ಅಮಿತಾಬ್ ಬಚ್ಚನ್ ಮುಂದೆ ಹಾಟ್ ಸೀಟ್‌ನಲ್ಲಿ ರಿಷಬ್ ಶೆಟ್ಟಿ; ಎಲ್ಲಾ 'ಕಾಂತಾರ' ಲೆಕ್ಕಾಚಾರ!
ರಿಷಬ್ ಶೆಟ್ಟಿ ವೃತ್ತಿ ಬದುಕಿಗೆ ಮತ್ತೊಂದು ಮೆಗಾ ಯಶಸ್ಸು ಸಿಕ್ಕಿದೆ. 'ಕಾಂತಾರ ಚಾಪ್ಟರ್ 1' ಸ್ಯಾಂಡಲ್‌ವುಡ್ ಅನ್ನು ಮತ್ತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದೆ. ಸಿನಿಮಾ ರಿಲೀಸ್ ಆಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ದಕ್ಷಿಣ ಭಾರತ ಸೇರಿದಂತೆ ಉತ್ತರ ಭಾರತದಲ್ಲಿ ಸಿನಿಮಾ ನೋಡಿ ಅಭಿಮಾನಿಗಳು ಕಳೆದು ಹೋಗಿದ್ದಾರೆ. ಅದರಲ್ಲೂ ಹಿಂದಿ ಏರಿಯಾಗಳಲ್ಲಿ ಈ ಸಿನಿಮಾಗೆ ಕ್ರೇಜಿ ರೆಸ್ಪಾನ್ಸ್ ಸಿಗುತ್ತಿದೆ.
ಸಿನಿಮಾ ರಿಲೀಸ್ ಆಗಿ 10 ದಿನಗಳಾಗಿವೆ. ಎರಡನೇ ವೀಕೆಂಡ್‌ಗೆ ಸಿನಿಮಾ ಕಾಲಿಟ್ಟಿದೆ. ಆದರೂ ಕ್ರೇಜ್ ಮಾತ್ರ ಹಾಗೇ ಇದೆ. ಸಿನಿಮಾದ ಟಿಕೆಟ್‌ಗಳಿಗೆ ಅದೇ ಬೇಡಿಕೆ ಇದೆ. ಸಿನಿಮಾ ಬಿಡುಗಡೆಯಾದ 9 ದಿನಗಳಲ್ಲಿ ವಿಶ್ವದಾದ್ಯಂತ ಸುಮಾರು 540 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಎಲ್ಲಾ ಚಿತ್ರರಂಗದ ಸಿನಿಮಾ ಮಂದಿ ನಿಬ್ಬೆರಗಾಗುವಂತೆ ಮಾಡಿದೆ.

'ಕಾಂತಾರ' ಟೀಮ್ ನಿರೀಕ್ಷೆ ಮಾಡಿದಂತೆ ಹಿಂದಿ ಏರಿಯಾಗಳಲ್ಲಿ ಹೆಚ್ಚು ರೆಸ್ಪಾನ್ಸ್ ಸಿಗುತ್ತಿದೆ. ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಏರಿಕೆಯಾಗುತ್ತಲೇ ಇದೆ. ಹೀಗಾಗಿ ರಿಷಬ್ ಅಂಡ್ ಟೀಮ್ ಅಲ್ಲಿಯೇ ಹೆಚ್ಚು ಪ್ರಚಾರವನ್ನು ಮಾಡುತ್ತಿದ್ದಾರೆ. ಈಗಾಗಲೇ ರಿಷಬ್ ಶೆಟ್ಟಿ ನ್ಯಾಷನಲ್ ನ್ಯೂಸ್ ಚಾನೆಲ್‌ಗಳಿಗೆ ಸಂದರ್ಶನವನ್ನು ನೀಡುತ್ತಿದ್ದು, ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈಗ ಬಾಲಿವುಡ್ ಮೆಗಾ ಸ್ವಾರ್ ಅಮಿತಾಬ್ ಬಚ್ಚನ್ ನಿರೂಪಣೆ ಮಾಡುತ್ತಿದ್ದರು 'ಕೌನ್ ಬನೇಗ ಕರೋಡ್ಪತಿ' ಸೀಸನ್ 17ರ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವೈರಲ್ ಆಗುತ್ತಿರುವ ಫೋಟೊಗಳನ್ನು ನೋಡಿ. ನೆಟ್ಟಿಗರು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.
ಅಮಿತಾಬ್ ಬಚ್ಚನ್ ಅಂತ ಮೇರು ನಟನನ್ನು ಭೇಟಿ ಮಾಡಬೇಕು ಅನ್ನೋದು ಹಲವು ಕಲಾವಿದರ ಕನಸು. ರಿಷಬ್ ಶೆಟ್ಟಿಯ ಈ ಕನಸನ್ನು 'ಕಾಂತಾರ ಚಾಪ್ಟರ್ 1' ಈಡೇರಿಸಿದೆ. 'ಕಾಂತಾರ ಚಾಪ್ಟರ್ 1' ಅನ್ನು ಹಿಂದಿ ಪ್ರೇಕ್ಷಕರಿಗೆ ಇನ್ನೂ ಹೆಚ್ಚು ತಲುಪಿಸುವ ಸಲುವಾಗಿ ಪ್ರಚಾರದಲ್ಲಿರುವ ರಿಷಬ್ ಶೆಟ್ಟಿ 'ಕೌನ್ ಬನೇಗ ಕರೋಡ್ಪತಿ' ಸೀಸನ್ 17ರಲ್ಲಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದಾರೆ.
ಭಾರತದ ಕಿರುತೆರೆಯ ಅತ್ಯಂತ ಜನಪ್ರಿಯ ಕ್ಚಿಜ್ ರಿಯಾಲಿಟಿ ಶೋ 'ಕೌನ್ ಬನೇಗ ಕರೋಡ್ಪತಿ' 17ನೇ ಆವೃತ್ತಿ ನಡೆಯುತ್ತಿದೆ. ಈ ಶೋ ಅನ್ನು ಪ್ರತಿಬಾರಿಯಂತೆ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದಾರೆ. ಈಗಾಗಲೇ ಈ ಶೋಗೆ ಹಲವು ಮಂದಿ ವಿಶೇಷ ಅಥಿತಿಯಾಗಿ ಆಗಮಿಸುತ್ತಿದ್ದಾರೆ. ಈಗ ಎಲ್ಲಾ ಕಡೆ ಕಾಂತಾರ ಹವಾ ಇರುವುದರಿಂದ ಈ ರಿಯಾಲಿಟಿ ಶೋಗೆ ರಿಷಬ್ ಶೆಟ್ಟಿ ಕೂಡ ಎಂಟ್ರಿಕೊಟ್ಟಿದ್ದಾರೆ. ಬಿಗ್ ಬಿ ಜೊತೆ ರಿಷಬ್ ಕಾಣಿಸಿಕೊಳ್ಳುತ್ತಿದ್ದಂತೆ ನೆಟ್ಟಿಗರು ಫುಲ್ ಅಲರ್ಟ್ ಆಗಿದ್ದಾರೆ.
ಇಂದು (ಅಕ್ಟೋಬರ್ 11) ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ 83ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಬಿಗ್ ಬಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿ ರಿಷಬ್ ಶೆಟ್ಟಿ ಜೊತೆಗಿರುವ ಫೋಟೊವನ್ನು ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ. ಸದ್ಯ ಫೋಟೊವನ್ನಷ್ಟೇ ಹಂಚಿಕೊಂಡಿದ್ದು, ಸಂಚಿಕೆ ಯಾವಾಗ ಪ್ರಸಾರ ಆಗುತ್ತೆ ಅನ್ನೋದು ಇನ್ನೂ ತಿಳಿದು ಬಂದಿದಲ್ಲ.
ಇನ್ನು 'ಕಾಂತಾರ ಚಾಪ್ಟರ್ 1' ಕನ್ನಡ ವರ್ಷನ್ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದರೆ, ಹಿಂದಿ ವರ್ಷನ್ ಉತ್ತರ ಭಾರತದ ಏರಿಯಾಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಅಲ್ಲೂ ಕೂಡ ಈಗಾಗಲೇ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನೂ ದೀಪಾವಳಿ ಹಬ್ಬ ಸೇರಿದಂತೆ ರಜೆಯ ದಿನಗಳಲ್ಲಿ ಈ ಸಿನಿಮಾ ಇನ್ನೂ ಹೆಚ್ಚು ಕಲೆಕ್ಷನ್ ಮಾಡುವ ಎಲ್ಲಾ ಸಾಧ್ಯತೆಗಳು ಇವೆ.


Click it and Unblock the Notifications











