ' ಎಂದು ಹೇಳಿದ್ದಾರೆ ರಿಷಬ್ ಶೆಟ್ಟಿ.

ಪ್ರಚಾರದ ಉದ್ದೇಶಕ್ಕೆ ಹೀಗೆ ಮಾಡಿಲ್ಲ: ರಿಷಬ್

ಪ್ರಚಾರದ ಉದ್ದೇಶಕ್ಕೆ ಹೀಗೆ ಮಾಡಿಲ್ಲ: ರಿಷಬ್

ಕಳೆದ ವರ್ಷ ನಡೆದ ಅಪಘಾತದ ವಿಡಿಯೋವನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ರಿಷಬ್, ನಮ್ಮ 'ಹೀರೊ' ಸಿನಿಮಾದ ಬಿಡುಗಡೆ ಹತ್ತಿರ ಬಂದಿದೆ, ಈ ಕಾರಣ ನಾವು ನಮ್ಮ ಸಿನಿಮಾದ ಮೇಕಿಂಗ್ ವಿಡಿಯೋ ಹಾಗೂ ಇನ್ನಿತರೆ ವಿಡಿಯೋಗಳನ್ನು ಕೆಲವು ಟಿವಿ, ವೆಬ್ ಪೋರ್ಟ್‌ಲ್‌ಗಳಿಗೆ ನೀಡಿದ್ದೆವು, ಆದರಲ್ಲಿ ಈ ವಿಡಿಯೋ ಸಹ ಸೇರಿಕೊಂಡುಬಿಟ್ಟಿದೆ, ಅಪಘಾತದ ವಿಡಿಯೋವನ್ನು ಪ್ರಚಾರಕ್ಕೆ ಬಳಸುವ ಉದ್ದೇಶ ನಮಗೆ ಇರಲಿಲ್ಲ' ಎಂದಿದ್ದಾರೆ ರಿಷಬ್.

ರವಿಚಂದ್ರನ್, ಅನಿರುದ್ಧ ಅವರುಗಳು ಕರೆ ಮಾಡಿದ್ದರು: ರಿಷಬ್

ರವಿಚಂದ್ರನ್, ಅನಿರುದ್ಧ ಅವರುಗಳು ಕರೆ ಮಾಡಿದ್ದರು: ರಿಷಬ್

'ವಿಡಿಯೋ ಹಾಗೂ ಸುದ್ದಿ ವೈರಲ್ ಆಗುತ್ತಿದ್ದಂತೆ ಹಲವಾರು ಮಂದಿ ಸಿನಿಪ್ರಮುಖರು ನನಗೆ ಕರೆ ಮಾಡಿ ವಿಚಾರಿಸಿದರು. ರವಿಚಂದ್ರನ್, ಅನಿರುದ್ಧ ಹಾಗೂ ಇನ್ನೂ ಹಲವು ಮಂದಿ ಕರೆ ಮಾಡಿದ್ದರು. ಮಾಧ್ಯಮದವರು, ಜನರು, ಅಭಿಮಾನಿಗಳು ಎಲ್ಲರೂ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು, ಅವರಿಗೆ ಧನ್ಯವಾದ, ಎಲ್ಲರ ಆಶೀರ್ವಾದಿಂದ ನಾವು ಸುರಕ್ಷಿತವಾಗಿದ್ದೇವೆ' ಎಂದಿದ್ದಾರೆ ರಿಷಬ್ ಶೆಟ್ಟಿ.

'ಬಾಂಬ್ ಸ್ಪೋಟಿಸಿರುವುದು ಅರಣ್ಯ ಪ್ರದೇಶದಲ್ಲಿ ಅಲ್ಲ'

'ಬಾಂಬ್ ಸ್ಪೋಟಿಸಿರುವುದು ಅರಣ್ಯ ಪ್ರದೇಶದಲ್ಲಿ ಅಲ್ಲ'

'ವಿಡಿಯೋದಲ್ಲಿ ನಾವು ಬಾಂಬ್ ಬ್ಲಾಸ್ಟ್ ಮಾಡಿರುವುದು ಅರಣ್ಯ ಪ್ರದೇಶದಲ್ಲಿ ಅಲ್ಲ ಬದಲಿಗೆ ಖಾಸಗಿ ಸ್ವತ್ತಿನಲ್ಲಿ. ಕಾಫಿ ಎಸ್ಟೇಟ್‌ನಲ್ಲಿ ಸಿನಿಮಾದ ಪೂರ್ಣ ಚಿತ್ರೀಕರಣ ಮಾಡಿದ್ದೇವೆ. ಅಲ್ಲಿಯೇ ಬಾಂಬ್ ಬ್ಲಾಸ್ಟ್ ಸಹ ಮಾಡಿದ್ದು' ಎಂದು ಮಾಹಿತಿ ನೀಡಿದ್ದಾರೆ ರಿಷಬ್ ಶೆಟ್ಟಿ.

Recommended Video

Yash Next Movie : ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು? | Filmibeat Kannada
ಮಾರ್ಚ್ 5 ಕ್ಕೆ ಸಿನಿಮಾ ಬಿಡುಗಡೆ

ಮಾರ್ಚ್ 5 ಕ್ಕೆ ಸಿನಿಮಾ ಬಿಡುಗಡೆ

ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಹೀರೊ' ಸಿನಿಮಾ ಇದೇ ಮಾರ್ಚ್ 5 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ವಿಲನ್ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ಕಿರುತೆರೆ ನಟಿ ಗಾನವಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ನಿರ್ದೇಶನ ಮಾಡಿರುವುದು ಎಂ ಭರತ್ ರಾಜ್. ನಿರ್ಮಾಣ ರಿಷಬ್ ಶೆಟ್ಟಿ ಅವರದ್ದು.

More from Filmibeat

English summary
Actor, director Rishab Shetty clarification about petrol bomb accident video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X