₹818 ಕೋಟಿ.. ಕರ್ನಾಟಕದಿಂದಲೇ ₹250 ಕೋಟಿ.. 'ಕಾಂತಾರ ಚಾಪ್ಟರ್ 1' ಮಾಡಿದ ಸಾಧನೆಗಳೇನು?
ಕನ್ನಡದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಾಧನೆ ಮಾಡುತ್ತಿವೆ. ಇವುಗಳ ಸಕ್ಸಸ್ ರೇಟ್ ಶೇ.90ರಷ್ಟು ಇದೆ ಎಂದು ಹೇಳಬಹುದು. ಇದರಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಸಿನಿಮಾಗಳೇ ಹೆಚ್ಚು ಅನ್ನೋದು ವಿಶೇಷ. ಇತ್ತೀಚೆಗೆ ತೆರೆಕಂಡ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿ ಸಿನಿಮಾ 'ಕಾಂತಾರ ಚಾಪ್ಟರ್ 1' ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೆಲವು ಸಾಧನೆಗಳನ್ನು ಮಾಡಿದೆ.
ಅಕ್ಟೋಬರ್ 2 ರಂದು ರಿಲೀಸ್ ಆಗಿದ್ದ 'ಕಾಂತಾರ ಚಾಪ್ಟರ್ 1' ದೇಶಾದ್ಯಂತ ಸದ್ದು ಮಾಡಿದೆ. ಇನ್ನೇ ಕೆಲವೇ ದಿನಗಳಲ್ಲ ವಿಶ್ವದಾದ್ಯಂತ ಸದ್ದು ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇಂಗ್ಲಿಷ್‌ಗೆ ಡಬ್ ಆಗಿ ಸಿನಿಮಾ ವಿಶ್ವದ ಹಲವು ದೇಶಗಳಲ್ಲಿ ರಿಲೀಸ್ ಆಗಲಿದೆ. ಅದರಲ್ಲೂ ಸುಮಾರು 500 ರಿಂದ 700 ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿರೋದು ಮತ್ತೊಂದು ವಿಶೇಷ.

ಉತ್ತರ ಅಮೆರಿಕಾ, ಲಾಟಿನ್ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಯುಕೆ, ಯುರೋಪ್ ಹಾಗೂ ಅರಬ್ ದೇಶಗಳಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಲಿದೆ. ಈ ಹಿಂದೆ 'ಕಾಂತಾರ ಚಾಪ್ಟರ್ 1' ಅರಬ್ ದೇಶಗಳಲ್ಲಿ ಬಿಡುಗಡೆ ಆಗೋದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದ್ರೀಗ ಅಲ್ಲೂ ಸಿನಿಮಾ ರಿಲೀಸ್ ಆಗುತ್ತಿರೋದಾಗ ಚಿತ್ರತಂಡದಿಂದ ಸಿಕ್ಕಿರುವ ಮಾಹಿತಿ. ಇನ್ನೊಂದು ಕಡೆ ಭಾರತದ ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾ ಟಾಪ್‌ನಲ್ಲಿದೆ. ಹಾಗಿದ್ದರೆ, ಇಲ್ಲಿವರೆಗೂ ಈ ಸಿನಿಮಾದ ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು? 23 ದಿನಗಳಲ್ಲಿ ರಿಷಬ್ ಶೆಟ್ಟಿ ಸಿನಿಮಾ ಮಾಡಿದ ಸಾಧನೆಗಳ ಪಟ್ಟಿ ಇಲ್ಲಿದೆ.
'ಕಾಂತಾರ ಚಾಪ್ಟರ್ 1' ವರ್ಲ್ಡ್‌ವೈಡ್ ಕಲೆಕ್ಷನ್
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ಕಾಂತಾರ ಚಾಪ್ಟರ್ 1' ಸಿನಿಮಾದ್ದು ಭಾರತದ್ದೇ ಒಂದು ಕಲೆಕ್ಷನ್ ಆದರೆ, ವಿದೇಶದ್ದೇ ಒಂದು. ವಿಶ್ವದಾದ್ಯಂತ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗಾಗಲೇ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇಲ್ಲಿಂದಲೇ ಸಿನಿಮಾ ಸುಮಾರು ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಕನ್ನಡ ಸಿನಿಮಾವೊಂದರ ಸಾಧನೆ. ಸದ್ಯ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ವರ್ಲ್ಡ್‌ವೈಡ್ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ರಿಲೀಸ್ ಮಾಡಿದೆ. ವಿಶ್ವದಾದ್ಯಂತ ಈ ಸಿನಿಮಾ ₹818+ ಕೋಟಿ (Gross) ಎಂದು ಹೇಳಿದೆ.
'ಕಾಂತಾರ ಚಾಪ್ಟರ್ 1' ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕೆಲವು ಅದ್ಭುತ ದಾಖಲೆಗಳನ್ನು ಸೃಷ್ಟಿಸಿದೆ. ವಿಶ್ವದಾದ್ಯಂತ ಈ ಸಿನಿಮಾ ಒಂದೊಂದೇ ದಾಖಲೆಗಳನ್ನು ಮುರಿಯುತ್ತಾ ಮುಂದೆ ಸಾಗುತ್ತಿದೆ. ದೇಶ-ವಿದೇಶದಲ್ಲಿ ಬರೆದ ಸಾಧನೆಗಳ ಪಟ್ಟಿ ಇಲ್ಲಿದೆ. ಇನ್ನು ಕರ್ನಾಟಕದಲ್ಲಿ ಮೂರನೇ ವಾರವೂ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.
2025ರ ಅತ್ಯಧಿಕ ಗಳಿಕೆ ಕಂಡ ಭಾರತದ ಸಿನಿಮಾ
ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಜಾಗತಿಕ ಮಟ್ಟದಲ್ಲಿ ಉತ್ತಮ ಕಲೆಕ್ಷನ್ ಆಗಿದೆ. ಜಾಗತಿಕ ಮಟದಲ್ಲಿ ₹818+ ಕೋಟಿ ಗಳಿಕೆ ಮಾಡಿದೆ. ಈ ಮೂಲಕ 'ಕಾಂತಾರ ಚಾಪ್ಟರ್ 1' ಸಿನಿಮಾವು 2025ರಲ್ಲಿ ಅತ್ಯಧಿಕ ಗಳಿಕೆಯ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ.

ಕರ್ನಾಟಕದಲ್ಲಿ ದಾಖಲೆ ಕಲೆಕ್ಷನ್
ಹೊಂಬಾಳೆ ನಿರ್ಮಿಸಿರೋ ಈ ಸಿನಿಮಾ ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸಿದೆ. ರಾಜ್ಯವೊಂದರಲ್ಲೇ ಸುಮಾರು ₹250 ಕೋಟಿ ಕಲೆಕ್ಷನ್ ಮಾಡಿದೆ. ಈ ಸಾಧನೆ ಮಾಡಿದ ಮೊದಲ ಕನ್ನಡ ಸಿನಿಮಾ ಎಂಬ ಐತಿಹಾಸಿಕ ದಾಖಲೆಯನ್ನು ಬರೆದಿದೆ.
ಕರ್ನಾಟಕದಲ್ಲಿ ಕನ್ನಡ ವರ್ಷನ್‌ಗಳಿದ್ದೇ ಹೆಚ್ಚು
'ಕಾಂತಾರ ಚಾಪ್ಟರ್ 1' ಕನ್ನಡದ ಚಿತ್ರರಂಗದಲ್ಲಿ ಇತಿಹಾಸದಲ್ಲಿ ಒಂದೊಂದು ಮೈಲಿಗಲ್ಲನ್ನು ಸೃಷ್ಟಿಸುತ್ತಾ ಮುನ್ನುಗ್ಗುತ್ತಿದೆ. ಕರ್ನಾಟಕದಲ್ಲಿ ಕೇವಲ ಕನ್ನಡ ವರ್ಷನ್‌ನಿಂದ ಕಲೆಕ್ಷನ್ ಆಗಿದ್ದು ಬರೋಬ್ಬರಿ ₹200 ಕೋಟಿ ರೂಪಾಯಿ. ಈ ಮೂಲಕ 'ಕಾಂತಾರ ಚಾಪ್ಟರ್ 1' ಹೊಸ ಇತಿಹಾಸವನ್ನು ಬರೆದಿದೆ. ಇದೂವರೆಗಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. 'ಕಾಂತಾರ ಚಾಪ್ಟರ್ 1' ಸಿನಿಮಾ ಕನ್ನಡ ನೆಲದ ಕಥೆ, ಸಂಸ್ಕೃತಿ ಮತ್ತು ನಂಬಿಕೆಯನ್ನು ವಿಶ್ವದಾದ್ಯಂತ ಪ್ರಸ್ತುತಪಡಿಸುವುದಕ್ಕೆ ಈಗ ಸಿದ್ಧತೆಗಳನ್ನು ಮಾಡಿಕೊಂಡಿದೆ.


Click it and Unblock the Notifications











