ಇದು ದೈವ ಮಾಡಿದ್ದಾ? ದೈವ ನರ್ತಕ ಮಾಡಿದ್ದಾ? ರಿಷಬ್ ಶೆಟ್ಟಿ ಹರಕೆ ವಿವಾದಕ್ಕೆ ಸಿಲುಕಿದ್ದೇಕೆ?

'ಕಾಂತಾರ ಚಾಪ್ಟರ್ 1' ಮೆಗಾ ಬ್ಲಾಕ್‌ಬಸ್ಟರ್ ಆಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿ, ನಟಿಸಿದ್ದರು. ಹೀಗಾಗಿ ತಮ್ಮ ತಂಡವನ್ನು ಕರೆದುಕೊಂಡು ಹರಕೆ ತೀರಿಸುವುದಕ್ಕೆ ಮಂಗಳೂರಿಗೆ ತೆರಳಿದ್ದರು. ಅಲ್ಲಿ ಕೋಲ ಮಾಡಿಸಿ ಹರಕೆಯನ್ನು ತೀರಿಸಿ ಬಂದಿದ್ದರು. ಈ ಇದೇ ಹರಕೆ ರಿಷಬ್ ಶೆಟ್ಟಿಯನ್ನು ವಿವಾದಕ್ಕೆ ಎಳೆದಿದೆ. ತುಳುನಾಡಿನ ದೈವ ನರ್ತಕ ಆಕ್ರೋಶಕ್ಕೆ ಕಾರಣವಾಗಿದೆ.

ಹರಕೆ ತೀರಿಸುವ ಸಮಯದಲ್ಲಿ ದೈವ ನರ್ತಕರು ರಿಷಬ್ ಶೆಟ್ಟಿಯ ತೊಡೆಯ ಮೇಲೆ ಮಲಗಿದ್ದರು. ಇದು ತುಳುನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೈವನರ್ತಕನ ಈ ನಡೆಯನ್ನು ಖಂಡಿಸಿದ್ದಾರೆ. ರಿಷಬ್ ಶೆಟ್ಟಿ ಕಾಲ ಮೇಲೆ ಮಲಗಿದ್ದು ದೈವ ಪಂಜುರ್ಲಿ ಅಲ್ಲ ದೈವ ನರ್ತಕ ಎಂದು ಹೇಳುತ್ತಿದ್ದಾರೆ. ಇದು ರಿಷಬ್ ಶೆಟ್ಟಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

Rishab Shetty facing controversy for violating daivaradhane rules while harake kola

ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು ಹಾಗೂ ಅವರ ತಂಡ ಮಂಗಳೂರಿನ ಬಾರೆಬೈಲ್ ಎಂಬಲ್ಲಿ ರಿಷಬ್ ಶೆಟ್ಟಿ ಹರಕೆಯನ್ನು ತೀರಿಸಿದ್ದಾರೆ. ಈ ವೇಳೆ ನಡೆದ ಈ ಘಟನೆಗೆ ತುಳುನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವೇಳೆ ದೈವರಾಧಕ ನಡೆದುಕೊಂಡ ರೀತಿಗೆ ಅಲ್ಲಿನ ಜನರು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಈ ಹರಕೆಯ ಕೋಲಾ ದೈವಾರಾಧನೆಗೆ ವಿರುದ್ಧವಾಗಿದೆ ಎನ್ನಲಾಗಿದೆ. ಈ ಹರಕೆ ಬಗ್ಗೆ ದೈವ ನರ್ತಕ ಪ್ರತಿಕ್ರಿಯೆ ಏನು? ಅವರ ಆಕ್ರೋಶಕ್ಕೆ ಏನು ಕಾರಣ? ತಿಳಿಯುವುದಕ್ಕೆ ಮುಂದೆ ಓದಿ.


ವಿವಾದಕ್ಕೆ ಕಾರಣವಾಯ್ತು ರಿಷಬ್ ಶೆಟ್ಟಿ ಹರಕೆ ಕೋಲಾ

ರಿಷಬ್ ಶೆಟ್ಟಿ ಹರಕೆ ತೀರಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ತುಳುನಾಡಿನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. "ದೈವಗಳು ಹೀಗೆಲ್ಲ ವರ್ತನೆ ಮಾಡುವುದಿಲ್ಲ. ರಿಷಬ್ ಕಾಲ ಮೇಲೆ ಮಲಗಿದ್ದು ಪಂಜುರ್ಲಯಲ್ಲ.. ಅದಯ ದೈವ ನರ್ತಕ" ಎಂದು ಸೋಶಿಯಲ್ ಮೀಡಿಯಾದಲ್ಲೂ ಕಿಡಿಕಾರುತ್ತಿದ್ದಾರೆ. ಈ ಬಗ್ಗೆ ದೈವರಾಧಕ ತಮ್ಮಣ್ಣ ಟಿವಿ‌ 9ಗೆ ಪ್ರತಿಕ್ರಿಯೆ ನೀಡಿದ್ದು, ಮುಂದಿನ ದಿನಗಳಲ್ಲಿ ಭಾರೀ ದೊಡ್ಡ ಬೆಲೆ ತರಬೇಕಾಗುತ್ತೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸಿನಿಮಾದಿಂದ ದೈವ ಬೀದಿಗೆ ಬಂದಿವೆ

"ಕಾಂತಾರದಿಂದಲೇ ದೈವಗಳು ಬೀದಿಗೆ ಬಂದಿವೆ. ಈ ಹರಕೆಯಿಂದ ದೈವಾರಾಧನೆ ಸಂಪೂರ್ಣ ಮುಗಿದಿದೆ ಎನ್ನುವ ಮಟ್ಟಕ್ಕೆ ಬಂದಿದೆ. ರಿಷಬ್ ಶೆಟ್ಟಿಗೆ ಡೇಟ್ ಇದೆ ಎಂದು ಮಂಜುನಾಥನನ್ನು ಬದಿಗೆ ಬಿಟ್ಟು ನೇಮ ಮಾಡಿದವರು ಇವರು. ದೈವದ ನೇಮದಲ್ಲಿ ನರ್ತಕ ಹಾಕಿದ ಹಾವ-ಭಾವ ಡ್ರೆಸ್‌ಗಳೆಲ್ಲವೂ ದೈವರಾಧನೆಗೆ ವಿರುದ್ಧ. ದೈವರಾಧನೆಯಲ್ಲಿ ಕೆಂಪು ಬಟ್ಟೆ ಕೆಂಪು ಅಂಗಿಗಳೆಲ್ಲವೂ ಇದೆ. ಆ ಸಮಯದಲ್ಲಿ ಬಿಳಿಯ ಬಟ್ಟೆ, ಬಿಳಿಯ ಮುಂಡಾಸು ಮಾತ್ರ ಹಾಕುವಂತಹದ್ದು. ಆ ಸಮಯದಲ್ಲಿ ಡ್ಯಾನ್ಸರ್‌ಗಳು ಹಾಕುವಂತಹ ಬಟ್ಟೆ ಹಾಕಬಾರದು. ದೈವ ಒಳಗೆ ಹೋಗಿ ಕತ್ತಲೆಯನ್ನು ತೆಗೆದು ತಲೆಗೆ ಹೊಡೆಯಲಿಕ್ಕೆ ಇಲ್ಲ." ಎಂದು ತಮ್ಮಣ್ಣ ಹೇಳಿದ್ದಾರೆ.

Rishab Shetty facing controversy for violating daivaradhane rules while harake kola

ದೈವಾರಾಧನೆ ನಿಯಮಕ್ಕೆ ವಿರುದ್ಧ

ಹಾಗೇ ದೈವಾರಾಧಕನ ಹಾವ-ಭಾವ ಎಲ್ಲವೂ ದೈವಾರಾಧನೆಗೆ ವಿರುದ್ಧವಾಗಿದೆಯೆಂದು ಹೇಳಿದ್ದಾರೆ. "ಅಲ್ಲಿ ಮೊನ್ನೆ ನಡೆದ ನೇಮವಾಗಲಿ, ಅಲ್ಲಿರುವಂತಹ ಹಾವ-ಭಾವಗಳಾಗಲಿ, ರಿಷಬ್ ಶೆಟ್ಟಿಯ ಮಡಿಲಲ್ಲಿ ಕೂತವನಿಗೆ ಮುತ್ತಿಡುವುದಾಗಲಿ, ಅವನನ್ನು ತಬ್ಬುವುದಾಗಲಿ, ಇದೆಲ್ಲವೂ ದೈವಾರಾಧನೆ ನಿಯಮಕ್ಕೆ ವಿರುದ್ಧವಾಗಿದೆ. ನಮಗೆ ನೋಡಿದವರಿಗೆ ಭಯ ಆಗುತ್ತಿದೆ. ಮಾಧ್ಯಮದಲ್ಲಿ ನೋಡಿದವರು ಏನು ತಿಳಿದುಕೊಳ್ಳಬಹುದು. ಇದು ತಪ್ಪಲ್ವಾ?" ಎಂದಿದ್ದಾರೆ.

ದೊಡ್ಡ ಬೆಲೆ ತರಬೇಕಾಗುತ್ತೆ

"ನಾವು ಏನೂ ಮಾಡುವುದಿಲ್ಲ. ನಾವು ದೈವವನ್ನು ಪ್ರಾರ್ಥಿಸಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಭಾರೀ ದೊಡ್ಡ ಬೆಲೆ ತರಬೇಕಾಗುತ್ತೆ. ಜನರನ್ನು ಮೆಚ್ಚಿಸುವುದಕ್ಕೆ, ಇವರ ಕ್ಷೇತ್ರವನ್ನು ಪ್ರಚಾರ ಮಾಡುವುದಕ್ಕೆ ರಿಷಬ್ ಶೆಟ್ಟಿಯನ್ನು ರಾಯಬಾರಿಯನ್ನಾಗಿ ಮಾಡುವುದಕ್ಕೆ. ದೂರದ ಭಕ್ತರನ್ನು ಕರೆಸಿ, ಮೋಸ ಮಾಡಿ ಮಾಡುವಂತಹ ಕೆಲಸಗಳಿವು." ಎಂದು ದೈವಾರಾಧಕ ತಮ್ಮಣ್ಣ ಆಕ್ರೋಶ ಹೊರ ಹಾಕಿದ್ದಾರೆ.

More from Filmibeat

English summary
Rishab Shetty facing controversy for violating daivaradhane rules while harake kola.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X