Kantara Chapter 1: 17 ನಿಮಿಷದಲ್ಲಿ 1100 ಟಿಕೆಟ್‌ಗಳು ಸೇಲ್.. 3 ದಿನ ಟಿಕೆಟ್ ಬುಕ್

ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಬಿಡುಗಡೆಯಾದಲ್ಲಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮೊದಲ ದಿನ ಸಿನಿಮಾ ಬಂಪರ್ ಕಲೆಕ್ಷನ್ ಮಾಡಿದ್ದು, ಹೊಂಬಾಳೆ ಫಿಲ್ಮ್ಸ್ ಅಧಿಕೃತ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಬಿಡುಗಡೆ ಮಾಡಿದೆ. ವಿಶ್ವದಾದ್ಯಂತ ರಿಲೀಸ್ ಆಗಿದ್ದ ಸಿನಿಮಾ ನಿರೀಕ್ಷೆ ಮೀರಿ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ವರ್ಲ್ಡ್‌ವೈಡ್ 89 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೊಂಬಾಳೆ ಹೇಳಿಕೊಂಡಿದೆ.

ಈ ಮಧ್ಯೆ ಸಿನಿಮಾಗೆ ಸಿಕ್ಕಿದ ರೆಸ್ಪಾನ್ಸ್ ನೋಡಿ ಸ್ಕ್ರೀನ್‌ಗಳನ್ನು ಮತ್ತಷ್ಟು ಏರಿಕೆ ಮಾಡಲಾಗಿದೆ. ಕೆಲವು ಚಿತ್ರಮಂದಿರಗಳಲ್ಲಿ 'ಕಾಂತಾರ ಚಾಪ್ಟರ್ 1' ಅನ್ನು ಬಿಡುಗಡೆ ಮಾಡಿರಲಿಲ್ಲ. ಪ್ರೇಕ್ಷಕರು ಬಹುಬೇಡಿಕೆ ಇಟ್ಟಿದ್ದರಿಂದ ಸಿನಿಮಾವನ್ನು ಅಲ್ಲಿಯೂ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಫಿಲ್ಮಿಬೀಟ್ ಕನ್ನಡ ವರದಿ ಮಾಡಿದಂತೆ ಬೆಂಗಳೂರಿನ ಎರಡು ಪ್ರಮುಖ ಚಿತ್ರಮಂದಿರ ಊರ್ವಶಿ ಹಾಗೂ ಮುಕುಂದದಲ್ಲಿ ಈ ಸಿನಿಮಾ ಹಾಕುವಂತೆ ಜನರು ಬೇಡಿಕೆ ಇಟ್ಟಿದ್ದರು. ಅದನ್ನು ಅರಿತ ಹೊಂಬಾಳೆ 2ನೇ ದಿನದಿಂದ ಈ ಎರಡು ಚಿತ್ರಮಂದಿರಗಳಲ್ಲೂ ಸಿನಿಮಾ ರಿಲೀಸ್ ಮಾಡಿದೆ.

Rishab Shetty Kantara Chapter 1 1100 Tickets Sold in Just 17 Minutes in Urvashi Theater

ಅದರಲ್ಲೂ ಊರ್ವಶಿ ಚಿತ್ರಮಂದಿರದಲ್ಲಿ 'ಕಾಂತಾರ ಚಾಪ್ಟರ್ 1' ಸಿನಿಮಾಗೆ ಸಿಕ್ಕಾಪಟ್ಟೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಓಪನ್ ಮಾಡಿದ ಕೆಲವೇ ಕ್ಷಣಗಳಲ್ಲಿ ಟಿಕೆಟ್‌ಗಳು ಸೇಲ್ ಆಗುತ್ತಿವೆ. ಮಂಗಳವಾರದವರೆಗೂ ಈ ಸಿನಿಮಾದ ಟಿಕೆಟ್‌ಗಳು ಬುಕ್ ಆಗುವುದಕ್ಕೆ ಶುರುವಾಗಿದೆ.

ಊರ್ವಶಿ ಚಿತ್ರಮಂದಿರದ ಮೂಲಗಳ ಪ್ರಕಾರ, 'ಕಾಂತಾರ ಚಾಪ್ಟರ್ 1' ಬುಕಿಂಗ್ ಓಪನ್ ಮಾಡುತ್ತಿದ್ದಂತೆ ಕೇವಲ 17 ನಿಮಿಷಗಳಲ್ಲಿ ಸುಮಾರು 1100 ಟಿಕೆಟ್‌ಗಳು ಬುಕ್ ಆಗಿತ್ತು. ಬೆಂಗಳೂರಿನ ಲಾಲ್‌ಬಾಗ್ ಸುತ್ತಮುತ್ತಲಿನ ಏರಿಯಾ ಸೇರಿದಂತೆ ಬೇರೆ ಭಾಗಗಳಿಂದ ಇಲ್ಲಿಗೆ ಸಿನಿಮಾ ನೋಡುವುದಕ್ಕೆ ಆಗಮಿಸುತ್ತಿದ್ದು, ನಾಲ್ಕು ದಿನಗಳ ಕಾಲ ಟಿಕೆಟ್‌ಗಳು ಸೇಲ್ ಆಗಿವೆ. ಇಂದು (ಅಕ್ಟೋಬರ್ 3) ಸಂಜೆಯಿಂದ ಟಿಕೆಟ್ ಬುಕಿಂಗ್‌ ಓಪನ್ ಮಾಡಲಾಗಿತ್ತು. ಅಷ್ಟರಲ್ಲೇ ಸಿನಿಮಾ ಮಂಗಳವಾರದವರೆಗೂ 3500ಕ್ಕೂ ಅಧಿಕ ಟಿಕೆಟ್‌ ಬುಕ್ ಆಗಿವೆ ಎನ್ನಲಾಗಿದೆ.

'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ಪ್ರದರ್ಶನ ಮಾಡುವಂತೆ ಪ್ರೇಕ್ಷಕರೇ ಬೇಡಿಕೆ ಇಟ್ಟಿದ್ದರು. ಅದಕ್ಕೆ ಊರ್ವಶಿ ಚಿತ್ರಮಂದಿರ ಹಾಗೂ ಹೊಂಬಾಳೆ ಫಿಲ್ಮ್ಸ್ ಇಬ್ಬರೂ ಸ್ಪಂದಿಸಿ ಸಿನಿಮಾವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಆಕ್ಟೋಬರ್ 3ನೇ ತಾರೀಕಿನಂದೇ ಈ ಸಿನಿಮಾ ಇದೊಂದು ಚಿತ್ರಮಂದಿರದಿಂದ ಸುಮಾರು 3 ಲಕ್ಷ ರೂಪಾಯಿವರೆಗೂ ಕಲೆ ಹಾಕಿದೆ ಎಂದು ಹೇಳಲಾಗುತ್ತಿದೆ.

ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿದೆ. ಸತತ ಮೂರನೇ ದಿನವೂ ಕಲೆಕ್ಷನ್‌ ಜೋರಾಗಿದೆ. ರಿಷಬ್ ಶೆಟ್ಟಿ ಮತ್ತೊಮ್ಮೆ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ್ದಾರೆ. ದೇಶಾದ್ಯಂತ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಿಷಬ್ ಶೆಟ್ಟಿಯ ನಟನೆ ಹಾಗೂ ನಿರ್ದೇಶನ ಪ್ರೇಕ್ಷಕರಿಗೆ ಮತ್ತೊಮ್ಮೆ ಕಿಕ್ ಕೊಟ್ಟಿದೆ. ಸಿನಿಮಾ ರಿಲೀಸ್ ಆದ ಬಳಿಕ ಕಾಂತಾರ ಕ್ರೇಜ್ ಮತ್ತಷ್ಟು ಜೋರಾಗಿದೆ.

More from Filmibeat

English summary
Rishab Shetty, Rukmini Vasanth movie Kantara Chapter 1 just 17 minutes sold over 1100 tickets Urvashi theater in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X